ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದುಃಖ

ದುಃಖ

ನಮ್ಮವರು ಯಾರಾದ್ರೂ ತೀರಿಕೊಂಡಾಗ ದುಃಖ ಪಡೋದು ಸಹಜ ಅಂತ ಬೈಬಲಿನ ಯಾವ ಉದಾಹರಣೆಗಳಿಂದ ಗೊತ್ತಾಗುತ್ತೆ?

ದುಃಖದಲ್ಲಿ ಇರೋರನ್ನ ಸಮಾಧಾನ ಮಾಡೋಕೆ ಯೆಹೋವ ಕಾಯ್ತಿರ್ತಾನೆ ಅಂತ ನಮಗೆ ಹೇಗೆ ಗೊತ್ತು?

ಒಬ್ಬ ವ್ಯಕ್ತಿ ಸತ್ತಾಗ ಏನಾಗುತ್ತೆ ಅಂತ ತಿಳ್ಕೊಳ್ಳೋದ್ರಿಂದ ನಮಗೆ ಹೇಗೆ ನೆಮ್ಮದಿ ಸಿಗುತ್ತೆ?

ಪ್ರಸಂ 9:5, 10; 1ಥೆಸ 4:13

  • ಬೈಬಲ್‌ ಉದಾಹರಣೆಗಳು:

    • ಲೂಕ 20:37, 38—ಸತ್ತವರು ಖಂಡಿತ ಜೀವಂತವಾಗಿ ಎದ್ದು ಬರ್ತಾರೆ ಅಂತ ಯೇಸು ಹೇಳಿದನು, ಯಾಕಂದ್ರೆ ಯೆಹೋವ ಅವ್ರನ್ನೆಲ್ಲಾ ಬದುಕಿರೋರ ತರ ನೋಡ್ತಾನೆ

    • ಯೋಹಾ 11:5, 6, 11-14—ತನ್ನ ಸ್ನೇಹಿತ ಲಾಜರ ತೀರಿಕೊಂಡಾಗ ಯೇಸು ಸಾವನ್ನ ನಿದ್ದೆಗೆ ಹೋಲಿಸಿದನು

    • ಇಬ್ರಿ 2:14, 15—ಸಾವಿಗೆ ಭಯಪಡಬಾರದು ಅಂತ ಪೌಲ ಹೇಳಿದ್ದಾನೆ

ಹುಟ್ಟಿದ ದಿನಕ್ಕಿಂತ ಮರಣದ ದಿನನೇ ಮೇಲು ಅಂತ ಯೆಹೋವ ಯಾಕೆ ಹೇಳಿದ್ದಾನೆ?

ಸಾವಿನ ಬಗ್ಗೆ ಬೈಬಲ್‌ ಏನು ಹೇಳುತ್ತೆ? ಸಾವನ್ನ ದೇವರು ಏನು ಮಾಡ್ತಾನೆ?

ಸತ್ತವರನ್ನ ದೇವರು ಮುಂದೆ ಜೀವಂತವಾಗಿ ಎಬ್ಬಿಸ್ತಾನೆ ಅಂತ ನಾವು ಹೇಗೆ ಗ್ಯಾರೆಂಟಿಯಾಗಿ ಹೇಳಬಹುದು?

ಯೆಶಾ 26:19; ಯೋಹಾ 5:28, 29; ಅಕಾ 24:15

  • ಬೈಬಲ್‌ ಉದಾಹರಣೆಗಳು:

    • ಬೈಬಲಿನಲ್ಲಿ ಒಂಭತ್ತು ಜನರು ಮತ್ತೆ ಜೀವ ಪಡ್ಕೊಂಡಿದ್ದರ ಬಗ್ಗೆ ಇದೆ. ಅದ್ರಲ್ಲಿ ಎಂಟು ಜನ ಇದೇ ಭೂಮಿಯಲ್ಲಿ ಮತ್ತೆ ಬದುಕಿದ್ರು. ನಿಮ್ಮವರು ಯಾರಾದ್ರೂ ತೀರಿಕೊಂಡಿದ್ರೆ ಈ ಘಟನೆಗಳು ನಿಮಗೆ ಸಾಂತ್ವನ ಕೊಡುತ್ತೆ

      • 1ಅರ 17:17-24—ಪ್ರವಾದಿ ಎಲೀಯ ಸೀದೋನಿನ ಚಾರೆಪ್ತ ಪಟ್ಟಣದ ವಿಧವೆಯ ಮಗನನ್ನ ಜೀವಂತವಾಗಿ ಎಬ್ಬಿಸಿದನು

      • 2ಅರ 4:32-37—ಪ್ರವಾದಿ ಎಲೀಷ ಶೂನೇಮ್‌ ಪಟ್ಟಣದ ಒಬ್ಬ ಹುಡುಗನಿಗೆ ಮತ್ತೆ ಜೀವ ಕೊಟ್ಟು ಆತನ ಹೆತ್ತವರ ಮನಸ್ಸಿಗೆ ನೆಮ್ಮದಿ ಕೊಟ್ಟ

      • 2ಅರ 13:20, 21—ಸತ್ತ ವ್ಯಕ್ತಿಯೊಬ್ಬನ ದೇಹ ಎಲೀಷನ ಮೂಳೆಗೆ ತಗುಲಿದಾಗ ಅವನಿಗೆ ಮತ್ತೆ ಜೀವ ಬಂತು

      • ಲೂಕ 7:11-15—ಜನರ ಒಂದು ಗುಂಪು ಮಣ್ಣು ಮಾಡೋಕೆ ವಿಧವೆಯ ಮಗನನ್ನ ಎತ್ಕೊಂಡು ಹೋಗ್ತಿದ್ದಾಗ ಯೇಸು ಅವನಿಗೆ ಮತ್ತೆ ಜೀವ ಕೊಟ್ಟನು

      • ಲೂಕ 8:41, 42, 49-56—ಸಭಾಮಂದಿರದ ಅಧಿಕಾರಿಯಾಗಿದ್ದ ಯಾಯಿರನ ಮಗಳನ್ನ ಯೇಸು ಜೀವಂತವಾಗಿ ಎಬ್ಬಿಸಿದನು

      • ಯೋಹಾ 11:38-44—ಯೇಸು ತನ್ನ ಸ್ನೇಹಿತ ಲಾಜರನಿಗೆ ಮತ್ತೆ ಜೀವ ಬರೋ ತರ ಮಾಡಿದನು, ಆಗ ಅವನ ಅಕ್ಕಂದಿರಾದ ಮಾರ್ಥ ಮತ್ತು ಮರಿಯಗೆ ತುಂಬಾ ಖುಷಿ ಆಯ್ತು

      • ಅಕಾ 9:36-42—ಒಳ್ಳೇ ಕೆಲಸ ಮಾಡೋದಕ್ಕೆ ಹೆಸರುವಾಸಿಯಾಗಿದ್ದ ದೊರ್ಕಗಳನ್ನ ಅಪೊಸ್ತಲ ಪೇತ್ರ ಜೀವಂತವಾಗಿ ಎಬ್ಬಿಸಿದ

      • ಅಕಾ 20:7-12—ಕಿಟಿಕಿಯಿಂದ ಕೆಳಗೆ ಬಿದ್ದು ಸತ್ತು ಹೋದ ಯೂತಿಖ ಅನ್ನೋ ಯುವಕನಿಗೆ ಅಪೊಸ್ತಲ ಪೌಲ ಜೀವ ಬರೋ ತರ ಮಾಡಿದ

    • ಯೆಹೋವ ಯೇಸು ಕ್ರಿಸ್ತನನ್ನ ಸ್ವರ್ಗದಲ್ಲಿ ಜೀವಿಸೋಕೆ ಜೀವಂತವಾಗಿ ಎಬ್ಬಿಸಿದನು ಮತ್ತು ಅಮರತ್ವ ಕೊಟ್ಟನು. ಇದ್ರಿಂದ ಯೆಹೋವ ದೇವರು ಮುಂದೆ ಏನಾಗುತ್ತೆ ಅಂತ ಹೇಳಿದ್ದಾರೋ ಅದೆಲ್ಲಾ ಖಂಡಿತ ಆಗುತ್ತೆ ಅಂತ ಗೊತ್ತಾಗುತ್ತೆ

    • ಸ್ವರ್ಗಕ್ಕೆ ಜೀವ ಪಡ್ಕೊಂಡು ಮತ್ತು ಅಮರತ್ವ ಪಡ್ಕೊಂಡಿದ್ರಲ್ಲಿ ಯೇಸುನೇ ಮೊದಲ ವ್ಯಕ್ತಿ, ಆದ್ರೆ ಆತನೇ ಕೊನೇ ವ್ಯಕ್ತಿ ಅಲ್ಲ; 1,44,000 ಮಂದಿ ಅಭಿಷಿಕ್ತರಿಗೂ ಅದೇ ಬಹುಮಾನ ಸಿಗುತ್ತೆ

ಪ್ರೀತಿಪಾತ್ರರನ್ನ ಕಳ್ಕೊಂಡವರಿಗೆ ನಾವು ಹೇಗೆ ಸಹಾಯ ಮಾಡಬಹುದು?