ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಾಂತ್ವನ, ಸಮಾಧಾನ

ಸಾಂತ್ವನ, ಸಮಾಧಾನ

ಮನಸ್ಸು ಮುದುಡೋಕೆ ಕಾರಣ ಹಲವು, ಬೈಬಲ್‌ ವಚನಗಳಿಂದ ಪಡೆಯಿರಿ ಗೆಲುವು

ಚಿಂತೆ

ಚಿಂತೆ” ನೋಡಿ

ಕೋಪ; ಬೇಸರ

ಅನ್ಯಾಯ ಆದಾಗ ಅಥವಾ ಕಷ್ಟಗಳ ಸುರಿ ಮಳೆ ಆದಾಗ

ಪ್ರಸಂ 9:11, 12

ಇದನ್ನೂ ನೋಡಿ: ಕೀರ್ತ 142:4; ಪ್ರಸಂ 4:1; 7:7

  • ಬೈಬಲ್‌ ಉದಾಹರಣೆಗಳು:

    • ರೂತ್‌ 1:11-13, 20—ನೊವೊಮಿ ಗಂಡನನ್ನ, ಇಬ್ಬರು ಗಂಡುಮಕ್ಕಳನ್ನ ಕಳ್ಕೊಂಡಾಗ ಯೆಹೋವ ತನ್ನನ್ನ ಕೈಬಿಟ್ಟಿದ್ದಾನೆ ಅಂತ ಅವಳಿಗೆ ಅನಿಸ್ತು

    • ಯೋಬ 3:1, 11, 25, 26; 10:1—ಯೋಬ ತನ್ನ ಆಸ್ತಿ-ಪಾಸ್ತಿ, 10 ಮಕ್ಕಳನ್ನ ಕಳ್ಕೊಂಡು ಆರೋಗ್ಯ ಹಾಳಾದಾಗ ಬೇಸರದಲ್ಲಿ ಕುಗ್ಗಿ ಹೋದ

  • ನೆಮ್ಮದಿ ಕೊಡೋ ಬೈಬಲ್‌ ವಚನಗಳು:

  • ನೆಮ್ಮದಿ ಕೊಡೋ ಬೈಬಲ್‌ ಉದಾಹರಣೆಗಳು:

    • ರೂತ್‌ 1:6, 7, 16-18; 2:2, 19, 20; 3:1; 4:14-16—ನೊವೊಮಿ ತನ್ನ ದೇಶಕ್ಕೆ ಹೋದಳು, ಅಲ್ಲಿ ಅವಳಿಗೆ ಸಹಾಯ ಸಿಕ್ತು, ಅವಳೂ ಬೇರೆಯವ್ರಿಗೆ ಸಹಾಯ ಮಾಡಿದಳು, ಹೀಗೆ ಅವಳ ಬೇಸರ ಕಣ್ಮರೆಯಾಗಿ ಮುಖದಲ್ಲಿ ಸಂತೋಷ ಅರಳಿತು

    • ಯೋಬ 42:7-16; ಯಾಕೋ 5:11—ಯೋಬ ಕೊನೇ ತನಕ ನಂಬಿಗಸ್ತನಾಗಿದ್ದ, ಅದಕ್ಕೆ ಯೆಹೋವ ಅವನನ್ನ ಜಾಸ್ತಿ ಆಶೀರ್ವದಿಸಿದನು

ಬೇರೆಯವರು ಕೆಟ್ಟದಾಗಿ ನಡ್ಕೊಂಡಾಗ

ಪ್ರಸಂ 4:1, 2

  • ಬೈಬಲ್‌ ಉದಾಹರಣೆಗಳು:

    • 1ಸಮು 1:6, 7, 10, 13-16—ಪೆನಿನ್ನಳ ಚುಚ್ಚು ಮಾತಿಂದ, ಮಹಾ ಪುರೋಹಿತ ಏಲಿ ಹಿಂದೆ-ಮುಂದೆ ಯೋಚ್ನೆ ಮಾಡದೇ ಹೇಳಿದ ಮಾತಿಂದ ಹನ್ನಗೆ ತುಂಬಾ ಬೇಸರ ಆಯ್ತು

    • ಯೋಬ 8:3-6; 16:1-5; 19:2, 3—ಯೋಬನ ಮೂವರು ಸ್ನೇಹಿತರು ಅವನ ಬಗ್ಗೆ ಇಲ್ಲಸಲ್ಲದ ಮಾತುಗಳನ್ನ ಹೇಳಿದ್ರು, ತಾವು ನೀತಿವಂತರು ಅಂತ ಹೇಳಿ ಯೋಬನ ಗಾಯದ ಮೇಲೆ ಬರೆ ಎಳೆದ್ರು

  • ನೆಮ್ಮದಿ ಕೊಡೋ ಬೈಬಲ್‌ ವಚನಗಳು:

  • ನೆಮ್ಮದಿ ಕೊಡೋ ಬೈಬಲ್‌ ಉದಾಹರಣೆಗಳು:

    • 1ಸಮು 1:9-11, 18—ಹನ್ನ ಮನಸ್ಸು ಬಿಚ್ಚಿ ಯೆಹೋವನಿಗೆ ಪ್ರಾರ್ಥನೆ ಮಾಡಿದ ಮೇಲೆ ಅವಳ ಮನಸ್ಸು ಹಗುರ ಆಯ್ತು

    • ಯೋಬ 42:7, 8, 10, 17—ಯೋಬ ತನ್ನ ಸ್ನೇಹಿತರನ್ನ ಕ್ಷಮಿಸಿದ ಮೇಲೆ ಯೆಹೋವ ಅವನಿಗೆ ಕಾಯಿಲೆ ವಾಸಿ ಮಾಡಿದನು ಮತ್ತು ಸಂತೋಷವಾಗಿರೋ ತರ ಮಾಡಿದನು

ಚುಚ್ಚೋ ಮನಸ್ಸು

ಎಜ್ರ 9:6; ಕೀರ್ತ 38:3, 4, 8; 40:12

  • ಬೈಬಲ್‌ ಉದಾಹರಣೆಗಳು:

    • 2ಅರ 22:8-13; 23:1-3—ಮೋಶೆಯ ನಿಯಮ ಪುಸ್ತಕದಲ್ಲಿರೋದನ್ನ ಓದಿದ ಮೇಲೆ ರಾಜ ಯೋಷೀಯನಿಗೆ ಮತ್ತು ಅವನ ಪ್ರಜೆಗಳಿಗೆ ತಾವು ದೊಡ್ಡ ತಪ್ಪು ಮಾಡಿದ್ದೀವಿ ಅಂತ ಮನಸ್ಸು ಚುಚ್ತು

    • ಎಜ್ರ 9:10-15; 10:1-4—ಕೆಲವರು ಯೆಹೋವನ ಮಾತನ್ನ ಕೇಳದೆ ಬೇರೆ ದೇಶದ ಹುಡುಗಿರನ್ನ ಮದುವೆ ಆದಾಗ ಎಜ್ರ ಮತ್ತು ಕೆಲವು ಜನರಿಗೆ ತುಂಬಾ ಬೇಸರ ಆಯ್ತು

    • ಲೂಕ 22:54-62—ಯೇಸುವನ್ನ ಮೂರು ಸಲ ಗೊತ್ತಿಲ್ಲ ಅಂತ ಹೇಳಿದ ಮೇಲೆ ಅಪೊಸ್ತಲ ಪೇತ್ರನಿಗೆ ಮನಸ್ಸು ತುಂಬ ಚುಚ್ತು, ನಾಚಿಕೆ ಆಯ್ತು

  • ನೆಮ್ಮದಿ ಕೊಡೋ ಬೈಬಲ್‌ ವಚನಗಳು:

  • ನೆಮ್ಮದಿ ಕೊಡೋ ಬೈಬಲ್‌ ಉದಾಹರಣೆಗಳು:

    • 2ಪೂರ್ವ 33:9-13, 15, 16—ಮನಸ್ಸೆ ಯೆಹೂದವನ್ನ ಆಳಿದ ರಾಜರಲ್ಲೇ ತುಂಬ ಕೆಟ್ಟ ರಾಜ ಆಗಿದ್ದ; ಆದ್ರೂ ಅವನು ತನ್ನ ತಪ್ಪನ್ನ ಒಪ್ಕೊಂಡ ಮತ್ತು ಕ್ಷಮೆ ಪಡ್ಕೊಂಡ

    • ಲೂಕ 15:11-32—ಯೆಹೋವ ನಮ್ಮ ತಪ್ಪುಗಳನ್ನ ಸಂಪೂರ್ಣವಾಗಿ ಮನಸಾರೆ ಕ್ಷಮಿಸ್ತಾನೆ ಅಂತ ತೋರಿಸೋಕೆ ಪೋಲಿ ಹೋದ ಮಗನ ಉದಾಹರಣೆಯನ್ನ ಯೇಸು ಹೇಳಿದನು

ಬೇರೆಯವರು ನಮ್ಮನ್ನ ಕೀಳಾಗಿ ನೋಡಿದಾಗ, ಮನಸ್ಸಿಗೆ ನೋವು ಮಾಡಿದಾಗ, ಮೋಸ ಮಾಡಿದಾಗ

ಬೇಸರ” ನೋಡಿ

ನಮ್ಮ ಬಲಹೀನತೆ ಮತ್ತು ಪಾಪಗಳು ನಮಗೆ ಬೇಸರ ತರಿಸುತ್ತೆ

ಬೇಸರ” ನೋಡಿ

ನನ್ನಿಂದ ಯಾರಿಗೂ ಪ್ರಯೋಜನ ಇಲ್ಲ ಅಂತ ಅನಿಸಿದಾಗ

ಸಂದೇಹ” ನೋಡಿ

ನನ್ನಿಂದ ಈ ನೇಮಕ ಮಾಡಕ್ಕಾಗಲ್ಲ ಅಂತ ಅನಿಸಿದಾಗ

  • ಬೈಬಲ್‌ ಉದಾಹರಣೆಗಳು:

    • ವಿಮೋ 3:11; 4:10—ಮೋಶೆಗೆ ಫರೋಹನ ಮುಂದೆ ಮಾತಾಡೋಕೆ ಹೇಳಿದಾಗ ಮತ್ತು ದೇವ ಜನರನ್ನ ಈಜಿಪ್ಟಿಂದ ಬಿಡಿಸೋಕೆ ಹೇಳಿದಾಗ ‘ಈ ಕೆಲ್ಸಕ್ಕೆ ನಂಗೆ ಯೋಗ್ಯತೆ ಇಲ್ಲ’ ಅಂತ ಅವನಿಗೆ ಅನಿಸ್ತು

    • ಯೆರೆ 1:4-6—ಹಠಮಾರಿ ಜನರಿಗೆ ಯೆಹೋವನ ನ್ಯಾಯತೀರ್ಪನ್ನ ಹೇಳೋದಕ್ಕೆ ಹೇಳಿದಾಗ ಯೆರೆಮೀಯ ‘ನಾನು ಇನ್ನೂ ಚಿಕ್ಕವನು, ನಂಗೆ ಅನುಭವ ಇಲ್ಲ’ ಅಂತ ಹೇಳಿದ

  • ನೆಮ್ಮದಿ ಕೊಡೋ ಬೈಬಲ್‌ ವಚನಗಳು:

  • ನೆಮ್ಮದಿ ಕೊಡೋ ಬೈಬಲ್‌ ಉದಾಹರಣೆಗಳು:

    • ವಿಮೋ 3:12; 4:11, 12—ಮೋಶೆಗೆ ನೇಮಕ ಮಾಡೋಕೆ ಸಹಾಯ ಮಾಡ್ತೀನಿ ಅಂತ ಯೆಹೋವ ದೇವರು ಪದೇ ಪದೇ ಹೇಳಿದನು

    • ಯೆರೆ 1:7-10—ಯೆಹೋವ ಯೆರೆಮೀಯನಿಗೆ ‘ಭಯ ಪಡಬೇಡ, ಈ ಕಷ್ಟಕರ ನೇಮಕನಾ ಮಾಡೋಕೆ ಸಹಾಯ ಮಾಡ್ತೀನಿ’ ಅಂತ ಹೇಳಿದನು

ಹೊಟ್ಟೆಕಿಚ್ಚು

ಕಾಯಿಲೆ ಮತ್ತು ವಯಸ್ಸಾಗೋದ್ರಿಂದ ಕೆಲವ್ರಿಗೆ ಜಾಸ್ತಿ ಸೇವೆ ಮಾಡೋದಕ್ಕೆ ಆಗಲ್ಲ

ಕೀರ್ತ 71:9, 18; ಪ್ರಸಂ 12:1-7

  • ಬೈಬಲ್‌ ಉದಾಹರಣೆಗಳು:

    • 2ಅರ 20:1-3—ರಾಜ ಹಿಜ್ಕೀಯ ಹುಷಾರಿಲ್ಲದೇ ಸಾವು ಹತ್ರ ಆಗ್ತಿದ್ದಾಗ ಅವನು ತುಂಬಾ ಕಣ್ಣೀರಿಟ್ಟ

    • ಫಿಲಿ 2:25-30—ಎಪಫ್ರೊದೀತನಿಗೆ ಹುಷಾರಿಲ್ಲದೇ ಇದ್ದಾಗ ಫಿಲಿಪ್ಪಿಯ ಸಹೋದರರು ‘ನನ್ನ ಬಗ್ಗೆ ಏನು ಅಂದ್ಕೊತಾರೋ? ನಾನು ನನ್ನ ನೇಮಕನಾ ಸರಿಯಾಗಿ ಮಾಡಿಲ್ಲ ಅಂತ ಅಂದ್ಕೊತಾರೇನೋ’ ಅಂತ ತುಂಬಾ ಬೇಸರ ಪಟ್ಟ

  • ನೆಮ್ಮದಿ ಕೊಡೋ ಬೈಬಲ್‌ ವಚನಗಳು:

  • ನೆಮ್ಮದಿ ಕೊಡೋ ಬೈಬಲ್‌ ಉದಾಹರಣೆಗಳು:

    • 2ಸಮು 17:27-29; 19:31-38—ರಾಜ ದಾವೀದ ವಯಸ್ಸಾದ ಬರ್ಜಿಲೈಯನ್ನ ಯೆರೂಸಲೇಮಿಗೆ ಕರೆದ, ಆದ್ರೆ ಬರ್ಜಿಲೈ ‘ನಂಗೆ ವಯಸ್ಸಾಗಿದೆ, ಜಾಸ್ತಿ ಕೆಲ್ಸ ಮಾಡೋಕೆ ಆಗಲ್ಲ’ ಅಂತ ಅದಕ್ಕೆ ಒಪ್ಕೊಳ್ಲಿಲ್ಲ

    • ಕೀರ್ತ 41:1-3, 12—ರಾಜ ದಾವೀದನಿಗೆ ತುಂಬಾ ಹುಷಾರಿಲ್ಲದೇ ಇದ್ದಾಗ ಯೆಹೋವ ತನಗೆ ಸಹಾಯ ಮಾಡ್ತಾನೆ ಅನ್ನೋ ಭರವಸೆ ಇತ್ತು

    • ಮಾರ್ಕ 12:41-44—ಒಬ್ಬ ಬಡ ವಿಧವೆ ತನ್ನ ಹತ್ರ ಇರೋದನ್ನೆಲ್ಲಾ ಕಾಣಿಕೆಯಾಗಿ ಕೊಟ್ಟಿದ್ದನ್ನ ನೋಡಿ ಯೇಸು ಅವಳನ್ನ ಹೊಗಳಿದನು

ದೌರ್ಜನ್ಯಕ್ಕೆ ಒಳಗಾಗಿದ್ರಿಂದ ಕಾಡೋ ಕಹಿನೆನಪು

ದೌರ್ಜನ್ಯ” ನೋಡಿ

ಅತಿಯಾದ ಭಯ; ಆತಂಕ

ಭಯ” ನೋಡಿ

ಹಿಂಸೆ

ಹಿಂಸೆ” ಅನ್ನೋ ವಿಷ್ಯ ನೋಡಿ