ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೋಕದ ಜೊತೆ ಸ್ನೇಹ

ಲೋಕದ ಜೊತೆ ಸ್ನೇಹ

ಇವತ್ತು ಲೋಕನಾ ಯಾರು ಆಳ್ತಿದ್ದಾರೆ?

ಎಫೆ 2:2; 1ಯೋಹಾ 5:19

  • ಬೈಬಲ್‌ ಉದಾಹರಣೆಗಳು:

    • ಲೂಕ 4:5-8—ಸೈತಾನ ಯೇಸುಗೆ ‘ಈ ಲೋಕನ ಆಳೋ ಅಧಿಕಾರ ಕೊಡ್ತೀನಿ’ ಅಂತ ಹೇಳಿದಾಗ ‘ನಿಂಗೆ ಆ ಅಧಿಕಾರ ಇಲ್ಲ’ ಅಂತ ಯೇಸು ಹೇಳ್ಲಿಲ್ಲ

ನಾವು ಲೋಕದ ಜೊತೆ ಸ್ನೇಹ ಮಾಡಿದ್ರೆ ಯೆಹೋವ ಜೊತೆ ಇರೋ ಸ್ನೇಹ ಏನಾಗುತ್ತೆ?

ಯಾಕೋ 4:4; 1ಯೋಹಾ 2:15, 16

ಇದನ್ನೂ ನೋಡಿ: ಯಾಕೋ 1:27

  • ಬೈಬಲ್‌ ಉದಾಹರಣೆಗಳು:

    • 2ಪೂರ್ವ 18:1-3; 19:1, 2—ಒಳ್ಳೇ ರಾಜ ಯೆಹೋಷಾಫಾಟ ಕೆಟ್ಟ ರಾಜ ಅಹಾಬನ ಜೊತೆ ಸ್ನೇಹ ಮಾಡಿದಾಗ ಯೆಹೋವ ಅವನನ್ನ ಖಂಡಿಸಿದನು

ಯೆಹೋವ ಈ ಲೋಕನ ಹೇಗೆ ನೋಡ್ತಾನೆ ಅಂತ ತಿಳ್ಕೊಂಡ್ರೆ ನಾವು ಹೇಗೆ ಸರಿಯಾದ ಸ್ನೇಹಿತರನ್ನ ಆರಿಸ್ಕೊತೀವಿ?

ಲೋಕದವ್ರ ತರ ನಾವು ಹಣ ಆಸ್ತಿ ಹಿಂದೆ ಯಾಕೆ ಹೋಗಬಾರದು?

ಲೈಂಗಿಕತೆ ಬಗ್ಗೆ ನಾವು ಲೋಕದವ್ರ ತರ ಯಾಕೆ ಯೋಚ್ನೆ ಮಾಡಬಾರದು, ನಡ್ಕೊಬಾರದು?

ನಾವು ಮನುಷ್ಯರಿಗೆ, ಸಂಘಟನೆಗಳಿಗೆ ಯಾಕೆ ಅತಿಯಾದ ಗೌರವ ಕೊಡಬಾರದು?

ಮತ್ತಾ 4:10; ರೋಮ 1:25; 1ಕೊರಿಂ 10:14

  • ಬೈಬಲ್‌ ಉದಾಹರಣೆಗಳು:

    • ಅಕಾ 12:21-23—ರಾಜ ಹೆರೋದ ಅಗ್ರಿಪ್ಪ I ಜನರ ಆರಾಧನೆನಾ ಸ್ವೀಕರಿಸಿದ್ದಕ್ಕೆ ಯೆಹೋವ ಅವನನ್ನ ಸಾಯಿಸಿದನು

    • ಪ್ರಕ 22:8, 9—ಅಪೊಸ್ತಲ ಯೋಹಾನ ದೇವದೂತನನ್ನ ಆರಾಧಿಸೋಕೆ ಕಾಲಿಗೆ ಬಿದ್ದಾಗ ಯೆಹೋವ ದೇವರಿಗೆ ಮಾತ್ರ ಆರಾಧನೆ ಮಾಡಬೇಕು ಅಂತ ಹೇಳಿದ

ಕ್ರೈಸ್ತರು ಯಾಕೆ ರಾಜಕೀಯ ಮತ್ತು ರಾಷ್ಟ್ರೀಯ ವಿಚಾರಗಳಲ್ಲಿ ತಟಸ್ಥರಾಗಿರ್ತಾರೆ?

ಕ್ರೈಸ್ತರು ಬೇರೆ ಧರ್ಮದ ಹಬ್ಬ ಮತ್ತು ಆಚಾರ-ವಿಚಾರಗಳಲ್ಲಿ ಯಾಕೆ ಭಾಗವಹಿಸಲ್ಲ?

ಲೋಕದ ಸ್ನೇಹಕ್ಕೋಸ್ಕರ ಯೆಹೋವನ ನೀತಿ ನಿಯಮಗಳನ್ನ ನಾವು ಬಿಟ್ಕೊಡಲ್ಲ ಯಾಕೆ?

ಕ್ರಿಸ್ತನ ಹಿಂಬಾಲಕರನ್ನ ಈ ಲೋಕ ಯಾಕೆ ದ್ವೇಷಿಸಿ ಹಿಂಸೆ ಮಾಡುತ್ತೆ?

ಈ ಲೋಕದಲ್ಲಿರೋ ವಿಷ್ಯಗಳನ್ನ ಪ್ರೀತಿ ಮಾಡೋದು ಮೂರ್ಖತನ ಆಗಿದೆ ಯಾಕೆ?

ಯೆಹೋವನ ಆರಾಧಕರಲ್ಲದವರಿಗೆ ಕ್ರೈಸ್ತರು ಹೇಗೆ ಪ್ರೀತಿ ಮತ್ತು ದಯೆ ತೋರಿಸ್ತಾರೆ?

ಕ್ರೈಸ್ತರು ಸರ್ಕಾರಿ ಅಧಿಕಾರಿಗಳಿಗೆ, ನಿಯಮಗಳಿಗೆ ಯಾಕೆ ವಿಧೇಯತೆ ತೋರಿಸ್ತಾರೆ?

ಮತ್ತಾ 22:21; ರೋಮ 13:1-7

  • ಬೈಬಲ್‌ ಉದಾಹರಣೆಗಳು:

    • ಅಕಾ 25:8; 26:2, 25—ಅಪೊಸ್ತಲ ಪೌಲ ಸರ್ಕಾರದ ನಿಯಮಗಳನ್ನ ಪಾಲಿಸಿದ, ಅಧಿಕಾರಿಗಳಿಗೂ ಗೌರವ ಕೊಟ್ಟ