ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಲಹೆ, ಬುದ್ಧಿವಾದ

ಸಲಹೆ, ಬುದ್ಧಿವಾದ

ಯಾರಾದ್ರೂ ಸಲಹೆ ಕೊಟ್ಟಾಗ

ಬೈಬಲ್‌ ಆಧಾರಿತ ಸಲಹೆ ಕೊಟ್ಟಾಗ ನಾವು ಯಾಕೆ ಪಾಲಿಸಬೇಕು?

ನಾವು ಮಾಡಿದ್ದು ಸರಿ ಅಂತ ವಾದ ಮಾಡೋ ಬದಲು ಕೊಡೋ ಸಲಹೆನಾ ಕೇಳೋದು ಯಾಕೆ ಒಳ್ಳೇದು?

ಜ್ಞಾನೋ 12:15; 29:1

ಇದನ್ನೂ ನೋಡಿ: ಜ್ಞಾನೋ 1:23-31; 15:31

  • ಬೈಬಲ್‌ ಉದಾಹರಣೆಗಳು:

    • 1ಸಮು 15:3, 9-23—ಪ್ರವಾದಿ ಸಮುವೇಲ ಸೌಲನನ್ನ ತಿದ್ದಿದಾಗ, ಅವನು ತನ್ನ ತಪ್ಪನ್ನ ಸಮರ್ಥಿಸ್ಕೊಂಡ, ಅವನ ಮಾತು ಕೇಳ್ಲಿಲ್ಲ; ಅದಕ್ಕೆ ಯೆಹೋವ ಅವನನ್ನ ತಿರಸ್ಕರಿಸಿದನು

    • 2ಪೂರ್ವ 25:14-16, 27—ರಾಜ ಅಮಚ್ಯ ಪಾಪ ಮಾಡಿದಾಗ ಯೆಹೋವನ ಪ್ರವಾದಿ ಅವನನ್ನ ತಿದ್ದಿದನು, ಆದ್ರೆ ಅವನು ಆ ಸಲಹೆನಾ ಕೇಳದೇ ಇದ್ದಿದ್ರಿಂದ ಯೆಹೋವ ದೇವರು ಅವನನ್ನ ಕಾಪಾಡ್ಲಿಲ್ಲ

ಮೇಲ್ವಿಚಾರಕರು ಸಲಹೆ ಕೊಟ್ಟಾಗ ಅವ್ರ ಮಾತು ಕೇಳೋದು ಯಾಕೆ ಒಳ್ಳೇದು?

1ಥೆಸ 5:12; 1ತಿಮೊ 5:17; ಇಬ್ರಿ 13:7, 17

  • ಬೈಬಲ್‌ ಉದಾಹರಣೆಗಳು:

    • 3ಯೋಹಾ 9, 10—ಕ್ರೈಸ್ತ ಸಭೆಯನ್ನ ಮೇಲ್ವಿಚಾರಣೆ ಮಾಡೋರಿಗೆ ದಿಯೊತ್ರೇಫ ಅಗೌರವ ತೋರಿಸಿದ್ರಿಂದ ಅಪೊಸ್ತಲ ಪೌಲ ಅವನನ್ನ ಖಂಡಿಸಿದ

ವಯಸ್ಸಾದವರ ಮಾತನ್ನ ಯಾಕೆ ಕೇಳಬೇಕು?

ಯಾಜ 19:32; ಜ್ಞಾನೋ 16:31

ಇದನ್ನೂ ನೋಡಿ: ಯೋಬ 12:12; 32:7; ತೀತ 2:3-5

  • ಬೈಬಲ್‌ ಉದಾಹರಣೆಗಳು:

    • 1ಸಮು 23:16-18—ರಾಜ ದಾವೀದ ತನಗಿಂತ 30 ವರ್ಷ ದೊಡ್ಡವನಾಗಿದ್ದ ಯೋನಾತಾನನ ಸಲಹೆನ ಕೇಳಿ ತನ್ನನ್ನ ಬಲಪಡಿಸ್ಕೊಂಡ

    • 1ಅರ 12:1-17—ರಾಜ ರೆಹಬ್ಬಾಮ ಹಿರಿಯರು ಕೊಟ್ಟ ಒಳ್ಳೇ ಸಲಹೆನಾ ಕೇಳದೆ ಯುವಕರು ಕೊಟ್ಟ ಸಲಹೆ ಕೇಳಿ ತೊಂದ್ರೆಲಿ ಸಿಕ್ಕಿಹಾಕೊಂಡ

ಯೆಹೋವನಿಗೆ ನಿಯತ್ತಾಗಿರೋ ಸ್ತ್ರೀಯರು ಮತ್ತು ವಯಸ್ಸಲ್ಲಿ ಚಿಕ್ಕವರು ಕೂಡ ಒಳ್ಳೇ ಸಲಹೆ ಕೊಡ್ತಾರಾ?

ಯೋಬ 32:6, 9, 10; ಜ್ಞಾನೋ 31:1, 10, 26; ಪ್ರಸಂ 4:13

ಇದನ್ನೂ ನೋಡಿ: ಕೀರ್ತ 119:100

  • ಬೈಬಲ್‌ ಉದಾಹರಣೆಗಳು:

    • 1ಸಮು 25:14-35—ಅಬೀಗೈಲ್‌ ರಾಜ ದಾವೀದನಿಗೆ ಕೊಟ್ಟ ಸಲಹೆಯಿಂದ ಎಷ್ಟೋ ಮುಗ್ಧ ಜನರ ಜೀವ ಉಳೀತು

    • 2ಸಮು 20:15-22—ಆಬೇಲ್‌ ಪಟ್ಟಣದ ಒಬ್ಬ ಬುದ್ಧಿವಂತ ಸ್ತ್ರೀ ಕೊಟ್ಟ ಸಲಹೆಯಿಂದ ಇಡೀ ಪಟ್ಟಣ ಪಾರಾಯ್ತು

    • 2ಅರ 5:1-14—ಇಸ್ರಾಯೇಲಿನ ಒಬ್ಬ ಪುಟ್ಟ ಹುಡುಗಿ ಯುದ್ಧ ವೀರನೊಬ್ಬನಿಗೆ ಅವನ ಕುಷ್ಠ ವಾಸಿಯಾಗೋಕೆ ಏನು ಮಾಡಬೇಕು ಅಂತ ಹೇಳಿದಳು

ಯೆಹೋವ ದೇವರ ಮೇಲೆ ಮತ್ತು ಬೈಬಲ್‌ ಮೇಲೆ ಗೌರವ ಇಲ್ಲದೇ ಇರೋರ ಮಾತನ್ನ ನಾವು ಯಾಕೆ ಕೇಳಬಾರದು?

ಕೀರ್ತ 1:1; ಜ್ಞಾನೋ 4:14

ಇದನ್ನೂ ನೋಡಿ: ಲೂಕ 6:39

  • ಬೈಬಲ್‌ ಉದಾಹರಣೆಗಳು:

    • 1ಪೂರ್ವ 10:13, 14—ರಾಜ ಸೌಲ ಯೆಹೋವನ ಸಹಾಯ ಕೇಳದೇ ಕೆಟ್ಟದೇವದೂತರ ಸಹಾಯ ಪಡ್ಕೊಂಡಿದ್ರಿಂದ ತನ್ನ ಜೀವನೇ ಕಳ್ಕೊಂಡ

    • 2ಪೂರ್ವ 22:2-5, 9—ರಾಜ ಅಹಜ್ಯ ಕೆಟ್ಟ ಸಲಹೆಗಾರರ ಮಾತು ಕೇಳಿ ಪ್ರಾಣ ಕಳ್ಕೊಂಡ

    • ಯೋಬ 21:7, 14-16 —ಯೆಹೋವನಿಗೆ ಗೌರವ ಕೊಡದೇ ಇರೋರ ತರ ಯೋಬ ಯೋಚ್ನೆ ಮಾಡಲಿಲ್ಲ

ಸಲಹೆ ಕೊಡೋದು

ಸಲಹೆ ಕೊಡೋಕೂ ಮುಂಚೆ ಎಲ್ಲಾ ವಿಷ್ಯಗಳನ್ನ ತಿಳ್ಕೊಳ್ಳೋದು, ಬೇರೆಯವರು ಹೇಳೋದನ್ನ ಕೇಳಿಸ್ಕೊಳ್ಳೋದು ಮುಖ್ಯ ಯಾಕೆ?

ಜ್ಞಾನೋ 18:13, 17

ಇದನ್ನೂ ನೋಡಿ: ಜ್ಞಾನೋ 25:8

  • ಬೈಬಲ್‌ ಉದಾಹರಣೆಗಳು:

    • 1ಸಮು 1:9-16—ಮಹಾ ಪುರೋಹಿತ ಏಲಿ ಹನ್ನಳ ಪರಿಸ್ಥಿತಿನ ಅರ್ಥ ಮಾಡ್ಕೊಳ್ಳದೇ ದುಡುಕಿ ಮಾತಾಡಿದ, ಕುಡಿದಿದ್ದಾಳೆ ಅನ್ನೋ ಆರೋಪ ಹಾಕಿದ

    • ಮತ್ತಾ 16:21-23—ಅಪೊಸ್ತಲ ಪೇತ್ರ ಎಲ್ಲಾ ವಿಷ್ಯ ತಿಳ್ಕೊಳ್ಳದೇ ಇದ್ದಿದ್ರಿಂದ ಯೆಹೋವನಿಗೆ ಇಷ್ಟ ಆಗೋದನ್ನಲ್ಲ ಸೈತಾನನಿಗೆ ಇಷ್ಟ ಆಗೋದನ್ನ ಮಾಡು ಅಂತ ಯೇಸುಗೆ ಹೇಳಿದ

ಸಲಹೆ ಕೊಡೋಕೂ ಮುಂಚೆ ನಾವು ಯಾಕೆ ಯೆಹೋವನ ಸಹಾಯ ಕೇಳಬೇಕು?

ಕೀರ್ತ 32:8; 73:23, 24; ಜ್ಞಾನೋ 3:5, 6

  • ಬೈಬಲ್‌ ಉದಾಹರಣೆಗಳು:

    • ವಿಮೋ 3:13-18—ಇಸ್ರಾಯೇಲ್ಯರ ಸಮಸ್ಯೆಗಳನ್ನ ಬಗೆಹರಿಸೋಕೆ ಪ್ರವಾದಿ ಮೋಶೆ ಯೆಹೋವನ ಸಹಾಯ ಕೇಳಿದ

    • 1ಅರ 3:5-12—ರಾಜ ಸೊಲೊಮೋನ ಯುವಕನಾಗಿದ್ದಾಗ ತನಗೆ ತೋಚಿದ ತರ ನಡ್ಕೊಳ್ಲಿಲ್ಲ, ಯೆಹೋವನ ಹತ್ರ ವಿವೇಕ ಕೊಡು ಅಂತ ಕೇಳಿದ್ರಿಂದ ತುಂಬಾ ಆಶೀರ್ವಾದ ಪಡ್ಕೊಂಡ

ನಾವು ಯಾವಾಗ್ಲೂ ಬೇರೆಯವ್ರಿಗೆ ಬೈಬಲಿಂದನೇ ಸಲಹೆ ಕೊಡಬೇಕು ಯಾಕೆ?

ಕೀರ್ತ 119:24, 105; ಜ್ಞಾನೋ 19:21; 2ತಿಮೊ 3:16, 17

ಇದನ್ನೂ ನೋಡಿ: ಧರ್ಮೋ 17:18-20

  • ಬೈಬಲ್‌ ಉದಾಹರಣೆಗಳು:

    • ಮತ್ತಾ 4:1-11—ಸೈತಾನ ಯೇಸುವನ್ನ ಪರೀಕ್ಷಿಸಿದಾಗ ಬೈಬಲ್‌ ವಚನಗಳನ್ನ ಉಪಯೋಗಿಸಿ ಉತ್ರ ಕೊಟ್ಟನು

    • ಯೋಹಾ 12:49, 50—ಯೇಸು ಯಾವಾಗ್ಲೂ ಯೆಹೋವ ಏನು ಹೇಳ್ಕೊಟ್ಟನೋ ಅದನ್ನೇ ಜನ್ರಿಗೆ ಕಲಿಸಿದನು, ನಾವೂ ಅದೇ ತರ ಇರಬೇಕು

ತಿದ್ದೋವಾಗ ನಾವು ಮೃದುವಾಗಿ ನಡ್ಕೊಳ್ಳೋದು ಮತ್ತು ಸಲಹೆ ಕೊಡೋಕೂ ಮುಂಚೆ ಅವ್ರಲ್ಲಿರೋ ಒಳ್ಳೇ ವಿಷ್ಯನ ಹೇಳೋದು ಯಾಕೆ ಮುಖ್ಯ?

ಗಲಾ 6:1; ಕೊಲೊ 3:12

ಇದನ್ನೂ ನೋಡಿ: ಯೆಶಾ 9:6; 42:1-3; ಮತ್ತಾ 11:28, 29

  • ಬೈಬಲ್‌ ಉದಾಹರಣೆಗಳು:

    • 2ಪೂರ್ವ 19:2, 3—ಯೆಹೋವ ಒಬ್ಬ ಪ್ರವಾದಿ ಮೂಲಕ ರಾಜ ಯೆಹೋಷಾಫಾಟನನ್ನ ತಿದ್ದಿದನು ಜೊತೆಗೆ ಅವನು ಮಾಡಿದ ಒಳ್ಳೇ ವಿಷ್ಯನ ಹೊಗಳಿದನು

    • ಪ್ರಕ 2:1-4, 8, 9, 12-14, 18-20—ಯೇಸು ಕೆಲವು ಸಭೆಗಳಿಗೆ ಸಲಹೆ ಕೊಡೋಕೂ ಮುಂಚೆ ಅವ್ರನ್ನ ಹೊಗಳಿದನು

ಒಬ್ಬ ಸಹೋದರ ಇನ್ನೊಬ್ಬ ಸಹೋದರನ ಬಗ್ಗೆ ‘ಇವನು ನಂಗೆ ಮೋಸ ಮಾಡಿದ್ದಾನೆ, ನನ್ನ ಹೆಸ್ರು ಹಾಳು ಮಾಡ್ತಿದ್ದಾನೆ’ ಅಂತ ನಿಮ್ಮ ಹತ್ರ ಹೇಳ್ತಾನೆ ಅಂದ್ಕೊಳ್ಳಿ. ಆಗ ನೀವು ‘ಅವ್ರ ಹತ್ರನೇ ನೇರವಾಗಿ ಹೋಗಿ ಮಾತಾಡಿ’ ಅಂತ ಹೇಳಬೇಕು ಯಾಕೆ?

ಬೇರೆವ್ರನ್ನ ಕ್ಷಮಿಸಿ, ಕರುಣೆ ತಾಳ್ಮೆ ತೋರಿಸೋಕೆ ನಾವು ನಮ್ಮ ಸಹೋದರ ಸಹೋದರಿಯರನ್ನ ಹೇಗೆ ಪ್ರೋತ್ಸಾಹಿಸಬಹುದು?

ಮತ್ತಾ 18:21, 22; ಮಾರ್ಕ 11:25; ಲೂಕ 6:36; ಎಫೆ 4:32; ಕೊಲೊ 3:13

ಇದನ್ನೂ ನೋಡಿ: ಮತ್ತಾ 6:14; 1ಕೊರಿಂ 6:1-8; 1ಪೇತ್ರ 3:8, 9

  • ಬೈಬಲ್‌ ಉದಾಹರಣೆಗಳು:

    • ಮತ್ತಾ 18:23-35—ಯೇಸು ಒಂದು ಒಳ್ಳೇ ಉದಾಹರಣೆ ಹೇಳಿ ನಾವು ಬೇರೆಯವ್ರನ್ನ ಕ್ಷಮಿಸೋದು ತುಂಬಾ ಮುಖ್ಯ ಅಂತ ಹೇಳಿದನು

ಬೇರೆಯವ್ರಿಗೆ ಸಲಹೆ ಕೊಡೋವಾಗ ಯೆಹೋವನ ನೀತಿ ನಿಯಮಗಳನ್ನ ಬಿಟ್ಕೊಡಬಾರದು ಯಾಕೆ?

ಕೀರ್ತ 141:5; ಜ್ಞಾನೋ 17:10; 2ಕೊರಿಂ 7:8-11

  • ಬೈಬಲ್‌ ಉದಾಹರಣೆಗಳು:

    • 1ಸಮು 15:23-29—ಪ್ರವಾದಿ ಸಮುವೇಲ ರಾಜ ಸೌಲನಿಗೆ ಸಲಹೆ ಕೊಡೋವಾಗ ಭಯ ಪಡಲಿಲ್ಲ

    • 1ಅರ 22:19-28—ಅಹಾಬ ಬೆದರಿಕೆ ಹಾಕಿದ್ರೂ ಹೊಡೆದ್ರೂ ಪ್ರವಾದಿ ಮೀಕಾಯೆಹು ತನ್ನ ಸಂದೇಶನ ಬದಲಾಯಿಸಲಿಲ್ಲ

ಬೇರೆಯವ್ರಿಗೆ ಸಲಹೆ ಕೊಡೋವಾಗ ಯೆಹೋವನ ಜೊತೆ ಅವ್ರಿಗಿರೋ ಸಂಬಂಧ ಹಾಳಾಗದ ಹಾಗೆ ನಾವು ಹೇಗೆ ಸಲಹೆ ಕೊಡಬಹುದು?

ಇಬ್ರಿ 12:11-13

  • ಬೈಬಲ್‌ ಉದಾಹರಣೆಗಳು:

    • ಲೂಕ 22:31-34—ಯೇಸುಗೆ ಅಪೊಸ್ತಲ ಪೇತ್ರ ತಪ್ಪು ಮಾಡಿದ್ರೂ ತನ್ನ ತಪ್ಪನ್ನ ತಿದ್ಕೊತಾನೆ, ಯೆಹೋವನ ಸೇವೆ ಮುಂದುವರಿಸ್ತಾ ಬೇರೆವ್ರಿಗೆ ಸಹಾಯ ಮಾಡ್ತಾನೆ ಅನ್ನೋ ನಂಬಿಕೆ ಇತ್ತು

    • ಫಿಲೆ 21—ಫಿಲೆಮೋನ ದೇವರ ಸಲಹೆನಾ ಪಾಲಿಸ್ತಾನೆ ಅನ್ನೋ ನಂಬಿಕೆ ಅಪೊಸ್ತಲ ಪೌಲನಿಗಿತ್ತು

ಕುಗ್ಗಿ ಹೋದವ್ರಿಗೆ ಸಲಹೆ ಕೊಡೋವಾಗ ನಾವು ಹೇಗೆ ದಯೆ ತೋರಿಸಬಹುದು?

ತಪ್ಪು ಮಾಡಿದವ್ರಿಗೆ ಸಲಹೆ ಕೊಡೋವಾಗ ನಾವು ಅವ್ರಿಗೆ ಸಹಾಯ ಮಾಡೋದೇ ನಮ್ಮ ಉದ್ದೇಶ ಅಂತ ಅವ್ರಿಗೆ ಹೇಗೆ ತೋರಿಸಬಹುದು?

ನಾವು ಯಾರಿಗೇ ಸಲಹೆ ಕೊಡಲಿ ಅದನ್ನ ಹೇಗೆ ಗೌರವದಿಂದ ಕೊಡಬಹುದು?

ಪದೇ ಪದೇ ತಪ್ಪು ಮಾಡ್ತಿರೋ ವ್ಯಕ್ತಿಗೆ ಸಲಹೆ ಕೊಡೋವಾಗ ಹಿರಿಯರು ಕಟ್ಟುನಿಟ್ಟಾಗಿ ಇರಬೇಕು ಯಾಕೆ?