ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೀನತೆ

ದೀನತೆ

ಯೆಹೋವ ದೇವರಿಗೆ ದೀನರನ್ನ ಕಂಡ್ರೆ ಹೇಗನಿಸುತ್ತೆ? ಅಹಂಕಾರಿಗಳನ್ನ ಕಂಡ್ರೆ ಹೇಗನಿಸುತ್ತೆ?

ಕೀರ್ತ 138:6; ಜ್ಞಾನೋ 15:25; 16:18, 19; 22:4; 1ಪೇತ್ರ 5:5

ಇದನ್ನೂ ನೋಡಿ: ಜ್ಞಾನೋ 29:23; ಯೆಶಾ 2:11, 12

  • ಬೈಬಲ್‌ ಉದಾಹರಣೆಗಳು:

    • 2ಪೂರ್ವ 26:3-5, 16-21—ರಾಜ ಉಜ್ಜೀಯ ಅಹಂಕಾರದಿಂದ ದೇವರ ನಿಯಮ ಮುರಿದಾಗ ಪುರೋಹಿತರು ಅವನನ್ನ ತಿದ್ದಿದ್ರು; ಅದಕ್ಕೆ ಅವನು ಕೋಪದಿಂದ ಕೆಂಡಾಮಂಡಲ ಆದಾಗ ದೇವರು ಅವನಿಗೆ ಕುಷ್ಠ ಬರೋ ತರ ಮಾಡಿದನು

    • ಲೂಕ 18:9-14—ಯೆಹೋವ ದೀನರ ಪ್ರಾರ್ಥನೆಗೆ ಹೇಗೆ ಪ್ರತಿಕ್ರಿಯಿಸ್ತಾನೆ, ಅಹಂಕಾರಿಗಳ ಪ್ರಾರ್ಥನೆಗೆ ಹೇಗೆ ಪ್ರತಿಕ್ರಿಯಿಸ್ತಾನೆ ಅಂತ ಯೇಸು ಒಂದು ಉದಾಹರಣೆ ಮೂಲಕ ಹೇಳಿದನು

ದೀನತೆಯಿಂದ ತಪ್ಪುಗಳನ್ನ ಒಪ್ಕೊಳ್ಳೋರ ಜೊತೆ ಯೆಹೋವ ಹೇಗೆ ನಡ್ಕೊತಾನೆ?

2ಪೂರ್ವ 7:13, 14; ಕೀರ್ತ 51:2-4, 17

  • ಬೈಬಲ್‌ ಉದಾಹರಣೆಗಳು:

    • 2ಪೂರ್ವ 12:5-7—ರಾಜ ರೆಹಬ್ಬಾಮ ಮತ್ತು ಯೆಹೂದದ ಅಧಿಕಾರಿಗಳು ದೀನತೆಯಿಂದ ಯೆಹೋವನ ನಿರ್ಧಾರವನ್ನ ಒಪ್ಕೊಂಡು ಪಶ್ಚಾತ್ತಾಪ ಪಟ್ರು. ಆಗ ಯೆಹೋವ ಅವ್ರಿಗೆ ಶಿಕ್ಷೆ ಕೊಡಲಿಲ್ಲ

    • 2ಪೂರ್ವ 32:24-26—ಒಳ್ಳೇ ರಾಜನಾಗಿದ್ದ ಹಿಜ್ಕೀಯ ಬರ್ತಾ ಬರ್ತಾ ಅಹಂಕಾರಿಯಾದ, ಆದ್ರೆ ದೀನತೆ ತೋರಿಸಿದಾಗ ಯೆಹೋವ ಅವನನ್ನ ಕ್ಷಮಿಸಿದನು

ದೀನತೆ ತೋರಿಸಿದ್ರೆ ಬೇರೆವ್ರ ಜೊತೆ ನಮ್ಮ ಸ್ನೇಹ ಚೆನ್ನಾಗಿರುತ್ತೆ ಯಾಕೆ?

ಎಫೆ 4:1, 2; ಫಿಲಿ 2:3; ಕೊಲೊ 3:12, 13

  • ಬೈಬಲ್‌ ಉದಾಹರಣೆಗಳು:

    • ಆದಿ 33:3, 4—ಕೋಪದಿಂದ ಕೆಂಡ ಕಾರ್ತಿದ್ದ ಏಸಾವನನ್ನ ಭೇಟಿ ಮಾಡಿದಾಗ ಯಾಕೋಬ ದೀನತೆ ತೋರಿಸಿದ್ರಿಂದ ಇಬ್ರೂ ಶಾಂತಿಯಿಂದ ಇರೋಕಾಯ್ತು

    • ನ್ಯಾಯ 8:1-3—ನ್ಯಾಯಾಧೀಶ ಗಿದ್ಯೋನ ಎಫ್ರಾಯೀಮಿನ ಗಂಡಸರು ತನಗಿಂತ ಶ್ರೇಷ್ಠರು ಅಂತ ಹೇಳೋದ್ರ ಮೂಲಕ ಅವ್ರ ಕೋಪ ಕಮ್ಮಿ ಮಾಡಿದ, ಮುಂದೆ ಆಗ್ತಿದ್ದ ದೊಡ್ಡ ಜಗಳನಾ ತಡೆದ

ದೀನತೆ ತೋರಿಸೋದು ಮುಖ್ಯ ಅಂತ ಯೇಸು ಯಾಕೆ ಹೇಳಿದನು?

ಮತ್ತಾ 18:1-5; 23:11, 12; ಮಾರ್ಕ 10:41-45

  • ಬೈಬಲ್‌ ಉದಾಹರಣೆಗಳು:

    • ಯೆಶಾ 53:7; ಫಿಲಿ 2:7, 8—ಪ್ರವಾದಿಗಳು ಮುಂಚೆನೇ ಹೇಳಿದ ತರ ಯೇಸು ದೀನನಾಗಿದ್ದನು, ಆತನು ಭೂಮಿಗೆ ಬರೋದಕ್ಕೆ ಮತ್ತು ಕಷ್ಟ ಅನುಭವಿಸಿ ಸಾಯೋಕೆ ರೆಡಿಯಾಗಿದ್ದನು

    • ಲೂಕ 14:7-11—ಊಟಕ್ಕೆ ಕರೆದಾಗ ಕೂತ್ಕೊಳ್ಳೋ ಸ್ಥಾನಗಳ ಬಗ್ಗೆ ಹೇಳ್ತಾ ದೀನತೆ ತೋರಿಸೋದ್ರ ಪ್ರಾಮುಖ್ಯತೆ ಬಗ್ಗೆ ಯೇಸು ವಿವರಿಸಿದನು

    • ಯೋಹಾ 13:3-17—ಯೇಸು ತನ್ನ ಅಪೊಸ್ತಲರ ಕಾಲುಗಳನ್ನ ತೊಳೆಯೋದ್ರ ಮೂಲಕ ದೀನತೆಯ ಪಾಠ ಕಲಿಸಿದನು

ನಮ್ಮನ್ನ ಮತ್ತು ಬೇರೆಯವ್ರನ್ನ ಯೆಹೋವ ಹೇಗೆ ನೋಡ್ತಾರೋ ಅದೇ ತರ ನಾವು ನೋಡಿದ್ರೆ ನಮಗೆ ದೀನತೆ ತೋರಿಸೋಕೆ ಸಹಾಯ ಆಗುತ್ತೆ. ಹೇಗೆ?

ದೀನರ ತರ ನಾಟಕ ಮಾಡೋದ್ರಿಂದ ಯಾವ ಪ್ರಯೋಜನನೂ ಇಲ್ಲ ಯಾಕೆ?