ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೃದಯ

ಹೃದಯ

ಬೈಬಲ್‌ “ಹೃದಯ” ಅಂತ ಹೇಳೋವಾಗ ಅದು ನಮ್ಮ ವ್ಯಕ್ತಿತ್ವವನ್ನ ಸೂಚಿಸುತ್ತೆ, ಅದ್ರಲ್ಲಿ ನಮ್ಮ ಯೋಚ್ನೆಗಳು, ಆಸೆಗಳು, ಭಾವನೆಗಳು ಮತ್ತು ಗುಣಗಳು ಸೇರಿವೆ ಅನ್ನೋದು ನಮ್ಗೆ ಹೇಗೆ ಗೊತ್ತು?

ಕೀರ್ತ 49:3; ಜ್ಞಾನೋ 16:9; ಲೂಕ 5:22; ಅಕಾ 2:26

ಇದನ್ನೂ ನೋಡಿ: ಧರ್ಮೋ 15:7; ಕೀರ್ತ 19:8

  • ಬೈಬಲ್‌ ಉದಾಹರಣೆಗಳು:

    • ಲೂಕ 9:46-48—ಯೇಸುವಿನ ಶಿಷ್ಯರ ಹೃದಯದಲ್ಲಿ ನಾವು ಬೇರೆವ್ರಿಗಿಂತ ದೊಡ್ಡವರಾಗಬೇಕು ಅನ್ನೋ ಆಸೆ ಇತ್ತು, ಅದನ್ನ ಗಮನಿಸಿ ಯೇಸು ಅವ್ರನ್ನ ತಿದ್ದಿದನು

ನಾವು ನಮ್ಮ ಹೃದಯವನ್ನ ಕಾಪಾಡ್ಕೊಳ್ಳೋದು ಯಾಕೆ ಮುಖ್ಯ?

1ಪೂರ್ವ 28:9; ಜ್ಞಾನೋ 4:23; ಯೆರೆ 17:9

  • ಬೈಬಲ್‌ ಉದಾಹರಣೆಗಳು:

    • ಆದಿ 6:5-7—ಮನುಷ್ಯರ ಹೃದಯದಲ್ಲಿರೋ ಕೆಟ್ಟತನ ಹಿಂಸೆಗೆ ನಡೆಸ್ತು, ಅದಕ್ಕೆ ದೇವರು ಇಡೀ ಭೂಮಿ ಮೇಲೆ ಜಲಪ್ರಳಯ ತಂದನು

    • 1ಅರ 11:1-10—ರಾಜ ಸೊಲೊಮೋನ ತನ್ನ ಹೃದಯವನ್ನ ಕಾಪಾಡ್ಕೊಳ್ಳದೇ ಬೇರೆ ದೇಶದ ಸ್ತ್ರೀಯರನ್ನ ಮದ್ವೆ ಮಾಡ್ಕೊಂಡ, ಅವರು ಅವನನ್ನ ಯೆಹೋವನಿಂದ ದೂರ ಮಾಡಿದ್ರು

    • ಮಾರ್ಕ 7:18-23—ಎಲ್ಲಾ ಕೆಟ್ಟ ಆಸೆಗಳು ಹೃದಯದಿಂದ ಬರುತ್ತೆ, ಅದು ದೇವರು ಇಷ್ಟ ಪಡದ ವಿಷ್ಯಗಳನ್ನ ಮಾಡೋದಕ್ಕೆ ಪ್ರಚೋದಿಸುತ್ತೆ ಅಂತ ಯೇಸು ವಿವರಿಸಿದನು

ನಾವು ನಮ್ಮ ಹೃದಯವನ್ನ ಹೇಗೆ ಕಾಪಾಡ್ಕೊಬಹುದು?

ಕೀರ್ತ 19:14; ಜ್ಞಾನೋ 3:3-6; ಲೂಕ 21:34; ಫಿಲಿ 4:8

ಇದನ್ನೂ ನೋಡಿ: ಎಜ್ರ 7:8-10; ಕೀರ್ತ 119:11

  • ಬೈಬಲ್‌ ಉದಾಹರಣೆಗಳು:

    • ಎಫೆ 6:14-18; 1ಥೆಸ 5:8—ಒಬ್ಬ ಸೈನಿಕನ ಹೃದಯವನ್ನ ಹೇಗೆ ಎದೆಕವಚ ಕಾಪಾಡುತ್ತೋ ಹಾಗೆ ನೀತಿ, ನಂಬಿಕೆ ಮತ್ತು ಪ್ರೀತಿ ನಮ್ಮ ಆಂತರಿಕ ಹೃದಯವನ್ನ ಕಾಪಾಡುತ್ತೆ ಅಂತ ಪೌಲ ಹೇಳಿದ

ನಮ್ಮ ಹೃದಯ ಅಥವಾ ವ್ಯಕ್ತಿತ್ವದಲ್ಲಿ ಸಮಸ್ಯೆ ಇದೆ ಅಂತ ಹೇಗೆ ತಿಳ್ಕೊಬಹುದು?

ಜ್ಞಾನೋ 21:2-4; ಇಬ್ರಿ 3:12

ಇದನ್ನೂ ನೋಡಿ: ಜ್ಞಾನೋ 6:12-14

  • ಬೈಬಲ್‌ ಉದಾಹರಣೆಗಳು:

    • 2ಪೂರ್ವ 25:1, 2, 17-27—ಸ್ವಲ್ಪ ಸಮಯದ ವರೆಗೆ ರಾಜ ಅಮಚ್ಯ ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಂಡ, ಆದ್ರೆ ಪೂರ್ಣ ಹೃದಯದಿಂದ ಅದನ್ನ ಮಾಡ್ತಿರಲಿಲ್ಲ; ಸಮಯ ಹೋದ ಹಾಗೆ ಅವನು ಅಹಂಕಾರಿಯಾದ, ದೇವರ ಮಾತನ್ನ ಕೇಳಿಲ್ಲ, ಅದ್ರ ಕೆಟ್ಟ ಪರಿಣಾಮವನ್ನ ಅನುಭವಿಸಿದ

    • ಮತ್ತಾ 7:17-20—ಹೇಗೆ ಒಂದು ಕೆಟ್ಟ ಮರ ಕೆಟ್ಟ ಹಣ್ಣು ಕೊಡುತ್ತೋ ಅದೇ ತರ ನಮ್ಮ ಹೃದಯ ಕೆಟ್ಟದಾಗಿದ್ರೆ ನಾವು ಕೆಟ್ಟ ವಿಷ್ಯಗಳನ್ನೇ ಮಾಡ್ತೀವಿ

ನಾವು ಒಳ್ಳೇ ವ್ಯಕ್ತಿತ್ವವನ್ನ ಯಾಕೆ ಬೆಳೆಸ್ಕೊಬೇಕು? ಅದನ್ನ ಮಾಡೋದು ಹೇಗೆ?

ಜ್ಞಾನೋ 10:8; 15:28; ಲೂಕ 6:45

ಇದನ್ನೂ ನೋಡಿ: ಕೀರ್ತ 119:97, 104; ರೋಮ 12:9-16; 1ತಿಮೊ 1:5

  • ಬೈಬಲ್‌ ಉದಾಹರಣೆಗಳು:

    • 2ಅರ 20:1-6—ರಾಜ ಹಿಜ್ಕೀಯ ಕಾಯಿಲೆ ಬಿದ್ದು ಸಾಯೋ ಸ್ಥಿತಿಯಲ್ಲಿದ್ದಾಗ ತಾನು ‘ಈ ಮುಂಚೆ ಯೆಹೋವ ದೇವರಿಗೆ ನಂಬಿಗಸ್ತನಾಗಿದ್ರಿಂದ, ಪೂರ್ಣ ಹೃದಯದಿಂದ ಸೇವೆ ಮಾಡಿದ್ರಿಂದ ಅದನ್ನ ನೆನಪಿಸ್ಕೊಂಡು ಸಹಾಯ ಮಾಡು’ ಅಂತ ಕೇಳೋಕೆ ಆಯ್ತು

    • ಮತ್ತಾ 21:28-32—ಒಬ್ಬ ವ್ಯಕ್ತಿಯ ಹೃದಯದಲ್ಲಿ ಏನಿದೆ ಅನ್ನೋದು ಅವನ ಮಾತಿಗಿಂತ ಅವನು ನಡ್ಕೊಳ್ಳೋ ರೀತಿಯಿಂದ ಗೊತ್ತಾಗುತ್ತೆ ಅಂತ ಯೇಸು ಕೊಟ್ಟ ಉದಾಹರಣೆಯಿಂದ ಗೊತ್ತಾಗುತ್ತೆ

ಯೆಹೋವ ನಮ್ಮ ಹೃದಯವನ್ನ ಪರೀಕ್ಷಿಸ್ತಾನೆ ಅನ್ನೋದು ಮನಸ್ಸಿಗೆ ನೆಮ್ಮದಿ ಕೊಡುತ್ತೆ ಯಾಕೆ?

1ಪೂರ್ವ 28:9; ಯೆರೆ 17:10

ಇದನ್ನೂ ನೋಡಿ: 1ಸಮು 2:3

  • ಬೈಬಲ್‌ ಉದಾಹರಣೆಗಳು:

    • 1ಸಮು 16:1-13—ಯೆಹೋವನಿಗೆ ನಾವು ನೋಡೋಕೆ ಹೇಗಿದ್ದೀವಿ ಅನ್ನೋದಲ್ಲ, ನಮ್ಮ ಹೃದಯದಲ್ಲಿ ಏನಿದೆ ಅನ್ನೋದು ಮುಖ್ಯ ಅಂತ ಪ್ರವಾದಿ ಸಮುವೇಲ ತಿಳ್ಕೊಂಡ

    • 2ಪೂರ್ವ 6:28-31—ಸೊಲೊಮೋನ ದೇವಾಲಯವನ್ನ ಸಮರ್ಪಣೆ ಮಾಡೋವಾಗ ಮಾಡಿದ ಪ್ರಾರ್ಥನೆಯಿಂದ ಯೆಹೋವ ನಮ್ಮ ಹೃದಯದಲ್ಲಿ ಏನಿದೆ ಅಂತ ಅರ್ಥ ಮಾಡ್ಕೊತಾನೆ ಮತ್ತು ಕಾಳಜಿ ಮಾಡ್ತಾನೆ ಅಂತ ಗೊತ್ತಾಗುತ್ತೆ