ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದುಡ್ಡು

ದುಡ್ಡು

ದುಡ್ಡಿನ ಮೇಲೆ ಅತಿಯಾಸೆ ಪಡೋದು ಯಾಕೆ ಅಪಾಯಕಾರಿ?

ಕುಟುಂಬನ ನೋಡ್ಕೊಳ್ಳೋದಕ್ಕೆ ಹಣ ಸಂಪಾದಿಸೋದು ತಪ್ಪು ಅಂತ ಬೈಬಲ್‌ ಹೇಳಲ್ಲ ಅಂತ ನಮಗೆ ಹೇಗೆ ಗೊತ್ತು?

ಪ್ರಸಂ 7:12; 10:19; ಎಫೆ 4:28; 2ಥೆಸ 3:10; 1ತಿಮೊ 5:8, 18

  • ಬೈಬಲ್‌ ಉದಾಹರಣೆಗಳು:

    • ಆದಿ 31:38-42—ಲಾಬಾನ ಯಾಕೋಬನ ಸಂಬಳವನ್ನ ಪದೇ ಪದೇ ಬದಲಾಯಿಸಿದ್ರೂ ಯಾಕೋಬ ಕುಟುಂಬಕ್ಕೋಸ್ಕರ ಕಷ್ಟಪಟ್ಟು ಕೆಲ್ಸ ಮಾಡಿದ, ಅದಕ್ಕೆ ಯೆಹೋವ ಅವನ ಕೆಲ್ಸನಾ ಆಶೀರ್ವದಿಸಿದನು

    • ಲೂಕ 19:12, 13, 15-23—ಜನ ದುಡ್ಡನ್ನ ಹೂಡಿಕೆ ಮಾಡೋದು ಸಾಮಾನ್ಯ ಅಂತ ಯೇಸು ಹೇಳಿದ ಒಂದು ಉದಾಹರಣೆಯಿಂದ ಗೊತ್ತಾಗುತ್ತೆ

ಸಾಲ ತಗೊಳ್ಳೋದು ಮತ್ತು ಕೊಡೋದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಜಾಸ್ತಿ ಸಾಲ ಮಾಡದೇ ಇರೋದು ಯಾಕೆ ಒಳ್ಳೇದು?

  • ಬೈಬಲ್‌ ಉದಾಹರಣೆಗಳು:

    • ನೆಹೆ 5:2-8—ನೆಹೆಮೀಯನ ಕಾಲದಲ್ಲಿ ಕೆಲವು ಇಸ್ರಾಯೇಲ್ಯರು ಸಾಲ ಕೊಟ್ಟವ್ರ ಜೊತೆ ಕರುಣೆ ಇಲ್ಲದೆ ನಡ್ಕೊತಿದ್ರು

    • ಮತ್ತಾ 18:23-25—ಯೇಸು ಹೇಳಿದ ಉದಾಹರಣೆಯಿಂದ, ಒಬ್ಬ ವ್ಯಕ್ತಿ ಸಾಲ ತಗೊಂಡು ಅದನ್ನ ತೀರಿಸದೇ ಇದ್ರೆ ಅವನಿಗೆ ಶಿಕ್ಷೆ ಸಿಗಬಹುದು ಅಂತ ಗೊತ್ತಾಗುತ್ತೆ

ಒಬ್ಬ ವ್ಯಕ್ತಿ ಸಾಕ್ಷಿ ಜೊತೆ, ಸಾಕ್ಷಿ ಅಲ್ಲದವನ ಜೊತೆ ಅಥವಾ ಸಂಬಂಧಿಕರ ಜೊತೆ ವ್ಯಾಪಾರ-ವ್ಯವಹಾರ ಮಾಡೋಕೂ ಮುಂಚೆ ಏನು ಮಾಡಬೇಕು?

  • ಬೈಬಲ್‌ ಉದಾಹರಣೆಗಳು:

    • ಆದಿ 23:14-20—ಅಬ್ರಹಾಮ ಸಾರಳನ್ನ ಸಮಾಧಿ ಮಾಡೋದಕ್ಕೆ ಜಮೀನು ಮತ್ತು ಅದ್ರಲ್ಲಿರೋ ಗವಿಯನ್ನ ಖರೀದಿ ಮಾಡಿದಾಗ ಸಾಕ್ಷಿಗಳ ಮುಂದೆ ಖರೀದಿ ಮಾಡಿದ, ಮುಂದೆ ಯಾವುದೇ ತೊಂದ್ರೆ ಆಗಬಾರದು ಅಂತ ಹೀಗೆ ಮಾಡಿದ

    • ಯೆರೆ 32:9-12—ಪ್ರವಾದಿ ಯೆರೆಮೀಯ ತನ್ನ ದೊಡ್ಡಪ್ಪನ ಮಗನಿಂದ ಒಂದು ಹೊಲ ಕೊಂಡುಕೊಂಡಾಗ ದಾಖಲೆ ಪತ್ರ ಬರೆದ, ಅದ್ರ ನಕಲನ್ನ ಮಾಡಿಸಿದ, ಸಾಕ್ಷಿಗಳ ಮುಂದೆ ದುಡ್ಡು ಕೊಟ್ಟ

ದುಡ್ಡನ್ನ ಹೇಗೆ ಖರ್ಚು ಮಾಡಬೇಕು ಅನ್ನೋದ್ರ ಬಗ್ಗೆ ಯೋಚ್ನೆ ಮಾಡೋದು ಯಾಕೆ ಒಳ್ಳೇದು?

ಹಣಕಾಸಿನ ವಿಚಾರದಿಂದ ಸಭೆಲಿ ಒಡಕು ಆಗದೇ ಇರೋ ತರ ನೋಡ್ಕೊಳ್ಳೋದು ಯಾಕೆ ಮುಖ್ಯ?

ನಮ್ಮ ಹತ್ರ ಇರೋ ಹಣನ ಹೇಗೆ ಬಳಸಿದ್ರೆ ನಾವು ಖುಷಿಯಿಂದ ಇರಬಹುದು?