ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿಚಯ

ಪರಿಚಯ

ಬಾಳಿಗೆ ಬೆಳಕಾಗೋ ಬೈಬಲ್‌ ವಚನಗಳು ಪುಸ್ತಕ ನಿಜಕ್ಕೂ ಒಂದು ದೊಡ್ಡ ಉಡುಗೊರೆ. ಈ ಪುಸ್ತಕದ ಸಹಾಯದಿಂದ ನಮಗೆ ಜೀವನದಲ್ಲಿ ಬರೋ ಸಮಸ್ಯೆಗಳನ್ನ ಎದುರಿಸೋಕೆ ಬೇಕಾಗಿರೋ ಬೈಬಲ್‌ ವಚನಗಳನ್ನ, ಉದಾಹರಣೆಗಳನ್ನ ಸುಲಭವಾಗಿ ಕಂಡುಹಿಡಿಬಹುದು. ನಮಗಷ್ಟೇ ಅಲ್ಲ, ಬೇರೆಯವ್ರನ್ನ ಪ್ರೋತ್ಸಾಹ ಮಾಡೋಕೂ ಉಪಯೋಗಿಸಬಹುದು. ನಿರ್ಧಾರಗಳನ್ನ ಮಾಡೋಕೆ, ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಸಹಾಯ ಮಾಡೋ ಬೈಬಲ್‌ ವಚನಗಳನ್ನ ಕಂಡುಹಿಡಿದು ಅವ್ರಿಗೆ ಸಹಾಯ ಮಾಡಬಹುದು. ಇದಕ್ಕೆ ಏನು ಮಾಡಬೇಕು? ಮೊದ್ಲು, ವಿಷ್ಯ ಏನು ಅಂತ ಆರಿಸ್ಕೊಬೇಕು. ಅದ್ರ ಕೆಳಗೆ ಅದಕ್ಕೆ ಸಂಬಂಧಪಟ್ಟ ವಚನಗಳು ಮತ್ತು ಬೈಬಲ್‌ ಉದಾಹರಣೆಗಳಿರುತ್ತೆ. (“ ಈ ಪುಸ್ತಕದಲ್ಲಿ ಹುಡುಕೋದು ಹೇಗೆ?” ಅನ್ನೋ ಚೌಕ ನೋಡಿ.) ಇದ್ರ ಸಹಾಯದಿಂದ ನೀವು ಸಲಹೆ, ಮಾರ್ಗದರ್ಶನ, ಸಾಂತ್ವನ ಪಡ್ಕೊಂಡು ನಿಮ್ಮ ಬಾಳನ್ನ ಬೆಳಗಿಸ್ಕೊಬಹುದು. ಅಷ್ಟೇ ಅಲ್ಲ, ಅಲ್ಲಿರೋ ವಚನಗಳನ್ನ ಬಳಸಿ ಕುಗ್ಗಿಹೋದವರನ್ನ ಬಲಪಡಿಸಿ, ಸಮಸ್ಯೆಗಳನ್ನ ಜಯಿಸೋಕೆ ಸಹಾಯ ಮಾಡಿ, ಪ್ರೋತ್ಸಾಹ ಕೊಟ್ಟು ಬೇರೆಯವ್ರ ಬಾಳಿಗೂ ಬೆಳಕಾಗಬಹುದು.

ಹಾಗಂತ ಈ ಪುಸ್ತಕದಲ್ಲಿ ಒಂದು ವಿಷ್ಯಕ್ಕೆ ಸಂಬಂಧಪಟ್ಟ ಎಲ್ಲಾ ವಚನಗಳು ಇರಲ್ಲ. ಮುಖ್ಯವಾಗಿರೋ ವಚನಗಳು ಮಾತ್ರ ಇರುತ್ತೆ. ಇನ್ನೂ ಜಾಸ್ತಿ ತಿಳ್ಕೊಬೇಕಂದ್ರೆ ನೀವು ಸಂಶೋಧನೆ ಮಾಡಬೇಕು. (ಜ್ಞಾನೋ 2:1-6) ಬೈಬಲ್‌ ವಚನಗಳ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ ಬೈಬಲಲ್ಲಿರೋ ಮಾರ್ಜಿನಲ್‌ ರೆಫರೆನ್ಸ್‌ ಮತ್ತು ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌ನ ಸ್ಟಡಿ ನೋಟ್ಸ್‌ ನೋಡಿ. ಒಂದು ವಚನದ ಅರ್ಥ, ಅನ್ವಯನ ತಿಳ್ಕೊಳ್ಳೋಕೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಮತ್ತು ವಾಚ್‌ ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ ನೋಡಿ. ಈ ಪುಸ್ತಕಗಳಲ್ಲಿ ಒಂದು ವಚನಕ್ಕೆ ಸಂಬಂಧಪಟ್ಟ ಎಲ್ಲಾ ರೆಫರೆನ್ಸ್‌ಗಳು ಇರುತ್ತೆ. ಇತ್ತೀಚಿನ ರೆಫರೆನ್ಸ್‌ಗಳನ್ನ ಓದಿದ್ರೆ ಹೊಸ ತಿಳುವಳಿಕೆ ಬಗ್ಗೆ ತಿಳ್ಕೊಬಹುದು.

ಈ ಪುಸ್ತಕನ ಬಳಸ್ತಾ ಬಳಸ್ತಾ “ಪವಿತ್ರ ಗ್ರಂಥಕ್ಕೆ ಜೀವ ಇದೆ, ತುಂಬಾ ಶಕ್ತಿ ಇದೆ” ಅಂತ ನಿಮಗೆ ಗೊತ್ತಾಗುತ್ತೆ. ಹಾಗಾಗಿ ಈ ಪುಸ್ತಕ ಬೈಬಲಲ್ಲಿರೋ ಜ್ಞಾನ, ತಿಳುವಳಿಕೆ, ವಿವೇಕ ಪಡ್ಕೊಳ್ಳೋಕೆ ನಿಮಗೆ ಸಹಾಯ ಮಾಡಲಿ.—ಇಬ್ರಿ 4:12.