ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೌರ್ಜನ್ಯ

ದೌರ್ಜನ್ಯ

ಬೇರೆಯವರು ನಮ್ಮ ಮೇಲೆ ದೌರ್ಜನ್ಯ ಮಾಡಿದಾಗ ನಮಗೆ ಹೇಗನಿಸುತ್ತೆ?

ಕೀರ್ತ 69:20; ಜ್ಞಾನೋ 18:14; ಪ್ರಸಂ 4:1-3; ಮಲಾ 2:13-16; ಕೊಲೊ 3:21

  • ಬೈಬಲ್‌ ಉದಾಹರಣೆಗಳು:

    • 2ಸಮು 10:1-5—ಶತ್ರುಗಳಿಂದ ಗಾಯ ಆಗದೇ ಇದ್ರೂ ದೌರ್ಜನ್ಯಕ್ಕೆ ಒಳಗಾದ ಸೈನಿಕರ ಜೊತೆ ರಾಜ ದಾವೀದ ದಯೆಯಿಂದ ನಡ್ಕೊಂಡ

    • 2ಸಮು 13:6-19—ಅಮ್ನೋನ ತಾಮಾರಳನ್ನ ಕೆಡಿಸಿ ಅವಳನ್ನ ಕಳಿಸಿದ, ಆಗ ಅವಳು ತನ್ನ ಬಟ್ಟೆಗಳನ್ನ ಹರ್ಕೊಂಡು ಜೋರಾಗಿ ಅಳ್ತಾ ಹೋದಳು

ಯಾರಾದ್ರೂ ದೌರ್ಜನ್ಯಕ್ಕೆ ಒಳಗಾದ್ರೆ ಅವ್ರ ಪರಿಸ್ಥಿತಿನ ಯೆಹೋವ ಅರ್ಥ ಮಾಡ್ಕೊತಾನೆ ಅಂತ ನಮಗೆ ಹೇಗೆ ಗೊತ್ತು? ಆತನು ಅದನ್ನ ಏನು ಮಾಡ್ತಾನೆ?

ಯೋಬ 34:21, 22; ಕೀರ್ತ 37:8, 9; ಯೆಶಾ 29:15, 19-21; ರೋಮ 12:17-21

ಇದನ್ನೂ ನೋಡಿ: ಕೀರ್ತ 63:6, 7

  • ಬೈಬಲ್‌ ಉದಾಹರಣೆಗಳು:

    • 1ಸಮು 25:3, 14-17, 21, 32-38—ನಾಬಾಲ ದಾವೀದನ ಹತ್ರ ಒರಟಾಗಿ ನಡ್ಕೊಂಡಿದ್ರಿಂದ ತನ್ನ ಮನೆವ್ರ ಜೀವಕ್ಕೆ ಅಪಾಯ ತಂದ, ಆಮೇಲೆ ದೇವರು ನಾಬಾಲನಿಗೆ ಶಿಕ್ಷೆ ಕೊಟ್ಟು ಸಾಯೋ ತರ ಮಾಡಿದನು

    • ಯೆರೆ 20:1-6, 9, 11-13—ಪುರೋಹಿತನಾಗಿದ್ದ ಪಷ್ಹೂರ ಯೆರೆಮೀಯನನ್ನ ಹೊಡೆದು ಕೈಗಳಿಗೆ ಕೋಳ ಹಾಕಿದ; ಯೆಹೋವ ಯೆರೆಮೀಯನನ್ನ ಪ್ರೋತ್ಸಾಹಿಸಿ ಕಾಪಾಡಿದನು