ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಣ-ಆಸ್ತಿ ಮೇಲೆ ಆಸೆ

ಹಣ-ಆಸ್ತಿ ಮೇಲೆ ಆಸೆ

ಹಣ-ಆಸ್ತಿ ಇರೋದನ್ನ ಬೈಬಲ್‌ ತಪ್ಪು ಅಂತ ಹೇಳುತ್ತಾ?

ಪ್ರಸಂ 7:12

  • ಬೈಬಲ್‌ ಉದಾಹರಣೆಗಳು:

    • 1ಅರ 3:11-14—ಸೊಲೊಮೋನ ದೀನನಾಗಿ ಇದ್ದಿದ್ರಿಂದ ಅವನ ಆಸ್ತಿ-ಅಂತಸ್ತು ಜಾಸ್ತಿ ಆಗೋ ತರ ಯೆಹೋವ ಮಾಡಿದನು

    • ಯೋಬ 1:1-3, 8-10—ಯೋಬ ತುಂಬ ಶ್ರೀಮಂತನಾಗಿದ್ರೂ ಅವನಿಗೆ ಯೆಹೋವನ ಜೊತೆ ಇದ್ದ ಸಂಬಂಧನೇ ಎಲ್ಲದಕ್ಕಿಂತ ಮುಖ್ಯವಾಗಿತ್ತು

ಹಣ-ವಸ್ತುಗಳನ್ನ ಕೂಡಿಸ್ಕೊಳ್ಳೋದ್ರಿಂದ ಸಿಗೋ ಸಂತೋಷ ತುಂಬ ದಿನ ಇರಲ್ಲ ಯಾಕೆ?

ಹಣ-ಆಸ್ತಿ ಯಾವಾಗ ನಮ್ಮ ಪ್ರಯೋಜನಕ್ಕೆ ಬರಲ್ಲ?

ಹಣ-ಆಸ್ತಿಯಿಂದ ನಮಗೆ ಯಾವ ದೊಡ್ಡ ಅಪಾಯ ಆಗುತ್ತೆ?

ಹಣ-ಆಸ್ತಿ ಮೇಲೆ ನಂಬಿಕೆ ಇಡೋದು ದೊಡ್ಡ ಮೂರ್ಖತನ ಯಾಕೆ?

ಜ್ಞಾನೋ 11:4, 18, 28; 18:11; ಮತ್ತಾ 13:22

  • ಬೈಬಲ್‌ ಉದಾಹರಣೆಗಳು:

    • ಅಕಾ 8:18-24—ದುಡ್ಡು ಕೊಟ್ಟು ಸಭೇಲಿ ಸುಯೋಗಗಳನ್ನ ಪಡ್ಕೊಬಹುದು ಅಂತ ಸೀಮೋನ ನೆನಸಿದ, ಆದ್ರೆ ಅದು ಅವನ ದಡ್ಡತನ ಆಗಿತ್ತು

ಹಣದ ಹುಚ್ಚು ಇದ್ರೆ ಏನಾಗುತ್ತೆ?

ಮತ್ತಾ 6:19-21; ಲೂಕ 17:31, 32

  • ಬೈಬಲ್‌ ಉದಾಹರಣೆಗಳು:

    • ಮಾರ್ಕ 10:17-23—ಒಬ್ಬ ಶ್ರೀಮಂತ ಯುವಕನಿಗೆ ತನ್ನ ಆಸ್ತಿ-ಪಾಸ್ತಿನ ಬಿಟ್ಟುಬರೋಕೆ ಇಷ್ಟ ಇರಲಿಲ್ಲ, ಇದ್ರಿಂದ ಯೇಸುನ ಹಿಂಬಾಲಿಸೋ ಅವಕಾಶ ಕಳ್ಕೊಂಡ

    • 1ತಿಮೊ 6:17-19—ಶ್ರೀಮಂತರಾಗಿರೋ ಕ್ರೈಸ್ತರು ಅಹಂಕಾರ ಪಡಬಾರದು, ಅದು ದೇವರಿಗೆ ಇಷ್ಟ ಆಗಲ್ಲ ಅಂತ ಪೌಲ ಹೇಳಿದ್ದಾನೆ

ಹಣ-ಆಸ್ತಿ ಮಾಡಬೇಕು ಅನ್ನೋ ಆಸೆ ದೇವರ ಮೇಲಿರೋ ನಂಬಿಕೆನ ಹೇಗೆ ಕಮ್ಮಿ ಮಾಡುತ್ತೆ? ಹೇಗೆ ದೇವರ ಆಶೀರ್ವಾದ ಕಳ್ಕೊಳ್ಳೋ ತರ ಮಾಡುತ್ತೆ?

ಧರ್ಮೋ 8:10-14; ಜ್ಞಾನೋ 28:20; 1ಯೋಹಾ 2:15-17

ಇದನ್ನೂ ನೋಡಿ: ಕೀರ್ತ 52:6, 7; ಆಮೋ 3:12, 15; 6:4-8

  • ಬೈಬಲ್‌ ಉದಾಹರಣೆಗಳು:

    • ಯೋಬ 31:24, 25, 28—ಹಣ-ಆಸ್ತಿ ಮೇಲೆ ನಂಬಿಕೆ ಇಟ್ರೆ ದೇವರ ಮೇಲೆ ನಂಬಿಕೆ ಇಡೋಕೆ ಆಗಲ್ಲ ಅಂತ ಯೋಬ ಅರ್ಥ ಮಾಡ್ಕೊಂಡ

    • ಲೂಕ 12:15-21—ನಮಗೆ ಹಣ-ಆಸ್ತಿ ಮೇಲೆ ಆಸೆ ಇರಬಾರದು ಅನ್ನೋದಕ್ಕೆ ಯೇಸು ಒಬ್ಬ ಶ್ರೀಮಂತನ ಉದಾಹರಣೆ ಕೊಟ್ಟನು. ಆ ವ್ಯಕ್ತಿ ದೇವರ ದೃಷ್ಟಿಯಲ್ಲಿ ಶ್ರೀಮಂತನಾಗಿರಲಿಲ್ಲ

ನಾವು ಇರೋದ್ರಲ್ಲೇ ಹೇಗೆ ತೃಪ್ತಿಯಿಂದ ಇರಬಹುದು?

ಹಣ-ಆಸ್ತಿಗಿಂತ ಯಾವುದು ಮುಖ್ಯ? ಯಾಕೆ?

ಜ್ಞಾನೋ 3:11, 13-18; 10:22; ಮತ್ತಾ 6:19-21

  • ಬೈಬಲ್‌ ಉದಾಹರಣೆಗಳು:

    • ಹಗ್ಗಾ 1:3-11—ತನ್ನ ಜನರು ದೇವಾಲಯ ಕಟ್ಟೋಕೆ ಏನೂ ಸಹಾಯ ಮಾಡದೆ ತಮ್ಮ ಸ್ವಂತ ಮನೆಗಳನ್ನ ಕಟ್ಕೊಂಡ್ರು, ಅದಕ್ಕೆ ಯೆಹೋವ ಅವ್ರಿಗೆ ಆಶೀರ್ವಾದ ಮಾಡಲ್ಲ ಅಂತ ಹಗ್ಗಾಯನ ಮೂಲಕ ಹೇಳಿದನು

    • ಪ್ರಕ 3:14-19—ಲವೊದಿಕೀಯ ಸಭೆಯವ್ರನ್ನ ಯೇಸು ತಿದ್ದಿದನು, ಯಾಕಂದ್ರೆ ಅವ್ರಿಗೆ ದೇವರ ಸೇವೆ ಅಲ್ಲ, ದುಡ್ಡು-ದೌಲತ್ತು ಮುಖ್ಯವಾಗಿತ್ತು

ಜೀವನ ಮಾಡೋಕೆ ಬೇಕಾಗಿರೋದನ್ನ ಯೆಹೋವ ಕೊಟ್ಟೇ ಕೊಡ್ತಾನೆ ಅಂತ ನಾವು ಯಾಕೆ ನಂಬಬೇಕು?