ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೆಲಸ

ಕೆಲಸ

ಕೆಲ್ಸ ಮಾಡೋದಕ್ಕೂ ಸಂತೋಷಕ್ಕೂ ಏನು ಸಂಬಂಧ?

ನಿಪುಣ ಕೆಲಸಗಾರರಾಗಿದ್ರೆ ಏನು ಪ್ರಯೋಜನ ಆಗುತ್ತೆ?

ಜ್ಞಾನೋ 22:29

  • ಬೈಬಲ್‌ ಉದಾಹರಣೆಗಳು:

    • 1ಸಮು 16:16-23—ದಾವೀದ ಯುವಕನಾಗಿದ್ದಾಗ ತಂತಿವಾದ್ಯ ನುಡಿಸೋದ್ರಲ್ಲಿ ಪ್ರವೀಣನಾಗಿದ್ದ, ಅವನ ಸಂಗೀತ ರಾಜನ ಮನಸ್ಸಿಗೆ ಹಿತ ಕೊಡ್ತು, ನೆಮ್ಮದಿ ಕೊಡ್ತು

    • 2ಪೂರ್ವ 2:13, 14—ನಿಪುಣ ಕರಕುಶಲಗಾರನಾಗಿದ್ದ ಹೂರಾಮಾಬೀಯನ್ನ ಸೊಲೊಮೋನ ಒಂದು ನಿರ್ಮಾಣ ಕೆಲಸದಲ್ಲಿ ಬಳಸಿದ

ಯೆಹೋವನ ಆರಾಧಕರು ಕಷ್ಟಪಟ್ಟು ಕೆಲಸ ಮಾಡೋದಕ್ಕೆ ಹೆಸರುವಾಸಿ ಆಗಿರಬೇಕು ಯಾಕೆ?

ಎಫೆ 4:28; ಕೊಲೊ 3:23

  • ಬೈಬಲ್‌ ಉದಾಹರಣೆಗಳು:

    • ಆದಿ 24:10-21—ರೆಬೆಕ್ಕ ಸಹಾಯ ಮಾಡೋದಕ್ಕೆ ಯಾವಾಗ್ಲೂ ರೆಡಿ ಇರ್ತಿದ್ದಳು, ಕಷ್ಟಪಟ್ಟು ಕೆಲಸ ಮಾಡ್ತಿದ್ದಳು, ಅಬ್ರಹಾಮನ ಸೇವಕ ಕೇಳಿದ್ದಕ್ಕಿಂತ ಜಾಸ್ತಿ ಕೆಲ್ಸ ಮಾಡಿದಳು

    • ಫಿಲಿ 2:19-23—ಅಪೊಸ್ತಲ ಪೌಲ ಯುವಕನಾಗಿದ್ದ ತಿಮೊತಿಗೆ ದೊಡ್ಡ ಜವಾಬ್ದಾರಿ ಕೊಟ್ಟ, ಯಾಕಂದ್ರೆ ತಿಮೊತಿ ಕಷ್ಟಪಟ್ಟು ಕೆಲಸ ಮಾಡ್ತಿದ್ದ ಮತ್ತು ದೀನನಾಗಿದ್ದ

ಕ್ರೈಸ್ತರಾದ ನಾವು ಯಾಕೆ ಸೋಮಾರಿಗಳಾಗಿ ಇರಬಾರದು?

ಜ್ಞಾನೋ 13:4; 18:9; 21:25, 26; ಪ್ರಸಂ 10:18

  • ಬೈಬಲ್‌ ಉದಾಹರಣೆಗಳು:

    • ಜ್ಞಾನೋ 6:6-11—ಸೋಮಾರಿಗಳಾಗಿ ಇರದೇ ಇರುವೆ ತರ ಕಷ್ಟ ಪಟ್ಟು ಕೆಲಸ ಮಾಡಬೇಕು ಅಂತ ರಾಜ ಸೊಲೊಮೋನ ಹೇಳಿದ

ನಮ್ಮ ಅಗತ್ಯಗಳನ್ನ ಪೂರೈಸಿಕೊಳ್ಳೋದಕ್ಕೆ ನಾವು ಯಾಕೆ ಕಷ್ಟಪಟ್ಟು ಕೆಲಸ ಮಾಡಬೇಕು?

ನಾವು ನಮ್ಮ ಕುಟುಂಬಕ್ಕೋಸ್ಕರ ಕಷ್ಟಪಟ್ಟು ದುಡಿಬೇಕು ಯಾಕೆ?

1ತಿಮೊ 5:8

  • ಬೈಬಲ್‌ ಉದಾಹರಣೆಗಳು:

    • ರೂತ್‌ 1:16, 17; 2:2, 3, 6, 7, 17, 18—ವಿಧವೆಯಾಗಿದ್ದ ರೂತ್‌ ತನ್ನ ಅತ್ತೆ ನೊವೊಮಿಯನ್ನ ನೋಡ್ಕೊಳ್ಳೋದಕ್ಕೆ ಕಷ್ಟಪಟ್ಟು ಕೆಲಸ ಮಾಡಿದಳು

    • ಮತ್ತಾ 15:4-9—ದೇವರ ಸೇವೆ ಮಾಡೋದ್ರಿಂದ ತಂದೆತಾಯಿನಾ ನೋಡ್ಕೋಳ್ಳದೇ ಇದ್ರೂ ಪರವಾಗಿಲ್ಲ ಅನ್ನೋರನ್ನ ಯೇಸು ಖಂಡಿಸಿದನು

ನಾವು ದುಡಿಯೋದ್ರಲ್ಲಿ ಸ್ವಲ್ಪವನ್ನ ಬೇರೆಯವ್ರಿಗೆ ಸಹಾಯ ಮಾಡೋದಕ್ಕೆ ಬಳಸಬೇಕು ಯಾಕೆ?

ಹಣಕ್ಕೆ ನಾವು ಯಾವ ಸ್ಥಾನ ಕೊಡಬೇಕು?

ಜೀವನಕ್ಕೆ ಬೇಕಾಗಿರೋದನ್ನ ಸಂಪಾದಿಸೋಕೆ ನಾವು ಕಷ್ಟಪಟ್ಟು ಕೆಲಸ ಮಾಡುವಾಗ ಯೆಹೋವ ದೇವರು ನಮಗೆ ಸಹಾಯ ಮಾಡ್ತಾನೆ ಅಂತ ಹೇಗೆ ಹೇಳಬಹುದು?

ಮತ್ತಾ 6:25, 30-32; ಲೂಕ 11:2, 3; 2ಕೊರಿಂ 9:10

  • ಬೈಬಲ್‌ ಉದಾಹರಣೆಗಳು:

    • ಆದಿ 31:3-13—ತನ್ನ ಕೈಕೆಳಗೆ ಕೆಲಸ ಮಾಡ್ತಿದ್ದ ಯಾಕೋಬನಿಗೆ ಲಾಬಾನ ಮೋಸ ಮಾಡಿದ, ಆದ್ರೆ ಯೆಹೋವ ಯಾಕೋಬನಿಗೆ ಆಶೀರ್ವಾದ ಮಾಡಿದನು

    • ಆದಿ 39:1-6, 20-23—ಯೋಸೇಫ ಪೋಟೀಫರನ ಹತ್ರ ಕೆಲಸ ಮಾಡ್ತಿದ್ದಾಗ ಮತ್ತು ಜೈಲಲ್ಲಿ ಕೆಲಸ ಮಾಡ್ತಿದ್ದಾಗ ಯೆಹೋವ ಅವನನ್ನ ಆಶೀರ್ವಾದ ಮಾಡಿದನು

ನಮಗೆ ದೇವರ ಸೇವೆಗಿಂತ ಕೆಲಸ ಮುಖ್ಯ ಆಗಬಾರದು ಯಾಕೆ?

ಕೀರ್ತ 39:5-7; ಮತ್ತಾ 6:33; ಯೋಹಾ 6:27

  • ಬೈಬಲ್‌ ಉದಾಹರಣೆಗಳು:

    • ಲೂಕ 12:15-21—ದೇವರಿಗಿಂತ ಹಣ ಮುಖ್ಯ ಅಂತ ನೆನಸೋದು ದೊಡ್ಡ ಮೂರ್ಖತನ ಅನ್ನೋದಕ್ಕೆ ಯೇಸು ಒಂದು ಉದಾಹರಣೆ ಕೊಟ್ಟನು

    • 1ತಿಮೊ 6:17-19—ಪೌಲ ಶ್ರೀಮಂತರಾಗಿದ್ದ ಕೆಲವು ಕ್ರೈಸ್ತರಿಗೆ, ಹಣ ಇದೆ ಅಂತ ಅಹಂಕಾರ ಪಡದೆ ‘ಒಳ್ಳೇ ಕೆಲಸಗಳನ್ನ ಮಾಡಿ’ ಅಂತ ಎಚ್ಚರಿಕೆ ಕೊಟ್ಟ

ಸರಿಯಾದ ಕೆಲಸ ಆಯ್ಕೆ ಮಾಡೋಕೆ ಯಾವ ಬೈಬಲ್‌ ತತ್ವಗಳು ಸಹಾಯ ಮಾಡುತ್ತೆ?

ಯೆಹೋವನಿಗೋಸ್ಕರ ಕೆಲಸ ಮಾಡಿ

ಕ್ರೈಸ್ತರು ಮಾಡಬೇಕಾದ ಒಂದು ಮುಖ್ಯ ಕೆಲಸ ಯಾವುದು?

ಯೆಹೋವನ ಸೇವೆನ ತುಂಬ ಚೆನ್ನಾಗಿ ಮಾಡೋ ಮನಸ್ಸು ನಮಗೆ ಇರಬೇಕು ಯಾಕೆ?

ಎಲ್ರೂ ಒಂದೇ ತರ ಯೆಹೋವನ ಸೇವೆ ಮಾಡಬೇಕು ಅಂತ ನಾವು ಅಂದ್ಕೊಬಾರದು ಯಾಕೆ?

ಗಲಾ 6:3-5

  • ಬೈಬಲ್‌ ಉದಾಹರಣೆಗಳು:

    • ಮತ್ತಾ 25:14, 15—ತನ್ನ ಶಿಷ್ಯರೆಲ್ಲ ಒಂದೇ ತರ ಕೆಲಸ ಮಾಡಬೇಕು ಅಂತ ಯೇಸು ನೆನಸಲಿಲ್ಲ ಅಂತ ಆತನು ಹೇಳಿದ ಉದಾಹರಣೆಯಿಂದ ಗೊತ್ತಾಗುತ್ತೆ

    • ಲೂಕ 21:2-4—ಬಡ ವಿಧವೆ ಕೊಟ್ಟ ಚಿಕ್ಕ ಕಾಣಿಕೆಗೆ ತುಂಬ ಬೆಲೆ ಇದೆ ಅಂತ ಯೇಸು ಹೇಳಿದನು

ನಮಗೆ ಕೊಟ್ಟಿರೋ ನೇಮಕನ ಮಾಡೋಕೆ ಯಾರು ಶಕ್ತಿ ಕೊಡ್ತಾರೆ?

2ಕೊರಿಂ 4:7; ಎಫೆ 3:20, 21; ಫಿಲಿ 4:13

  • ಬೈಬಲ್‌ ಉದಾಹರಣೆಗಳು:

    • 2ತಿಮೊ 4:17—ತನಗೆ ಕೆಲಸಗಳನ್ನ ಮಾಡೋಕೆ ಶಕ್ತಿ ಬೇಕಾದಾಗ ದೇವರು ಶಕ್ತಿ ಕೊಟ್ಟನು ಅಂತ ಪೌಲ ಹೇಳಿದನು

ನಾವು ಶ್ರದ್ಧೆಯಿಂದ ಯೆಹೋವನ ಸೇವೆ ಮಾಡಿದ್ರೆ ಸಂತೋಷ ಜಾಸ್ತಿ ಆಗುತ್ತೆ ಯಾಕೆ?