ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರೋತ್ಸಾಹ

ಪ್ರೋತ್ಸಾಹ

ದೇವರ ಆರಾಧಕರು ಒಬ್ರನ್ನೊಬ್ರು ಪ್ರೋತ್ಸಾಹಿಸೋದು ಪ್ರಾಮುಖ್ಯ ಯಾಕೆ?

ಯೆಶಾ 35:3, 4; ಕೊಲೊ 3:16; 1ಥೆಸ 5:11; ಇಬ್ರಿ 3:13

  • ಬೈಬಲ್‌ ಉದಾಹರಣೆಗಳು:

    • 2ಪೂರ್ವ 32:2-8—ಅಶ್ಶೂರ್ಯದ ಸೈನ್ಯ ಆಕ್ರಮಣ ಮಾಡಿದಾಗ ರಾಜ ಹಿಜ್ಕೀಯ ತನ್ನ ಜನರಿಗೆ ಪ್ರೋತ್ಸಾಹ ಕೊಟ್ಟ

    • ದಾನಿ 10:2, 8-11, 18, 19—ತುಂಬಾ ವಯಸ್ಸಾಗಿದ್ದ ಮತ್ತು ಬಳಲಿ ಹೋಗಿದ್ದ ಪ್ರವಾದಿ ದಾನಿಯೇಲನನ್ನ ಒಬ್ಬ ದೇವದೂತ ಪ್ರೋತ್ಸಾಹಿಸಿ ಬಲಪಡಿಸಿದ

ಹಿರಿಯರು ಬೇರೆವ್ರನ್ನ ಪ್ರೋತ್ಸಾಹಿಸಬೇಕು ಅಂತ ಯೆಹೋವ ಯಾಕೆ ಇಷ್ಟಪಡ್ತಾನೆ?

ಯೆಶಾ 32:1, 2; 1ಪೇತ್ರ 5:1-3

ಇದನ್ನೂ ನೋಡಿ: ಮತ್ತಾ 11:28-30

  • ಬೈಬಲ್‌ ಉದಾಹರಣೆಗಳು:

    • ಧರ್ಮೋ 3:28; 31:7, 8—ಪ್ರವಾದಿ ಮೋಶೆ ಮುಂದೆ ನಾಯಕನಾಗೋ ಯೆಹೋಶುವನನ್ನ ಯೆಹೋವ ಹೇಳಿದ ತರ ಪ್ರೋತ್ಸಾಹಿಸಿ ಬಲಪಡಿಸಿದ

    • ಅಕಾ 11:22-26; 14:22—ಹಿಂಸೆ ಬಂದಾಗ ಅಪೊಸ್ತಲ ಪೌಲ ಮತ್ತು ಬಾರ್ನಬ ಅಂತಿಯೋಕ್ಯದ ಕ್ರೈಸ್ತರನ್ನ ಪ್ರೋತ್ಸಾಹಿಸಿದ್ರು

ಪ್ರೋತ್ಸಾಹ ಮಾಡೋವಾಗ ಹೊಗಳೋದು ಪ್ರಾಮುಖ್ಯ ಯಾಕೆ?

ಜ್ಞಾನೋ 31:28, 29; 1ಕೊರಿಂ 11:2

  • ಬೈಬಲ್‌ ಉದಾಹರಣೆಗಳು:

    • ನ್ಯಾಯ 11:37-40—ಮನೆ ಬಿಟ್ಟು ಪವಿತ್ರ ಡೇರೆಯಲ್ಲಿ ಯೆಹೋವನ ಸೇವೆ ಮಾಡ್ತಿದ್ದ ಯೆಫ್ತಾಹನ ಮಗಳನ್ನ ಹೊಗಳೋಕೆ ಇಸ್ರಾಯೇಲಿನ ಯುವತಿಯರು ಪ್ರತಿವರ್ಷ ಹೋಗ್ತಿದ್ರು

    • ಪ್ರಕ 2:1-4—ಎಫೆಸದ ಸಭೆವ್ರನ್ನ ಯೇಸು ತಿದ್ದಬೇಕಾಗಿ ಬಂದಾಗ್ಲೂ ಅವರು ಮಾಡ್ತಿದ್ದ ಒಳ್ಳೇ ವಿಷ್ಯಗಳ ಬಗ್ಗೆನೂ ಹೇಳಿದನು

ನಾವು ನಮ್ಮ ಸಹೋದರ ಸಹೋದರಿಯರನ್ನ ಯಾಕೆ ಪ್ರೋತ್ಸಾಹಿಸಬೇಕು?

ಜ್ಞಾನೋ 15:23; ಎಫೆ 4:29; ಫಿಲಿ 1:13, 14; ಕೊಲೊ 4:6; 1ಥೆಸ 5:14

ಇದನ್ನೂ ನೋಡಿ: 2ಕೊರಿಂ 7:13, 15, 16

  • ಬೈಬಲ್‌ ಉದಾಹರಣೆಗಳು:

    • 1ಸಮು 23:16-18—ದಾವೀದ ಕಷ್ಟದಲ್ಲಿದ್ದಾಗ ಯೋನಾತಾನ ಅವನನ್ನ ಭೇಟಿ ಮಾಡಿ ಪ್ರೋತ್ಸಾಹ ಕೊಟ್ಟ

    • ಯೋಹಾ 16:33—‘ನೀವೂ ನನ್ನ ತರ ಇದ್ರೆ ನಾನು ಲೋಕನ ಗೆದ್ದ ಹಾಗೆ ನೀವೂ ಗೆಲ್ಲಬಹುದು’ ಅಂತ ಹೇಳಿ ಯೇಸು ತನ್ನ ಶಿಷ್ಯರನ್ನ ಪ್ರೋತ್ಸಾಹಿಸಿದ

    • ಅಕಾ 28:14-16—ಪೌಲ ವಿಚಾರಣೆಗಾಗಿ ರೋಮಿಗೆ ಪ್ರಯಾಣ ಮಾಡ್ತಿದ್ದ ದಾರಿಯಲ್ಲಿ ಸಹೋದರರು ಅವನನ್ನ ಭೇಟಿ ಮಾಡಿದಾಗ ಅವನಿಗೆ ತುಂಬಾ ಬಲ ಸಿಕ್ತು

ಬೇರೆಯವರ ಬಗ್ಗೆ ಗೊಣಗ್ತಾ ಕೆಟ್ಟದಾಗಿ ಮಾತಾಡದೆ ಗೌರವ ಕೊಟ್ಟು ಮಾತಾಡೋದು ಯಾಕೆ ಮುಖ್ಯ?

ಫಿಲಿ 2:14-16; ಯೂದ 16-19

  • ಬೈಬಲ್‌ ಉದಾಹರಣೆಗಳು:

    • ಅರ 11:10-15 —ಇಸ್ರಾಯೇಲ್ಯರು ಗೊಣಗೋದನ್ನ ನೋಡಿದಾಗ ಮೋಶೆಗೆ ತುಂಬಾ ಬೇಜಾರಾಯ್ತು

    • ಅರ 13:31, 32; 14:2-6—ಹತ್ತು ಗೂಢಚಾರರು ಧೈರ್ಯ ಕೆಡಿಸೋ ತರ ಮಾತಾಡಿದಾಗ ಎಲ್ಲಾ ಇಸ್ರಾಯೇಲ್ಯರು ನಿರುತ್ಸಾಹ ಆದ್ರು, ಆಮೇಲೆ ದಂಗೆ ಎದ್ರು

ನಾವು ಸಹೋದರ ಸಹೋದರಿಯರ ಜೊತೆ ಸಮಯ ಕಳಿಯೋದ್ರಿಂದ ನಮ್ಗೆ ಹೇಗೆ ಪ್ರೋತ್ಸಾಹ ಸಿಗುತ್ತೆ?

ಜ್ಞಾನೋ 27:17; ರೋಮ 1:11, 12; ಇಬ್ರಿ 10:24, 25; 12:12

  • ಬೈಬಲ್‌ ಉದಾಹರಣೆಗಳು:

    • 2ಪೂರ್ವ 20:1-19—ಒಂದು ದೊಡ್ಡ ಸೈನ್ಯ ಯೆಹೂದದ ಮೇಲೆ ಆಕ್ರಮಣ ಮಾಡಿದಾಗ ರಾಜ ಯೆಹೋಷಾಫಾಟ ಮತ್ತು ಜನರು ಯೆಹೋವನಿಗೆ ಪ್ರಾರ್ಥನೆ ಮಾಡಿದ್ರು

    • ಅಕಾ 12:1-5, 12-17—ರಾಜ ಹೆರೋದ ಯಾಕೋಬನನ್ನ ಕೊಂದು ಅಪೊಸ್ತಲ ಪೇತ್ರನನ್ನ ಜೈಲಿಗೆ ಹಾಕಿದಾಗ ಯೆರೂಸಲೇಮಿನಲ್ಲಿದ್ದ ಸಭೆಯವರು ಒಟ್ಟಿಗೆ ಸೇರಿ ಪ್ರಾರ್ಥನೆ ಮಾಡಿದ್ರು

ಕಷ್ಟ ಬಂದಾಗ ಎಲ್ಲಾ ಸರಿಯಾಗುತ್ತೆ ಅನ್ನೋ ನಿರೀಕ್ಷೆ ಬಗ್ಗೆ ಯೋಚ್ನೆ ಮಾಡೋದು ನಮಗೆ ಹೇಗೆ ಸಹಾಯ ಮಾಡುತ್ತೆ?

ಅಕಾ 5:40, 41; ರೋಮ 8:35-39; 1ಕೊರಿಂ 4:11-13; 2ಕೊರಿಂ 4:16-18; 1ಪೇತ್ರ 1:6, 7

  • ಬೈಬಲ್‌ ಉದಾಹರಣೆಗಳು:

    • ಆದಿ 39:19-23; 40:1-8—ಆರೋಪ ಹಾಕಿ ಅನ್ಯಾಯವಾಗಿ ಜೈಲಿಗೆ ಹಾಕಿದಾಗ್ಲೂ ಯೋಸೇಫ ದೇವ್ರಿಗೆ ನಂಬಿಗಸ್ತನಾಗಿದ್ದ, ಬೇರೆವ್ರಿಗೆ ಸಹಾಯ ಮಾಡಿದ

    • 2ಅರ 6:15-17—ಎಲೀಷನ ವಿರುದ್ಧ ಒಂದು ದೊಡ್ಡ ಸೈನ್ಯ ಬಂದಾಗ ಅವನು ಹೆದರಲಿಲ್ಲ, ತನ್ನ ಸೇವಕನಿಗೆ ಧೈರ್ಯ ಕೊಡು ಅಂತ ಪ್ರಾರ್ಥನೆ ಮಾಡಿದ

ಬೈಬಲ್‌ ನಮ್ಮನ್ನ ಪ್ರೋತ್ಸಾಹಿಸುತ್ತೆ

ಯೆಹೋವ ದೇವರು ನಮಗೆ ಹೇಗೆ ಸಹಾಯ ಮಾಡ್ತೀನಿ ಅಂತ ಮಾತು ಕೊಟ್ಟಿದ್ದಾನೆ?

ಯೆಹೋವನ ತಾಳ್ಮೆ ಮತ್ತು ಕರುಣೆ ಬಗ್ಗೆ ಯೋಚ್ನೆ ಮಾಡೋದ್ರಿಂದ ನಮಗೆ ಹೇಗೆ ಪ್ರೋತ್ಸಾಹ ಸಿಗುತ್ತೆ?

ಯೆಹೋವ ಕುಗ್ಗಿ ಹೋದವ್ರಿಗೋಸ್ಕರ ಏನು ಮಾಡ್ತಾನೆ?

ಕೀರ್ತ 46:1; ಯೆಶಾ 12:2; 40:29-31; ಫಿಲಿ 4:13

  • ಬೈಬಲ್‌ ಉದಾಹರಣೆಗಳು:

    • 1ಸಮು 1:10, 11, 17, 18—ಹನ್ನ ದುಃಖದಿಂದ ಕುಗ್ಗಿ ಹೋದಾಗ ಪ್ರಾರ್ಥನೆ ಮಾಡಿದಳು, ಆಗ ಯೆಹೋವ ಅವಳಿಗೆ ನೆಮ್ಮದಿ ಕೊಟ್ಟನು

    • 1ಅರ 19:1-19—ಪ್ರವಾದಿ ಎಲೀಯ ಭಯದಿಂದ ಓಡಿ ಹೋಗ್ತಿದ್ದಾಗ ಯೆಹೋವ ಅವನಿಗೆ ಊಟ ನೀರು ಕೊಟ್ಟನು. ಮುಂದೆ ಒಳ್ಳೇದು ಆಗುತ್ತೆ ಅಂತ ಹೇಳಿ ಧೈರ್ಯ ತುಂಬಿದನು

ಬೈಬಲಲ್ಲಿರೋ ಮಾತುಗಳು ಹೇಗೆ ನಮಗೆ ಪ್ರೋತ್ಸಾಹ ಕೊಡುತ್ತೆ?

2ಪೂರ್ವ 15:7; ಕೀರ್ತ 27:13, 14; ಇಬ್ರಿ 6:17-19; 12:2

  • ಬೈಬಲ್‌ ಉದಾಹರಣೆಗಳು:

    • ಯೋಬ 14:1, 2, 7-9, 13-15—ಯೋಬ ಬೇಸತ್ತು ಹೋಗಿದ್ದ ಸಮಯದಲ್ಲಿ ‘ನಾನು ಸತ್ರು ಯೆಹೋವ ನನ್ನ ಜೀವಂತವಾಗಿ ಎಬ್ಬಿಸ್ತಾನೆ’ ಅಂತ ನೆನಸ್ಕೊಂಡು ಸಮಾಧಾನ ಮಾಡ್ಕೊಂಡ

    • ದಾನಿ 12:13—ಒಬ್ಬ ದೇವದೂತ ದಾನಿಯೇಲನಿಗೆ 100 ವರ್ಷ ಇದ್ದಾಗ ಮುಂದೆ ಅವನಿಗೆ ಸಿಗೋ ಪ್ರತಿಫಲದ ಬಗ್ಗೆ ಹೇಳಿ ಪ್ರೋತ್ಸಾಹಿಸಿದ

ನಾವು ಪ್ರಾರ್ಥನೆ ಮಾಡೋದ್ರಿಂದ ಮತ್ತು ಆತನ ಬಗ್ಗೆ ಯೋಚ್ನೆ ಮಾಡೋದ್ರಿಂದ ನಮಗೆ ಹೇಗೆ ಪ್ರೋತ್ಸಾಹ ಸಿಗುತ್ತೆ?

ಕೀರ್ತ 18:6; 56:4, 11; ಇಬ್ರಿ 13:6

  • ಬೈಬಲ್‌ ಉದಾಹರಣೆಗಳು:

    • 1ಸಮು 30:1-9—ದಾವೀದ ಕಷ್ಟ ಬಂದಾಗ ಯೆಹೋವನಿಗೆ ಪ್ರಾರ್ಥನೆ ಮಾಡಿ ಬಲ ಪಡ್ಕೊಂಡ

    • ಲೂಕ 22:39-43—ಯೇಸು ಯೆಹೋವನ ಹತ್ರ ಸಹಾಯಕ್ಕಾಗಿ ಅಂಗಲಾಚಿ ಬೇಡ್ಕೊಂಡ, ದೇವರು ಆಗ ಒಬ್ಬ ದೇವದೂತನನ್ನ ಕಳಿಸಿ ಪ್ರೋತ್ಸಾಹಿಸಿದನು

ಒಳ್ಳೇ ವಿಷ್ಯಗಳ ಬಗ್ಗೆ ಕೇಳಿಸ್ಕೊಳ್ಳೋದು ಮತ್ತು ಅದ್ರ ಬಗ್ಗೆ ಬೇರೆವ್ರಿಗೆ ಹೇಳೋದ್ರಿಂದ ನಮಗೆ ಹೇಗೆ ಪ್ರೋತ್ಸಾಹ ಸಿಗುತ್ತೆ?

ಜ್ಞಾನೋ 15:30; 25:25; ಯೆಶಾ 52:7

  • ಬೈಬಲ್‌ ಉದಾಹರಣೆಗಳು:

    • ಅಕಾ 15:2-4—ಅಪೊಸ್ತಲ ಪೌಲ ಮತ್ತು ಬಾರ್ನಬ ತಾವು ಭೇಟಿ ಮಾಡಿದ ಸಭೆಗಳಿಗೆ ತುಂಬಾ ಪ್ರೋತ್ಸಾಹ ಕೊಟ್ರು

    • 3ಯೋಹಾ 1-4—ವಯಸ್ಸಾದ ಯೋಹಾನನಿಗೆ ತಾನು ಸತ್ಯ ಕಲಿಸಿದವರು ಇನ್ನೂ ನಂಬಿಗಸ್ತರಾಗಿ ಇದ್ದಾರೆ ಅಂತ ಗೊತ್ತಾದಾಗ ತುಂಬಾ ಪ್ರೋತ್ಸಾಹ ಸಿಕ್ತು