ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವೃದ್ಧಾಪ್ಯ; ವಯಸ್ಸಾದವರು

ವೃದ್ಧಾಪ್ಯ; ವಯಸ್ಸಾದವರು

ನಮಗೆ ವಯಸ್ಸಾಗ್ತಾ ಹೋದ ಹಾಗೆ ಏನಾಗುತ್ತೆ?

ಕೀರ್ತ 71:9; 90:10

ಇದನ್ನೂ ನೋಡಿ: “ಸಾಂತ್ವನ, ಸಮಾಧಾನ—ಕಾಯಿಲೆ ಮತ್ತು ವಯಸ್ಸಾಗೋದ್ರಿಂದ ಕೆಲವ್ರಿಗೆ ಜಾಸ್ತಿ ಸೇವೆ ಮಾಡೋದಕ್ಕೆ ಆಗಲ್ಲ

  • ಬೈಬಲ್‌ ಉದಾಹರಣೆಗಳು:

    • ಪ್ರಸಂ 12:1-8—ವಯಸ್ಸಾಗ್ತಾ ಇದ್ದ ಹಾಗೆ ಏನೇನಾಗುತ್ತೆ ಅನ್ನೋದನ್ನ ಸೊಲೊಮೋನ ಅಲಂಕಾರಿಕವಾಗಿ ಹೇಳಿದ್ದಾನೆ. ಉದಾಹರಣೆಗೆ, ಕಣ್ಣು ಮಂಜಾಗುತ್ತೆ (“ಕಿಟಕಿಗಳಿಂದ ಹೊರಗೆ ನೋಡೋ ಸ್ತ್ರೀಯರಿಗೆ ಎಲ್ಲೆಲ್ಲೂ ಕತ್ತಲೆ ಕಾಣುತ್ತೆ”) ಮತ್ತು ಕಿವಿ ಮಂದ ಆಗುತ್ತೆ (“ಎಲ್ಲಾ ಗಾಯಕಿಯರು ಕುಗ್ಗಿ ಹೋಗ್ತಾರೆ”)

ವಯಸ್ಸಾದವ್ರಿಗೆ ಬೇರೆ ಬೇರೆ ತರ ಕಷ್ಟಗಳಿದ್ರೂ ಸಂತೋಷವಾಗಿ ಇರಬಹುದಾ?

2ಕೊರಿಂ 4:16-18; ಯಾಕೋ 1:2-4

  • ಬೈಬಲ್‌ ಉದಾಹರಣೆಗಳು:

    • 1ಸಮು 12:2, 23—ಸಮುವೇಲನಿಗೆ ವಯಸ್ಸಾಗಿದ್ರೂ ದೇವಜನ್ರಿಗೋಸ್ಕರ ಪ್ರಾರ್ಥನೆ ಮಾಡೋದನ್ನ ನಿಲ್ಲಿಸಲಿಲ್ಲ

    • 2ಸಮು 19:31-39—ಬರ್ಜಿಲೈ ಮಾಡಿದ ಸಹಾಯಕ್ಕೆ ದಾವೀದ ಋಣಿಯಾಗಿದ್ದ, ಇನ್ನೂ ಜಾಸ್ತಿ ಸೇವೆ ಮಾಡೋಕೆ ಹೇಳಿದಾಗ ಬರ್ಜಿಲೈ ದೀನತೆಯಿಂದ ತನ್ನಿಂದ ಆಗಲ್ಲ ಅಂತ ಹೇಳಿದ

    • ಕೀರ್ತ 71:9, 18—ತನಗೆ ವಯಸ್ಸಾಗೋಯ್ತು, ತನ್ನಿಂದ ಇನ್ನೇನೂ ಪ್ರಯೋಜನ ಇಲ್ಲ ಅಂತ ದಾವೀದನಿಗೆ ಅನಿಸ್ತು. ಆಗ ಅವನು ಮುಂದಿನ ಪೀಳಿಗೆಗೆ ದೇವರ ಬಗ್ಗೆ ಹೇಳೋಕೆ ಬಲ ಕೊಡು ಅಂತ ಆತನ ಹತ್ರ ಬೇಡ್ಕೊಂಡ

    • ಲೂಕ 2:36-38—ವಯಸ್ಸಾಗಿದ್ದ ಪ್ರವಾದಿನಿ ಅನ್ನ ತುಂಬ ವರ್ಷಗಳಿಂದ ಸೇವೆ ಮಾಡಿದ್ದಕ್ಕೆ, ದೇವರ ಮೇಲೆ ಭಕ್ತಿ ಇಟ್ಟಿದ್ದಕ್ಕೆ ಯೆಹೋವ ಅವಳನ್ನ ಆಶೀರ್ವದಿಸಿದನು

ವಯಸ್ಸಾದವರನ್ನ ಯೆಹೋವ ಮೂಲೆಗುಂಪು ಮಾಡಲ್ಲ ಅಂತ ನಮಗೆ ಹೇಗೆ ಗೊತ್ತು?

ಕೀರ್ತ 92:12-14; ಜ್ಞಾನೋ 16:31; 20:29; ಯೆಶಾ 46:4; ತೀತ 2:2-5

  • ಬೈಬಲ್‌ ಉದಾಹರಣೆಗಳು:

    • ಆದಿ 12:1-4—ಅಬ್ರಹಾಮನಿಗೆ 75 ವರ್ಷ ಆದಾಗ ದೇವರು ಅವನ ಜೀವನವನ್ನೇ ಬದಲಾಯಿಸೋ ಒಂದು ನೇಮಕ ಕೊಟ್ಟನು

    • ದಾನಿ 10:11, 19; 12:13—ದಾನಿಯೇಲನಿಗೆ 90 ವರ್ಷ ದಾಟಿತ್ತು, ಆಗ ಒಬ್ಬ ದೇವದೂತ ಅವನಿಗೆ ‘ನೀನು ಯೆಹೋವನಿಗೆ ತುಂಬ ಅಮೂಲ್ಯ, ನೀನು ನಿಯತ್ತಿಂದ ಮಾಡಿದ ಸೇವೆಗೆ ಆಶೀರ್ವಾದ ಸಿಗುತ್ತೆ’ ಅಂದ

    • ಲೂಕ 1:5-13—ವಯಸ್ಸಾಗಿದ್ರೂ ಜಕರೀಯ ಮತ್ತು ಎಲಿಸಬೆತ್‌ಗೆ ಮಗ ಹುಟ್ಟೋ ತರ ಮಾಡಿ ದೇವರು ಅವ್ರನ್ನ ಆಶೀರ್ವದಿಸಿದನು

    • ಲೂಕ 2:25-35—ಯೆಹೋವ ವಯಸ್ಸಾಗಿದ್ದ ಸಿಮೆಯೋನನಿಗೆ ಹಸುಗೂಸಾಗಿದ್ದ ಮೆಸ್ಸೀಯನನ್ನ ನೋಡೋ ಅವಕಾಶ ಕೊಟ್ಟನು; ಆಗ ಸಿಮೆಯೋನ ಮೆಸ್ಸೀಯನ ಬಗ್ಗೆ ಒಂದು ಭವಿಷ್ಯವಾಣಿ ಹೇಳಿದ

    • ಅಕಾ 7:23, 30-36—ಮೋಶೆಗೆ 80 ವರ್ಷ ಆದಾಗ ಯೆಹೋವ ಅವನನ್ನ ತನ್ನ ಜನರ ನಾಯಕನಾಗಿ ಮಾಡಿದನು

ವಯಸ್ಸಾದವರನ್ನ ನಾವು ಹೇಗೆ ನೋಡಬೇಕು?

ಯಾಜ 19:32; 1ತಿಮೊ 5:1

  • ಬೈಬಲ್‌ ಉದಾಹರಣೆಗಳು:

    • ಆದಿ 45:9-11; 47:12—ಯೋಸೇಫ ವಯಸ್ಸಾಗಿದ್ದ ತನ್ನ ಅಪ್ಪನನ್ನ ತನ್ನ ಹತ್ರ ಕರೆಸ್ಕೊಂಡು ಸಾಯೋ ತನಕ ಚೆನ್ನಾಗಿ ನೋಡ್ಕೊಂಡ

    • ರೂತ್‌ 1:14-17; 2:2, 17, 18, 23—ರೂತ್‌ ವಯಸ್ಸಾಗಿದ್ದ ತನ್ನ ಅತ್ತೆ ಹತ್ರ ಗೌರವದಿಂದ ಮಾತಾಡ್ತಿದ್ದಳು, ಅವಳನ್ನ ಚೆನ್ನಾಗಿ ನೋಡ್ಕೊಂಡಳು

    • ಯೋಹಾ 19:26, 27—ಯೇಸು ಕಂಬದಲ್ಲಿ ಪ್ರಾಣ ಬಿಡೋ ಮುಂಚೆ ತನ್ನ ಅಮ್ಮನನ್ನ ಅಪೊಸ್ತಲ ಯೋಹಾನನ ಕೈಗೆ ಒಪ್ಪಿಸಿದನು

ಸಭೆಯಲ್ಲಿರೋ ವಯಸ್ಸಾದ ಸಹೋದರ ಸಹೋದರಿಯರಿಗೆ ನಾವು ಯಾವ ರೀತಿಲಿ ಸಹಾಯ ಮಾಡಬಹುದು?