ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 3ರಲ್ಲಿ ನೀವೇನು ಕಲಿತ್ರಿ

ಭಾಗ 3ರಲ್ಲಿ ನೀವೇನು ಕಲಿತ್ರಿ

ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:

  1. ಜ್ಞಾನೋಕ್ತಿ 27:11 ಓದಿ.

    • ಯೆಹೋವ ದೇವರಿಗೆ ನಾವು ಯಾಕೆ ನಿಷ್ಠೆ ತೋರಿಸಬೇಕು?

      (ಪಾಠ 34 ನೋಡಿ.)

  2. ಒಂದು ವಿಷಯದ ಬಗ್ಗೆ ಬೈಬಲಿನಲ್ಲಿ ನೇರವಾದ ನಿಯಮ ಇಲ್ಲದಿದ್ದಾಗ ಒಳ್ಳೇ ತೀರ್ಮಾನಗಳನ್ನ ಮಾಡೋದು ಹೇಗೆ?

    (ಪಾಠ 35 ನೋಡಿ.)

  3. ಎಲ್ಲಾ ವಿಷಯಗಳಲ್ಲಿ ಪ್ರಾಮಾಣಿಕರಾಗಿ ಇರೋದು ಹೇಗೆ?

    (ಪಾಠ 36 ನೋಡಿ.)

  4. ಮತ್ತಾಯ 6:33 ಓದಿ.

    • ಹಣ ಮತ್ತು ಕೆಲಸಕ್ಕಿಂತ ದೇವರ ಸೇವೆಗೆ “ಮೊದಲ ಸ್ಥಾನ” ಕೊಡೋದು ಹೇಗೆ?

      (ಪಾಠ 37 ನೋಡಿ.)

  5. ಯೆಹೋವ ದೇವರ ತರ ನೀವು ಜೀವವನ್ನ ಅಮೂಲ್ಯವಾಗಿ ನೋಡುತ್ತೀರ ಅಂತ ಹೇಗೆಲ್ಲಾ ತೋರಿಸಿಕೊಡುತ್ತೀರಾ?

    (ಪಾಠ 38 ನೋಡಿ.)

  6. ಅಪೊಸ್ತಲರ ಕಾರ್ಯ 15:29 ಓದಿ.

    • ರಕ್ತದ ಬಗ್ಗೆ ಯೆಹೋವ ದೇವರು ಕೊಟ್ಟಿರೋ ಆಜ್ಞೆಯನ್ನ ನಾವು ಹೇಗೆ ಪಾಲಿಸಬಹುದು?

    • ಯೆಹೋವ ದೇವರು ನಮ್ಮಿಂದ ಮಾಡಕ್ಕಾಗದ ವಿಷಯಗಳನ್ನ ಕೇಳುತ್ತಾನಾ?

      (ಪಾಠ 39 ನೋಡಿ.)

  7. 2 ಕೊರಿಂಥ 7:1 ಓದಿ.

    • ಶಾರೀರಿಕವಾಗಿ ಮತ್ತು ನೈತಿಕವಾಗಿ ಶುದ್ಧರಾಗಿರೋದು ಅಂದರೆ ಏನು?

      (ಪಾಠ 40 ನೋಡಿ.)

  8. 1 ಕೊರಿಂಥ 6:9, 10 ಓದಿ.

    • ಲೈಂಗಿಕತೆಯ ಬಗ್ಗೆ ಬೈಬಲ್‌ ಏನು ಹೇಳುತ್ತೆ? ಅದು ಸರಿ ಅಂತ ನಿಮಗೆ ಅನಿಸುತ್ತಾ?

    • ಮದ್ಯಪಾನದ ಬಗ್ಗೆ ಬೈಬಲ್‌ ಏನು ಹೇಳುತ್ತೆ?

      (ಪಾಠ 41 ಮತ್ತು 43 ನೋಡಿ.)

  9. ಮತ್ತಾಯ 19:4-6, 9 ಓದಿ.

    • ಮದುವೆಯ ಬಗ್ಗೆ ದೇವರು ಇಟ್ಟಿರುವ ನಿಯಮಗಳೇನು?

    • ಮದುವೆ ಮತ್ತು ಡೈವೋರ್ಸ್‌ ಅನ್ನು ಯಾಕೆ ಕಾನೂನು ಒಪ್ಪುವ ರೀತಿಯಲ್ಲಿ ಮಾಡಬೇಕು?

      (ಪಾಠ 42 ನೋಡಿ.)

  10. ಯೆಹೋವನಿಗೆ ಇಷ್ಟ ಇಲ್ಲದ ಕೆಲವು ಆಚರಣೆಗಳು ಯಾವುವು? ಅದೆಲ್ಲಾ ಯಾಕೆ ಆತನಿಗೆ ಇಷ್ಟ ಆಗಲ್ಲ?

    (ಪಾಠ 44 ನೋಡಿ.)

  11. ಯೋಹಾನ 17:16 ಮತ್ತು ಅಪೊಸ್ತಲರ ಕಾರ್ಯ 5:29 ಓದಿ.

    • ನಾವು ಹೇಗೆ ತಟಸ್ಥರಾಗಿ ಇರಬಹುದು?

    • ದೇವರ ನಿಯಮಕ್ಕೆ ವಿರುದ್ಧವಾದ ವಿಷಯಗಳನ್ನ ಸರ್ಕಾರಿ ಅಧಿಕಾರಿಗಳು ಮಾಡಕ್ಕೆ ಹೇಳಿದ್ರೆ ನೀವೇನು ಮಾಡುತ್ತೀರಾ?

      (ಪಾಠ 45 ನೋಡಿ.)

  12. ಮಾರ್ಕ 12:30 ಓದಿ.

    • ನೀವು ಯೆಹೋವನನ್ನು ಪ್ರೀತಿಸ್ತೀರ ಅಂತ ಹೇಗೆ ತೋರಿಸ್ತೀರಾ?

      (ಪಾಠ 46 ಮತ್ತು 47 ನೋಡಿ.)