ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂಭಾಷಣೆ ಶುರುಮಾಡಿ

ಪಾಠ 1

ಆಸಕ್ತಿ

ಆಸಕ್ತಿ

ತತ್ವ: “ಪ್ರೀತಿ ಇರುವವನು . . . ಸ್ವಾರ್ಥಿಯಾಗಿರಲ್ಲ.”—1 ಕೊರಿಂ. 13:4, 5.

ಯೇಸು ಏನು ಮಾಡಿದನು?

1. ವಿಡಿಯೋ ನೋಡಿ ಅಥವಾ ಯೋಹಾನ 4:6-9 ಓದಿ. ಆಮೇಲೆ ಈ ಪ್ರಶ್ನೆಗಳ ಬಗ್ಗೆ ಯೋಚ್ನೆ ಮಾಡಿ:

  1.   ಎ. ಯೇಸು ಆ ಸ್ತ್ರೀ ಹತ್ರ ಮಾತಾಡೋ ಮುಂಚೆ ಏನನ್ನ ಗಮನಿಸಿದನು?

  2.  ಬಿ. ಯೇಸು ಅವಳ ಹತ್ರ, “ಕುಡಿಯೋಕೆ ಸ್ವಲ್ಪ ನೀರು ಕೊಡು” ಅಂತ ಕೇಳಿದನು. ಸಂಭಾಷಣೆ ಶುರುಮಾಡೋಕೆ ಇದೊಂದು ಒಳ್ಳೇ ವಿಧಾನ ಅಂತ ಹೇಗೆ ಹೇಳಬಹುದು?

ನಮಗೇನು ಪಾಠ?

2. ಜನ್ರಿಗೆ ಆಸಕ್ತಿ ಇರೋ ವಿಷ್ಯಗಳ ಬಗ್ಗೆನೇ ಮಾತಾಡ್ತಾ ಸಂಭಾಷಣೆ ಶುರುಮಾಡಿದ್ರೆ ಜನರೂ ಚೆನ್ನಾಗಿ ಮಾತಾಡ್ತಾರೆ.

ಯೇಸು ತರ ನೀವೂ ಮಾಡಿ

3. ಹೊಂದಿಸ್ಕೊಳ್ಳಿ. ನಿಮ್ಮ ಮನಸ್ಸಲ್ಲಿ ಯಾವ ವಿಷ್ಯ ಇದ್ಯೋ ಅದರ ಬಗ್ಗೆ ಅಲ್ಲ, ಜನರ ಮನಸ್ಸಲ್ಲಿ ಯಾವ ವಿಷ್ಯ ಇದ್ಯೋ ಅದರ ಬಗ್ಗೆ ಮಾತಾಡಿ. ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ:

  1.   ಎ. ‘ಇವತ್ತಿನ ಬ್ರೇಕಿಂಗ್‌ ನ್ಯೂಸ್‌ ಏನು?’

  2.  ಬಿ. ‘ನಮ್ಮ ಅಕ್ಕಪಕ್ಕದ ಮನೆಯವರು, ಕ್ಲಾಸ್‌ಮೇಟ್ಸು ಯಾವ ವಿಷ್ಯದ ಬಗ್ಗೆ ಮಾತಾಡ್ತಾ ಇದ್ದಾರೆ?’

4. ಗಮನಿಸಿ. ನೀವು ಯಾರ ಹತ್ರ ಮಾತಾಡಬೇಕು ಅಂತಿದ್ದಿರೋ ಆ ವ್ಯಕ್ತಿ ಬಗ್ಗೆ ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ:

  1.   ಎ. ‘ಇವರು ಏನ್‌ ಮಾಡ್ತಿದ್ದಾರೆ? ಏನ್‌ ಯೋಚ್ನೆ ಮಾಡ್ತಿರಬಹುದು?’

  2.  ಬಿ. ‘ಇವರ ಬಟ್ಟೆಬರೆ ಅಥವಾ ಮನೆ ನೋಡುವಾಗ ಅವರ ಆಚಾರ-ವಿಚಾರ, ಸಂಸ್ಕೃತಿ ಬಗ್ಗೆ ಏನ್‌ ಗೊತ್ತಾಗುತ್ತೆ?’

  3.  ಸಿ. ‘ಇವರ ಹತ್ರ ಮಾತಾಡೋದಕ್ಕೆ ಇದು ಸರಿಯಾದ ಸಮಯನಾ?’

5. ಚೆನ್ನಾಗಿ ಕೇಳಿಸ್ಕೊಳ್ಳಿ.

  1.   ಎ. ಜಾಸ್ತಿ ಮಾತಾಡಬೇಡಿ.

  2.  ಬಿ. ಅವರು ಮನಸ್ಸುಬಿಚ್ಚಿ ಮಾತಾಡೋಕೆ ಅವಕಾಶ ಮಾಡ್ಕೊಡಿ. ಪರಿಸ್ಥಿತಿ ನೋಡ್ಕೊಂಡು ಪ್ರಶ್ನೆ ಕೇಳಿ.