ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಾರ್ಥನೆ

ಪ್ರಾರ್ಥನೆ

ನಾವು ಮಾಡೋ ಪ್ರಾರ್ಥನೆಗಳನ್ನ ಯೆಹೋವ ಕೇಳಿಸ್ಕೊಳ್ತಾನೆ ಮತ್ತು ಉತ್ರ ಕೊಡ್ತಾನೆ ಅಂತ ಹೇಗೆ ಹೇಳಬಹುದು?

ಕೀರ್ತ 65:2; 145:18; 1ಯೋಹಾ 5:14

ಇದನ್ನೂ ನೋಡಿ: ಕೀರ್ತ 66:19; ಅಕಾ 10:31; ಇಬ್ರಿ 5:7

  • ಬೈಬಲ್‌ ಉದಾಹರಣೆಗಳು:

    • 1ಅರ 18:36-38—ಪ್ರವಾದಿ ಎಲೀಯ ಕರ್ಮೆಲ್‌ ಬೆಟ್ಟದಲ್ಲಿ ಬಾಳನ ಪ್ರವಾದಿಗಳಿಗೆ ಸವಾಲು ಹಾಕಿದ. ಅವನು ಯೆಹೋವನಿಗೆ ಪ್ರಾರ್ಥನೆ ಮಾಡಿದ. ಅದಕ್ಕೆ ದೇವರು ತಟ್ಟಂತ ಉತ್ರನೂ ಕೊಟ್ಟನು

    • ಮತ್ತಾ 7:7-11—ಯೆಹೋವ ತುಂಬ ಪ್ರೀತಿ ಇರೋ ಅಪ್ಪ, ನಮ್ಮ ಪ್ರಾರ್ಥನೆಗಳನ್ನ ಕೇಳಿಸ್ಕೊಳ್ತಾನೆ, ಹಾಗಾಗಿ ಯಾವಾಗ್ಲೂ ಆತನಿಗೆ ಪ್ರಾರ್ಥನೆ ಮಾಡಬೇಕು ಅಂತ ಯೇಸು ಕಲಿಸಿದನು

ನಾವು ಯಾರಿಗೆ ಮಾತ್ರ ಪ್ರಾರ್ಥನೆ ಮಾಡಬೇಕು?

ನಾವು ಯಾರ ಮೂಲಕ ಪ್ರಾರ್ಥನೆ ಮಾಡಬೇಕು?

ಯೆಹೋವ ಯಾರ ಪ್ರಾರ್ಥನೆಗಳನ್ನ ಕೇಳ್ತಾನೆ?

ಯೆಹೋವ ಯಾರ ಪ್ರಾರ್ಥನೆಗಳನ್ನ ಕೇಳಲ್ಲ?

ಜ್ಞಾನೋ 15:29; 28:9; ಯೆಶಾ 1:15; ಮೀಕ 3:4; ಯಾಕೋ 4:3; 1ಪೇತ್ರ 3:7

  • ಬೈಬಲ್‌ ಉದಾಹರಣೆಗಳು:

    • ಯೆಹೋ 24:9, 10—ದೇವರು ಬಿಳಾಮ ಬೇಡ್ಕೊಂಡಿದ್ದನ್ನ ಮಾಡಲಿಲ್ಲ. ಯಾಕಂದ್ರೆ ಅವನು ದೇವರಿಗೆ ಇಷ್ಟ ಇಲ್ಲದ್ದನ್ನ ಮಾಡೋಕೆ ಹೊರಟಿದ್ದ

    • ಯೆಶಾ 1:15-17—ದೇವರು ತನ್ನ ಜನರ ಪ್ರಾರ್ಥನೆಗಳನ್ನ ಕೇಳಿಸ್ಕೊಳ್ಳಲಿಲ್ಲ. ಯಾಕಂದ್ರೆ ಅವರು ಬೇರೆಯವ್ರ ಸಾವಿಗೆ ಕಾರಣ ಆದ್ರು, ಮನಸಾರೆ ಯೆಹೋವನನ್ನ ಆರಾಧನೆ ಮಾಡ್ತಿರಲಿಲ್ಲ

ಪ್ರಾರ್ಥನೆ ಕೊನೇಲಿ ನಾವು ಏನು ಹೇಳಬೇಕು? ಯಾಕೆ?

ನಾವು ಪ್ರಾರ್ಥನೆಯನ್ನ ಇಂಥದ್ದೇ ಭಂಗಿಯಲ್ಲಿ ಮಾಡಬೇಕು ಅಂತ ಬೈಬಲ್‌ ಹೇಳುತ್ತಾ?

ನಾವು ಆರಾಧನೆಗೆ ಸೇರಿಬಂದಾಗ ಯಾವ ವಿಷ್ಯಗಳಿಗೋಸ್ಕರ ಪ್ರಾರ್ಥನೆ ಮಾಡಬಹುದು?

ಅಕಾ 4:23, 24; 12:5

  • ಬೈಬಲ್‌ ಉದಾಹರಣೆಗಳು:

    • 1ಪೂರ್ವ 29:10-19—ದೇವರ ಆಲಯ ಕಟ್ಟೋಕೆ ಜನ ಕಾಣಿಕೆಗಳನ್ನ ಕೊಡ್ತಿದ್ದಾಗ ದಾವೀದ ಅವ್ರೆಲ್ಲರ ಮುಂದೆ ಪ್ರಾರ್ಥನೆ ಮಾಡಿದ

    • ಅಕಾ 1:12-14—ಯೇಸುವಿನ ಅಪೊಸ್ತಲರು, ಆತನ ಅಮ್ಮ ಮರಿಯ ಮತ್ತು ತಮ್ಮಂದಿರು, ಇನ್ನೂ ಬೇರೆ ಸ್ತ್ರೀಯರು ಯೆರೂಸಲೇಮಲ್ಲಿ ಒಂದು ಮನೆಯ ಮೇಲಂತಸ್ತಿನ ಕೋಣೆಯಲ್ಲಿ ಸೇರಿಬಂದು ಪ್ರಾರ್ಥನೆ ಮಾಡಿದ್ರು

ನಾವು ಪ್ರಾರ್ಥನೆ ಮಾಡುವಾಗ ಯಾಕೆ ಕೊಚ್ಕೊಳ್ಳಲ್ಲ? ಬೇರೆವ್ರನ್ನ ಮೆಚ್ಚಿಸೋಕೆ ಯಾಕೆ ಪ್ರಯತ್ನ ಮಾಡಲ್ಲ?

ಊಟಕ್ಕೆ ಮುಂಚೆ ಯಾಕೆ ಪ್ರಾರ್ಥನೆ ಮಾಡಬೇಕು?

ನಾವು ಯೆಹೋವ ದೇವರಿಗೆ ಯಾಕೆ ಪ್ರಾರ್ಥನೆ ಮಾಡ್ತಾ ಇರಬೇಕು?

ರೋಮ 12:12; ಎಫೆ 6:18; 1ಥೆಸ 5:17; 1ಪೇತ್ರ 4:7

  • ಬೈಬಲ್‌ ಉದಾಹರಣೆಗಳು:

    • ದಾನಿ 6:6-10—ಮರಣದಂಡನೆ ಸಿಗುತ್ತೆ ಅಂತ ಗೊತ್ತಿದ್ರೂ ದಾನಿಯೇಲ ಯಾವಾಗ್ಲೂ ಮಾಡೋ ತರ ಪ್ರಾರ್ಥನೆ ಮಾಡಿದ, ಬಚ್ಚಿಟ್ಕೊಂಡು ಪ್ರಾರ್ಥನೆ ಮಾಡಲಿಲ್ಲ

    • ಲೂಕ 18:1-8—ಯೇಸು ಹೇಳಿದ ಉದಾಹರಣೆಯಲ್ಲಿ ನ್ಯಾಯ ಕೊಡಿಸು ಅಂತ ಹಿಂದೆಬಿದ್ದಿದ್ದ ಸ್ತ್ರೀಗೆ ದೇವಭಯ ಇಲ್ಲದಿದ್ದ ನ್ಯಾಯಾಧೀಶ ಕೊನೆಗೂ ಸಹಾಯ ಮಾಡಿದ. ಹಾಗಿರುವಾಗ ನೀತಿವಂತನಾದ ಯೆಹೋವ ಅಪ್ಪ ಪಟ್ಟುಹಿಡಿದು ಪ್ರಾರ್ಥನೆ ಮಾಡೋರಿಗೆ ಖಂಡಿತ ಸಹಾಯ ಮಾಡ್ತಾನೆ ಅಂತ ಹೇಳಿದ

ಕ್ಷಮೆಗಾಗಿ ಬೇಡ್ಕೊಂಡಾಗ ಯೆಹೋವ ಅದನ್ನ ಕೇಳಬೇಕಾದ್ರೆ ನಮ್ಮಲ್ಲಿ ಯಾವ ಗುಣ ಇರಬೇಕು?

2ಪೂರ್ವ 7:13, 14

  • ಬೈಬಲ್‌ ಉದಾಹರಣೆಗಳು:

    • 2ಅರ 22:11-13, 18-20—ರಾಜ ಯೋಷೀಯ ತನ್ನನ್ನೇ ತಗ್ಗಿಸ್ಕೊಂಡು ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡಿದಾಗ ದೇವರು ಅವನಿಗೆ ಕರುಣೆ ತೋರಿಸಿದನು

    • 2ಪೂರ್ವ 33:10-13—ರಾಜ ಮನಸ್ಸೆ ದೀನತೆಯಿಂದ ಪ್ರಾರ್ಥನೆ ಮಾಡಿದಾಗ ಯೆಹೋವ ಅವನನ್ನ ಕ್ಷಮಿಸಿ, ಮತ್ತೆ ಅವನನ್ನ ರಾಜ ಮಾಡಿದನು

ಯೆಹೋವ ನಮ್ಮನ್ನ ಕ್ಷಮಿಸಬೇಕಂದ್ರೆ ಮೊದ್ಲು ನಾವೇನು ಮಾಡಬೇಕು?

ದೇವರ ಇಷ್ಟ ನೆರವೇರಬೇಕು ಅಂತ ನಾವು ಪ್ರಾರ್ಥನೆ ಮಾಡಬೇಕು ಯಾಕೆ?

ನಮಗೆ ಯೆಹೋವನ ಮೇಲೆ ತುಂಬ ನಂಬಿಕೆ ಇದೆ ಅನ್ನೋದು ನಮ್ಮ ಪ್ರಾರ್ಥನೆಯಿಂದ ಗೊತ್ತಾಗಬೇಕು ಯಾಕೆ?

ಯಾವ ವಿಷ್ಯಗಳಿಗೋಸ್ಕರ ಪ್ರಾರ್ಥನೆ ಮಾಡೋದು ಒಳ್ಳೇದು?

ದೇವರ ಹೆಸ್ರಿನ ಪವಿತ್ರೀಕರಣ

ದೇವರ ಆಳ್ವಿಕೆ ಬೇಗ ಭೂಮಿಯನ್ನ ಆಳಬೇಕು

ದೇವರ ಇಷ್ಟ ಸಂಪೂರ್ಣವಾಗಿ ನೆರವೇರಬೇಕು

ಅಗತ್ಯ ಇರೋ ವಸ್ತುಗಳನ್ನ ಕೊಡಪ್ಪಾ ಅಂತ ಬೇಡಬೇಕು

ಪಾಪಗಳಿಗೆ ಕ್ಷಮೆ

ಪರೀಕ್ಷೆ, ಪ್ರಲೋಭನೆ ಬಂದಾಗ ಸಹಾಯಕ್ಕಾಗಿ ಬೇಡಬೇಕು

ಧನ್ಯವಾದ ಹೇಳಬೇಕು

ದೇವರ ಇಷ್ಟ ಏನು ಅಂತ ತಿಳ್ಕೊಳ್ಳೋಕೆ, ಅರ್ಥ ಮಾಡ್ಕೊಳ್ಳೋಕೆ, ವಿವೇಕದಿಂದ ನಡ್ಕೊಳ್ಳೋಕೆ ಪ್ರಾರ್ಥನೆ ಮಾಡಬೇಕು

ಜ್ಞಾನೋ 2:3-6; ಫಿಲಿ 1:9; ಯಾಕೋ 1:5

ಇದನ್ನೂ ನೋಡಿ: ಕೀರ್ತ 119:34

  • ಬೈಬಲ್‌ ಉದಾಹರಣೆಗಳು:

    • 1ಅರ 3:11, 12—‘ವಿವೇಕ ಕೊಡಪ್ಪಾ’ ಅಂತ ಸೊಲೊಮೋನ ಬೇಡ್ಕೊಂಡಾಗ ಯೆಹೋವ ಅವನಿಗೆ ತುಂಬ ವಿವೇಕ ಕೊಟ್ಟನು

ಪವಿತ್ರಶಕ್ತಿ ಕೊಡಪ್ಪಾ ಅಂತ ಬೇಡ್ಕೊಬೇಕು

ಸಹೋದರ ಸಹೋದರಿಯರಿಗೋಸ್ಕರ ಅದ್ರಲ್ಲೂ ಹಿಂಸೆ ಅನುಭವಿಸ್ತಾ ಇರೋರಿಗೆ ಬೇಡಬೇಕು

ಯೆಹೋವನನ್ನ ಹೊಗಳಬೇಕು

ಕೀರ್ತ 86:12; ಯೆಶಾ 25:1; ದಾನಿ 2:23

  • ಬೈಬಲ್‌ ಉದಾಹರಣೆಗಳು:

    • ಲೂಕ 10:21—ಮಕ್ಕಳ ತರ ದೀನರಾಗಿರೋ ಜನ್ರಿಗೆ ಯೆಹೋವ ತನ್ನ ಬಗ್ಗೆ ಸತ್ಯಗಳನ್ನ ತಿಳಿಸಿದ್ದಕ್ಕೆ ಆತನನ್ನ ಯೇಸು ಎಲ್ರ ಮುಂದೆ ಹೊಗಳಿದನು

    • ಪ್ರಕ 4:9-11—ದೇವದೂತರು ಯೆಹೋವನಿಗೆ ಸಲ್ಲಬೇಕಾದ ಗೌರವ, ಘನತೆಯನ್ನ ಕೊಡ್ತಾರೆ

ಆರಾಧನೆ ಮಾಡೋಕೆ, ಸಿಹಿಸುದ್ದಿ ಸಾರೋಕೆ ಅಧಿಕಾರಿಗಳು ಅನುಮತಿ ಕೊಡಲಿ ಅಂತ ಬೇಡ್ಕೊಬೇಕು

ದೀಕ್ಷಾಸ್ನಾನ ಪಡ್ಕೊಳ್ಳುವಾಗ ಪ್ರಾರ್ಥನೆ ಮಾಡೋದು ಸರಿನಾ?

ದೇವರ ಜೊತೆ ಸ್ನೇಹ ಹಾಳು ಮಾಡ್ಕೊಂಡಿರೋ ಜನ್ರಿಗೋಸ್ಕರ ಪ್ರಾರ್ಥನೆ ಮಾಡೋದು ಸರಿನಾ?

ಪ್ರಾರ್ಥನೆ ಮಾಡೋವಾಗ ಸಹೋದರರು ಹೆಚ್ಚಾಗಿ ತಲೆಗೆ ಮುಸುಕು ಹಾಕಲ್ಲ ಯಾಕೆ? ಕೆಲವೊಮ್ಮೆ ಸಹೋದರಿಯರು ಹಾಕ್ತಾರೆ ಯಾಕೆ?

ತುಂಬ ಉದ್ದವಾದ ಅಥವಾ ಭಾವನೆ ಹಾಕಿ ಪ್ರಾರ್ಥನೆ ಮಾಡೋದಕ್ಕಿಂತ ಯಾವುದು ತುಂಬ ಮುಖ್ಯ?

ಪ್ರಲಾ 3:41; ಮತ್ತಾ 6:7

  • ಬೈಬಲ್‌ ಉದಾಹರಣೆಗಳು:

    • 1ಅರ 18:25-29, 36-39—ಬಾಳನ ಪ್ರವಾದಿಗಳು ತಮ್ಮ ದೇವರಿಗೆ ಗಂಟೆಗಟ್ಟಲೆ ಪ್ರಾರ್ಥನೆ ಮಾಡಿದ್ರೂ ಉತ್ರ ಸಿಗಲಿಲ್ಲ

    • ಅಕಾ 19:32-41—ಎಫೆಸ ಪಟ್ಟಣದ ಜನರು ಅರ್ತೆಮೀ ದೇವಿಯನ್ನ 2 ಗಂಟೆ ಜಪಿಸಿದ್ರು ಆದ್ರೆ ಏನೂ ಆಗಲಿಲ್ಲ, ಕೊನೆಗೆ ಪಟ್ಟಣದ ಅಧಿಕಾರಿ ಬಂದು ಅವ್ರನ್ನ ಬೈದ