ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಿಂಸೆ

ಹಿಂಸೆ

ಕ್ರೈಸ್ತರಿಗೆ ಹಿಂಸೆ ಬಂದೇ ಬರುತ್ತೆ ಅಂತ ಗೊತ್ತು ಯಾಕೆ?

ನಮಗೆ ಹಿಂಸೆ ಬಂದಾಗ ಬಲಕ್ಕಾಗಿ ಯೆಹೋವನ ಹತ್ರ ಕೇಳಬೇಕು ಯಾಕೆ?

ಕೀರ್ತ 55:22; 2ಕೊರಿಂ 12:9, 10; 2ತಿಮೊ 4:16-18; ಇಬ್ರಿ 13:6

  • ಬೈಬಲ್‌ ಉದಾಹರಣೆಗಳು:

    • 1ಅರ 19:1-18—ಪ್ರವಾದಿ ಎಲೀಯನಿಗೆ ಹಿಂಸೆ ಬಂದಾಗ ಅವನು ತನ್ನ ಭಾವನೆಗಳನ್ನೆಲ್ಲಾ ಯೆಹೋವ ದೇವರ ಹತ್ರ ಹೇಳ್ಕೊಂಡ, ಯೆಹೋವ ಅವನಿಗೆ ಸಾಂತ್ವನ ಕೊಟ್ಟು ಪ್ರೋತ್ಸಾಹ ಮಾಡಿದನು

    • ಅಕಾ 7:9-15—ಯೋಸೇಫನ ಅಣ್ಣಂದಿರು ಅವನಿಗೆ ತುಂಬಾ ಹಿಂಸೆ ಮಾಡಿದ್ರೂ ಯೆಹೋವ ಯಾವಾಗ್ಲೂ ಅವನ ಜೊತೆ ಇದ್ದು ಕಾಪಾಡಿದನು ಮತ್ತು ಕೊನೆಗೆ ಅವನ ಕುಟುಂಬವನ್ನ ಯೋಸೇಫನೇ ಕಾಪಾಡೋ ತರ ಮಾಡಿದನು

ಕೆಲವು ರೀತಿಯ ಹಿಂಸೆಗಳು ಯಾವುವು?

ಬಯ್ಯೋದು, ಅವಮಾನ, ಗೇಲಿ

2ಪೂರ್ವ 36:16; ಮತ್ತಾ 5:11; ಅಕಾ 19:9; 1ಪೇತ್ರ 4:4

  • ಬೈಬಲ್‌ ಉದಾಹರಣೆಗಳು:

    • 2ಅರ 18:17-35—ಅಶ್ಶೂರ್ಯರ ರಾಜನ ಪ್ರತಿನಿಧಿಯಾದ ರಬ್ಷಾಕೆ ಯೆಹೋವನನ್ನ ಮತ್ತು ಯೆರೂಸಲೇಮಿನ ಜನ್ರನ್ನ ಗೇಲಿ ಮಾಡಿದ

    • ಲೂಕ 22:63-65; 23:35-37—ಯೇಸುವನ್ನ ಬಂಧಿಸಿದಾಗ ಮತ್ತು ಕಂಬಕ್ಕೆ ಹಾಕಿದಾಗ ಅವನಿಗೆ ಹಿಂಸೆ ಕೊಟ್ಟವರು ಅವನನ್ನ ತುಂಬಾ ಗೇಲಿ ಮಾಡಿದ್ರು, ಹೊಡೆದ್ರು

ಸಂಬಂಧಿಕರಿಂದ ವಿರೋಧ

ಬಂಧನ, ಅಧಿಕಾರಿಗಳ ಮುಂದೆ ವಿಚಾರಣೆ

ಹೊಡೆತ

ಜನರ ದಾಳಿ

ಕೊಲೆ

ಕ್ರೈಸ್ತರಿಗೆ ಹಿಂಸೆ ಬಂದಾಗ ಅವರು ಏನು ಮಾಡಬೇಕು?

ಮತ್ತಾ 5:44; ಅಕಾ 16:25; 1ಕೊರಿಂ 4:12, 13; 1ಪೇತ್ರ 2:23

  • ಬೈಬಲ್‌ ಉದಾಹರಣೆಗಳು:

    • ಅಕಾ 7:57–8:1—ಜನರ ಗುಂಪೊಂದು ಸ್ತೆಫನನನ್ನ ಕಲ್ಲೊಡೆದು ಸಾಯಿಸೋಕೆ ಮುಗಿಬಿದ್ದಾಗ ಅವ್ರನ್ನ ಕ್ಷಮಿಸು ಅಂತ ಸ್ತೆಫನ ಪ್ರಾರ್ಥಿಸಿದ, ಆ ಗುಂಪಿನಲ್ಲಿ ತಾರ್ಸದ ಸೌಲ ಕೂಡ ಇದ್ದ

    • ಅಕಾ 16:22-34—ತನ್ನನ್ನ ಹೊಡೆದು, ಬೇಡಿ ಹಾಕಿದ್ರೂ ಅಪೊಸ್ತಲ ಪೌಲ ಜೈಲಿನ ಅಧಿಕಾರಿಗೆ ದಯೆ ತೋರಿಸಿದ, ಇದ್ರಿಂದ ಆ ಅಧಿಕಾರಿ ಮತ್ತು ಅವನ ಕುಟುಂಬದವರು ಕ್ರೈಸ್ತರಾದ್ರು

ಒಂದನೇ ಶತಮಾನದಲ್ಲಿ ಕೆಲವು ಕ್ರೈಸ್ತರಿಗೆ ಏನಾಯ್ತು?

ನಮಗೆ ಹಿಂಸೆ ಬಂದಾಗ ನಮ್ಮ ಮನೋಭಾವ ಹೇಗಿರಬೇಕು?

ಹಿಂಸೆ ಬಂದಾಗ ದೇವರು ಕೊಟ್ಟಿರೋ ನಿರೀಕ್ಷೆ ಬಗ್ಗೆ ಯೋಚ್ನೆ ಮಾಡೋದ್ರಿಂದ ಹೇಗೆ ನಮಗೆ ಬಲ ಸಿಗುತ್ತೆ?

ಹಿಂಸೆ ಕೊಡೋರು ನಮ್ಮನ್ನ ಅವಮಾನ ಮಾಡೋದಕ್ಕೆ, ಭಯ ಪಡಿಸೋಕೆ ಅಥವಾ ಕುಗ್ಗಿಸೋಕೆ ಬಿಡಬಾರದು ಯಾಕೆ? ಆಗ ನಾವು ಯೆಹೋವನನ್ನ ಆರಾಧನೆ ಮಾಡೋದನ್ನ ನಿಲ್ಲಿಸಬಾರದು ಯಾಕೆ?

ಕೀರ್ತ 56:1-4; ಅಕಾ 4:18-20; 2ತಿಮೊ 1:8, 12

  • ಬೈಬಲ್‌ ಉದಾಹರಣೆಗಳು:

    • 2ಪೂರ್ವ 32:1-22—ರಾಜ ಸನ್ಹೇರೀಬ ಯೆರೂಸಲೇಮಿನ ಮೇಲೆ ಆಕ್ರಮಣ ಮಾಡೋಕೆ ಒಂದು ದೊಡ್ಡ ಸೈನ್ಯದ ಜೊತೆ ಬಂದಾಗ ನಂಬಿಗಸ್ತ ರಾಜ ಹಿಜ್ಕೀಯ ಸಹಾಯಕ್ಕಾಗಿ ಯೆಹೋವನ ಕಡೆ ನೋಡಿದ, ಜನ್ರನ್ನ ಬಲಪಡಿಸಿದ; ಅದಕ್ಕೆ ಯೆಹೋವ ಅವನನ್ನ ಆಶೀರ್ವದಿಸಿದನು

    • ಇಬ್ರಿ 12:1-3—ಯೇಸುಗೆ ಹಿಂಸೆ ಕೊಟ್ಟವರು ಅವನನ್ನ ಅವಮಾನ ಮಾಡಿದ್ರು, ಆದ್ರೆ ಯೇಸು ಕುಗ್ಗಿ ಹೋಗಲಿಲ್ಲ

ನಮಗೆ ಹಿಂಸೆ ಬರೋದ್ರಿಂದ ಯಾವ ಪ್ರಯೋಜನ ಸಿಗುತ್ತೆ?

ಹಿಂಸೆನಾ ನಾವು ತಾಳ್ಕೊಂಡ್ರೆ ಯೆಹೋವನಿಗೆ ಖುಷಿ ಆಗುತ್ತೆ, ಆತನ ಹೆಸ್ರಿಗೆ ಗೌರವ ಬರುತ್ತೆ

1ಪೇತ್ರ 2:19, 20; 4:12-16

  • ಬೈಬಲ್‌ ಉದಾಹರಣೆಗಳು:

    • ಯೋಬ 1:6-22; 2:1-10—ಯೋಬನಿಗೆ ತನ್ನ ಕಷ್ಟಗಳಿಗೆ ಸೈತಾನ ಕಾರಣ ಅಂತ ಗೊತ್ತಿಲ್ಲದೇ ಇದ್ರೂ ಯೆಹೋವನಿಗೆ ನಿಯತ್ತಾಗಿದ್ದ, ಇದ್ರಿಂದ ಸೈತಾನ ಸುಳ್ಳುಗಾರ ಅಂತ ತೋರಿಸಿದ, ಯೆಹೋವನಿಗೆ ಗೌರವ ತಂದ

    • ದಾನಿ 1:6, 7; 3:8-30—ಹನನ್ಯ, ಮೀಷಾಯೇಲ, ಅಜರ್ಯ (ಶದ್ರಕ್‌, ಮೇಶಕ್‌, ಅಬೇದ್‌ನೆಗೋ) ಯೆಹೋವನಿಗೆ ಅವಿಧೇಯರಾಗೋದಕ್ಕಿಂತ ಸಾಯೋದೇ ಮೇಲು ಅಂತ ನೆನಸಿದ್ರು, ಇದ್ರಿಂದ ರಾಜ ನೆಬೂಕದ್ನೆಚ್ಚರ ಯೆಹೋವನೊಬ್ಬನೇ ದೇವರು ಅಂತ ಒಪ್ಕೊಂಡ

ನಮಗೆ ಬರೋ ಹಿಂಸೆ, ಜನರು ಯೆಹೋವನ ಬಗ್ಗೆ ತಿಳ್ಕೊಳ್ಳೋಕೆ ದಾರಿ ಮಾಡ್ಕೊಡುತ್ತೆ

ಲೂಕ 21:12, 13; ಅಕಾ 8:1, 4

  • ಬೈಬಲ್‌ ಉದಾಹರಣೆಗಳು:

    • ಅಕಾ 11:19-21—ಕ್ರೈಸ್ತರಿಗೆ ಹಿಂಸೆ ಬಂದಾಗ ಅವರು ಎಲ್ಲೆಲ್ಲಾ ಚದುರಿ ಹೋದ್ರೋ ಅಲ್ಲೆಲ್ಲಾ ಸಿಹಿಸುದ್ದಿ ಹಬ್ತು

    • ಫಿಲಿ 1:12, 13—ಅಪೊಸ್ತಲ ಪೌಲನನ್ನ ಜೈಲಿಗೆ ಹಾಕಿದಾಗ ಅವನಿಗೆ ಖುಷಿ ಆಯ್ತು, ಯಾಕಂದ್ರೆ ಇದ್ರಿಂದ ತುಂಬಾ ಜನ ಸಿಹಿಸುದ್ದಿ ಕೇಳಿಸ್ಕೊಳ್ಳೋದಕ್ಕೆ ಆಯ್ತು

ಹಿಂಸೆ ಬಂದಾಗ ನಾವು ತಾಳ್ಕೊಂಡ್ರೆ ಅದ್ರಿಂದ ನಮ್ಮ ಸಹೋದರ ಸಹೋದರಿಯರಿಗೆ ಬಲ ಸಿಗುತ್ತೆ

ಯೆಹೋವನ ಆರಾಧಕರಿಗೆ ಹಿಂಸೆ ಕೊಡೋದ್ರಲ್ಲಿ ಹೆಚ್ಚಾಗಿ ಯಾರ ಕೈವಾಡ ಇರುತ್ತೆ?

ಯೆರೆ 26:11; ಮಾರ್ಕ 3:6; ಯೋಹಾ 11:47, 48, 53; ಅಕಾ 25:1-3

  • ಬೈಬಲ್‌ ಉದಾಹರಣೆಗಳು:

    • ಅಕಾ 19:24-29—ಎಫೆಸದಲ್ಲಿ ಕ್ರೈಸ್ತರು ಸಿಹಿಸುದ್ದಿ ಸಾರ್ತಿರೋದ್ರಿಂದ ಅರ್ತೇಮಿ ದೇವಿಯ ಮೂರ್ತಿಗಳನ್ನ ಮಾಡ್ತಿದ್ದ ಅಕ್ಕಸಾಲಿಗರಿಗೆ ನಷ್ಟ ಆಗುತ್ತೆ ಅಂತ ಅಂದ್ಕೊಂಡು ಆ ಅಕ್ಕಸಾಲಿಗರು ಕ್ರೈಸ್ತರಿಗೆ ಹಿಂಸೆ ಕೊಟ್ರು

    • ಗಲಾ 1:13, 14—ಪೌಲ (ಸೌಲ) ಕ್ರೈಸ್ತನಾಗೋದಕ್ಕೂ ಮುಂಚೆ ಯೆಹೂದಿ ಮತದಲ್ಲಿದ್ದಾಗ ದೇವರ ಸಭೆಗೆ ತುಂಬಾ ಹಿಂಸೆ ಕೊಡ್ತಿದ್ದ

ಯೆಹೋವನ ಆರಾಧಕರಿಗೆ ಹಿಂಸೆ ಬರೋದಕ್ಕೆ ಮುಖ್ಯ ಕಾರಣ ಯಾರು?