ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೇಸರ

ಬೇಸರ

ಬೇರೆಯವರು ನಮ್ಮನ್ನ ಕೀಳಾಗಿ ನೋಡಿದಾಗ, ನಮಗೆ ನೋವು ಮಾಡಿದಾಗ ಅಥವಾ ಮೋಸ ಮಾಡಿದಾಗ ನಮಗೆ ಬೇಜಾರಾಗುತ್ತೆ

ಕೀರ್ತ 55:12-14; ಲೂಕ 22:21, 48

  • ಬೈಬಲ್‌ ಉದಾಹರಣೆಗಳು:

    • 1ಸಮು 8:1-6—ಇಸ್ರಾಯೇಲ್ಯರು ಒಬ್ಬ ರಾಜ ಬೇಕು ಅಂತ ಹಟ ಹಿಡಿದಾಗ ಪ್ರವಾದಿ ಸಮುವೇಲನಿಗೆ ತುಂಬ ಬೇಜಾರಾಯ್ತು

    • 1ಸಮು 20:30-34—ಯೋನಾತಾನನಿಗೆ ತನ್ನ ಅಪ್ಪ ಸೌಲ ತನ್ನ ಮೇಲೆ ಕೊಲ್ಲೋಷ್ಟು ಕೋಪ ತೋರಿಸಿದಾಗ ತುಂಬ ನೋವಾಯ್ತು

  • ನೆಮ್ಮದಿ ಕೊಡೋ ಬೈಬಲ್‌ ವಚನಗಳು:

  • ನೆಮ್ಮದಿ ಕೊಡೋ ಬೈಬಲ್‌ ಉದಾಹರಣೆಗಳು:

    • ಕೀರ್ತ 55:12-14, 16-18, 22—ರಾಜ ದಾವೀದನಿಗೆ ಪ್ರಾಣ ಸ್ನೇಹಿತ ಅಹೀತೋಫೆಲ ಮೋಸ ಮಾಡಿದಾಗ ಆ ನೋವನ್ನೆಲ್ಲ ಯೆಹೋವನ ಹತ್ರ ಹೇಳ್ಕೊಂಡ, ಮನಸ್ಸು ಹಗುರ ಮಾಡ್ಕೊಂಡ

    • 2ತಿಮೊ 4:16-18—ಅಪೊಸ್ತಲ ಪೌಲನಿಗೆ ಕಷ್ಟ ಬಂದಾಗ ಜನ ಕೈಬಿಟ್ರೂ ಯೆಹೋವ ಕೈಬಿಡಲಿಲ್ಲ, ಅವನು ಯೆಹೋವನಿಂದ ಮತ್ತು ಆತನು ಕೊಟ್ಟ ನಿರೀಕ್ಷೆಯಿಂದ ಶಕ್ತಿ ಪಡ್ಕೊಂಡ

ನಮ್ಮ ಬಲಹೀನತೆ, ತಪ್ಪುಗಳು ನೆಮ್ಮದಿ ಹಾಳುಮಾಡುತ್ತೆ

ಯೋಬ 14:4; ರೋಮ 3:23; 5:12

  • ಬೈಬಲ್‌ ಉದಾಹರಣೆಗಳು:

    • ಕೀರ್ತ 51:1-5—ರಾಜ ದಾವೀದ ಯೆಹೋವನ ವಿರುದ್ಧ ಪಾಪ ಮಾಡಿದ್ದನ್ನ ನೆನಸ್ಕೊಂಡು ತುಂಬ ಕೊರಗಿದ

    • ರೋಮ 7:19-24—ಅಪೊಸ್ತಲ ಪೌಲ ತನ್ನೊಳಗೆ ಇರೋ ಅಪರಿಪೂರ್ಣತೆಯ ವಿರುದ್ಧ ಯಾವಾಗ್ಲೂ ಹೋರಾಟ ಮಾಡಬೇಕಾಗಿದ್ಯಲ್ಲಾ ಅಂತ ನೊಂದ್ಕೊಂಡ

  • ನೆಮ್ಮದಿ ಕೊಡೋ ಬೈಬಲ್‌ ವಚನಗಳು:

  • ನೆಮ್ಮದಿ ಕೊಡೋ ಬೈಬಲ್‌ ಉದಾಹರಣೆಗಳು:

    • 1ಅರ 9:2-5—ದಾವೀದ ತುಂಬ ದೊಡ್ಡ ತಪ್ಪುಗಳನ್ನ ಮಾಡಿದ್ರೂ ಅವನು ಪೂರ್ಣ ಹೃದಯದಿಂದ, ನೀತಿಯಿಂದ ನಡೆದ ಮನುಷ್ಯ ಅಂತ ಯೆಹೋವ ಹೇಳಿದನು

    • 1ತಿಮೊ 1:12-16—ಪೌಲ ಕ್ರೈಸ್ತನಾಗೋಕೂ ಮುಂಚೆ ದೊಡ್ಡ ದೊಡ್ಡ ತಪ್ಪುಗಳನ್ನ ಮಾಡಿದ್ದ, ಆದ್ರೂ ಯೆಹೋವ ದೇವರು ಖಂಡಿತ ಅದನ್ನೆಲ್ಲ ಕ್ಷಮಿಸ್ತಾನೆ ಅನ್ನೋ ನಂಬಿಕೆ ಅವನಿಗಿತ್ತು