ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 2ರಲ್ಲಿ ನೀವೇನು ಕಲಿತ್ರಿ?

ಭಾಗ 2ರಲ್ಲಿ ನೀವೇನು ಕಲಿತ್ರಿ?

ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:

  1. ದೇವರು ಸುಳ್ಳುಧರ್ಮಗಳಿಗೆ ಏನು ಮಾಡ್ತಾನೆ?

    (ಪಾಠ 13 ನೋಡಿ.)

  2. ವಿಮೋಚನಕಾಂಡ 20:4-6 ಓದಿ.

    • ಜನರು ಮೂರ್ತಿಗಳನ್ನ, ವಸ್ತುಗಳನ್ನ ಬಳಸಿ ‘ನಾವು ಯೆಹೋವನನ್ನು ಆರಾಧಿಸುತ್ತಿದ್ದೇವೆ’ ಅಂತ ಹೇಳುವಾಗ ಆತನಿಗೆ ಹೇಗನಿಸುತ್ತೆ?

      (ಪಾಠ 14 ನೋಡಿ.)

  3. ಯೇಸು ಯಾರು?

    (ಪಾಠ 15 ನೋಡಿ.)

  4. ಯೇಸುವಿನಲ್ಲಿರುವ ಯಾವ ಗುಣಗಳು ನಿಮಗಿಷ್ಟ?

    (ಪಾಠ 17 ನೋಡಿ.)

  5. ಯೋಹಾನ 13:34, 35 ಮತ್ತು ಅಪೊಸ್ತಲರ ಕಾರ್ಯ 5:42 ಓದಿ.

    • ನಿಜ ಕ್ರೈಸ್ತರು ಯಾರು? ಅವರೇ ನಿಜ ಕ್ರೈಸ್ತರು ಅಂತ ನೀವು ಹೇಗೆ ಹೇಳುತ್ತೀರಾ?

      (ಪಾಠ 18 ಮತ್ತು 19 ನೋಡಿ.)

  6. ಸಭೆಯ ಯಜಮಾನ ಯಾರು? ಆತನು ಸಭೆಯನ್ನ ಹೇಗೆ ನಡೆಸ್ತಿದ್ದಾನೆ?

    (ಪಾಠ 20 ನೋಡಿ.)

  7. ಮತ್ತಾಯ 24:14 ಓದಿ.

    • ಈ ಭವಿಷ್ಯವಾಣಿ ಇವತ್ತು ಹೇಗೆ ನೆರವೇರುತ್ತಿದೆ?

    • ನೀವು ಯಾರಿಗೆಲ್ಲಾ ಸಿಹಿಸುದ್ದಿ ಸಾರುತ್ತಿದ್ದೀರಾ?

      (ಪಾಠ 21 ಮತ್ತು 22 ನೋಡಿ.)

  8. ದೀಕ್ಷಾಸ್ನಾನ ಪಡೆದುಕೊಳ್ಳಬೇಕು ಅನ್ನೋದು ಒಂದು ಒಳ್ಳೇ ಗುರಿ ಅಂತ ನಿಮಗೆ ಅನಿಸುತ್ತಾ? ಯಾಕೆ?

    (ಪಾಠ 23 ನೋಡಿ.)

  9. ಸೈತಾನ ಮತ್ತು ಅವನ ಕೆಟ್ಟ ದೂತರಿಂದ ನಮ್ಮನ್ನ ಹೇಗೆ ಕಾಪಾಡಿಕೊಳ್ಳಬಹುದು?

    (ಪಾಠ 24 ನೋಡಿ.)

  10. ದೇವರು ಮನುಷ್ಯರನ್ನ ಯಾಕೆ ಸೃಷ್ಟಿ ಮಾಡಿದನು?

    (ಪಾಠ 25 ನೋಡಿ.)

  11. ಮನುಷ್ಯರು ಯಾಕೆ ಕಷ್ಟ ಅನುಭವಿಸ್ತಾರೆ ಮತ್ತು ಸಾಯುತ್ತಾರೆ?

    (ಪಾಠ 26 ನೋಡಿ.)

  12. ಯೋಹಾನ 3:16 ಓದಿ.

    • ನಮ್ಮನ್ನ ಪಾಪ ಮತ್ತು ಮರಣದಿಂದ ಬಿಡಿಸೋಕೆ ಯೆಹೋವನು ಏನು ಮಾಡಿದ್ದಾನೆ?

      (ಪಾಠ 27 ನೋಡಿ.)

  13. ಪ್ರಸಂಗಿ 9:5 ಓದಿ.

    • ಸತ್ತಮೇಲೆ ಏನಾಗುತ್ತೆ?

    • ಸತ್ತು ಹೋಗಿರುವ ಕೋಟ್ಯಾಂತರ ಜನರನ್ನ ಯೇಸು ಏನು ಮಾಡಲಿದ್ದಾನೆ?

      (ಪಾಠ 29 ಮತ್ತು 30 ನೋಡಿ.)

  14. ದೇವರ ಸರ್ಕಾರ ಹೇಗೆ ಮಾನವ ಸರ್ಕಾರಗಳಿಗಿಂತ ಶ್ರೇಷ್ಠವಾಗಿದೆ?

    (ಪಾಠ 31 ಮತ್ತು 33 ನೋಡಿ.)

  15. ದೇವರ ಸರ್ಕಾರ ಈಗ ಆಳ್ವಿಕೆ ನಡೆಸ್ತಿದೆ ಅಂತ ನೀವು ನಂಬುತ್ತೀರಾ? ಯಾಕೆ? ಅದು ಯಾವಾಗಿನಿಂದ ಆಳ್ವಿಕೆ ಶುರುಮಾಡಿದೆ?

    (ಪಾಠ 32 ನೋಡಿ.)