ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕುಟುಂಬ

ಕುಟುಂಬ

ಕುಟುಂಬ ಅನ್ನೋ ಏರ್ಪಾಡನ್ನ ಮಾಡಿದ್ದು ಯೆಹೋವ ದೇವರು

ಅಪ್ಪಅಮ್ಮ

ಅಪ್ಪಅಮ್ಮ” ನೋಡಿ

ಅಪ್ಪಂದಿರು

ಅಪ್ಪಂದಿರು” ನೋಡಿ

ಅಮ್ಮಂದಿರು

ಅಮ್ಮಂದಿರು” ನೋಡಿ

ಗಂಡ-ಹೆಂಡತಿ

ಮದುವೆ” ನೋಡಿ

ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು

ಮಕ್ಕಳ ಜವಾಬ್ದಾರಿ ಏನು?

ಮಕ್ಕಳು ಯಾಕೆ ಅಪ್ಪಅಮ್ಮನ ಮಾತು ಕೇಳಬೇಕು?

ಎಫೆ 6:1-3; ಕೊಲೊ 3:20

  • ಬೈಬಲ್‌ ಉದಾಹರಣೆಗಳು:

    • ಕೀರ್ತ 78:1-8—ತಮ್ಮ ಪೂರ್ವಜರಿಗೆ ಯೆಹೋವ ಹೇಗೆಲ್ಲ ಸಹಾಯ ಮಾಡಿದ್ದಾನೆ ಅಂತ ಇಸ್ರಾಯೇಲಿನ ಅಪ್ಪ-ಅಮ್ಮಂದಿರು ತಮ್ಮ ಮಕ್ಕಳಿಗೆ ಹೇಳಿ ಯೆಹೋವನ ಮೇಲೆ ನಂಬಿಕೆ ಬೆಳೆಸ್ಕೊಳ್ಳೋಕೆ ಸಹಾಯ ಮಾಡ್ತಿದ್ರು, ನಂಬಿಕೆ ದ್ರೋಹ ಮಾಡಬಾರದು ಅಂತ ಎಚ್ಚರಿಸ್ತಿದ್ರು

    • ಲೂಕ 2:51, 52—ಪರಿಪೂರ್ಣನಾಗಿದ್ದ ಯೇಸು ಅಪರಿಪೂರ್ಣರಾಗಿದ್ದ ತನ್ನ ಅಪ್ಪಅಮ್ಮನ ಮಾತನ್ನ ಯಾವಾಗ್ಲೂ ಕೇಳ್ತಿದ್ದ

ಅಪ್ಪ-ಅಮ್ಮಗೆ ಗೌರವ ಕೊಡೋಕೆ ಕೆಲವೊಮ್ಮೆ ಮಕ್ಕಳಿಗೆ ಯಾಕೆ ಕಷ್ಟ ಆಗುತ್ತೆ?

ಮಕ್ಕಳು ಅಪ್ಪಅಮ್ಮನ ಮಾತು ಕೇಳದಿದ್ರೆ ದೇವರಿಗೆ ಇಷ್ಟ ಆಗುತ್ತಾ?

  • ಬೈಬಲ್‌ ಉದಾಹರಣೆಗಳು:

    • ಧರ್ಮೋ 21:18-21—ಒಬ್ಬ ವ್ಯಕ್ತಿ ಅಪ್ಪಅಮ್ಮನಿಗೆ ಗೌರವ ಕೊಡದಿದ್ರೆ, ಎಷ್ಟೇ ತಿದ್ದಿದ್ರೂ ಹಠಮಾರಿ ಆಗಿದ್ರೆ ಅವನಿಗೆ ಮೋಶೆಯ ನಿಯಮ ಪುಸ್ತಕ ಪ್ರಕಾರ ಮರಣದಂಡನೆ ಸಿಕ್ತಿತ್ತು

    • 2ಅರ 2:23, 24—ದೇವರ ಪ್ರತಿನಿಧಿ ಆಗಿದ್ದ ಪ್ರವಾದಿ ಎಲೀಯನನ್ನ ಗೇಲಿ ಮಾಡಿದ ಮಕ್ಕಳನ್ನ ಎರಡು ಕರಡಿಗಳು ಕೊಂದುಬಿಟ್ವು

ಹೆತ್ತವರು ಮಕ್ಕಳನ್ನ ಬೆಳೆಸೋ ಜವಾಬ್ದಾರಿಯನ್ನ ಹೇಗೆ ನೋಡಬೇಕು?

ಕೀರ್ತ 127:3; 128:3

  • ಬೈಬಲ್‌ ಉದಾಹರಣೆಗಳು:

    • ಯಾಜ 26:9—ಮಕ್ಕಳು ದೇವರು ಕೊಟ್ಟ ಆಶೀರ್ವಾದ ಅಂತ ಇಸ್ರಾಯೇಲ್‌ ಜನರು ನೆನಸ್ತಿದ್ರು

    • ಯೋಬ 42:12, 13—ಯೋಬ ಯೆಹೋವನಿಗೆ ನಿಯತ್ತಾಗಿ ಇದ್ದಿದ್ದಕ್ಕೆ ಅವನಿಗೆ ಇನ್ನೂ 10 ಮಕ್ಕಳನ್ನ ಕೊಟ್ಟನು

ಒಡಹುಟ್ಟಿದವರು ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಳ್ಳೋದು ಹೇಗೆ?

ಕೀರ್ತ 34:14; ಜ್ಞಾನೋ 15:23; 19:11

  • ಬೈಬಲ್‌ ಉದಾಹರಣೆಗಳು:

    • ಆದಿ 27:41; 33:1-11—ಯಾಕೋಬ ತನ್ನ ಅಣ್ಣ ಏಸಾವನಿಗೆ ತುಂಬ ಗೌರವ ಕೊಟ್ಟ, ಸಂಬಂಧ ಕಾಪಾಡ್ಕೊಂಡ. ಆಗ ಏಸಾವನಿಗೆ ತಮ್ಮನ ಮೇಲೆ ಪ್ರೀತಿ ಉಕ್ಕಿ ಹರೀತು

ಬೆಳೆದು ನಿಂತಿರೋ ಮಕ್ಕಳು ತಮ್ಮ ಅಪ್ಪ-ಅಮ್ಮ, ಅಜ್ಜಿ-ತಾತಗೋಸ್ಕರ ಏನು ಮಾಡಬೇಕು?

ಜ್ಞಾನೋ 23:22; 1ತಿಮೊ 5:4

  • ಬೈಬಲ್‌ ಉದಾಹರಣೆಗಳು:

    • ಆದಿ 11:31, 32—ಅಬ್ರಹಾಮ ಊರ್‌ ಪಟ್ಟಣ ಬಿಟ್ಟು ಹೋಗುವಾಗ ತನ್ನ ಅಪ್ಪ ತೆರಹನನ್ನ ಜೊತೆಗೆ ಕರ್ಕೊಂಡು ಹೋಗಿ ಕೊನೇ ತನಕ ಚೆನ್ನಾಗಿ ನೋಡ್ಕೊಂಡ

    • ಮತ್ತಾ 15:3-6—ಯೇಸು ನಿಯಮ ಪುಸ್ತಕದಲ್ಲಿ ಇರೋದನ್ನ ಹೇಳ್ತಾ ಮಕ್ಕಳು ಹೆತ್ತವರನ್ನ ಚೆನ್ನಾಗಿ ನೋಡ್ಕೊಬೇಕು ಅಂತ ಕಲಿಸಿದ್ದಾನೆ

ಅತ್ತೆ-ಮಾವ

ಅತ್ತೆ-ಮಾವ” ನೋಡಿ

ಅಜ್ಜಿ-ತಾತ

ಅಜ್ಜಿ-ತಾತ” ನೋಡಿ