ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಯತ್ತು, ನಿರ್ದೋಷಿ

ನಿಯತ್ತು, ನಿರ್ದೋಷಿ

ನಿಯತ್ತು ಅಂದ್ರೆ ಏನು?

ಕೀರ್ತ 18:23-25; 26:1, 2; 101:2-7; 119:1-3, 80

  • ಬೈಬಲ್‌ ಉದಾಹರಣೆಗಳು:

    • ಯಾಜ 22:17-22—ಇಸ್ರಾಯೇಲ್ಯರು ಪ್ರಾಣಿ ಬಲಿ ಕೊಡೋವಾಗ “ದೋಷ ಇಲ್ಲದ” ಪ್ರಾಣಿಗಳನ್ನ ಕೊಡಬೇಕಿತ್ತು; “ದೋಷ ಇಲ್ಲದ” ಅನ್ನೋದಕ್ಕಿರೋ ಹೀಬ್ರು ಪದಕ್ಕೂ “ನಿಯತ್ತು, ನಿರ್ದೋಷಿ” ಅನ್ನೋದಕ್ಕಿರೋ ಹೀಬ್ರು ಪದಕ್ಕೂ ಸಂಬಂಧ ಇದೆ. ಹಾಗಾಗಿ ನಾವು ಯೆಹೋವನಿಗೆ ‘ನಿಯತ್ತಾಗಿ ಇರಬೇಕು’ ಅನ್ನೋದ್ರ ಅರ್ಥ ನಮಗೆ ಯೆಹೋವನ ಮೇಲೆ ಅರೆಮನಸ್ಸಿನ ಭಕ್ತಿ ಅಲ್ಲ, ಪೂರ್ಣ ಮನಸ್ಸಿನ ಭಕ್ತಿ ಇರಬೇಕು

    • ಯೋಬ 1:1, 4, 5, 8; 2:3—ನಾವು ಯೆಹೋವನಿಗೆ ನಿಯತ್ತಾಗಿ ಇರಬೇಕಂದ್ರೆ ಯೋಬನ ತರ ಆತನಿಗೆ ಗೌರವ ಕೊಡಬೇಕು, ಆತನನ್ನ ಮಾತ್ರ ಆರಾಧನೆ ಮಾಡಬೇಕು, ಆತನಿಗೆ ಇಷ್ಟ ಇಲ್ಲದಿರೋ ವಿಷ್ಯಗಳಿಂದ ದೂರ ಇರಬೇಕು

ನಾವು ಯಾಕೆ ಯೆಹೋವನಿಗೆ ನಿಯತ್ತಾಗಿ ಇರಬೇಕು?

ಯೆಹೋವನಿಗೆ ನಿಯತ್ತಾಗಿ, ಪ್ರಾಮಾಣಿಕರಾಗಿ ಇರೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?

ನಾವು ದೇವರಿಗೆ ಯಾವಾಗ್ಲೂ ನಿಯತ್ತಿಂದ ಇರೋಕೆ ಏನು ಮಾಡಬೇಕು?

ಯೆಹೋ 24:14, 15; ಕೀರ್ತ 101:2-4

ಇದನ್ನೂ ನೋಡಿ: ಧರ್ಮೋ 5:29; ಯೆಶಾ 48:17, 18

  • ಬೈಬಲ್‌ ಉದಾಹರಣೆಗಳು:

    • ಯೋಬ 31:1-11, 16-33—ಯೋಬ ಯಾವಾಗ್ಲೂ ಬೇರೆವ್ರನ್ನ ಕರುಣೆಯಿಂದ ನೋಡ್ಕೊತಿದ್ದ, ಗೌರವಿಸ್ತಿದ್ದ, ಅನೈತಿಕತೆಯಿಂದ ದೂರ ಇದ್ದ, ಯೆಹೋವನನ್ನ ಮಾತ್ರ ಆರಾಧನೆ ಮಾಡಿದ, ಹಣ-ಆಸ್ತಿಗಿಂತ ಯೆಹೋವ ದೇವರ ಜೊತೆ ಇರೋ ಸ್ನೇಹಕ್ಕೆ ತುಂಬಾ ಬೆಲೆ ಕೊಟ್ಟ. ಹೀಗೆ ಆತನಿಗೆ ನಿಯತ್ತಾಗಿ ಇದ್ದೀನಿ ಅಂತ ತೋರಿಸ್ಕೊಟ್ಟ

    • ದಾನಿ 1:6-21—ತಮ್ಮ ಸುತ್ತಮುತ್ತ ಬೇರೆ ದೇವರುಗಳನ್ನ ಆರಾಧಿಸೋರು ಇದ್ರೂ ದಾನಿಯೇಲ ಮತ್ತು ಅವನ ಮೂವರು ಸ್ನೇಹಿತರು ಎಲ್ಲ ವಿಷ್ಯದಲ್ಲೂ ಯೆಹೋವನ ಮಾತನ್ನ ಕೇಳಿದ್ರು, ತಿನ್ನೋ-ಕುಡಿಯೋ ವಿಷ್ಯದಲ್ಲೂ ಅವರು ದೇವರ ಮಾತು ಮೀರಲಿಲ್ಲ

ಒಬ್ಬ ವ್ಯಕ್ತಿ ಪದೇ ಪದೇ ತಪ್ಪು ಮಾಡಿದ ಮೇಲೂ ಅವನು ಮತ್ತೆ ದೇವರಿಗೆ ನಿಯತ್ತಾಗಿರೋಕೆ ಆಗುತ್ತಾ?

  • ಬೈಬಲ್‌ ಉದಾಹರಣೆಗಳು:

    • 1ಅರ 9:2-5; ಕೀರ್ತ 78:70-72—ರಾಜ ದಾವೀದ ಪಶ್ಚಾತ್ತಾಪ ಪಟ್ಟಿದ್ರಿಂದ ದೇವರು ಅವನನ್ನ ಕ್ಷಮಿಸಿದನು, ಅವನು “ಪೂರ್ಣ ಹೃದಯದಿಂದ, ಶುದ್ಧ ಹೃದಯದಿಂದ” ನಡೆದ ಅಂತ ಹೇಳಿದನು

    • ಯೆಶಾ 1:11-18—ತನ್ನ ಜನರ ಪಾಪಗಳು ಕಡುಗೆಂಪಾಗಿದ್ರೂ ಅವರು ಪಶ್ಚಾತ್ತಾಪ ಪಟ್ರೆ, ತಪ್ಪು ಮಾಡೋದನ್ನ ಬಿಟ್ಟುಬಿಟ್ರೆ ಅದನ್ನ ಹಿಮದ ತರ ಬೆಳ್ಳಗೆ ಮಾಡ್ತೀನಿ ಅಂತ ಯೆಹೋವ ಹೇಳಿದ್ದಾನೆ