ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾತು ಕೇಳೋದು

ಮಾತು ಕೇಳೋದು

ಮಾತು ಕೇಳೋದು ಎಷ್ಟು ಮುಖ್ಯ?

ವಿಮೋ 19:5; ಧರ್ಮೋ 10:12, 13; ಪ್ರಸಂ 12:13; ಯಾಕೋ 1:22

  • ಬೈಬಲ್‌ ಉದಾಹರಣೆಗಳು:

    • 1ಸಮು 15:17-23—ರಾಜ ಸೌಲ ದೇವರ ಮಾತು ಕೇಳದೇ ಇದ್ದಾಗ ಪ್ರವಾದಿ ಸಮುವೇಲ ಗದರಿಸಿದ; ಆಮೇಲೆ ಮಾತು ಕೇಳೋದು ಎಷ್ಟು ಪ್ರಾಮುಖ್ಯ ಅಂತ ಹೇಳಿದ

    • ಇಬ್ರಿ 5:7-10—ಯೇಸು ಪರಿಪೂರ್ಣನಾಗಿದ್ದ, ದೇವರ ಮಗನಾಗಿದ್ದ, ಆದ್ರೂ ಜನ ಅವನಿಗೆ ತುಂಬಾ ಕಷ್ಟ ಕೊಟ್ಟಾಗ ಸಹಿಸ್ಕೊಂಡು ದೇವರ ಮಾತು ಕೇಳೋದನ್ನ ಕಲಿತನು

ಅಧಿಕಾರಿಗಳು ದೇವರ ಮಾತು ಮೀರೋಕೆ ಹೇಳಿದ್ರೆ ನಾವು ಏನು ಮಾಡಬೇಕು?

ಅಕಾ 5:29

  • ಬೈಬಲ್‌ ಉದಾಹರಣೆಗಳು:

    • ದಾನಿ 3:13-18—ಮೂವರು ಇಬ್ರಿಯ ಯುವಕರಿಗೆ ತಮ್ಮನ್ನ ಸಾಯಿಸ್ತಾರೆ ಅಂತ ಗೊತ್ತಿದ್ರೂ ರಾಜ ನೆಬೂಕದ್ನೆಚ್ಚರ ನಿಲ್ಲಿಸಿದ ಮೂರ್ತಿಗೆ ಅವರು ಅಡ್ಡ ಬೀಳಲಿಲ್ಲ

    • ಮತ್ತಾ 22:15-22—ಕ್ರೈಸ್ತರು ಸರ್ಕಾರದ ಮಾತು ಕೇಳ್ತಾರೆ, ಆದ್ರೆ ದೇವರ ಮಾತನ್ನ ಕೇಳಬೇಡಿ ಅಂತ ಹೇಳಿದ್ರೆ ಅದಕ್ಕೆ ವಿಧೇಯತೆ ತೋರಿಸಲ್ಲ ಅಂತ ಯೇಸು ಹೇಳಿದನು

    • ಅಕಾ 4:18-31—ಅಧಿಕಾರಿಗಳು ಅಪೊಸ್ತಲರಿಗೆ ಸಾರಬೇಡಿ ಅಂತ ಹೇಳಿದಾಗ ಅವರು ಧೈರ್ಯವಾಗಿ ಸಾರಿದ್ರು, ಅವರ ಮಾತು ಕೇಳ್ಲಿಲ್ಲ

ದೇವರ ಮಾತನ್ನ ನಾವು ಯಾವಾಗ್ಲೂ ಕೇಳಬೇಕಾದ್ರೆ ಏನು ಮಾಡಬೇಕು?

ಧರ್ಮೋ 6:1-5; ಕೀರ್ತ 112:1; 1ಯೋಹಾ 5:2, 3

ಇದನ್ನೂ ನೋಡಿ: ಕೀರ್ತ 119:11, 112; ರೋಮ 6:17

  • ಬೈಬಲ್‌ ಉದಾಹರಣೆಗಳು:

    • ಎಜ್ರ 7:7-10, ಪಾದಟಿಪ್ಪಣಿ—ನಂಬಿಗಸ್ತನಾಗಿದ್ದ ಪುರೋಹಿತ ಎಜ್ರ ನಿಯಮ ಪುಸ್ತಕದಲ್ಲಿರೋದನ್ನ ಪಾಲಿಸೋಕೆ ಮತ್ತು ಅದನ್ನ ಬೇರೆಯವ್ರಿಗೆ ಕಲಿಸೋಕೆ ತನ್ನ ಹೃದಯನ ಸಿದ್ಧ ಮಾಡ್ಕೊಂಡಿದ್ದ

    • ಯೋಹಾ 14:31—ಯೆಹೋವ ಹೇಳಿದ ತರನೇ ಯೇಸು ಮಾಡೋದಕ್ಕೆ ಕಾರಣ ಏನು ಅಂತ ಆತನೇ ಹೇಳಿದನು

ನಾವು ಯೆಹೋವ ಮತ್ತು ಯೇಸು ಮಾತನ್ನ ಕೇಳೋದಕ್ಕೆ ಕಾರಣ ಏನು?

ನಮಗೆ ನಂಬಿಕೆ ಇದೆ ಅಂತ ಮಾತು ಕೇಳೋದ್ರ ಮೂಲಕ ಹೇಗೆ ತೋರಿಸಬಹುದು?

ರೋಮ 1:5; 10:16, 17; ಯಾಕೋ 2:20-23

ಇದನ್ನೂ ನೋಡಿ: ಧರ್ಮೋ 9:23

  • ಬೈಬಲ್‌ ಉದಾಹರಣೆಗಳು:

    • ಆದಿ 6:9-22; ಇಬ್ರಿ 11:7—ನೋಹ ಹಡಗು ಕಟ್ಟೋವಾಗ ಯೆಹೋವ “ಹೇಳಿದ ಹಾಗೇ” ಮಾಡೋದ್ರ ಮೂಲಕ ತನಗೆ ದೇವರ ಮೇಲೆ ನಂಬಿಕೆ ಇದೆ ಅಂತ ತೋರಿಸಿದ

    • ಇಬ್ರಿ 11:8, 9, 17—ಅಬ್ರಹಾಮ ದೇವರು ಹೇಳಿದ ತರ ಊರ್‌ ಪಟ್ಟಣವನ್ನ ಬಿಟ್ಟ, ತನ್ನ ಸ್ವಂತ ಮಗನನ್ನ ಬಲಿ ಕೊಡೋಕೆ ರೆಡಿಯಾಗಿ ದೇವರ ಮೇಲೆ ನಂಬಿಕೆ ಇದೆ ಅಂತ ತೋರಿಸಿದ

ನಾವು ದೇವರ ಮಾತನ್ನ ಕೇಳಿದ್ರೆ ಯೆಹೋವ ನಮ್ಮನ್ನ ಹೇಗೆ ಆಶೀರ್ವದಿಸ್ತಾನೆ?

ಯೆರೆ 7:23; ಮತ್ತಾ 7:21; 1ಯೋಹಾ 3:22

  • ಬೈಬಲ್‌ ಉದಾಹರಣೆಗಳು:

    • ಯಾಜ 26:3-6—ಯಾರು ತನ್ನ ಮಾತನ್ನ ಕೇಳ್ತಾರೋ ಅವ್ರನ್ನ ಆಶೀರ್ವದಿಸಿ ಕಾಪಾಡ್ತೀನಿ ಅಂತ ಯೆಹೋವ ಮಾತು ಕೊಟ್ಟಿದ್ದಾನೆ

    • ಅರ 13:30, 31; 14:22-24—ಕಾಲೇಬ ದೇವರ ಮಾತನ್ನ ಕೇಳಿದ್ರಿಂದ ಯೆಹೋವ ಅವನನ್ನ ಆಶೀರ್ವದಿಸಿದನು

ದೇವರ ಮಾತು ಕೇಳಿಲ್ಲ ಅಂದ್ರೆ ಏನಾಗುತ್ತೆ?

ರೋಮ 5:19; 2ಥೆಸ 1:8, 9

  • ಬೈಬಲ್‌ ಉದಾಹರಣೆಗಳು:

    • ಆದಿ 2:16, 17; 3:17-19—ಆದಾಮ ಹವ್ವ ದೇವರ ಮಾತನ್ನ ಕೇಳದೇ ಇದ್ದಿದ್ರಿಂದ ಪರಿಪೂರ್ಣತೆ, ಶಾಶ್ವತ ಜೀವ ಮತ್ತು ಸುಂದರ ಪರದೈಸನ್ನ ಕಳ್ಕೊಂಡ್ರು

    • ಧರ್ಮೋ 18:18, 19; ಅಕಾ 3:12, 18, 22, 23—ಮೋಶೆಗಿಂತ ಒಬ್ಬ ದೊಡ್ಡ ಪ್ರವಾದಿ ಬರ್ತಾನೆ, ಅವನ ಮಾತನ್ನ ಕೇಳದವ್ರಿಗೆ ಶಿಕ್ಷೆ ಸಿಗುತ್ತೆ ಅಂತ ಯೆಹೋವ ಮುಂಚೆನೇ ಹೇಳಿದ್ದನು

    • ಯೂದ 6, 7—ಕೆಟ್ಟ ದೇವದೂತರು ಮತ್ತು ಸೊದೋಮ್‌ ಗೊಮೋರದ ಜನ ದೇವರ ಮಾತನ್ನ ಕೇಳಲಿಲ್ಲ, ಆತನ ಕೋಪಕ್ಕೆ ಗುರಿಯಾದ್ರು

ನಾವು ಯಾಕೆ ಯೇಸು ಕ್ರಿಸ್ತನ ಮಾತನ್ನ ಕೇಳಬೇಕು?

ಆದಿ 49:10; ಮತ್ತಾ 28:18

  • ಬೈಬಲ್‌ ಉದಾಹರಣೆ:

    • ಯೋಹಾ 12:46-48; 14:24—ಯಾರು ತನ್ನ ಮಾತನ್ನ ಕೇಳಲ್ವೋ ಅವ್ರಿಗೆ ನ್ಯಾಯತೀರ್ಪಾಗುತ್ತೆ ಅಂತ ಯೇಸು ಹೇಳಿದ್ದಾನೆ

ಕ್ರೈಸ್ತರು ಹಿರಿಯರ ಮಾತನ್ನ ಯಾಕೆ ಕೇಳ್ತಾರೆ?

ಹೆಂಡತಿ ಗಂಡನ ಮಾತನ್ನ ಯಾಕೆ ಕೇಳಬೇಕು?

ಮಕ್ಕಳು ಅಪ್ಪ-ಅಮ್ಮನ ಮಾತನ್ನ ಯಾಕೆ ಕೇಳಬೇಕು?

ಜ್ಞಾನೋ 23:22; ಎಫೆ 6:1; ಕೊಲೊ 3:20

  • ಬೈಬಲ್‌ ಉದಾಹರಣೆಗಳು:

    • ಆದಿ 37:3, 4, 8, 11-13, 18—ಯೋಸೇಫ ಯುವಕನಾಗಿದ್ದಾಗ ತನ್ನ ತಂದೆ ಮಾತನ್ನ ಕೇಳಿದ ಮತ್ತು ತನ್ನ ಅಣ್ಣಂದಿರು ಅವನನ್ನ ದ್ವೇಷಿಸ್ತಿದ್ರೂ ಅವ್ರನ್ನ ವಿಚಾರಿಸೋಕೆ ಹೋದ

    • ಲೂಕ 2:51—ಯೇಸು ಪರಿಪೂರ್ಣನಾಗಿದ್ರೂ ಅಪರಿಪೂರ್ಣರಾಗಿದ್ದ ಯೋಸೇಫ ಮತ್ತು ಮರಿಯಳ ಮಾತು ಕೇಳಿದನು

ಯಾರು ನೋಡಲಿ ಬಿಡಲಿ ನಾವು ಕೆಲ್ಸ ಮಾಡೋ ಜಾಗದಲ್ಲಿ ಬಾಸ್‌ಗೆ ವಿಧೇಯತೆ ತೋರಿಸೋದು ಒಳ್ಳೇದು ಯಾಕೆ?

ಕ್ರೈಸ್ತರು ಸರ್ಕಾರದ ಮಾತನ್ನ ಯಾಕೆ ಕೇಳ್ತಾರೆ?