ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಾಳ್ಕೊಳ್ಳೋದು

ತಾಳ್ಕೊಳ್ಳೋದು

ನಮಗೆ ತಾಳ್ಮೆ ಬೇಕಾ?

ನಾವು ಸಿಹಿಸುದ್ದಿ ಸಾರುವಾಗ ಜನ ನಮ್ಮ ಮಾತನ್ನ ಕೇಳಲ್ಲ, ಹಿಂಸೆ ಕೊಡ್ತಾರೆ ಅಂತ ನಮಗೆ ಹೇಗೆ ಗೊತ್ತು?

ಮತ್ತಾ 10:22; ಯೋಹಾ 15:18, 19; 2ಕೊರಿಂ 6:4, 5

  • ಬೈಬಲ್‌ ಉದಾಹರಣೆಗಳು:

    • 2ಪೇತ್ರ 2:5; ಆದಿ 7:23; ಮತ್ತಾ 24:37-39—ನೋಹ ನೀತಿ ಬಗ್ಗೆ ಸಾರಿದ್ರೂ ಜನ ಕೇಳಲಿಲ್ಲ, ಹಾಗಾಗಿ ಅವನು ಮತ್ತು ಅವನ ಕುಟುಂಬ ಮಾತ್ರ ಜಲಪ್ರಳಯದಿಂದ ಪಾರಾಯ್ತು

    • 2ತಿಮೊ 3:10-14—ಅಪೊಸ್ತಲ ಪೌಲ ‘ನಾನು ತೋರಿಸಿದ ಹಾಗೇ ನೀನೂ ತಾಳ್ಮೆ ತೋರಿಸು’ ಅಂತ ತಿಮೊತಿಯನ್ನ ಪ್ರೋತ್ಸಾಹಿಸಿದ

ಕುಟುಂಬದವರು ನಮಗೆ ಹಿಂಸೆ ಕೊಟ್ಟಾಗ ನಾವ್ಯಾಕೆ ಆಶ್ಚರ್ಯ ಪಡಬಾರದು?

ಮತ್ತಾ 10:22, 36-38; ಲೂಕ 21:16-19

  • ಬೈಬಲ್‌ ಉದಾಹರಣೆಗಳು:

    • ಆದಿ 4:3-11; 1ಯೋಹಾ 3:11, 12—ಕಾಯಿನ ಕೆಟ್ಟವನಾಗಿ ಇದ್ದಿದ್ರಿಂದ ನಂಬಿಗಸ್ತನಾಗಿದ್ದ ಹೇಬೆಲನನ್ನ ತಮ್ಮ ಅಂತಾನೂ ನೋಡದೆ ಸಾಯಿಸಿಬಿಟ್ಟ

    • ಆದಿ 37:5-8, 18-28—ಯೆಹೋವ ಯೋಸೇಫನಿಗೆ ಒಂದು ವಿಶೇಷ ಕನಸು ಬೀಳೋ ತರ ಮಾಡಿದನು, ಅದಕ್ಕೆ ಅವನ ಅಣ್ಣಂದಿರು ಅವನನ್ನ ಗುಂಡಿಗೆ ಹಾಕಿದ್ರು, ಆಮೇಲೆ ಮಾರಿಬಿಟ್ರು

ಹಿಂಸೆ ಬಂದಾಗ ನಾವು ಸಾವಿಗೆ ಭಯಪಡಬಾರದು ಯಾಕೆ?

ಮತ್ತಾ 10:28; 2ತಿಮೊ 4:6, 7

ಇದನ್ನೂ ನೋಡಿ: ಪ್ರಕ 2:10

  • ಬೈಬಲ್‌ ಉದಾಹರಣೆಗಳು:

    • ದಾನಿ 3:1-6, 13-18—ಶದ್ರಕ್‌, ಮೇಶಕ್‌, ಅಬೇದ್‌ನೆಗೋ ಸಾಯೋಕೆ ರೆಡಿ ಇದ್ರು, ಆದ್ರೆ ಮೂರ್ತಿಗೆ ಅಡ್ಡಬೀಳೋಕೆ ರೆಡಿ ಇರಲಿಲ್ಲ

    • ಅಕಾ 5:27-29, 33, 40-42—ಸಿಹಿಸುದ್ದಿ ಸಾರಿದ್ರೆ ತಮ್ಮನ್ನ ಸಾಯಿಸ್ತಾರೆ ಅಂತ ಗೊತ್ತಿದ್ರೂ ಅಪೊಸ್ತಲರು ಸಾರೋದನ್ನ ಬಿಡಲಿಲ್ಲ, ಕಷ್ಟಗಳನ್ನ ತಾಳ್ಕೊಂಡ್ರು

ನಮಗೆ ಶಿಸ್ತು ಸಿಕ್ಕಿದಾಗ್ಲೂ ಯೆಹೋವನಿಗೆ ನಂಬಿಗಸ್ತರಾಗಿ ಇರೋದಕ್ಕೆ ಯಾವುದು ಸಹಾಯ ಮಾಡುತ್ತೆ?

ಜ್ಞಾನೋ 3:11, 12; ಇಬ್ರಿ 12:5-7

  • ಬೈಬಲ್‌ ಉದಾಹರಣೆಗಳು:

    • ಅರ 20:9-12; ಧರ್ಮೋ 3:23-28; 31:7, 8—ಯೆಹೋವ ಶಿಸ್ತು ಕೊಟ್ಟಾಗ ಮೋಶೆಗೆ ಬೇಜಾರಾಯ್ತು, ಆದ್ರೂ ಅವನು ಸಾಯೋ ತನಕ ನಂಬಿಗಸ್ತನಾಗಿದ್ದ

    • 2ಅರ 20:12-18; 2ಪೂರ್ವ 32:24-26—ರಾಜ ಹಿಜ್ಕೀಯ ತಪ್ಪು ಮಾಡಿದಾಗ ಪ್ರವಾದಿ ಅವನನ್ನ ತಿದ್ದಿದ, ಆಗ ಅವನು ಅದನ್ನ ಒಪ್ಕೊಂಡು ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡಿದ

ಯಾರಾದ್ರೂ ಯೆಹೋವನನ್ನ ಬಿಟ್ಟುಹೋದಾಗ ಅದನ್ನ ತಾಳ್ಕೊಳ್ಳೋಕೆ ನಮಗೆ ಯಾಕೆ ಕಷ್ಟ ಆಗುತ್ತೆ?

ಯೆರೆ 1:16-19; ಹಬ 1:2-4

  • ಬೈಬಲ್‌ ಉದಾಹರಣೆಗಳು:

    • ಕೀರ್ತ 73:2-24—ಕೆಟ್ಟವರು ಚೆನ್ನಾಗಿರೋದನ್ನ ನೋಡಿದಾಗ ಯೆಹೋವನಿಗೆ ನಿಯತ್ತಾಗಿ ಇರೋದ್ರಿಂದ ಏನು ಪ್ರಯೋಜನ ಅಂತ ಒಬ್ಬ ಕೀರ್ತನೆಗಾರನಿಗೆ ಅನಿಸ್ತು

    • ಯೋಹಾ 6:60-62, 66-68—ತುಂಬ ಜನ ಯೇಸುನ ಬಿಟ್ಟುಹೋದ್ರೂ ಪೇತ್ರನಿಗೆ ಆತನ ಮೇಲೆ ನಂಬಿಕೆ ಇದ್ದಿದ್ರಿಂದ ಅವನು ಬಿಟ್ಟುಹೋಗಲಿಲ್ಲ

ತಾಳ್ಕೊಳ್ಳೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?

ಯಾವಾಗ್ಲೂ ಯೆಹೋವನಿಗೆ ಹತ್ರವಾಗೇ ಇರಬೇಕು

ಬೈಬಲ್‌ ಓದಿ ಅದ್ರ ಬಗ್ಗೆ ಯೋಚ್ನೆ ಮಾಡಬೇಕು

ಮನಸ್ಸುಬಿಚ್ಚಿ, ಯಾವಾಗ್ಲೂ ಪ್ರಾರ್ಥನೆ ಮಾಡಬೇಕು

ರೋಮ 12:12; ಕೊಲೊ 4:2; 1ಪೇತ್ರ 4:7

  • ಬೈಬಲ್‌ ಉದಾಹರಣೆಗಳು:

    • ದಾನಿ 6:4-11—ಪ್ರಾರ್ಥನೆ ಮಾಡೋದ್ರಿಂದ ತನಗೆ ತೊಂದ್ರೆ ಆಗುತ್ತೆ ಅಂತ ಗೊತ್ತಿದ್ರೂ ದಾನಿಯೇಲ ಯಾವಾಗ್ಲೂ ಮಾಡೋ ತರ ಎಲ್ರ ಮುಂದೆ ಪ್ರಾರ್ಥನೆ ಮಾಡಿದ

    • ಮತ್ತಾ 26:36-46; ಇಬ್ರಿ 5:7—ಯೇಸು ಸಾಯೋದಕ್ಕೂ ಮುಂಚಿನ ರಾತ್ರಿ ಯೆಹೋವನಿಗೆ ಮನಸ್ಸು ಬಿಚ್ಚಿ ಪ್ರಾರ್ಥನೆ ಮಾಡಿದನು, ನಮಗೂ ಅದನ್ನೇ ಮಾಡೋಕೆ ಹೇಳಿದನು

ಸಹೋದರ-ಸಹೋದರಿಯರ ಜೊತೆ ಯಾವಾಗ್ಲೂ ಸಹವಾಸ ಮಾಡಬೇಕು

ಯೆಹೋವ ದೇವರು ಕೊಡೋ ಆಶೀರ್ವಾದಗಳ ಮೇಲೆ ಯಾವಾಗ್ಲೂ ಮನಸ್ಸು ಇಡಬೇಕು

ಯೆಹೋವ ದೇವರನ್ನ, ಸಹೋದರ ಸಹೋದರಿಯರನ್ನ ಜಾಸ್ತಿ ಪ್ರೀತಿಸಬೇಕು

ನಂಬಿಕೆಯನ್ನ ಜಾಸ್ತಿ ಮಾಡ್ಕೊಬೇಕು

ಕಷ್ಟಗಳನ್ನ ತಾಳ್ಕೊಂಡ್ರೆ ಯೆಹೋವನಿಗೆ ಸಂತೋಷ ಆಗುತ್ತೆ ಅನ್ನೋದನ್ನ ಮನಸ್ಸಲ್ಲಿ ಇಡಬೇಕು

ತಾಳ್ಕೊಳ್ಳೋದ್ರಿಂದ ಏನೆಲ್ಲ ಪ್ರಯೋಜನ ಆಗುತ್ತೆ?

ಯೆಹೋವನ ಮನಸ್ಸನ್ನ ಖುಷಿಪಡಿಸ್ತೀವಿ

ಜ್ಞಾನೋ 27:11; ಯೋಹಾ 15:7, 8; 1ಪೇತ್ರ 1:6, 7

  • ಬೈಬಲ್‌ ಉದಾಹರಣೆಗಳು:

    • ಯೋಬ 1:6-12; 2:3-5—ಯೆಹೋವ ಆಶೀರ್ವಾದ ಮಾಡೋದ್ರಿಂದ ಜನ ಆತನನ್ನ ಆರಾಧಿಸ್ತಾರೆ ಅಂತ ಸೈತಾನ ದೇವರ ಮೇಲೆ ಆರೋಪ ಹಾಕಿದ. ಯೋಬ ಕಷ್ಟಗಳನ್ನ ತಾಳ್ಕೊಂಡು ಅದನ್ನ ಸುಳ್ಳು ಅಂತ ಸಾಬೀತು ಮಾಡಿದ

    • ರೋಮ 5:19; 1ಪೇತ್ರ 1:20, 21—ಆದಾಮ ಯೆಹೋವನಿಗೆ ನಿಯತ್ತಿಂದ ಇರಲಿಲ್ಲ, ಆದ್ರೆ ಯೇಸು ಕೊನೇ ಉಸಿರಿರೋ ತನಕ ನಂಬಿಗಸ್ತನಾಗಿದ್ದ. ಹೀಗೆ, ಒಬ್ಬ ಪರಿಪೂರ್ಣ ಮನುಷ್ಯ ಎಷ್ಟೇ ಕಷ್ಟ ಬಂದ್ರೂ ಯೆಹೋವನಿಗೆ ನಿಯತ್ತಿಂದ ಇರಕ್ಕಾಗುತ್ತೆ ಅಂತ ಯೇಸು ತೋರಿಸ್ಕೊಟ್ಟ

ತಾಳ್ಕೊಳ್ಳೋಕೆ ಬೇರೆವ್ರಿಗೂ ಪ್ರೋತ್ಸಾಹ ಸಿಗುತ್ತೆ

ಚೆನ್ನಾಗಿ ಸೇವೆ ಮಾಡಕ್ಕಾಗುತ್ತೆ

ಯೆಹೋವ ಖುಷಿಪಡ್ತಾನೆ, ಆಶೀರ್ವಾದ ಮಾಡ್ತಾನೆ