ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಪ್ಪಅಮ್ಮ

ಅಪ್ಪಅಮ್ಮ

ಯೆಹೋವ ದೇವರು ಮದುವೆ ಅನ್ನೋ ಏರ್ಪಾಡನ್ನ ಮಾಡಿದ್ದಕ್ಕೆ ಕೆಲವು ಕಾರಣ ಏನು?

ಅಪ್ಪಅಮ್ಮ ಮಕ್ಕಳನ್ನ ಯಾವ ತರ ನೋಡಬೇಕು?

ಕೀರ್ತ 127:3-5; 128:3

ಇದನ್ನೂ ನೋಡಿ: “ಮಕ್ಕಳು; ಯುವ ಜನರು

  • ಬೈಬಲ್‌ ಉದಾಹರಣೆಗಳು:

    • ಆದಿ 33:4, 5—ಮಕ್ಕಳು ದೇವರು ಕೊಟ್ಟ ಉಡುಗೊರೆ ಅಂತ ಯಾಕೋಬ ನೆನಸಿದ

    • ವಿಮೋ 1:15, 16, 22; 2:1-4; 6:20—ಅಮ್ರಾಮ ಮತ್ತು ಯೋಕೆಬೆದ ಜೀವವನ್ನೇ ಒತ್ತೆ ಇಟ್ಟು ತಮ್ಮ ಮಗ ಮೋಶೆನ ಕಾಪಾಡಿದ್ರು

ಅಪ್ಪಅಮ್ಮಗೆ ಯಾವ್ಯಾವ ಜವಾಬ್ದಾರಿ ಇದೆ?

ಧರ್ಮೋ 6:6, 7; 11:18, 19; ಜ್ಞಾನೋ 22:6; 2ಕೊರಿಂ 12:14; 1ತಿಮೊ 5:8

  • ಬೈಬಲ್‌ ಉದಾಹರಣೆಗಳು:

    • 1ಸಮು 1:1-4—ಎಲ್ಕಾನ ಯೆಹೋವನನ್ನ ಆರಾಧನೆ ಮಾಡೋಕೆ ಇಡೀ ಕುಟುಂಬನ ಶೀಲೋಗೆ ಕರ್ಕೊಂಡು ಹೋಗ್ತಿದ್ದ, ಮಕ್ಕಳಲ್ಲಿ ಒಬ್ರನ್ನೂ ಮನೇಲಿ ಬಿಟ್ಟು ಹೋಗ್ತಿರಲಿಲ್ಲ

    • ಲೂಕ 2:39, 41—ಯೋಸೇಫ ಮತ್ತು ಮರಿಯ ಪ್ರತಿವರ್ಷ ಪಸ್ಕ ಹಬ್ಬ ಮಾಡೋಕೆ ಯೆರೂಸಲೇಮಿಗೆ ಮಕ್ಕಳನ್ನೂ ಕರ್ಕೊಂಡು ಹೋಗ್ತಿದ್ರು

ಯೆಹೋವನಿಗೆ ಇಷ್ಟ ಆಗೋ ತರ ಮಕ್ಕಳನ್ನ ಬೆಳೆಸಿದ್ರೆ ಯಾವ ಪ್ರಯೋಜನ ಸಿಗುತ್ತೆ?

ಜ್ಞಾನೋ 1:8, 9; 22:6

ಇದನ್ನೂ ನೋಡಿ: 2ತಿಮೊ 3:14, 15

  • ಬೈಬಲ್‌ ಉದಾಹರಣೆಗಳು:

    • 1ಸಮು 2:18-21, 26; 3:19—ಸಮುವೇಲನ ಹೆತ್ತವರು ಅವನನ್ನ ಪವಿತ್ರ ಡೇರೆಯಲ್ಲಿ ಸೇವೆ ಮಾಡೋಕೆ ಬಿಟ್ರು. ಅವನನ್ನ ನೋಡೋಕೆ ಪ್ರತಿವರ್ಷ ಹೋಗ್ತಿದ್ರು, ಅವನಿಗೆ ಬೇಕಾಗಿದ್ದನ್ನ ತಗೊಂಡು ಹೋಗಿ ಕೊಡ್ತಿದ್ರು; ಅವನು ಯೆಹೋವನನ್ನ ಪ್ರೀತಿಸೋ, ನಿಷ್ಠೆ ತೋರಿಸೋ ವ್ಯಕ್ತಿಯಾಗಿ ಬೆಳೆದ

    • ಲೂಕ 2:51, 52—ತನ್ನ ಅಪ್ಪಅಮ್ಮ ಅಪರಿಪೂರ್ಣರಾದ್ರೂ ಯೇಸು ಅವರ ಮಾತನ್ನ ಕೇಳ್ತಿದ್ದನು

ಹೆತ್ತವರಿಗೆ ತಮ್ಮ ಮಕ್ಕಳನ್ನ ಬೆಳೆಸೋಕೆ ಬೇಕಾದ ತರಬೇತಿ ಎಲ್ಲಿಂದ ಸಿಗುತ್ತೆ?

ಧರ್ಮೋ 6:4-9; ಎಫೆ 6:4; 2ತಿಮೊ 3:14-17

ಇದನ್ನೂ ನೋಡಿ: ಕೀರ್ತ 127:1; ಜ್ಞಾನೋ 16:3

  • ಬೈಬಲ್‌ ಉದಾಹರಣೆಗಳು:

    • ನ್ಯಾಯ 13:2-8 —ಅದ್ಭುತವಾಗಿ ಮಗ ಹುಟ್ತಾನೆ ಅಂತ ಗೊತ್ತಾದಾಗ ಆ ಮಗುನ ಹೇಗೆ ಬೆಳೆಸಬೇಕು ಅಂತ ಮಾನೋಹ ದೇವದೂತನ ಹತ್ರ ಕೇಳಿ ತಿಳ್ಕೊಂಡ

    • ಕೀರ್ತ 78:3-8—ಹೆತ್ತವರು ಬೈಬಲಿಂದ ಕಲಿಯೋ ವಿಷ್ಯಗಳನ್ನ ಮಕ್ಕಳಿಗೂ ಕಲಿಸಬೇಕು ಅಂತ ಯೆಹೋವ ಇಷ್ಟಪಡ್ತಾನೆ

ಯೆಹೋವನನ್ನ ಪ್ರೀತಿಸೋ ಕುಟಂಬದಲ್ಲಿ ಬೆಳೆದ್ರೂ ಕೆಲವು ಮಕ್ಕಳು ಯೆಹೋವನಿಂದ ಯಾಕೆ ದೂರ ಹೋಗ್ತಾರೆ?

ಯೆಹೆ 18:1-13, 20

  • ಬೈಬಲ್‌ ಉದಾಹರಣೆಗಳು:

    • ಆದಿ 6:1-5; ಯೂದ 6—ಎಷ್ಟೋ ದೇವದೂತರು ಯೆಹೋವನ ಜೊತೆ ತುಂಬ ವರ್ಷ ಸ್ವರ್ಗದಲ್ಲಿದ್ರೂ ಆತನ ವಿರುದ್ಧ ದಂಗೆ ಎದ್ರು

    • 1ಸಮು 8:1-3—ಸಮುವೇಲ ನೀತಿ-ನಿಯತ್ತಿನ ಪ್ರವಾದಿ ಆಗಿದ್ರೂ ಅವನ ಮಕ್ಕಳು ಕೆಟ್ಟವರಾದ್ರು, ಭ್ರಷ್ಟರಾದ್ರು

ಅಪ್ಪಅಮ್ಮ ಮಕ್ಕಳಿಗೆ ಯಾವಾಗಿಂದ ಯೆಹೋವನ ಬಗ್ಗೆ ಕಲಿಸೋಕೆ ಶುರು ಮಾಡಬೇಕು?

2ತಿಮೊ 3:15

  • ಬೈಬಲ್‌ ಉದಾಹರಣೆಗಳು:

    • ಧರ್ಮೋ 29:10-12, 29; 31:12; ಎಜ್ರ 10:1—ಇಸ್ರಾಯೇಲ್ಯರು ಯೆಹೋವನ ಬಗ್ಗೆ ಕಲಿಯೋಕೆ ಸೇರಿಬರ್ತಿದ್ದಾಗ ತಮ್ಮ ಮಕ್ಕಳನ್ನೂ ಕರ್ಕೊಂಡು ಬರ್ತಿದ್ರು

    • ಲೂಕ 2:41-52—ಯೋಸೇಫ ಮತ್ತು ಮರಿಯ ಯೇಸುನೂ ಸೇರಿಸಿ ತಮ್ಮ ಎಲ್ಲಾ ಮಕ್ಕಳನ್ನ ಕರ್ಕೊಂಡು ಪಸ್ಕ ಹಬ್ಬ ಮಾಡೋಕೆ ಯೆರೂಸಲೇಮಿಗೆ ಹೋಗ್ತಿದ್ರು

ಅಪ್ಪಅಮ್ಮ ತಮ್ಮ ಮಕ್ಕಳನ್ನ ಕೆಲವು ಅಪಾಯಗಳಿಂದ ಯಾರ ತರ ಕಾಪಾಡಬಹುದು?

  • ಬೈಬಲ್‌ ಉದಾಹರಣೆಗಳು:

    • ವಿಮೋ 19:4; ಧರ್ಮೋ 32:11, 12—ತನ್ನ ಮರಿಗಳನ್ನ ರೆಕ್ಕೆಗಳ ಮೇಲೆ ಹೊತ್ಕೊಂಡು ಹೋಗೋ, ಅದನ್ನ ಕಾಪಾಡಿ, ಜಾಗ್ರತೆಯಿಂದ ನೋಡ್ಕೊಳ್ಳೋ ಹದ್ದಿಗೆ ಯೆಹೋವ ತನ್ನನ್ನ ಹೋಲಿಸ್ಕೊಂಡಿದ್ದಾನೆ

    • ಯೆಶಾ 49:15—ಹಾಲು ಕುಡಿಯೋ ಮಗುನ ತಾಯಿ ಎಷ್ಟು ಪ್ರೀತಿಸ್ತಾಳೋ ಅದಕ್ಕಿಂತ ಹೆಚ್ಚಾಗಿ ಯೆಹೋವ ತನ್ನ ಜನರನ್ನ ಪ್ರೀತಿಸ್ತಾನೆ, ಕಾಪಾಡ್ತಾನೆ ಅಂತ ಮಾತು ಕೊಟ್ಟಿದ್ದಾನೆ

    • ಮತ್ತಾ 2:1-16—ಹೆರೋದ ಕಳಿಸಿದ ಜ್ಯೋತಿಷಿಗಳಿಗೆ ಯೇಸುನ ಕಂಡುಹಿಡಿಯೋಕೆ ಸೈತಾನ ಸಹಾಯ ಮಾಡಿದ, ಯೇಸುನ ಕೊಲ್ಲಬೇಕನ್ನೋದು ಸೈತಾನನ ಉಪಾಯ ಆಗಿತ್ತು. ಆದ್ರೆ ಯೆಹೋವ ಯೋಸೇಫನಿಗೆ ಹೆಂಡ್ತಿ, ಮಗುನ ಕರ್ಕೊಂಡು ಈಜಿಪ್ಟಿಗೆ ಹೋಗೋಕೆ ಹೇಳಿದನು, ಹೀಗೆ ಯೇಸುನ ಕಾಪಾಡಿದನು

    • ಮತ್ತಾ 23:37—ಕೋಳಿ ತನ್ನ ಮರಿಗಳನ್ನ ರೆಕ್ಕೆ ಕೆಳಗೆ ಇಟ್ಟು ಕಾಪಾಡೋ ತರ ತನ್ನ ಜನ್ರನ್ನ ಕಾಪಾಡಬೇಕು ಅನ್ನೋದು ತನ್ನ ಆಸೆ ಅಂತ ಯೇಸು ಹೇಳಿದನು

ಹೆತ್ತವರು ಮಕ್ಕಳ ಹತ್ರ ಸೆಕ್ಸ್‌ ಬಗ್ಗೆ ಮಾತಾಡಬೇಕು ಯಾಕೆ?

  • ಬೈಬಲ್‌ ಉದಾಹರಣೆಗಳು:

    • ಯಾಜ 15:2, 3, 16, 18, 19; ಧರ್ಮೋ 31:10-13—ನಿಯಮ ಪುಸ್ತಕದಲ್ಲಿ ಲೈಂಗಿಕ ವಿಷ್ಯಗಳ ಬಗ್ಗೆ ದೇವರು ಕೊಟ್ಟಿದ್ದ ಸ್ಪಷ್ಟವಾದ ನಿಯಮಗಳನ್ನ ಓದುವಾಗ ಮಕ್ಕಳೂ ಅದನ್ನ ಕೇಳಿಸ್ಕೊಬೇಕು ಅಂತ ಯೆಹೋವ ಹೇಳಿದನು

    • ಕೀರ್ತ 139:13-16—ಜನನಾಂಗಗಳಿರೋ ಮಾನವನ ಇಡೀ ದೇಹವನ್ನ ಯೆಹೋವ ದೇವರು ಎಷ್ಟು ಚೆನ್ನಾಗಿ ಸೃಷ್ಟಿ ಮಾಡಿದ್ದಾನೆ ಅಂತ ದಾವೀದ ಆತನನ್ನ ಹಾಡಿ ಹೊಗಳಿದ್ದಾನೆ

    • ಜ್ಞಾನೋ 2:10-15—ಕಾಮಾದಾಸೆಯಿಂದ ನಡ್ಕೊಳ್ಳೋ ಜನ್ರಿಂದ ನಮ್ಮನ್ನ ಕಾಪಾಡ್ಕೊಳ್ಳೋಕೆ ದೇವರು ನಮಗೆ ಬೇಕಾದ ಜ್ಞಾನ, ವಿವೇಕ ಕೊಟ್ಟಿದ್ದಾನೆ

ಅಪ್ಪಅಮ್ಮ ಮಕ್ಕಳಿಗೆ ಪ್ರೀತಿಯಿಂದ ಶಿಸ್ತು ಕೊಡಬೇಕು ಯಾಕೆ?

ಜ್ಞಾನೋ 13:24; 29:17; ಯೆರೆ 30:11; ಎಫೆ 6:4

ಇದನ್ನೂ ನೋಡಿ: ಕೀರ್ತ 25:8; 145:9; ಕೊಲೊ 3:21

  • ಬೈಬಲ್‌ ಉದಾಹರಣೆಗಳು:

    • ಕೀರ್ತ 32:1-5—ದಾವೀದ ಪಾಪ ಮಾಡಿದಾಗ ಯೆಹೋವ ಶಿಕ್ಷೆ ಕೊಟ್ಟನು, ಆದ್ರೆ ಪಶ್ಚಾತ್ತಾಪ ಪಟ್ಟು ತಿದ್ಕೊಂಡ್ರೆ ದೇವರು ಕ್ಷಮಿಸ್ತಾನೆ ಅಂತ ಗೊತ್ತಾದಾಗ ಅವನಿಗೆ ನೆಮ್ಮದಿ ಆಯ್ತು

    • ಯೋನ 4:1-11—ಯೋನ ಯೆಹೋವನ ಹತ್ರ ಕೋಪದಿಂದ, ಅಗೌರವದಿಂದ ಮಾತಾಡಿದ. ಆದ್ರೆ ಯೆಹೋವ ತಾಳ್ಮೆ ತೋರಿಸಿದಾಗ ದೇವರು ಕರುಣಾಮಯಿ ಅಂತ ಅವನು ತಿಳ್ಕೊಂಡ

ಹೆತ್ತವರು ಪ್ರೀತಿ ಇರೋದ್ರಿಂದಾನೇ ಮಕ್ಕಳಿಗೆ ಶಿಸ್ತು ಕೊಡ್ತಾರೆ ಅಂತ ನಾವು ಯಾಕೆ ಹೇಳಬಹುದು?