ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 58

ಯೆಹೋವನಿಗೆ ಯಾವಾಗಲೂ ನಿಷ್ಠೆ ತೋರಿಸಿ

ಯೆಹೋವನಿಗೆ ಯಾವಾಗಲೂ ನಿಷ್ಠೆ ತೋರಿಸಿ

ನಿಜ ಕ್ರೈಸ್ತರಾದ ನಾವೆಲ್ಲರೂ ಯೆಹೋವ ದೇವರಿಗೆ ಯಾವಾಗಲೂ ನಿಷ್ಠೆ ತೋರಿಸೋಕೆ ದೃಢ ತೀರ್ಮಾನ ಮಾಡಿರುತ್ತೇವೆ. ಹಾಗಾಗಿ ಯಾರನ್ನೂ ಯಾವುದನ್ನೂ ನಮ್ಮ ಮತ್ತು ಯೆಹೋವ ದೇವರ ಮಧ್ಯೆ ಬರಕ್ಕೆ ಬಿಡಲ್ಲ. ನಿಮಗೂ ಹಾಗೇ ಅನಿಸುತ್ತೆ ಅಲ್ವಾ? ನಾವು ಯೆಹೋವನಿಗೆ ನಿಷ್ಠೆ ತೋರಿಸೋದನ್ನ ನೋಡುವಾಗ ಆತನಿಗೆ ತುಂಬ ಖುಷಿಯಾಗುತ್ತೆ. (1 ಪೂರ್ವಕಾಲವೃತ್ತಾಂತ 28:9 ಓದಿ.) ಯಾವೆಲ್ಲಾ ಸನ್ನಿವೇಶಗಳು ನಮ್ಮ ನಿಷ್ಠೆಯನ್ನ ಪರೀಕ್ಷಿಸುತ್ತೆ? ಅಂಥ ಸನ್ನಿವೇಶಗಳಲ್ಲಿ ನಾವೇನು ಮಾಡಬೇಕು?

1. ಯೆಹೋವನ ಜೊತೆ ನಮಗಿರುವ ನಿಷ್ಠೆಯನ್ನ ಬೇರೆಯವರು ಹೇಗೆ ಹಾಳುಮಾಡಬಹುದು?

ನಾವು ಯೆಹೋವ ದೇವರ ಆರಾಧನೆ ಮಾಡದಂತೆ ಕೆಲವರು ತಡೆಯಬಹುದು. ಉದಾಹರಣೆಗೆ ಹಿಂದೆ ಯೆಹೋವನ ಸಾಕ್ಷಿಗಳಾಗಿದ್ದು ಆಮೇಲೆ ಸತ್ಯಬಿಟ್ಟು ಹೋಗಿರುವ ಕೆಲವರು ಸಂಘಟನೆಯ ಬಗ್ಗೆ ಸುಳ್ಳು ಸುದ್ದಿಗಳನ್ನ ಹಬ್ಬಿಸಬಹುದು, ಅಂಥವರೇ ಧರ್ಮಭ್ರಷ್ಟರು. ಕೆಲವೊಮ್ಮೆ ಧರ್ಮ ಗುರುಗಳು ನಮ್ಮ ಬಗ್ಗೆ ಇಲ್ಲಸಲ್ಲದ್ದನ್ನ ಹೇಳಬಹುದು. ನಾವು ಎಚ್ಚರವಹಿಸಿಲ್ಲಾ ಅಂದರೆ ಅವರ ಬಲೆಗೆ ಬೀಳುವ ಮತ್ತು ಸತ್ಯಬಿಟ್ಟು ಹೋಗುವ ಅಪಾಯ ಇದೆ! ಇಂಥ ವ್ಯಕ್ತಿಗಳ ಜೊತೆ ನಾವು ಸಹವಾಸ ಮಾಡಕ್ಕೆ ಹೋಗಲ್ಲ. ಅವರ ಪುಸ್ತಕಗಳನ್ನಾಗಲಿ, ವೆಬ್‌ಸೈಟುಗಳನ್ನಾಗಲಿ ಮತ್ತು ವಿಡಿಯೋಗಳನ್ನಾಗಲಿ ನಾವು ನೋಡಕ್ಕೆ ಹೋಗಲ್ಲ. ಯಾಕಂದ್ರೆ ನಾವು ನಂಬಿಕೆಯನ್ನ ಕಳೆದುಕೊಳ್ಳಲು ಇವು ಕಾರಣವಾಗಬಹುದು. ಇಂಥವರ ಬಗ್ಗೆ ಯೇಸು ಹೀಗೆ ಹೇಳಿದನು: “ಅವರ ಬಗ್ಗೆ ತಲೆಕೆಡಿಸ್ಕೊಬೇಡಿ. ಅವ್ರೇ ಕುರುಡರು, ಅಂಥದ್ರಲ್ಲಿ ಅವರು ಇನ್ನೊಬ್ಬರಿಗೆ ದಾರಿ ತೋರಿಸ್ತಾರೆ. ಒಬ್ಬ ಕುರುಡ ಇನ್ನೊಬ್ಬ ಕುರುಡನಿಗೆ ದಾರಿತೋರಿಸಿದ್ರೆ ಇಬ್ರೂ ಗುಂಡಿಗೆ ಬೀಳ್ತಾರೆ.”ಮತ್ತಾಯ 15:14.

ನಮಗೆ ತುಂಬ ಚೆನ್ನಾಗಿ ಗೊತ್ತಿರುವ ಒಬ್ಬ ಸಹೋದರ, ‘ನಾನು ಇನ್ನು ಮುಂದೆ ಯೆಹೋವನ ಸಾಕ್ಷಿಯಾಗಿ ಇರಲ್ಲ’ ಅಂತ ಹೇಳಿದ್ರೆ ಏನು ಮಾಡ್ತೀರಾ? ಅವರು ಹಾಗೆ ಮಾಡಿದಾಗ ನಮ್ಮ ಹೃದಯ ಒಡೆದು ಹೋದಂತೆ ಆಗುತ್ತೆ ಅಲ್ವಾ? ಅವರು ನಮಗೆ, ‘ನಿನಗೆ ನಾನು ಬೇಕಾ, ಯೆಹೋವ ಬೇಕಾ’ ಅಂತ ಕೇಳಬಹುದು. ಯಾರು ಏನೇ ಹೇಳಲಿ, ಏನೇ ಮಾಡಲಿ ನಾವು ಮಾತ್ರ ಯೆಹೋವ ದೇವರಿಗೆ ನಿಷ್ಠೆಯಿಂದ ಇರಬೇಕು. (ಮತ್ತಾಯ 10:37) ಹಾಗಾಗಿ ಯೆಹೋವ ದೇವರು ಹೇಳಿದಂತೆ, ಇಂಥ ಜನರ ಸಹವಾಸವನ್ನೇ ನಾವು ಬಿಟ್ಟುಬಿಡುತ್ತೇವೆ.—1 ಕೊರಿಂಥ 5:11 ಓದಿ.

2. ನಾವು ಮಾಡುವ ಯಾವ ತೀರ್ಮಾನಗಳು ಯೆಹೋವನ ಜೊತೆ ನಮಗಿರುವ ನಿಷ್ಠೆಯನ್ನ ಪರೀಕ್ಷಿಸಬಹುದು?

ನಾವು ಯೆಹೋವನನ್ನು ತುಂಬ ಪ್ರೀತಿಸುತ್ತೇವೆ. ಹಾಗಾಗಿ ಸುಳ್ಳು ಧರ್ಮಕ್ಕೆ ಸಂಬಂಧಪಟ್ಟ ಯಾವುದೇ ವಿಷಯಕ್ಕೆ ತಲೆಹಾಕಲ್ಲ. ಸುಳ್ಳು ಧರ್ಮಕ್ಕೆ ಸಂಬಂಧಪಟ್ಟ ಯಾವುದೇ ಸಂಘಟನೆಯಲ್ಲಿ ಸೇರಲ್ಲ. ಅದಕ್ಕೆ ಸಂಬಂಧಪಟ್ಟ ಯಾವುದೇ ಕೆಲಸಗಳನ್ನಾಗಲಿ, ಚಟುವಟಿಕೆಗಳನ್ನಾಗಲಿ ಮಾಡಲ್ಲ. ಯಾಕಂದ್ರೆ ಯೆಹೋವ ದೇವರು, ‘ನನ್ನ ಜನ್ರೇ ಮಹಾ ಬಾಬೆಲನ್ನು ಬಿಟ್ಟು ಹೊರಗೆ ಬನ್ನಿ’ ಅಂತ ನಮಗೆ ಎಚ್ಚರಿಕೆ ಕೊಟ್ಟಿದ್ದಾನೆ.—ಪ್ರಕಟನೆ 18:2, 4.

ಹೆಚ್ಚನ್ನ ತಿಳಿಯೋಣ

ಬೇರೆಯವರು ನಮ್ಮ ನಿಷ್ಠೆಯನ್ನ ಹಾಳುಮಾಡದಿರಲು ನಾವೇನು ಮಾಡಬೇಕು ಅಂತ ಕಲಿಯಿರಿ. ಮಹಾ ಬಾಬೆಲಿನಿಂದ ಹೊರಗೆ ಬರುವ ಮೂಲಕ ಹೇಗೆ ನಿಷ್ಠೆಯನ್ನ ತೋರಿಸಬಹುದು ಅಂತ ತಿಳಿಯಿರಿ.

3. ಸುಳ್ಳು ಸುದ್ದಿಯನ್ನ ಹಬ್ಬಿಸುವವರ ಬಗ್ಗೆ ಎಚ್ಚರ!

ಕೆಲವೊಮ್ಮೆ ಯೆಹೋವನ ಸಂಘಟನೆಯ ಬಗ್ಗೆ ಜನರು ಇಲ್ಲಸಲ್ಲದ್ದನ್ನ ಹೇಳುತ್ತಾರೆ. ಆಗ ನಾವೇನು ಮಾಡಬೇಕು? ಜ್ಞಾನೋಕ್ತಿ 14:15 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ನಾವು ಯಾಕೆ ಜನರು ಹೇಳಿದ್ದನ್ನೆಲ್ಲಾ ಕಣ್ಣು ಮುಚ್ಚಿ ನಂಬಬಾರದು?

2 ಯೋಹಾನ 10 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಧರ್ಮಭ್ರಷ್ಟರ ಜೊತೆ ನಾವು ಹೇಗೆ ನಡೆದುಕೊಳ್ಳಬೇಕು?

  • ನಾವು ಧರ್ಮಭ್ರಷ್ಟರ ಜೊತೆ ಮಾತಾಡದೇ ಇರಬಹುದು, ಆದರೆ ಇನ್ಯಾವ ವಿಧಗಳಲ್ಲಿ ಅವರ ಜೊತೆ ಸಹವಾಸ ಮಾಡೋದು ಕೂಡ ಅಪಾಯಕಾರಿ ಆಗಿದೆ?

  • ಯೆಹೋವ ದೇವರ ಬಗ್ಗೆ ಮತ್ತು ಆತನ ಸಂಘಟನೆಯ ಬಗ್ಗೆ ಜನ ಇಲ್ಲಸಲ್ಲದ್ದನ್ನ ಹೇಳುತ್ತಾರೆ ಅಂದುಕೊಳ್ಳಿ, ಅದಕ್ಕೆ ನೀವು ಗಮನಕೊಟ್ಟರೆ ಯೆಹೋವ ದೇವರಿಗೆ ಹೇಗನಿಸುತ್ತೆ?

4. ಒಬ್ಬ ಸಹೋದರ ಪಾಪ ಮಾಡಿದಾಗಲೂ ನೀವು ಯೆಹೋವನಿಗೆ ನಿಷ್ಠೆ ತೋರಿಸಿ

ಸಭೆಯಲ್ಲಿರೋ ಯಾರಾದ್ರೂ ಒಂದು ಗಂಭೀರ ತಪ್ಪನ್ನ ಮಾಡಿದ್ದಾರೆ ಅಂತ ನಿಮಗೆ ಗೊತ್ತಾದಾಗ ಏನು ಮಾಡ್ತೀರಾ? ಹಿಂದಿನ ಕಾಲದ ಇಸ್ರಾಯೇಲ್ಯರಿಗೆ ಯೆಹೋವನು ಕೊಟ್ಟ ಒಂದು ನಿಯಮದಿಂದ ಇದರ ಬಗ್ಗೆ ಕಲಿಯೋಣ, ಯಾಜಕಕಾಂಡ 5:1 ಓದಿ.

ಈ ವಚನದಲ್ಲಿ ಹೇಳಿರೋ ಹಾಗೆ ಯಾರಾದ್ರೂ ಗಂಭೀರ ತಪ್ಪನ್ನ ಮಾಡಿರುವ ವಿಷಯ ನಿಮಗೆ ಗೊತ್ತಾದರೆ ಹಿರಿಯರ ಹತ್ತಿರ ಅದನ್ನ ಹೇಳಬೇಕು. ಆದರೆ ಹೀಗೆ ಮಾಡುವ ಮುಂಚೆ ತಪ್ಪು ಮಾಡಿದ ವ್ಯಕ್ತಿಯ ಹತ್ತಿರನೇ ಹೋಗಿ, ‘ನೀವು ಮಾಡಿದ ತಪ್ಪಿನ ಬಗ್ಗೆ ಹಿರಿಯರ ಹತ್ತಿರ ಹೇಳಿ’ ಅಂತ ಹೇಳೋದು ಅವರಿಗೆ ಪ್ರೀತಿ ತೋರಿಸಿದಂತೆ ಇರುತ್ತೆ. ಒಂದುವೇಳೆ ಅವರು ಮಾಡಿದ ತಪ್ಪಿನ ಬಗ್ಗೆ ಹಿರಿಯರ ಹತ್ತಿರ ಹೇಳಿಲ್ಲಾ ಅಂದರೆ ನೀವೇ ಹೋಗಿ ನಡೆದ ಎಲ್ಲಾ ವಿಷಯಗಳನ್ನ ಹಿರಿಯರಿಗೆ ತಿಳಿಸಬೇಕು. ಆಗ ನೀವು ಯೆಹೋವ ದೇವರಿಗೆ ನಿಷ್ಠೆ ತೋರಿಸುತ್ತೀರ. ಹೀಗೆ ಮಾಡಿದ್ರೆ ನೀವು ಹೇಗೆ . . .

  • ಯೆಹೋವ ದೇವರಿಗೆ ನಿಷ್ಠೆ ತೋರಿಸಿದಂತೆ ಆಗುತ್ತೆ?

  • ತಪ್ಪು ಮಾಡಿದ ವ್ಯಕ್ತಿಗೆ ನಿಷ್ಠೆ ತೋರಿಸಿದಂತೆ ಆಗುತ್ತೆ?

  • ಸಭೆಯಲ್ಲಿರುವ ಎಲ್ಲರಿಗೆ ನಿಷ್ಠೆ ತೋರಿಸಿದಂತೆ ಆಗುತ್ತೆ?

ಸಭೆಯಲ್ಲಿರುವ ಯಾರಾದ್ರೂ ತಪ್ಪುದಾರಿ ಹಿಡಿದರೆ ಸಹಾಯ ಮಾಡಿ!

5. ಮಹಾ ಬಾಬೆಲನ್ನ ಬಿಟ್ಟು ಬನ್ನಿ

ಲೂಕ 4:8 ಮತ್ತು ಪ್ರಕಟನೆ 18:4, 5 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಸುಳ್ಳು ಧರ್ಮದ ಸದಸ್ಯರ ಪಟ್ಟಿಯಲ್ಲಿ ನನ್ನ ಹೆಸರು ಇನ್ನೂ ಇದೆಯಾ?

  • ನಾನು ಸುಳ್ಳು ಧರ್ಮಕ್ಕೆ ಸಂಬಂಧಪಟ್ಟ ಯಾವುದಾದ್ರೂ ಸಂಘಟನೆಯ ಭಾಗವಾಗಿದ್ದೇನಾ?

  • ನಾನು ಮಾಡುವ ಕೆಲಸಗಳು ಸುಳ್ಳು ಧರ್ಮವನ್ನ ಯಾವುದಾದ್ರೂ ರೀತಿಯಲ್ಲಿ ಬೆಂಬಲಿಸುತ್ತಾ?

  • ಸುಳ್ಳು ಧರ್ಮಕ್ಕೆ ಸಂಬಂಧಪಟ್ಟ ಯಾವುದಾದ್ರೂ ವಿಷಯಗಳಿಂದ ನಾನಿನ್ನೂ ಹೊರಗೆ ಬರಬೇಕಾಗಿದೆಯಾ?

  • ಇಲ್ಲಿ ಕೊಡಲಾಗಿರುವ ಯಾವುದೇ ಪ್ರಶ್ನೆಗಳಿಗೆ ನನ್ನ ಉತ್ತರ ಹೌದು ಅಂತಾದರೆ ನಾನು ಯಾವ ಬದಲಾವಣೆಗಳನ್ನ ಮಾಡಿಕೊಳ್ಳಬೇಕು?

ಯಾವಾಗಲೂ ಯೆಹೋವ ದೇವರಿಗೆ ನಿಷ್ಠೆ ತೋರಿಸುವ ಮತ್ತು ಒಳ್ಳೇ ಮನಸ್ಸಾಕ್ಷಿಯನ್ನ ಕಾಪಾಡಿಕೊಳ್ಳಲು ಸಹಾಯ ಮಾಡುವ ತೀರ್ಮಾನಗಳನ್ನೇ ಮಾಡಿ.

ಧರ್ಮಗಳ ಹೆಸರಿನಲ್ಲಿ ನಡೆಸುವ ಯಾವುದಾದ್ರೂ ವಿಷಯಗಳಿಗೆ ದುಡ್ಡು ಕೊಡಿ ಅಂತ ಕೇಳಿದ್ರೆ ನೀವೇನು ಮಾಡುತ್ತೀರಾ?

ಕೆಲವರು ಹೀಗಂತಾರೆ: “ಧರ್ಮಭ್ರಷ್ಟರು ಯೆಹೋವನ ಸಾಕ್ಷಿಗಳ ಬಗ್ಗೆ ಏನು ಹೇಳುತ್ತಾರೆ ಅಂತ ತಿಳಿದುಕೊಂಡರೆ ನಾನು ಅವರಿಗೆ ಸರಿಯಾದ ಉತ್ತರ ಕೊಡಕ್ಕಾಗುತ್ತೆ.”

  • ನಿಮಗೆ ಇದು ಸರಿ ಅನಿಸುತ್ತಾ? ಯಾಕೆ?

ನಾವೇನು ಕಲಿತ್ವಿ

ನಾವು ಯೆಹೋವನಿಗೆ ನಿಷ್ಠೆಯಿಂದ ಇರಬೇಕಾದ್ರೆ ಆತನಿಗೆ ನಿಷ್ಠೆ ತೋರಿಸದೆ ಇರುವವರ ಸಹವಾಸ ಮಾಡಕ್ಕೆ ಹೋಗಬಾರದು. ಅಷ್ಟೇ ಅಲ್ಲ, ಸುಳ್ಳು ಧರ್ಮದ ಸಹವಾಸವನ್ನ ಪೂರ್ತಿಯಾಗಿ ಬಿಟ್ಟುಬಿಡಬೇಕು.

ನೆನಪಿದೆಯಾ

  • ನಾವು ಯಾಕೆ ಧರ್ಮಭ್ರಷ್ಟರ ಬೋಧನೆಗಳನ್ನ ಓದಬಾರದು, ನೋಡಬಾರದು ಮತ್ತು ಕೇಳಬಾರದು?

  • ಯೆಹೋವನ ಸಂಘಟನೆಯನ್ನ ಬಿಟ್ಟುಬಿಟ್ಟ ಒಬ್ಬ ವ್ಯಕ್ತಿಯ ಜೊತೆ ನಾವು ಹೇಗೆ ನಡೆದುಕೊಳ್ಳಬೇಕು?

  • ‘ಸುಳ್ಳು ಧರ್ಮವನ್ನ ಬಿಟ್ಟು ಬನ್ನಿ’ ಅನ್ನೋ ಆಜ್ಞೆಯನ್ನ ನಾವು ಹೇಗೆ ಪಾಲಿಸಬಹುದು?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಯಾರಾದ್ರೂ ಯೆಹೋವನ ಸಾಕ್ಷಿಗಳ ಬಗ್ಗೆ ಸುಳ್ಳುಸುದ್ದಿಯನ್ನ ಹಬ್ಬಿಸಿದರೆ ನೀವು ಏನು ಮಾಡಬೇಕು ಅಂತ ನೋಡಿ.

“ಸತ್ಯ ಏನೆಂದು ನಿಮಗೆ ಗೊತ್ತಾ?” (ಕಾವಲಿನಬುರುಜು, ಆಗಸ್ಟ್‌ 2018)

ಮಹಾ ಬಾಬೆಲಿಗೆ ಸಂಬಂಧಪಟ್ಟ ಸಂಘಟನೆಗಳನ್ನ ಅಥವಾ ಚಟುವಟಿಕೆಗಳನ್ನ ನೀವು ಹೇಗೆ ಗುರುತಿಸಬಹುದು?

“‘ಕಡೇ ದಿವಸಗಳ‘ ಕೊನೆಯಲ್ಲಿರುವ ನಾವು ಏನು ಮಾಡಬೇಕು?” (ಕಾವಲಿನಬುರುಜು, ಅಕ್ಟೋಬರ್‌ 2019, ಪ್ಯಾರ 16-18)

ನಮ್ಮ ನಂಬಿಕೆಯನ್ನ ಹಾಳುಮಾಡಲು ಕೆಲವು ವಿರೋಧಿಗಳು ಏನು ಮಾಡಿದ್ದಾರೆ?

ಮೋಸಗಾರರಿದ್ದಾರೆ ಜಾಗ್ರತೆ! (9:26)

ಷಿಂಟೋ ಧರ್ಮದ ಪುರೋಹಿತ/​ಪೂಜಾರಿ ಹೇಗೆ ಸುಳ್ಳು ಧರ್ಮದ ಸಂಕೋಲೆಯಿಂದ ಹೊರಬಂದನು ಅಂತ ತಿಳಿದುಕೊಳ್ಳಲು “ನಾನು ಬಾಲ್ಯದಲ್ಲೇ ದೇವರನ್ನ ಹುಡುಕಲು ಶುರುಮಾಡಿದ್ದೆ” ಅನ್ನೋ ಜೀವನ ಕಥೆ ನೋಡಿ.

“ಬದುಕು ಬದಲಾದ ವಿಧ” (ಕಾವಲಿನಬುರುಜು ಲೇಖನ)