ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು


ಈ ಪ್ರಕಾಶನದ ವಿಶೇಷತೆಗಳನ್ನ ನೋಡಿ

ಈ ಪ್ರಕಾಶನದ ವಿಶೇಷತೆಗಳನ್ನ ನೋಡಿ

ಯೆಹೋವನ ಸಾಕ್ಷಿಯ ಜೊತೆ ಕಲಿಯಿರಿ: ಬೈಬಲ್‌ ಸ್ಟಡಿಗಾಗಿ ಈ ಕಿರುಹೊತ್ತಗೆ ಕೊಟ್ಟವರ ಹತ್ತಿರ ಕೇಳಿಕೊಳ್ಳಿ ಅಥವಾ jw.org ವೆಬ್‌ಸೈಟ್‌ ಮೂಲಕ ವಿನಂತಿಸಿ.

ಮೊದಲನೇ ಭಾಗ

ಪ್ರತಿಯೊಂದು ಪ್ಯಾರಗಳನ್ನ ಓದಿ, ದಪ್ಪಕ್ಷರದಲ್ಲಿ ಕೊಡಲಾಗಿರುವ ಪ್ರಶ್ನೆಗಳನ್ನ (A) ಮತ್ತು ಮುಖ್ಯ ವಿಷಯವನ್ನ ಒತ್ತಿ ಹೇಳುವ ವಚನಗಳನ್ನ (B) ಓದಿ. ಕೆಲವು ವಚನಗಳ ಪಕ್ಕ “ಓದಿ” ಅಂತ ಕೊಡಲಾಗಿದೆ.

ಮಧ್ಯ ಭಾಗ

ಹೆಚ್ಚನ್ನ ತಿಳಿಯೋಣ ಅನ್ನೋ ವಿಷಯದ ಕೆಳಗಿರೋ ಆರಂಭದ ಮಾತು (C) ನಾವೇನನ್ನ ಕಲಿಯಬಹುದು ಅಂತ ತಿಳಿಸುತ್ತೆ. ಉಪಶೀರ್ಷಿಕೆಗಳು (D) ಮುಖ್ಯ ವಿಷಯವನ್ನ ತಿಳಿದುಕೊಳ್ಳಲು ಸಹಾಯ ಮಾಡುತ್ತವೆ. ವಚನಗಳನ್ನ ಓದಿ, ಪ್ರಶ್ನೆಗಳನ್ನ ಉತ್ತರಿಸಿ ಮತ್ತು ವಿಡಿಯೋಗಳನ್ನ (E)ನೋಡಿ.

ಚಿತ್ರ ಮತ್ತು ಚಿತ್ರ ವಿವರಣೆಗಳನ್ನ (F) ಚೆನ್ನಾಗಿ ಗಮನಿಸಿ. ಕೆಲವರು ಹೀಗಂತಾರೆ (G) ಅನ್ನೋದ್ರ ಕೆಳಗಿರೋ ಪ್ರಶ್ನೆಗೆ ಹೇಗೆ ಉತ್ತರ ಕೊಡಬಹುದು ಅಂತ ಯೋಚಿಸಿ.

ಕೊನೆಯ ಭಾಗ

ನಾವೇನು ಕಲಿತ್ವಿ ಮತ್ತು ನೆನಪಿದೆಯಾ (H) ಇವೆರಡೂ ಪ್ರತಿ ಪಾಠದ ಕೊನೆಯಲ್ಲಿ ಬರುತ್ತೆ. ಪಾಠವನ್ನ ಮುಗಿಸಿದ ದಿನಾಂಕವನ್ನ ಬರೆದಿಡಿ. ಇದನ್ನ ಮಾಡಿ ನೋಡಿ (I) ಇನ್ನೂ ಹೆಚ್ಚನ್ನ ಕಲಿಯಲಿಕ್ಕಾಗಿ ಅಥವಾ ಕಲಿತದ್ದನ್ನ ಅನ್ವಯಿಸಲಿಕ್ಕಾಗಿ ಇದು ಸಹಾಯ ಮಾಡುತ್ತೆ. ಇದನ್ನೂ ನೋಡಿ (J) ಎಂಬಲ್ಲಿ ನೀವು ಬಯಸೋದಾದ್ರೆ ನೋಡೋಕೆ ವಿಡಿಯೋಗಳನ್ನ ಮತ್ತು ಲೇಖನಗಳನ್ನ ಕೊಡಲಾಗಿದೆ.

ಬೈಬಲ್‌ ವಚನಗಳನ್ನ ಹುಡುಕೋದು ಹೇಗೆ?

ಬೈಬಲಿನಲ್ಲಿ ತುಂಬ ಚಿಕ್ಕಚಿಕ್ಕ ಪುಸ್ತಕಗಳಿವೆ. ಈ ಪುಸ್ತಕಗಳಲ್ಲಿ ಅಧ್ಯಾಯಗಳು ಮತ್ತು ವಚನಗಳಿವೆ. ವಚನದಲ್ಲಿ ಮೊದಲಿಗೆ ಪುಸ್ತಕದ (A) ಹೆಸರನ್ನ ಕೊಡಲಾಗಿದೆ ನಂತರ ಅಧ್ಯಾಯದ (B) ಸಂಖ್ಯೆಯನ್ನ ಮತ್ತು ವಚನ (C) ಅಥವಾ ವಚನಗಳ ಸಂಖ್ಯೆಯನ್ನ ಕೊಡಲಾಗಿದೆ. ಉದಾಹರಣೆಗೆ ಯೋಹಾನ 17:3 ಅಂತ ಇದ್ದರೆ ಯೋಹಾನನ ಪುಸ್ತಕ, ಅಧ್ಯಾಯ 17, ವಚನ 3 ಅಂತ ಅರ್ಥ.