ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೇಲ್ವಿಚಾರಕರು

ಮೇಲ್ವಿಚಾರಕರು

ಹಿರಿಯರಲ್ಲಿ ಯಾವ ಅರ್ಹತೆಗಳು ಇರಬೇಕು?

ಹಿರಿಯರು ಇನ್ನೂ ಯಾವೆಲ್ಲಾ ವಿಷ್ಯಗಳಲ್ಲಿ ಮಾದರಿ ಆಗಿರಬೇಕು?

ಸಹಾಯಕ ಸೇವಕರಲ್ಲಿ ಯಾವ ಅರ್ಹತೆಗಳು ಇರಬೇಕು?

ಮೇಲ್ವಿಚಾರಕರನ್ನ ನೇಮಕ ಮಾಡೋಕೆ ಪವಿತ್ರಶಕ್ತಿ ಸಹಾಯ ಮಾಡುತ್ತೆ ಅಂತ ನಾವು ಹೇಗೆ ಹೇಳಬಹುದು?

ಅಕಾ 20:28

  • ಬೈಬಲ್‌ ಉದಾಹರಣೆಗಳು:

    • ಅಕಾ 13:2-5; 14:23—ಮೊದಲನೇ ಶತಮಾನದಲ್ಲಿ ಸಂಚರಣ ಮೇಲ್ವಿಚಾರಕರಾದ ಪೌಲ ಮತ್ತು ಬಾರ್ನಬ ಸಭೆಗಳಲ್ಲಿ ಹಿರಿಯರನ್ನ ನೇಮಿಸ್ತಿದ್ರು; ಇವತ್ತು ಅದೇ ತರ ಸಂಚರಣ ಮೇಲ್ವಿಚಾರಕರು ಹಿರಿಯರನ್ನ ನೇಮಕ ಮಾಡುವಾಗ ಪವಿತ್ರಶಕ್ತಿಯ ಸಹಾಯ ಕೇಳ್ತಾರೆ ಮತ್ತು ಬೈಬಲಲ್ಲಿ ಹೇಳಿರೋ ಅರ್ಹತೆಗಳಿದ್ಯಾ ಅಂತ ನೋಡ್ತಾರೆ

    • ತೀತ 1:1, 5—ತೀತ ಬೇರೆ ಬೇರೆ ಸಭೆಗಳಿಗೆ ಹೋಗಿ ಹಿರಿಯರನ್ನ ನೇಮಿಸಿದ

ಸಭೆ ಯಾರಿಗೆ ಸೇರಿದ್ದು? ಅದಕ್ಕೆ ದೇವರು ಕೊಟ್ಟಿರೋ ಬೆಲೆ ಏನು?

ಬೈಬಲ್‌ ಹಿರಿಯರನ್ನ ಸೇವಕರು, ಬೇರೆಯವ್ರ ಸೇವೆ ಮಾಡುವವರು ಅಂತ ಯಾಕೆ ಹೇಳುತ್ತೆ?

ಹಿರಿಯರು ಯಾಕೆ ದೀನರಾಗಿ ಇರಬೇಕು?

ಫಿಲಿ 1:1; 2:5-8; 1ಥೆಸ 2:6-8; 1ಪೇತ್ರ 5:1-3, 5, 6

  • ಬೈಬಲ್‌ ಉದಾಹರಣೆ:

    • ಅಕಾ 20:17, 31-38—ಪೌಲ ಎಫೆಸದ ಸಹೋದರರಿಗೋಸ್ಕರ ಏನೆಲ್ಲ ಮಾಡಿದ್ದಾನೆ ಅಂತ ಹೇಳಿದ, ಆಗ ಅಲ್ಲಿನ ಹಿರಿಯರು ಅವನ ತೋರಿಸಿದ ಪ್ರೀತಿ ಕಾಳಜಿಗೆ ಕೃತಜ್ಞತೆ ಹೇಳಿದ್ರು

“ನಂಬಿಗಸ್ತ, ವಿವೇಕಿ ಆದ ಆಳು” ಮಾರ್ಗದರ್ಶನ ಕೊಟ್ಟಾಗ ಹಿರಿಯರು ಏನು ಮಾಡ್ತಾರೆ?

ಹಿರಿಯರು ಮುಖ್ಯವಾಗಿ ಬೇರೆಯವ್ರಿಗೆ ಹೇಗೆ ಕಲಿಸ್ತಾರೆ?

1ತಿಮೊ 4:12; 1ಪೇತ್ರ 5:2, 3

  • ಬೈಬಲ್‌ ಉದಾಹರಣೆಗಳು:

    • ನೆಹೆ 5:14-16—ರಾಜ್ಯಪಾಲ ನೆಹೆಮೀಯನಿಗೆ ದೇವರ ಮೇಲೆ ಭಯ-ಭಕ್ತಿ ಇತ್ತು. ಅದಕ್ಕೆ ಅವನು ಜನರ ಮೇಲೆ ದಬ್ಬಾಳಿಕೆ ಮಾಡಲಿಲ್ಲ, ತನಗೆ ನ್ಯಾಯವಾಗಿ ಸಿಗಬೇಕಾಗಿದ್ದನ್ನೂ ತಗೊಳ್ಳಲಿಲ್ಲ

    • ಯೋಹಾ 13:12-15—ಯೇಸು ದೀನನಾಗಿದ್ದ, ತನ್ನ ಮಾದರಿ ತೋರಿಸಿ ಶಿಷ್ಯರಿಗೆ ಕಲಿಸಿದ

ಹಿರಿಯರು ಸಭೆಯಲ್ಲಿರೋ ಒಬ್ಬೊಬ್ಬರ ಬಗ್ಗೆನೂ ಹೇಗೆ ಕಾಳಜಿ ವಹಿಸ್ತಾರೆ?

ಯೆಹೋವ ದೇವರ ಸ್ನೇಹನ ಹಾಳು ಮಾಡ್ಕೊಂಡಿರೋರಿಗೆ ಹಿರಿಯರು ಹೇಗೆ ಸಹಾಯ ಮಾಡ್ತಾರೆ?

ಕಲಿಸೋ ವಿಷ್ಯದಲ್ಲಿ ಹಿರಿಯರಿಗಿರೋ ಜವಾಬ್ದಾರಿ ಏನು?

ಹಿರಿಯರು ಸಭೆಯನ್ನ ಶುದ್ಧವಾಗಿ ಇಡೋಕೆ ಎಲ್ಲಾ ಪ್ರಯತ್ನ ಮಾಡ್ತಾರೆ ಯಾಕೆ?

ಹಿರಿಯರು ಯಾರಿಗೆಲ್ಲಾ ತರಬೇತಿ ಕೊಡ್ತಾರೆ?

2ತಿಮೊ 2:1, 2

  • ಬೈಬಲ್‌ ಉದಾಹರಣೆಗಳು:

    • ಮತ್ತಾ 10:5-20—ಯೇಸು 12 ಅಪೊಸ್ತಲರನ್ನ ಸೇವೆಗೆ ಕಳಿಸೋ ಮುಂಚೆ ತರಬೇತಿ ಕೊಟ್ಟನು

    • ಲೂಕ 10:1-11—ಯೇಸು 70 ಶಿಷ್ಯರನ್ನ ಸೇವೆಗೆ ಕಳಿಸೋ ಮುಂಚೆ ಏನು ಮಾಡಬೇಕು, ಏನು ಮಾಡಬಾರದು ಅಂತ ಸ್ಪಷ್ಟವಾಗಿ ಹೇಳಿ ಕಳಿಸಿದನು

ಹಿರಿಯರು ತಮಗಿರೋ ಜವಾಬ್ದಾರಿಗಳನ್ನ ಚೆನ್ನಾಗಿ ಮಾಡೋಕೆ ಏನು ಮಾಡಬೇಕು?

1ಪೇತ್ರ 5:1, 7

ಇದನ್ನೂ ನೋಡಿ: ಜ್ಞಾನೋ 3:5, 6

  • ಬೈಬಲ್‌ ಉದಾಹರಣೆಗಳು:

    • 1ಅರ 3:9-12—ರಾಜ ಸೊಲೊಮೋನ ಜನ್ರಿಗೆ ನ್ಯಾಯವಾಗಿ ತೀರ್ಪು ಕೊಡೋಕೆ ಬೇಕಾದ ತಿಳುವಳಿಕೆ, ವಿವೇಕ ಕೊಡಪ್ಪಾ ಅಂತ ಯೆಹೋವನನ್ನ ಬೇಡ್ಕೊಂಡ

    • 2ಪೂರ್ವ 19:4-7—ಯೆಹೋಷಾಫಾಟ ಯೆಹೂದದ ಪಟ್ಟಣಗಳಿಗೆ ನ್ಯಾಯಾಧೀಶರನ್ನ ನೇಮಿಸಿದ ಮತ್ತು ಅವರು ತಮ್ಮ ಕೆಲಸ ಮಾಡೋಕೆ ಯೆಹೋವ ಸಹಾಯ ಮಾಡ್ತಾನೆ ಅಂತ ಹೇಳಿದ

ನಂಬಿಗಸ್ತರಾಗಿರೋ ಹಿರಿಯರನ್ನ ಸಭೆಯವರು ಹೇಗೆ ನೋಡಬೇಕು?

1ಥೆಸ 5:12, 13; 1ತಿಮೊ 5:17; ಇಬ್ರಿ 13:7, 17

ಇದನ್ನೂ ನೋಡಿ: ಎಫೆ 4:8, 11, 12

  • ಬೈಬಲ್‌ ಉದಾಹರಣೆಗಳು:

    • ಅಕಾ 20:37—ಎಫೆಸ ಸಭೆಯ ಹಿರಿಯರು ಪೌಲನಿಗೆ ಪ್ರೀತಿ ತೋರಿಸೋಕೆ ಹಿಂಜರಿಲಿಲ್ಲ

    • ಅಕಾ 28:14-16—ಪೌಲ ರೋಮಿಗೆ ಹೋಗ್ತಿದ್ದಾಗ ಆ ಪಟ್ಟಣದ ಸಹೋದರರು 65 ಕಿ.ಮೀ. ದೂರ ಪ್ರಯಾಣ ಮಾಡಿ ಅಪ್ಪಿಯ ಪೇಟೆ ತನಕ ಬಂದು ಅವನಿಗೆ ಧೈರ್ಯ ತುಂಬಿದ್ರು