ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 55

ನಿಮ್ಮ ಸಭೆಗೆ ಸಾಧ್ಯವಾದಷ್ಟು ಬೆಂಬಲ ಕೊಡಿ

ನಿಮ್ಮ ಸಭೆಗೆ ಸಾಧ್ಯವಾದಷ್ಟು ಬೆಂಬಲ ಕೊಡಿ

ಇಡೀ ಭೂಮಿಯಲ್ಲಿರುವ ಸಾವಿರಾರು ಸಭೆಗಳಲ್ಲಿ, ಲಕ್ಷಾಂತರ ಸಹೋದರ ಸಹೋದರಿಯರು ಯೆಹೋವ ದೇವರನ್ನ ಸಂತೋಷದಿಂದ ಆರಾಧಿಸುತ್ತಿದ್ದಾರೆ. ಅವರು ಕೂಟಗಳಲ್ಲಿ ಸಿಗುವ ನಿರ್ದೇಶನಗಳಿಗೆ ಮತ್ತು ಮಾರ್ಗದರ್ಶನಗಳಿಗೆ ತುಂಬ ಕೃತಜ್ಞತೆ ತೋರಿಸುತ್ತಾರೆ. ಅಷ್ಟೇ ಅಲ್ಲ, ಅವರು ಸಭೆಗಳಿಗೆ ತಮ್ಮಿಂದ ಆದಷ್ಟು ಬೇರೆಬೇರೆ ವಿಧಗಳಲ್ಲಿ ಬೆಂಬಲ ಕೊಡುತ್ತಿದ್ದಾರೆ. ಅದೇ ತರ ನಿಮ್ಮ ಸಭೆಗೆ ಬೆಂಬಲ ಕೊಡಬೇಕು ಅಂತ ನಿಮಗೂ ಅನಿಸುತ್ತಾ?

1. ಸಭೆಯನ್ನ ಬೆಂಬಲಿಸಲಿಕ್ಕಾಗಿ ನಿಮ್ಮ ಸಮಯ ಮತ್ತು ಶಕ್ತಿಯನ್ನ ಯಾವೆಲ್ಲಾ ರೀತಿಯಲ್ಲಿ ಬಳಸಬಹುದು?

ನಮ್ಮಲ್ಲಿ ಪ್ರತಿಯೊಬ್ಬರೂ ಸಭೆಯನ್ನ ಬೆಂಬಲಿಸಲಿಕ್ಕಾಗಿ ಕೈ ಜೋಡಿಸಬಹುದು. ಉದಾಹರಣೆಗೆ, ನಿಮ್ಮ ಸಭೆಯಲ್ಲಿ ಯಾರಾದ್ರೂ ಹುಷಾರಿಲ್ಲದವರು, ವಯಸ್ಸಾದವರು ಇದ್ದಾರಾ? ಅವರನ್ನ ಕೂಟಗಳಿಗೆ ಕರೆದುಕೊಂಡು ಬರಕ್ಕಾಗುತ್ತಾ? ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನ ತಂದು ಕೊಡೋಕೆ ಆಗುತ್ತಾ? ಅವರ ಮನೆಗೆ ಬೇಕಾದ ಚಿಕ್ಕಪುಟ್ಟ ಕೆಲಸಗಳನ್ನ ಮಾಡಿ ಕೊಡೋಕೆ ಆಗುತ್ತಾ? (ಯಾಕೋಬ 1:27 ಓದಿ.) ಅಷ್ಟೇ ಅಲ್ಲ, ರಾಜ್ಯ ಸಭಾಗೃಹವನ್ನ ಶುದ್ಧವಾಗಿ ಇಡಕ್ಕೆ, ರಿಪೇರಿ ಕೆಲಸ ಮಾಡಕ್ಕೆ ನಾವು ಸ್ವಯಂ ಸೇವಕರಾಗಿ ಕೆಲಸ ಮಾಡಬಹುದು. ಈ ಕೆಲಸಗಳನ್ನೆಲ್ಲಾ ಮಾಡಕ್ಕೆ ನಮ್ಮನ್ನ ಯಾರೂ ಒತ್ತಾಯ ಮಾಡಲ್ಲ. ದೇವರ ಮೇಲೆ ಮತ್ತು ಸಹೋದರರ ಮೇಲೆ ಪ್ರೀತಿ ಇರೋದ್ರಿಂದ ನಾವು “ಮನಸಾರೆ” ಈ ಕೆಲಸಗಳನ್ನ ಮಾಡುತ್ತೇವೆ.—ಕೀರ್ತನೆ 110:3.

ದೀಕ್ಷಾಸ್ನಾನ ಪಡೆದಿರುವವರು ಇನ್ನೂ ಅನೇಕ ವಿಧಗಳಲ್ಲಿ ಸಭೆಯನ್ನ ಬೆಂಬಲಿಸಬಹುದು. ಬೈಬಲಿನಲ್ಲಿ ಕೊಡಲಾಗಿರುವ ಅರ್ಹತೆಗಳನ್ನ ಪಡೆದಿರುವ ಸಹೋದರರು ಸಹಾಯಕ ಸೇವಕರಾಗಿ, ನಂತರ ಹಿರಿಯರಾಗಿ ಸೇವೆ ಮಾಡಬಹುದು. ಸಹೋದರರು ಮತ್ತು ಸಹೋದರಿಯರೂ ಕೂಡ ಸಿಹಿಸುದ್ದಿ ಸಾರುವ ಕೆಲಸವನ್ನ ಬೆಂಬಲಿಸಲಿಕ್ಕಾಗಿ ಪಯನೀಯರ್‌ ಸೇವೆ ಮಾಡಬಹುದು. ಕೆಲವರು ರಾಜ್ಯ ಸಭಾಗೃಹದ ನಿರ್ಮಾಣ ಕೆಲಸ ಮಾಡಬಹುದು ಅಥವಾ ಅಗತ್ಯ ಇರೋ ಸಭೆಗಳಿಗೆ ಹೋಗಿ ಸೇವೆ ಮಾಡಬಹುದು.

2. ನಮ್ಮಲ್ಲಿರುವ ಹಣ ಮತ್ತು ವಸ್ತುಗಳನ್ನ ಬಳಸಿ ನಾವು ಹೇಗೆ ಸಭೆಗೆ ಬೆಂಬಲ ಕೊಡಬಹುದು?

ನಮ್ಮ ಹತ್ತಿರ ಇರುವ ‘ಬೆಲೆ ಬಾಳೋ ವಸ್ತುಗಳಿಂದ ಯೆಹೋವನನ್ನ ಸನ್ಮಾನಿಸಬಹುದು.’ (ಜ್ಞಾನೋಕ್ತಿ 3:9) ಈ ರೀತಿ ನಮ್ಮ ಹಣ ಮತ್ತು ಇನ್ನಿತರ ವಸ್ತುಗಳನ್ನ ಯೆಹೋವನ ಸೇವೆಗೆ ಕೊಡಲಿಕ್ಕೆ ನಮಗೆ ತುಂಬ ಖುಷಿಯಾಗುತ್ತೆ. ಈ ಹಣವನ್ನ ಇಡೀ ಭೂಮಿಯಲ್ಲಿ ನಡೆಯುತ್ತಿರುವ ಸಾರುವ ಕೆಲಸಕ್ಕೆ ಮತ್ತು ಸಭೆಗಳನ್ನ ಬೆಂಬಲಿಸಲಿಕ್ಕೆ ಬಳಸಲಾಗುತ್ತೆ. (2 ಕೊರಿಂಥ 9:7 ಓದಿ.) ನಮ್ಮ ಕಾಣಿಕೆಗಳನ್ನ ವಿಪತ್ತು ಪರಿಹಾರ ಕೆಲಸಕ್ಕೂ ಬಳಸಲಾಗುತ್ತೆ. ತುಂಬ ಜನ ಕಾಣಿಕೆ ಕೊಡೋದನ್ನ ರೂಢಿ ಮಾಡಿಕೊಂಡಿದ್ದಾರೆ. ಅದಕ್ಕೆ ಅಂತಾನೇ ಅವರು ತಮ್ಮ ಆದಾಯದಲ್ಲಿ ‘ಏನಾದ್ರೂ ತೆಗೆದಿಡುತ್ತಾರೆ.’ (1 ಕೊರಿಂಥ 16:2 ಓದಿ.) ನಾವು ಸಭೆಯಲ್ಲಿರುವ ಕಾಣಿಕೆ ಪೆಟ್ಟಿಗೆಯಲ್ಲಿ ಕಾಣಿಕೆಯನ್ನ ಹಾಕಬಹುದು ಅಥವಾ donate.pr418.com ಮೂಲಕ ಕೂಡ ಕಾಣಿಕೆ ಕೊಡಬಹುದು. ನಮ್ಮ ಹತ್ತಿರ ಏನಿದೆಯೋ ಅದನ್ನ ಕೊಡುವ ಮೂಲಕ ಯೆಹೋವ ದೇವರ ಮೇಲೆ ಎಷ್ಟು ಪ್ರೀತಿ ಇದೆ ಅಂತ ತೋರಿಸಬಹುದು. ಇದು ನಮಗೆ ದೇವರು ಕೊಟ್ಟಿರುವ ಒಂದು ಅಮೂಲ್ಯ ಅವಕಾಶ.

ಹೆಚ್ಚನ್ನ ತಿಳಿಯೋಣ

ನಾವು ಯಾವೆಲ್ಲಾ ವಿಧಗಳಲ್ಲಿ ಸಭೆಯನ್ನ ಬೆಂಬಲಿಸಬಹುದು ಅಂತ ನೋಡೋಣ.

3. ನಮ್ಮಲ್ಲಿ ಇರೋದನ್ನ ಕಾಣಿಕೆಯಾಗಿ ಕೊಡಬಹುದು

ಖುಷಿ ಖುಷಿಯಾಗಿ ಕಾಣಿಕೆ ಕೊಡುವವರನ್ನ ಕಂಡರೆ ಯೆಹೋವನಿಗೆ ತುಂಬ ಇಷ್ಟ. ಯೇಸುವಿಗೆ ಕೂಡ ಹಾಗೇ ಅನಿಸುತ್ತೆ. ಉದಾಹರಣೆಗೆ, ಒಬ್ಬ ಬಡ ವಿಧವೆ ಕಾಣಿಕೆಯನ್ನ ಕೊಡಲಿಕ್ಕೆ ಮಾಡಿದ ತ್ಯಾಗವನ್ನ ಯೇಸು ತುಂಬ ಮೆಚ್ಚಿದನು. ಲೂಕ 21:1-4 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ನಾವು ತುಂಬ ಹಣ ಕೊಟ್ಟರೆ ಮಾತ್ರ ಯೆಹೋವ ದೇವರಿಗೆ ಖುಷಿಯಾಗುತ್ತಾ?

  • ನಾವು ಸಂತೋಷದಿಂದ ಕಾಣಿಕೆ ಕೊಡುವಾಗ ಯೆಹೋವ ದೇವರಿಗೆ ಮತ್ತು ಯೇಸುವಿಗೆ ಹೇಗನಿಸುತ್ತೆ?

ನಮ್ಮ ಕಾಣಿಕೆಯನ್ನ ಹೇಗೆಲ್ಲಾ ಬಳಸಲಾಗುತ್ತೆ ಅಂತ ತಿಳಿದುಕೊಳ್ಳಲು ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.

  • ಇಡೀ ಭೂಮಿಯಲ್ಲಿರುವ ಸಭೆಗಳ ಪ್ರಯೋಜನಕ್ಕಾಗಿ ಕಾಣಿಕೆಗಳನ್ನ ಹೇಗೆಲ್ಲಾ ಬಳಸಲಾಗುತ್ತೆ?

4. ನಾವು ಸ್ವಯಂ ಸೇವಕರಾಗಿ ಸಹಾಯ ಮಾಡಬಹುದು

ಬೈಬಲ್‌ ಕಾಲದಲ್ಲಿದ್ದ ಯೆಹೋವನ ಆರಾಧಕರು ಖುಷಿ ಖುಷಿಯಾಗಿ ಕಾಣಿಕೆಗಳನ್ನ ಕೊಟ್ಟಿದ್ದು ಮಾತ್ರ ಅಲ್ಲ ಅವರು ಹುರುಪಿನಿಂದ ದೇವಾಲಯವನ್ನ ಒಳ್ಳೇ ಸ್ಥಿತಿಯಲ್ಲಿ ಇಡಕ್ಕೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದರು. 2 ಪೂರ್ವಕಾಲವೃತ್ತಾಂತ 34:9-11 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಯೆಹೋವ ದೇವರ ಆಲಯವನ್ನ ಒಳ್ಳೇ ಸ್ಥಿತಿಯಲ್ಲಿ ಇಡಕ್ಕೆ ಪ್ರತಿಯೊಬ್ಬ ಇಸ್ರಾಯೇಲ್ಯನು ಏನು ಮಾಡಿದನು?

ಅದೇ ತರ ಇವತ್ತು ಯೆಹೋವನ ಸಾಕ್ಷಿಗಳು ಕೂಡ ಏನು ಮಾಡುತ್ತಿದ್ದಾರೆ ಅಂತ ತಿಳಿದುಕೊಳ್ಳಲು ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ರಾಜ್ಯ ಸಭಾಗೃಹವನ್ನ ನೀಟಾಗಿ, ಒಳ್ಳೇ ಸ್ಥಿತಿಯಲ್ಲಿ ಇಡೋದು ಯಾಕೆ ಅಷ್ಟು ಪ್ರಾಮುಖ್ಯ?

  • ನೀವು ಹೇಗೆಲ್ಲಾ ಸಹಾಯ ಮಾಡಬಹುದು?

5. ಸಹೋದರರೇ ಹೆಚ್ಚಿನ ಜವಾಬ್ದಾರಿ ಪಡೆಯೋಕೆ ಪ್ರಗತಿ ಮಾಡಿ

ದೀಕ್ಷಾಸ್ನಾನ ಪಡೆದಿರುವ ಸಹೋದರರು ಸಭೆಗೆ ಹೆಚ್ಚು ಬೆಂಬಲ ಕೊಡಲಿಕ್ಕಾಗಿ ಪ್ರಗತಿ ಮಾಡುವಂತೆ ಬೈಬಲ್‌ ಪ್ರೋತ್ಸಾಹಿಸುತ್ತೆ. ಉದಾಹರಣೆಗೆ ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.

  • ವಿಡಿಯೋದಲ್ಲಿ ನೋಡಿದ ಹಾಗೆ ಸಹೋದರ ರೋಹನ್‌ ಹೇಗೆಲ್ಲಾ ಪ್ರಗತಿ ಮಾಡಿದರು?

ಸಹೋದರರು ಸಹಾಯಕ ಸೇವಕರಾಗಿ ಮತ್ತು ಹಿರಿಯರಾಗಿ ಸೇವೆ ಮಾಡಲಿಕ್ಕೆ ಯಾವೆಲ್ಲಾ ಅರ್ಹತೆಗಳನ್ನ ಪಡೆದಿರಬೇಕು ಅಂತ ಬೈಬಲ್‌ ಹೇಳುತ್ತೆ. 1 ತಿಮೊತಿ 3:1-13 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಸಹಾಯಕ ಸೇವಕ ಅಥವಾ ಹಿರಿಯನಾಗಲು ಬಯಸುವ ಒಬ್ಬ ಸಹೋದರ ಹೇಗಿರಬೇಕು?

  • ಅವರ ಕುಟುಂಬದವರು ಹೇಗಿರಬೇಕು?—ವಚನ 4 ಮತ್ತು 11 ನೋಡಿ.

  • ಈ ರೀತಿ ಸಹೋದರರು ಪ್ರಗತಿ ಮಾಡೋದ್ರಿಂದ ಸಭೆಯಲ್ಲಿರುವ ಎಲ್ಲರಿಗೆ ಹೇಗೆ ಪ್ರಯೋಜನ ಆಗುತ್ತೆ?

ಕೆಲವರು ಹೀಗೆ ಕೇಳಬಹುದು: “ಯೆಹೋವನ ಸಾಕ್ಷಿಗಳ ಕೆಲಸಕ್ಕೆ ಹಣ ಎಲ್ಲಿಂದ ಬರುತ್ತೆ?”

  • ನೀವೇನು ಹೇಳುತ್ತೀರಾ?

ನಾವೇನು ಕಲಿತ್ವಿ

ನಮ್ಮ ಸಮಯ, ಶಕ್ತಿ ಮತ್ತು ವಸ್ತುಗಳನ್ನ ಬಳಸಿ ಸಭೆಗೆ ಬೆಂಬಲ ಕೊಡಲು ನಾವು ಮಾಡುವ ಪ್ರಯತ್ನವನ್ನ ಯೆಹೋವ ದೇವರು ತುಂಬ ಮೆಚ್ಚುತ್ತಾನೆ.

ನೆನಪಿದೆಯಾ

  • ಸಭೆಯನ್ನ ಬೆಂಬಲಿಸಲಿಕ್ಕಾಗಿ ನಮ್ಮ ಸಮಯ ಮತ್ತು ಶಕ್ತಿಯನ್ನ ಹೇಗೆಲ್ಲಾ ಬಳಸಬಹುದು?

  • ಸಭೆಯನ್ನ ಬೆಂಬಲಿಸಲಿಕ್ಕಾಗಿ ನಮ್ಮಲ್ಲಿರುವ ಹಣ ಮತ್ತು ವಸ್ತುಗಳನ್ನ ಹೇಗೆಲ್ಲಾ ಬಳಸಬಹುದು?

  • ಸಭೆಯನ್ನ ಬೆಂಬಲಿಸಲಿಕ್ಕಾಗಿ ನೀವು ಏನೆಲ್ಲಾ ಮಾಡಬೇಕು ಅಂದುಕೊಂಡಿದ್ದೀರಾ?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಈಗ ನಾವು ದಶಮಾಂಶವನ್ನ ಕೊಡಬೇಕು ಅಂತ ದೇವರು ಬಯಸಲ್ಲ, ಯಾಕೆ ಅಂತ ನೋಡಿ.

“ದಶಮಾಂಶದ ಬಗ್ಗೆ ಬೈಬಲ್‌ ಏನು ಹೇಳುತ್ತೆ?” (jw.org ಲೇಖನ)

ದೀಕ್ಷಾಸ್ನಾನ ಆಗಿರೋ ಸಹೋದರರಿಗೆ ಬೈಬಲ್‌ ಕೆಲವು ನೇಮಕಗಳನ್ನ ಕೊಡುತ್ತೆ. ಅವನ್ನ ದೀಕ್ಷಾಸ್ನಾನ ಆಗಿರೋ ಸಹೋದರಿ ಮಾಡಬೇಕಂದ್ರೆ ಏನು ಮಾಡಬೇಕು?

“ಸಭೆಯಲ್ಲಿ ಹಿರಿಯರಿಗಿರೋ ಅಧಿಕಾರ” (ಕಾವಲಿನಬುರುಜು, ಫೆಬ್ರವರಿ 2021)

ಸಹೋದರ ಸಹೋದರಿಯರಿಗೆ ಸಾಹಿತ್ಯಗಳನ್ನ ತಲಪಿಸಲು ಧೈರ್ಯವಂತ ಸಹೋದರರು ಹೇಗೆ ತ್ಯಾಗಗಳನ್ನ ಮಾಡಿದರು ಅಂತ ನೋಡಿ.

ಬೈಬಲ್‌ ಸಾಹಿತ್ಯವನ್ನು ಕಾಂಗೊ ದೇಶಕ್ಕೆ ತಲುಪಿಸುವುದು (4:25)

ಕಾಣಿಕೆಯನ್ನ ಪಡೆದುಕೊಳ್ಳುವ ವಿಷಯದಲ್ಲಿ ಯೆಹೋವನ ಸಾಕ್ಷಿಗಳಿಗೂ ಬೇರೆ ಸಂಘಟನೆಗಳಿಗೂ ಇರುವ ವ್ಯತ್ಯಾಸವನ್ನ ತಿಳಿದುಕೊಳ್ಳಿ.

“ಯೆಹೋವನ ಸಾಕ್ಷಿಗಳು ತಮ್ಮ ಕೆಲಸಕ್ಕೆ ಹಣವನ್ನು ಎಲ್ಲಿಂದ ಪಡೆಯುತ್ತಾರೆ?” (jw.org ಲೇಖನ)