ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಮಸ್ಯೆ ಬಗೆಹರಿಸೋದು

ಸಮಸ್ಯೆ ಬಗೆಹರಿಸೋದು

ಯಾರಾದ್ರೂ ನಮ್ಗೆ ಬೇಜಾರು ಮಾಡಿದ್ರೆ ನಾವು ಯಾಕೆ ಕೋಪ ಮಾಡ್ಕೊಬಾರದು, ಸೇಡು ಇಟ್ಕೊಬಾರದು?

ಜ್ಞಾನೋ 20:22; 24:29; ರೋಮ 12:17, 18; ಯಾಕೋ 1:19, 20; 1ಪೇತ್ರ 3:8, 9

  • ಬೈಬಲ್‌ ಉದಾಹರಣೆಗಳು:

    • 1ಸಮು 25:9-13, 23-35—ದಾವೀದ ಮತ್ತು ಅವನ ಗಂಡಸರಿಗೆ ನಾಬಾಲ ಸಹಾಯ ಮಾಡದೆ, ಬಾಯಿಗೆ ಬಂದ ಹಾಗೆ ಮಾತಾಡಿದಾಗ ದಾವೀದ ಅವನನ್ನ ಮತ್ತು ಅವನ ಕುಟುಂಬವನ್ನ ನಾಶಮಾಡಬೇಕು ಅಂದ್ಕೊಂಡ. ಆದ್ರೆ ಅಬೀಗೈಲಳ ಸಲಹೆ ಕೇಳಿದ್ರಿಂದ ರಕ್ತಾಪರಾಧದಿಂದ ತಪ್ಪಿಸ್ಕೊಂಡ

    • ಜ್ಞಾನೋ 24:17-20—ನಮ್ಮ ಶತ್ರುಗಳು ಕಷ್ಟ ಪಡೋದನ್ನ ನೋಡೋವಾಗ ನಾವು ಖುಷಿ ಪಡಬಾರದು, ದೇವರೇ ಅವ್ರಿಗೆ ನ್ಯಾಯತೀರ್ಪು ಮಾಡ್ತಾರೆ ಅಂತ ನಾವು ನಂಬಬೇಕು ಅಂತ ರಾಜ ಸೊಲೊಮೋನ ಬರೆದ

ಯಾರಾದ್ರೂ ನಮ್ಮ ಹತ್ರ ಜಗಳ ಮಾಡಿದ್ರೆ ನಾವು ಅವ್ರ ಜೊತೆ ಮಾತು ಬಿಡೋದು, ಅವ್ರ ಮೇಲೆ ಸೇಡು ಇಟ್ಕೊಳ್ಳೋದು ಸರಿನಾ?

ಯಾಜ 19:17, 18; 1ಕೊರಿಂ 13:4, 5; ಎಫೆ 4:26

  • ಬೈಬಲ್‌ ಉದಾಹರಣೆಗಳು:

    • ಮತ್ತಾ 5:23, 24—ಯಾರ ಮೇಲಾದ್ರೂ ನಮ್ಗೆ ಬೇಜಾರಿದ್ರೆ ಅದನ್ನ ಸರಿ ಮಾಡ್ಕೊಳೋಕೆ ನಮ್ಮ ಕೈಲಾದ ಎಲ್ಲ ಪ್ರಯತ್ನ ಹಾಕಬೇಕು ಅಂತ ಯೇಸು ಹೇಳಿದನು

ಯಾರಾದ್ರೂ ನಮಗೆ ಬೇಜಾರು ಮಾಡಿದ್ರೆ ನಾವು ಏನು ಮಾಡಬೇಕು?

ಯಾರಾದ್ರೂ ನಮಗೆ ಪದೇ ಪದೇ ಬೇಸರ ಮಾಡಿ ನಿಜವಾಗ್ಲೂ ಪಶ್ಚಾತ್ತಾಪ ಪಟ್ರೆ ನಾವು ಅವ್ರನ್ನ ಯಾಕೆ ಕ್ಷಮಿಸ್ಬೇಕು?

ಯಾರಾದ್ರೂ ನಮ್ಮ ಹೆಸ್ರು ಹಾಳು ಮಾಡಿದ್ರೆ, ನಮಗೆ ಮೋಸ ಮಾಡಿದ್ರೆ ಅಥವಾ ಬೇರೆ ಯಾವುದೋ ದೊಡ್ಡ ತಪ್ಪು ಮಾಡಿದ್ರೆ ಅದನ್ನ ನಮಗೆ ಮರಿಯೋಕೆ ಆಗದೇ ಇದ್ದಾಗ ಯಾರು ಅವ್ರ ಹತ್ರ ಹೋಗಿ ಮಾತಾಡಬೇಕು? ಯಾಕೆ?

ಮತ್ತಾ 18:15

ಇದನ್ನೂ ನೋಡಿ: ಯಾಕೋ 5:20

ನಮ್ಮ ಹೆಸ್ರು ಹಾಳು ಮಾಡಿರೋ ಅಥವಾ ನಮಗೆ ಮೋಸ ಮಾಡಿರೋ ವ್ಯಕ್ತಿ ಹತ್ರ ನಾವು ಹೋಗಿ ಮಾತಾಡಿದಾಗ ಅವರು ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಟ್ಟಿಲ್ಲಾಂದ್ರೆ ನಾವೇನು ಮಾಡಬೇಕು?