ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ಷಮಿಸೋದು

ಕ್ಷಮಿಸೋದು

ಕ್ಷಮಿಸೋದ್ರ ಬಗ್ಗೆ ಯೆಹೋವ ದೇವರಿಗೆ ಹೇಗನಿಸುತ್ತೆ?

ಕೀರ್ತ 86:5; ದಾನಿ 9:9; ಮೀಕ 7:18

ಇದನ್ನೂ ನೋಡಿ: 2ಪೇತ್ರ 3:9

  • ಬೈಬಲ್‌ ಉದಾಹರಣೆಗಳು:

    • ಕೀರ್ತ 78:40, 41; 106:36-46—ಇಸ್ರಾಯೇಲ್ಯರು ಯೆಹೋವನನ್ನ ಪದೇ ಪದೇ ನೋಯಿಸಿದ್ರೂ ಆತನು ಅವ್ರನ್ನ ಪದೇ ಪದೇ ಕ್ಷಮಿಸಿದನು

    • ಲೂಕ 15:11-32—ತಪ್ಪು ಮಾಡಿ ಪಶ್ಚಾತ್ತಾಪ ಪಟ್ಟ ಮಗನನ್ನ ಒಬ್ಬ ತಂದೆ ಹೇಗೆ ಕ್ಷಮಿಸಿದ್ನೋ ಅದೇ ತರ ಯೆಹೋವ ಕ್ಷಮಿಸ್ತಾರೆ ಅಂತ ಯೇಸು ಹೇಳಿದನು

ನಮ್ಮನ್ನ ಕ್ಷಮಿಸೋಕೆ ಯೆಹೋವ ದೇವರು ಏನು ಮಾಡಿದ್ದಾರೆ?

ಯೋಹಾ 1:29; ಎಫೆ 1:7; 1ಯೋಹಾ 2:1, 2

  • ಬೈಬಲ್‌ ಉದಾಹರಣೆಗಳು:

    • ಇಬ್ರಿ 9:22-28—ಯೇಸು ನಮಗೋಸ್ಕರ ತನ್ನ ಪ್ರಾಣ ಕೊಟ್ಟಿರೋದ್ರಿಂದ ಯೆಹೋವ ನಮ್ಮ ತಪ್ಪುಗಳನ್ನ ಕ್ಷಮಿಸ್ತಾನೆ ಅಂತ ಪೌಲ ಹೇಳಿದ್ದಾನೆ

    • ಪ್ರಕ 7:9, 10, 14, 15—ದೊಡ್ಡ ಗುಂಪಿನ ಜನ್ರಿಗೆ ಯೇಸುವಿನ ಬಿಡುಗಡೆ ಬೆಲೆ ಮೇಲೆ ನಂಬಿಕೆ ಇರೋದ್ರಿಂದ ಅವ್ರ ತಪ್ಪುಗಳನ್ನ ದೇವರು ಕ್ಷಮಿಸ್ತಾರೆ ಅಂತ ಯೋಹಾನ ಬರೆದಿದ್ದಾನೆ

ಯೆಹೋವ ನಮ್ಮ ತಪ್ಪುಗಳನ್ನ ಕ್ಷಮಿಸಬೇಕಾದ್ರೆ ಬೇರೆಯವರು ತಪ್ಪು ಮಾಡಿದಾಗ ನಾವು ಏನು ಮಾಡಬೇಕು?

ಮತ್ತಾ 6:14, 15; ಮಾರ್ಕ 11:25; ಲೂಕ 17:3, 4; ಯಾಕೋ 2:13

  • ಬೈಬಲ್‌ ಉದಾಹರಣೆಗಳು:

    • ಯೋಬ 42:7-10—ಯೆಹೋವ ಯೋಬನ ಕಾಯಿಲೆ ವಾಸಿ ಮಾಡಿ ಆಶೀರ್ವಾದ ಮಾಡೋಕೂ ಮುಂಚೆ ಅವನ ಮನಸ್ಸು ನೋಯಿಸಿದ ಮೂವರು ಸ್ನೇಹಿತರ ಪರವಾಗಿ ಪ್ರಾರ್ಥನೆ ಮಾಡೋದಕ್ಕೆ ಹೇಳಿದನು

    • ಮತ್ತಾ 18:21-35—ಯೆಹೋವ ನಮ್ಮ ತಪ್ಪುಗಳನ್ನ ಕ್ಷಮಿಸಬೇಕಾದ್ರೆ ನಾವು ಬೇರೆವ್ರನ್ನ ಕ್ಷಮಿಸೋದು ಎಷ್ಟು ಮುಖ್ಯ ಅಂತ ಯೇಸು ಒಂದು ಕಥೆ ಮೂಲಕ ಹೇಳಿದನು

ನಮ್ಮ ತಪ್ಪುಗಳನ್ನ ಒಪ್ಕೊಂಡು ಪಶ್ಚಾತ್ತಾಪ ಪಡೋದು ಎಷ್ಟು ಮುಖ್ಯ?

ಅಕಾ 3:19; 26:20; 1ಯೋಹಾ 1:8-10

  • ಬೈಬಲ್‌ ಉದಾಹರಣೆಗಳು:

    • ಕೀರ್ತ 32:1-5; 51:1, 2, 16, 17—ದಾವೀದ ದೊಡ್ಡ ತಪ್ಪು ಮಾಡಿದಾಗ ಅದ್ರ ಬಗ್ಗೆ ಕೊರಗ್ತಿದ್ದ, ಆಮೇಲೆ ಅವನು ಮನಸಾರೆ ಪಶ್ಚಾತ್ತಾಪ ಪಟ್ಟ

    • ಯಾಕೋ 5:14-16—ನಾವೇನಾದ್ರೂ ದೊಡ್ಡ ತಪ್ಪು ಮಾಡಿದ್ರೆ ಹಿರಿಯರ ಸಹಾಯ ಪಡ್ಕೊಬೇಕು ಅಂತ ಯಾಕೋಬ ಹೇಳಿದ್ದಾನೆ

ಯೆಹೋವ ನಮ್ಮ ತಪ್ಪುಗಳನ್ನ ಕ್ಷಮಿಸಬೇಕಾದ್ರೆ ನಾವು ಯಾವ ಬದಲಾವಣೆ ಮಾಡ್ಕೊಬೇಕು?

ಜ್ಞಾನೋ 28:13; ಯೆಶಾ 55:7; ಎಫೆ 4:28

  • ಬೈಬಲ್‌ ಉದಾಹರಣೆಗಳು:

    • 1ಅರ 21:27-29; 2ಪೂರ್ವ 18:18-22, 33, 34; 19:1, 2—ಯೆಹೋವ ತನಗೆ ಶಿಕ್ಷೆ ಕೊಡ್ತಾರೆ ಅಂದಾಗ ರಾಜ ಅಹಾಬ ದುಃಖಪಟ್ಟ. ಆದ್ರೆ ಅವನು ಮಾಡಿದ ತಪ್ಪಿಗೆ ಮನಸಾರೆ ಪಶ್ಚಾತ್ತಾಪ ಪಡಲಿಲ್ಲ, ಅದಕ್ಕೆ ಯೆಹೋವ ಅವನನ್ನ ಕ್ಷಮಿಸಲಿಲ್ಲ, ಸಾಯಿಸಿದನು

    • 2ಪೂರ್ವ 33:1-16—ರಾಜ ಮನಸ್ಸೆ ತುಂಬಾ ಕೆಟ್ಟವನಾಗಿದ್ದ. ಆದ್ರೆ ಅವನು ಮನಸಾರೆ ಪಶ್ಚಾತ್ತಾಪ ಪಟ್ಟ, ಇಸ್ರಾಯೇಲ್‌ ಜನರು ಮೂರ್ತಿ ಪೂಜೆ ಬಿಟ್ಟು ಯೆಹೋವನನ್ನ ಆರಾಧಿಸೋಕೆ ಸಹಾಯ ಮಾಡಿದ, ಆಗ ಯೆಹೋವ ಅವನನ್ನ ಕ್ಷಮಿಸಿದನು

ನಾವು ನಿಜವಾಗ್ಲೂ ಪಶ್ಚಾತ್ತಾಪ ಪಟ್ರೆ ಯೆಹೋವ ನಮ್ಮನ್ನ ಎಷ್ಟರ ಮಟ್ಟಿಗೆ ಕ್ಷಮಿಸ್ತಾನೆ?

ಕೀರ್ತ 103:10-14; ಯೆಶಾ 1:18; 38:17; ಯೆರೆ 31:34; ಮೀಕ 7:19

  • ಬೈಬಲ್‌ ಉದಾಹರಣೆಗಳು:

    • 2ಸಮು 12:13; 24:1; 1ಅರ 9:4, 5—ದಾವೀದ ತುಂಬಾ ದೊಡ್ಡ ತಪ್ಪುಗಳನ್ನ ಮಾಡಿದ್ರೂ ಅವನು ತಪ್ಪನ್ನ ಒಪ್ಕೊಂಡು ಪಶ್ಚಾತ್ತಾಪ ಪಟ್ಟಿದ್ರಿಂದ ಯೆಹೋವ ಅವನನ್ನ ಕ್ಷಮಿಸಿದನು, ಅವನನ್ನ ‘ನೀತಿಯಿಂದ ನಡೆದ ಮನುಷ್ಯ’ ಅಂತ ಹೇಳಿದನು

ಯೆಹೋವನ ತರ ಯೇಸುನೂ ಕ್ಷಮಿಸೋಕೆ ಸಿದ್ಧ ಅಂತ ಹೇಗೆ ತೋರಿಸ್ಕೊಟ್ಟನು?

ಕೀರ್ತ 86:5; ಲೂಕ 23:33, 34

  • ಬೈಬಲ್‌ ಉದಾಹರಣೆಗಳು:

    • ಮತ್ತಾ 26:36, 40, 41—ಶಿಷ್ಯರು ಯೇಸುಗೆ ಪ್ರೋತ್ಸಾಹ ಕೊಡೋ ಬದ್ಲು ನಿದ್ದೆ ಮಾಡ್ತಿದ್ದನ್ನ ನೋಡಿದಾಗ ಯೇಸು ಅವ್ರ ಪರಿಸ್ಥಿತಿನ ಅರ್ಥ ಮಾಡ್ಕೊಂಡನು

    • ಮತ್ತಾ 26:69-75; ಲೂಕ 24:33, 34; ಅಕಾ 2:37-41—ಪೇತ್ರ ಯೇಸುವನ್ನ ಮೂರು ಸಲ ಯಾರು ಅಂತ ಗೊತ್ತಿಲ್ಲ ಅಂದ, ಆದ್ರೆ ಅವನು ಪಶ್ಚಾತ್ತಾಪ ಪಟ್ಟಾಗ ಯೇಸು ಅವನನ್ನ ಕ್ಷಮಿಸಿದನು; ಯೇಸು ಜೀವಂತವಾಗಿ ಎದ್ದು ಬಂದಾಗ ನೇರವಾಗಿ ಅವನನ್ನ ಭೇಟಿ ಮಾಡಿ ಸಭೆಯಲ್ಲಿ ಅವನಿಗೆ ವಿಶೇಷ ಸುಯೋಗಗಳನ್ನ ಕೊಟ್ಟನು

ಯೆಹೋವ ದೇವರು ಎಲ್ರನ್ನೂ ಕ್ಷಮಿಸೋದಿಲ್ಲ ಅಂತ ನಾವು ಹೇಗೆ ಹೇಳಬಹುದು?

ಮತ್ತಾ 12:31; ಇಬ್ರಿ 10:26, 27; 1ಯೋಹಾ 5:16, 17

  • ಬೈಬಲ್‌ ಉದಾಹರಣೆಗಳು:

    • ಮತ್ತಾ 23:29-33—ಪಂಡಿತರು ಮತ್ತು ಫರಿಸಾಯರಿಗೆ ಯೇಸು ‘ಗೆಹೆನ್ನದಲ್ಲಿ ನಾಶ ಆಗ್ತೀರ ಅಥವಾ ಶಾಶ್ವತ ನಾಶ ಆಗ್ತೀರ’ ಅಂತ ಎಚ್ಚರಿಕೆ ಕೊಟ್ಟನು

    • ಯೋಹಾ 17:12; ಮಾರ್ಕ 14:21—ಯೇಸು ಇಸ್ಕರಿಯೂತ ಯೂದನನ್ನ ‘ನಾಶ ಆಗಬೇಕಾದವನು’ ಅಂತ ಕರೆದು ಅವನು ಹುಟ್ಟದೇ ಇದ್ದಿದ್ರೆ ಚೆನ್ನಾಗಿರ್ತಿತ್ತು ಅಂತ ಹೇಳಿದನು

ನಾವು ಬೇರೆವ್ರನ್ನ ಕ್ಷಮಿಸೋದಕ್ಕೆ ಯಾವುದು ನಮ್ಗೆ ಸಹಾಯ ಮಾಡುತ್ತೆ?