ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕರುಣೆ

ಕರುಣೆ

ಕರುಣೆ ಅಂದ್ರೆ ಏನು?

  • ಬೈಬಲ್‌ ಉದಾಹರಣೆಗಳು:

    • ಕೀರ್ತ 51:1, 2—ದಾವೀದ ದೇವರ ಕರುಣೆಗೋಸ್ಕರ ಬೇಡ್ಕೊಂಡ, ತನ್ನನ್ನ ಕ್ಷಮಿಸೋಕೆ ಮತ್ತು ತನ್ನ ಪಾಪಗಳನ್ನ ತೊಳೆದು ಶುದ್ಧ ಮಾಡೋಕೆ ಕೇಳ್ಕೊಂಡ

    • ಲೂಕ 10:29-37—ಯೇಸು ಒಬ್ಬ ಸಮಾರ್ಯದವನು ತೋರಿಸಿದ ಪ್ರೀತಿ, ದಯೆ ಬಗ್ಗೆ ಹೇಳ್ತಾ ಕರುಣೆ ತೋರಿಸೋದು ಅಂದ್ರೆ ಏನು ಅಂತ ಕಲಿಸಿದನು

ಎಲ್ಲ ಮನುಷ್ಯರಿಗೂ ದೇವರ ಕರುಣೆ ಬೇಕು ಯಾಕೆ?

ಯೆಹೋವ ಕರುಣೆ ತೋರಿಸೋ ದೇವರು ಅಂತ ನಮಗೆ ಹೇಗೆ ಗೊತ್ತು?

ವಿಮೋ 34:6; ನೆಹೆ 9:17; ಕೀರ್ತ 103:8; 2ಕೊರಿಂ 1:3

  • ಬೈಬಲ್‌ ಉದಾಹರಣೆಗಳು:

    • ಯೋಬ 42:1, 2, 6-10; ಯಾಕೋ 5:11—ಯೆಹೋವ ಯೋಬನಿಗೆ ಕರುಣೆ ತೋರಿಸಿದನು, ಅವನೂ ಬೇರೆವ್ರಿಗೆ ಕರುಣೆ ತೋರಿಸಬೇಕು ಅಂತ ಹೇಳಿದನು

    • ಲೂಕ 15:11-32—ದಾರಿ ತಪ್ಪಿದ ಮಗ ತಪ್ಪನ್ನ ಒಪ್ಕೊಂಡು ವಾಪಸ್‌ ಬಂದಾಗ ಅವನ ಅಪ್ಪ ಕರುಣೆ ತೋರಿಸಿದ ತರಾನೇ ಯೆಹೋವ ಕರುಣೆ ತೋರಿಸ್ತಾನೆ ಅಂತ ಯೇಸು ಹೇಳಿದನು

ಯೆಹೋವ ನಮಗೆ ಯಾಕೆ ಕರುಣೆ ತೋರಿಸ್ತಾನೆ?

ರೋಮ 5:8; 1ಯೋಹಾ 4:9, 10

ಇದನ್ನೂ ನೋಡಿ: ತೀತ 3:4, 5

ಯೇಸು ತನ್ನ ಪ್ರಾಣ ಕೊಟ್ಟಿರೋದ್ರಿಂದ ನಮ್ಮ ಪಾಪಗಳಿಗೆ ಹೇಗೆ ಕ್ಷಮೆ ಸಿಗುತ್ತೆ?

‘ಕರುಣೆ ತೋರಿಸಪ್ಪಾ’ ಅಂತ ನಾವು ಯೆಹೋವನನ್ನ ಯಾಕೆ ಬೇಡ್ಕೊಬೇಕು? ಆತನ ಕರುಣೆಯನ್ನ ಯಾವತ್ತೂ ಹಗುರವಾಗಿ ತಗೊಬಾರದು ಯಾಕೆ?

ಲೂಕ 11:2-4; ಇಬ್ರಿ 4:16

  • ಬೈಬಲ್‌ ಉದಾಹರಣೆಗಳು:

    • ಕೀರ್ತ 51:1-4—ದಾವೀದ ಮಾಡಿದ ತಪ್ಪಿಗೆ ತುಂಬ ಪಶ್ಚಾತ್ತಾಪ ಪಟ್ಟ, ದೀನತೆಯಿಂದ ಕರುಣೆ ತೋರಿಸಪ್ಪಾ ಅಂತ ದೇವರನ್ನ ಬೇಡ್ಕೊಂಡ

    • ಲೂಕ 18:9-14—ದೀನತೆಯಿಂದ ತಪ್ಪನ್ನ ಒಪ್ಕೊಳ್ಳೋರಿಗೆ ಯೆಹೋವ ಕರುಣೆ ತೋರಿಸ್ತಾನೆ ಅಂತ ಯೇಸು ಒಂದು ಉದಾಹರಣೆ ಕೊಟ್ಟು ಹೇಳಿದನು

ದೊಡ್ಡ ದೊಡ್ಡ ತಪ್ಪುಗಳನ್ನ ಮಾಡಿದವ್ರಿಗೂ ಯಾಕೆ ಕರುಣೆ ಸಿಗುತ್ತೆ?

ಧರ್ಮೋ 4:29-31; ಯೆಶಾ 55:7

  • ಬೈಬಲ್‌ ಉದಾಹರಣೆಗಳು:

    • 2ಪೂರ್ವ 33:9-13, 15—ಮನಸ್ಸೆ ತುಂಬ ಕೆಟ್ಟವನಾಗಿದ್ದ, ಆಮೇಲೆ ಪಶ್ಚಾತ್ತಾಪ ಪಟ್ಟ, ಕರುಣೆ ತೋರಿಸಪ್ಪಾ ಅಂತ ದೇವರನ್ನ ಬೇಡ್ಕೊಂಡ. ನಿಜವಾಗ್ಲೂ ಬದಲಾಗಿದ್ದೀನಿ ಅಂತ ತೋರಿಸ್ಕೊಟ್ಟ. ಆಗ ದೇವರು ಅವನನ್ನ ಮತ್ತೆ ರಾಜ ಮಾಡಿದನು

    • ಯೋನ 3:4-10—ಹಿಂಸೆ-ಕ್ರೌರ್ಯದಲ್ಲೇ ಮುಳುಗಿದ್ದ ನಿನೆವೆಯ ಜನರು ಪಶ್ಚಾತ್ತಾಪ ಪಟ್ಟಾಗ ದೇವರು ಅವ್ರನ್ನ ಕ್ಷಮಿಸಿದನು

ಯೆಹೋವನ ಕರುಣೆ ಸಿಗಬೇಕಾದ್ರೆ ತಪ್ಪು ಮಾಡಿದವರು ತಪ್ಪನ್ನ ಒಪ್ಕೊಳ್ಳೋದು ಮತ್ತು ತಿದ್ಕೊಳ್ಳೋದು ಎಷ್ಟು ಮುಖ್ಯ?

ಯೆಹೋವ ನಮಗೆ ಕರುಣೆ ತೋರಿಸಿದ ಮೇಲೂ ನಮಗೆ ಶಿಸ್ತು ಸಿಗಬಹುದು ಮತ್ತು ನಮ್ಮ ತಪ್ಪಿನ ಪರಿಣಾಮನ ಅನುಭವಿಸಬೇಕಾಗಬಹುದು

ನಾವು ಯಾಕೆ ಬೇರೆವ್ರಿಗೆ ಕರುಣೆ ತೋರಿಸಬೇಕು?

ನಾವು ಬೇರೆವ್ರಿಗೆ ಕರುಣೆ ತೋರಿಸಿಲ್ಲಾಂದ್ರೆ ಯೆಹೋವನ ಜೊತೆ ನಮಗಿರೋ ಸ್ನೇಹ ಏನಾಗುತ್ತೆ?

ಮತ್ತಾ 9:13; 23:23; ಯಾಕೋ 2:13

ಇದನ್ನೂ ನೋಡಿ: ಜ್ಞಾನೋ 21:13

  • ಬೈಬಲ್‌ ಉದಾಹರಣೆಗಳು:

    • ಮತ್ತಾ 18:23-35—ನಾವು ಬೇರೆವ್ರಿಗೆ ಕರುಣೆ ತೋರಿಸಿಲ್ಲಾಂದ್ರೆ ದೇವರು ನಮಗೂ ಕರುಣೆ ತೋರಿಸಲ್ಲ ಅಂತ ಯೇಸು ಉದಾಹರಣೆ ಕೊಟ್ಟು ಹೇಳಿದನು

    • ಲೂಕ 10:29-37—ನಾವು ಬೇರೆವ್ರಿಗೆ ಕರುಣೆ ತೋರಿಸದೇ ಇದ್ರೆ ಯೆಹೋವ ಮತ್ತು ಯೇಸುಗೆ ಇಷ್ಟ ಆಗಲ್ಲ, ಸಮಾರ್ಯದವನ ತರ ಕರುಣೆ ತೋರಿಸಿದ್ರೆ ಅವ್ರಿಗೆ ಖುಷಿ ಆಗುತ್ತೆ

ಕರುಣೆ ತೋರಿಸೋರ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ?