ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ರೆಡಿನಾ?

ನಾನು ರೆಡಿನಾ?

ನಾನು ಸಭೆಯ ಜೊತೆ ಸಾರೋಕೆ ರೆಡಿನಾ?

ದೀಕ್ಷಾಸ್ನಾನಕ್ಕೆ ಮುಂಚೆ ನೀವು ಒಬ್ಬ ಪ್ರಚಾರಕ ಆಗಬೇಕಾದ್ರೆ . . .

  • ತಪ್ಪದೇ ಬೈಬಲ್‌ ಕಲಿಯಬೇಕು, ಪ್ರಾರ್ಥನೆ ಮಾಡಬೇಕು ಮತ್ತು ಕೂಟಗಳಿಗೆ ಹಾಜರಾಗಬೇಕು.

  • ಕಲಿಯುತ್ತಾ ಇರುವ ವಿಷಯದ ಕಡೆಗೆ ಗಣ್ಯತೆ ಮತ್ತು ನಂಬಿಕೆ ಇರಬೇಕು. ಅದನ್ನ ಬೇರೆಯವರಿಗೂ ಹೇಳುವ ಆಸೆ ಇರಬೇಕು.

  • ಯೆಹೋವನನ್ನು ಪ್ರೀತಿಸಬೇಕು ಮತ್ತು ಆತನನ್ನು ಪ್ರೀತಿಸುವವರನ್ನು ಆಪ್ತ ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು.

  • ಯಾವುದೇ ರಾಜಕೀಯ ಅಥವಾ ಸುಳ್ಳು ಧರ್ಮದ ಸದಸ್ಯರಾಗಿದ್ದರೆ ಅದಕ್ಕೆ ರಾಜೀನಾಮೆ ಕೊಟ್ಟಿರಬೇಕು.

  • ಯೆಹೋವನ ನೀತಿನಿಯಮಗಳಿಗೆ ಅನುಸಾರ ಜೀವನ ಮಾಡಬೇಕು ಮತ್ತು ಒಬ್ಬ ಯೆಹೋವನ ಸಾಕ್ಷಿಯಾಗುವ ಬಯಕೆ ಇರಬೇಕು.

ಸಭೆ ಜೊತೆ ಸಾರೋಕೆ ರೆಡಿ ಅಂತ ನಿಮಗೆ ಅನಿಸೋದಾದ್ರೆ ನಿಮ್ಮ ಬೈಬಲ್‌ ಟೀಚರ್‌ಗೆ ಹೇಳಿ. ಅವರು ಅದರ ಬಗ್ಗೆ ಹಿರಿಯರ ಹತ್ತಿರ ಹೇಳುತ್ತಾರೆ. ನೀವು ಅದಕ್ಕೆ ಅರ್ಹರಾಗಬೇಕಾದ್ರೆ ಏನು ಮಾಡಬೇಕು ಅಂತ ಹಿರಿಯರು ನಿಮ್ಮ ಜೊತೆ ಮಾತಾಡುತ್ತಾರೆ.

ನಾನು ದೀಕ್ಷಾಸ್ನಾನಕ್ಕೆ ರೆಡಿನಾ?

ನೀವು ದೀಕ್ಷಾಸ್ನಾನಕ್ಕೆ ರೆಡಿ ಆಗಬೇಕಾದ್ರೆ . . .

  • ನೀವು ಈಗಾಗಲೇ ಒಬ್ಬ ಪ್ರಚಾರಕ ಆಗಿರಬೇಕು.

  • ನಿಮ್ಮಿಂದ ಆದಷ್ಟು ಸಿಹಿಸುದ್ದಿಯನ್ನ ತಪ್ಪದೆ ಸಾರಬೇಕು.

  • “ನಂಬಿಗಸ್ತ, ವಿವೇಕಿ ಆದ ಆಳು” ಕೊಡುವ ನಿರ್ದೇಶನಗಳನ್ನ ಪಾಲಿಸಬೇಕು ಮತ್ತು ಅವರನ್ನ ಬೆಂಬಲಿಸಬೇಕು. —ಮತ್ತಾಯ 24:45-47.

  • ಎಂದೆಂದೂ ಆತನ ಸೇವೆ ಮಾಡುತ್ತೇನೆ ಅಂತ ಪ್ರಾರ್ಥನೆಯಲ್ಲಿ ಯೆಹೋವನಿಗೆ ಸಮರ್ಪಣೆ ಮಾಡಿಕೊಂಡಿರಬೇಕು.

ನೀವು ದೀಕ್ಷಾಸ್ನಾನ ತೆಗೆದುಕೊಳ್ಳೋದಕ್ಕೆ ರೆಡಿ ಅಂತ ನಿಮಗೆ ಅನಿಸೋದಾದ್ರೆ ನಿಮ್ಮ ಬೈಬಲ್‌ ಟೀಚರ್‌ಗೆ ಹೇಳಿ. ಅವರು ಅದರ ಬಗ್ಗೆ ಹಿರಿಯರ ಹತ್ತಿರ ಹೇಳುತ್ತಾರೆ. ನೀವು ಅದಕ್ಕೆ ಅರ್ಹರಾಗಬೇಕಾದ್ರೆ ಏನು ಮಾಡಬೇಕು ಅಂತ ಹಿರಿಯರು ನಿಮ್ಮ ಜೊತೆ ಮಾತಾಡುತ್ತಾರೆ.