ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂಭಾಷಣೆ ಶುರುಮಾಡಿ

ಪಾಠ 2

ಸ್ವಾಭಾವಿಕತೆ

ಸ್ವಾಭಾವಿಕತೆ

ತತ್ವ: “ಸರಿಯಾದ ಸಮಯದಲ್ಲಿ ಹೇಳಿದ ಮಾತು ಎಷ್ಟೋ ಉತ್ತಮ.”—ಜ್ಞಾನೋ. 15:23.

ಫಿಲಿಪ್ಪ ಏನು ಮಾಡಿದನು?

1. ವಿಡಿಯೋ ನೋಡಿ ಅಥವಾ ಅಪೊಸ್ತಲರ ಕಾರ್ಯ 8:30, 31 ಓದಿ. ಆಮೇಲೆ ಈ ಪ್ರಶ್ನೆಗಳ ಬಗ್ಗೆ ಯೋಚ್ನೆ ಮಾಡಿ:

  1.   ಎ. ಫಿಲಿಪ್ಪ ತನ್ನ ಮಾತನ್ನ ಹೇಗೆ ಶುರುಮಾಡಿದ?

  2.  ಬಿ. ಫಿಲಿಪ್ಪ ಮಾತನ್ನ ಶುರುಮಾಡಿದ ರೀತಿ ಮತ್ತು ಒಂದು ಹೊಸ ವಿಷ್ಯನ ಕಲಿಸಿದ ರೀತಿ ಸ್ವಾಭಾವಿಕವಾಗಿತ್ತು ಅಂತ ಹೇಗೆ ಹೇಳಬಹುದು?

ನಮಗೇನು ಪಾಠ?

2. ಮಾತುಕತೆ ಸ್ವಾಭಾವಿಕವಾಗಿದ್ರೆ ಜನರು ನಮ್ಮ ಜೊತೆ ಆರಾಮಾಗಿ ಮಾತಾಡ್ತಾರೆ, ನಾವು ಸಾರೋ ಸಂದೇಶವನ್ನೂ ಕೇಳಿಸ್ಕೊಳ್ತಾರೆ.

ಫಿಲಿಪ್ಪನ ತರ ನೀವೂ ಮಾಡಿ

3. ಗಮನಿಸಿ. ಒಬ್ಬ ವ್ಯಕ್ತಿಯ ಮುಖ, ಹಾವಭಾವ ನೋಡಿದಾಗ ಅವರ ಬಗ್ಗೆ ತುಂಬ ವಿಷ್ಯ ಗೊತ್ತಾಗುತ್ತೆ. ಅವ್ರಿಗೆ ನಮ್ಮ ಜೊತೆ ಮಾತಾಡೋಕೆ ಇಷ್ಟ ಇದ್ಯಾ ಅಂತಾನೂ ತಿಳ್ಕೊಬಹುದು. “ನಿಮಗೆ ಇದು ಗೊತ್ತಾ?” ಅಂತ ಹೇಳಿ ಬೈಬಲಲ್ಲಿರೋ ಯಾವುದಾದ್ರೂ ಒಂದು ವಿಷ್ಯ ಅವ್ರಿಗೆ ಹೇಳಬಹುದು. ಒಂದುವೇಳೆ ಅವ್ರಿಗೆ ನಮ್ಮ ಹತ್ರ ಮಾತಾಡೋಕೆ ಇಷ್ಟ ಇಲ್ಲಾಂದ್ರೆ ಮಾತಾಡಕ್ಕೆ ಹೋಗಬೇಡಿ.

4. ತಾಳ್ಮೆ ತೋರಿಸಿ. ಆರಂಭದಲ್ಲೇ ಹೇಗಾದ್ರೂ ಮಾಡಿ ಬೈಬಲ್‌ ಬಗ್ಗೆ ಮಾತಾಡಬೇಕು ಅಂತ ಅವಸರ ಪಡಬೇಡಿ. ಆ ವಿಷ್ಯ ಸ್ವಾಭಾವಿಕವಾಗಿ ಬರೋ ತರ ಅವಕಾಶಕ್ಕೋಸ್ಕರ ಕಾಯಿರಿ. ಕೆಲವೊಂದು ಸಾರಿ ಮುಂದಿನ ಭೇಟಿಯಲ್ಲಿ ಅದ್ರ ಬಗ್ಗೆ ಮಾತಾಡೋಕೆ ನಮಗೆ ಅವಕಾಶ ಸಿಗಬಹುದು.

5. ಹೊಂದಿಸ್ಕೊಳ್ಳಿ. ಮಾತಾಡ್ತಾ ಮಾತಾಡ್ತಾ ಆ ವ್ಯಕ್ತಿ ಬೇರೆ ವಿಷ್ಯದ ಬಗ್ಗೆ ಮಾತಾಡಕ್ಕೆ ಶುರುಮಾಡಬಹುದು. ಆಗ ನಾವು ಆ ವ್ಯಕ್ತಿಗೆ ಏನು ಇಷ್ಟಾನೋ ಅದರ ಬಗ್ಗೆ ಮಾತಾಡಬೇಕಾಗುತ್ತೆ. ಆಗ ನಾವು ಮನಸ್ಸಲ್ಲಿ ಅಂದ್ಕೊಂಡಿರೋ ಬೈಬಲ್‌ ವಿಷ್ಯನ್ನಲ್ಲ, ಬೇರೆ ಬೈಬಲ್‌ ವಿಷ್ಯನ ಹೇಳಬೇಕಾಗುತ್ತೆ.