ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಿಹಿಸುದ್ದಿ ಸಾರೋದು

ಸಿಹಿಸುದ್ದಿ ಸಾರೋದು

ಸತ್ಯ ಕ್ರೈಸ್ತರು ತಮ್ಮ ನಂಬಿಕೆಗಳ ಬಗ್ಗೆ ಬೇರೆಯವ್ರ ಹತ್ರ ಯಾಕೆ ಮಾತಾಡ್ತಾರೆ?

ಯೇಸುಗೆ ಸಾರೋದು ಎಷ್ಟು ಮುಖ್ಯವಾಗಿತ್ತು?

ಲೂಕ 8:1; ಯೋಹಾ 18:37

  • ಬೈಬಲ್‌ ಉದಾಹರಣೆಗಳು:

    • ಲೂಕ 4:42-44—ದೇವರು ಯೇಸುನ ಭೂಮಿಗೆ ಕಳಿಸಿದ್ದೇ ಸಾರೋಕೆ ಅಂತ ಯೇಸುನೇ ಹೇಳಿದ್ದಾನೆ

    • ಯೋಹಾ 4:31-34—ಯೇಸುಗೆ ಸಿಹಿಸುದ್ದಿ ಸಾರೋದು ಊಟದ ತರ ಅಂತ ಆತನೇ ಹೇಳಿದನು

ಸಭೆಯಲ್ಲಿ ಮುಂದಾಳತ್ವ ವಹಿಸೋರು ಮಾತ್ರ ಸಿಹಿಸುದ್ದಿ ಸಾರಬೇಕಾ?

ಕೀರ್ತ 68:11; 148:12, 13; ಅಕಾ 2:17, 18

  • ಬೈಬಲ್‌ ಉದಾಹರಣೆಗಳು:

    • 2ಅರ 5:1-4, 13, 14, 17—ಇಸ್ರಾಯೇಲಿನ ಪುಟ್ಟ ಹುಡುಗಿ ಯೆಹೋವನ ಪ್ರವಾದಿ ಎಲೀಷನ ಬಗ್ಗೆ ತನ್ನ ಒಡತಿಗೆ ಹೇಳಿದಳು

    • ಮತ್ತಾ 21:15, 16—ದೇವಾಲಯದಲ್ಲಿ ಪುಟ್ಟ ಹುಡುಗರು ಯೇಸುವನ್ನ ಹೊಗಳೋದನ್ನ ನೋಡಿ ಮುಖ್ಯ ಪುರೋಹಿತರು ಮತ್ತು ಪಂಡಿತರು ಕೋಪ ಮಾಡ್ಕೊಂಡ್ರು, ಆಗ ಯೇಸು ಅವ್ರನ್ನ ತಿದ್ದಿದನು

ಕ್ರೈಸ್ತ ಮೇಲ್ವಿಚಾರಕರು ಸಿಹಿಸುದ್ದಿ ಸಾರೋದಕ್ಕೆ ಸಭೆಯಲ್ಲಿ ಇರೋರಿಗೆ ಹೇಗೆ ಕಲಿಸಬಹುದು?

ಸಿಹಿಸುದ್ದಿ ಸಾರೋದಕ್ಕೆ ಯೆಹೋವ ಮತ್ತು ಯೇಸು ಹೇಗೆ ಸಹಾಯ ಮಾಡ್ತಾರೆ?

2ಕೊರಿಂ 4:7; ಫಿಲಿ 4:13; 2ತಿಮೊ 4:17

  • ಬೈಬಲ್‌ ಉದಾಹರಣೆಗಳು:

    • ಅಕಾ 16:12, 22-24; 1ಥೆಸ 2:1, 2—ಅಪೊಸ್ತಲ ಪೌಲ ಮತ್ತು ಅವನ ಜೊತೆಗಿದ್ದವರಿಗೆ ತುಂಬಾ ಹಿಂಸೆ ಬಂದ್ರೂ ದೇವರ ಸಹಾಯದಿಂದ ಸಿಹಿಸುದ್ದಿ ಸಾರೋದನ್ನ ಧೈರ್ಯವಾಗಿ ಮುಂದುವರೆಸಿದ್ರು

    • 2ಕೊರಿಂ 12:7-9—ಅಪೊಸ್ತಲ ಪೌಲನ ‘ದೇಹದಲ್ಲಿದ್ದ ಒಂದು ಮುಳ್ಳಿಂದ’ ಅಂದ್ರೆ ಒಂದು ಆರೋಗ್ಯ ಸಮಸ್ಯೆಯಿಂದ ಅವನಿಗೆ ಕಷ್ಟ ಆದ್ರೂ ಹುರುಪಿಂದ ಸಾರ್ತಿದ್ದ, ಯಾಕಂದ್ರೆ ಆ ಕೆಲ್ಸ ಮಾಡೋಕೆ ಬೇಕಾದ ಸಹಾಯವನ್ನ ಯೆಹೋವ ಕೊಟ್ಟನು

ಯಾರೆಲ್ಲಾ ಸಾರಬಹುದು? ಸಾರೋದಕ್ಕೆ ಅವ್ರಿಗೆ ಯಾವ ಅರ್ಹತೆ ಬೇಕು?

1ಕೊರಿಂ 1:26-28; 2ಕೊರಿಂ 3:5; 4:13

  • ಬೈಬಲ್‌ ಉದಾಹರಣೆಗಳು:

    • ಯೋಹಾ 7:15—ಯೇಸು ಯಾವುದೇ ಧಾರ್ಮಿಕ ಶಾಲೆಗಳಿಗೆ ಹೋಗದಿದ್ರೂ ಅವನಿಗಿದ್ದ ಜ್ಞಾನ ನೋಡಿ ಜನ ಆಶ್ಚರ್ಯ ಪಟ್ರು

    • ಅಕಾ 4:13—ಯೇಸುವಿನ ಅಪೊಸ್ತಲರು ಅಷ್ಟೇನೂ ಓದಿಲ್ಲದ ಸಾಮಾನ್ಯ ಜನರಾಗಿದ್ರು; ಆದ್ರೂ ಅವರು ಧೈರ್ಯದಿಂದ ಸಿಹಿಸುದ್ದಿ ಸಾರಿದ್ರು

ಸಾರೋದಕ್ಕೆ ಮತ್ತು ಕಲಿಸೋಕೆ ನಾವು ಬೇರೆಯವ್ರಿಗೆ ಹೇಳ್ಕೊಡಬೇಕು ಅಂತ ಯೆಹೋವ ಇಷ್ಟಪಡ್ತಾನೆ ಅಂತ ಹೇಗೆ ಗೊತ್ತು?

ಮಾರ್ಕ 1:17; ಲೂಕ 8:1; ಎಫೆ 4:11, 12

  • ಬೈಬಲ್‌ ಉದಾಹರಣೆಗಳು:

    • ಯೆಶಾ 50:4, 5—ಯೇಸು ಭೂಮಿಗೆ ಬರೋದಕ್ಕಿಂತ ಮುಂಚೆ ಯೆಹೋವನಿಂದ ತರಬೇತಿ ಪಡ್ಕೊಂಡನು

    • ಮತ್ತಾ 10:5-7—ಯೇಸು ಭೂಮಿಯಲ್ಲಿದ್ದಾಗ ಸಿಹಿಸುದ್ದಿ ಹೇಗೆ ಸಾರಬೇಕು ಅಂತ ತನ್ನ ಶಿಷ್ಯರಿಗೆ ತಾಳ್ಮೆಯಿಂದ ಕಲಿಸ್ಕೊಟ್ಟನು

ಸಿಹಿಸುದ್ದಿ ಸಾರೋ ಕೆಲಸವನ್ನ ನಾವು ಹೇಗೆ ನೋಡಬೇಕು?

ನಾವು ಸಿಹಿಸುದ್ದಿ ಸಾರಿದಾಗ ನಮಗೆ ಹೇಗನಿಸುತ್ತೆ?

ನಾವು ಯಾವ ವಿಷ್ಯಗಳನ್ನ ಸಾರ್ತೀವಿ?

ಸುಳ್ಳು ಬೋಧನೆಗಳು ಯಾವುದು ಅಂತ ನಾವು ಯಾಕೆ ಬೇರೆಯವ್ರಿಗೆ ಹೇಳ್ತೀವಿ?

2ಕೊರಿಂ 10:4, 5

  • ಬೈಬಲ್‌ ಉದಾಹರಣೆಗಳು:

    • ಮಾರ್ಕ 12:18-27—ಸತ್ತವರು ಮತ್ತೆ ಜೀವಂತವಾಗಿ ಎದ್ದು ಬರೋದ್ರ ಬಗ್ಗೆ ಸದ್ದುಕಾಯರು ತಪ್ಪಾಗಿ ತಿಳ್ಕೊಂಡಿದ್ದಾರೆ ಅಂತ ಯೇಸು ಪವಿತ್ರಗ್ರಂಥ ಬಳಸಿ ಹೇಳಿದನು

    • ಅಕಾ 17:16, 17, 29, 30—ಮೂರ್ತಿಪೂಜೆ ತಪ್ಪು ಅಂತ ಪೌಲ ಅಥೆನ್ಸಿನ ಜನ್ರಿಗೆ ವಚನಗಳನ್ನ ತೋರಿಸಿ ಅರ್ಥ ಮಾಡಿಸಿದ

ನಾವು ಹೇಗೆಲ್ಲಾ ಸಾರ್ತಿದ್ದೀವಿ?

ಸಾರ್ವಜನಿಕ ಸ್ಥಳಗಳಲ್ಲಿ ನಾವು ಯಾಕೆ ಸಾರ್ತೀವಿ?

ನಾವು ಯಾಕೆ ಪಟ್ಟು ಹಿಡಿದು ಸಾರಬೇಕು ಮತ್ತು ಸಾರೋವಾಗ ಯಾಕೆ ತಾಳ್ಮೆ ತೋರಿಸಬೇಕು?

ಸಾರೋದ್ರಿಂದ ಏನು ಒಳ್ಳೇದಾಗುತ್ತೆ?

ನಮಗೆ ಸಿಗೋ ಪ್ರತಿಯೊಂದು ಅವಕಾಶ ಬಳಸಿ ಸಿಹಿಸುದ್ದಿ ಸಾರಬೇಕು ಯಾಕೆ?

1ಕೊರಿಂ 9:23; 1ತಿಮೊ 2:4; 1ಪೇತ್ರ 3:15

  • ಬೈಬಲ್‌ ಉದಾಹರಣೆಗಳು:

    • ಯೋಹಾ 4:6, 7, 13, 14—ಯೇಸುಗೆ ತುಂಬಾ ಸುಸ್ತಾಗಿದ್ರೂ ಬಾವಿಯ ಹತ್ರ ಬಂದ ಸಮಾರ್ಯದ ಸ್ತ್ರೀಗೆ ಸಿಹಿಸುದ್ದಿ ಸಾರಿದನು

    • ಫಿಲಿ 1:12-14—ಪೌಲ ಜೈಲಿನಲ್ಲಿದ್ರೂ ಸಿಹಿಸುದ್ದಿ ಸಾರೋದಕ್ಕೆ ಮತ್ತು ಬೇರೆಯವ್ರನ್ನ ಪ್ರೋತ್ಸಾಹಿಸೋದಕ್ಕೆ ತನ್ನ ಕೈಲಾದ ಎಲ್ಲಾ ಪ್ರಯತ್ನ ಮಾಡಿದ

ಎಲ್ಲರೂ ಸಿಹಿಸುದ್ದಿ ಕೇಳ್ತಾರಾ?

ಯೋಹಾ 10:25, 26; 15:18-20; ಅಕಾ 28:23-28

  • ಬೈಬಲ್‌ ಉದಾಹರಣೆಗಳು:

    • ಯೆರೆ 7:23-26—ತನ್ನ ಜನರು ಪದೇ ಪದೇ ತಾನು ಕಳಿಸಿದ ಪ್ರವಾದಿಗಳ ಮಾತನ್ನ ಕೇಳಲಿಲ್ಲ ಅಂತ ಯೆಹೋವ ಯೆರೆಮೀಯನ ಮೂಲಕ ಹೇಳಿದನು

    • ಮತ್ತಾ 13:10-16—ಯೆಶಾಯನ ಸಮಯದಲ್ಲಿ ಮಾಡಿದ ತರನೇ ತುಂಬಾ ಜನ ಸಿಹಿಸುದ್ದಿ ಕೇಳಿಸ್ಕೊತಾರೆ, ಆದ್ರೆ ಅದನ್ನ ಕಿವಿಗೆ ಹಾಕೊಳ್ಳಲ್ಲ ಅಂತ ಯೇಸು ಹೇಳಿದನು

ಕೆಲವರು ನಮ್ಮ ಮಾತನ್ನ ಕೇಳಿಸ್ಕೊಳ್ಳೋದಿಲ್ಲ ಅಂತ ನಮಗೆ ಹೇಗೆ ಗೊತ್ತು?

ಕೆಲವರು ಸಿಹಿಸುದ್ದಿನ ಆರಂಭದಲ್ಲಿ ಕೇಳಿಸ್ಕೊಂಡು ನಂಬಿಕೆ ಇಡ್ತಾರೆ, ಆಮೇಲೆ ಬಿಟ್ಟುಬಿಡ್ತಾರೆ ಅಂತ ನಮಗೆ ಹೇಗೆ ಗೊತ್ತು?

ಸಿಹಿಸುದ್ದಿ ಸಾರೋವಾಗ ವಿರೋಧ ಬಂದ್ರೆ ಆಶ್ಚರ್ಯ ಪಡಬಾರದು ಅಂತ ಯಾವ ಉದಾಹರಣೆಗಳಿಂದ ಗೊತ್ತಾಗುತ್ತೆ?

ಸಾರೋದನ್ನ ನಿಲ್ಲಿಸೋದಕ್ಕೆ ಜನ ಪ್ರಯತ್ನಪಟ್ಟಾಗ ನಾವು ಏನು ಮಾಡಬೇಕು?

ಕೆಲವರು ಸಿಹಿಸುದ್ದಿನ ಕೇಳ್ತಾರೆ ಅಂತ ನಮಗೆ ಹೇಗೆ ಗೊತ್ತು?

ಸಿಹಿಸುದ್ದಿ ಬಗ್ಗೆ ಗೊತ್ತಿರೋರು ಏನು ಮಾಡಬೇಕು?

ಎಲ್ಲಾ ದೇಶ, ಧರ್ಮ, ಜಾತಿಯ ಜನರಿಗೆ ನಾವು ಯಾಕೆ ಸಾರಬೇಕು?

ನಾವು ಯಾವ ದಿನ ಬೇಕಾದ್ರೂ ಸಿಹಿಸುದ್ದಿ ಸಾರಬಹುದಾ? ಸಬ್ಬತ್‌ ದಿನ ಸಾರೋದು ಸರಿನಾ?

ಬೈಬಲ್‌ ಬಗ್ಗೆ ಗೊತ್ತಿರೋರಿಗೂ ಸಾರಬೇಕು ಅಂತ ಯಾವ ಉದಾಹರಣೆಗಳಿಂದ ಗೊತ್ತಾಗುತ್ತೆ?