ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂಭಾಷಣೆ ಶುರುಮಾಡಿ

ಪಾಠ 3

ದಯೆ

ದಯೆ

ತತ್ವ: “ಪ್ರೀತಿ ಇರುವವನು . . . ದಯೆ ತೋರಿಸ್ತಾನೆ.” —1 ಕೊರಿಂ. 13:4.

ಯೇಸು ಏನು ಮಾಡಿದನು?

1. ವಿಡಿಯೋ ನೋಡಿ ಅಥವಾ ಯೋಹಾನ 9:1-7 ಓದಿ. ಆಮೇಲೆ ಈ ಪ್ರಶ್ನೆಗಳ ಬಗ್ಗೆ ಯೋಚ್ನೆ ಮಾಡಿ:

  1.   ಎ. ಯೇಸು ಮೊದಲು ಏನು ಮಾಡಿದನು? ಕುರುಡನನ್ನ ವಾಸಿ ಮಾಡಿದ್ನಾ ಅಥವಾ ಅವನಿಗೆ ಸಿಹಿಸುದ್ದಿ ಸಾರಿದ್ನಾ?—ಯೋಹಾನ 9:35-38 ನೋಡಿ.

  2.  ಬಿ. ಯೇಸು ಹೇಳಿದ್ದನ್ನ ಆ ವ್ಯಕ್ತಿ ಕೇಳಿಸ್ಕೊಳ್ಳೋಕೆ ಕಾರಣ ಏನು?

ನಮಗೇನು ಪಾಠ?

2. ಜನ್ರಿಗೆ ನಾವು ಕಾಳಜಿ ತೋರಿಸ್ತೀವಿ ಅಂತ ಅನಿಸಿದ್ರೆ ನಾವು ಹೇಳೋದನ್ನ ಅವರು ಕೇಳೋಕೆ ಮನಸ್ಸು ಮಾಡ್ತಾರೆ.

ಯೇಸು ತರ ನೀವೂ ಮಾಡಿ

3. ಒಬ್ಬ ವ್ಯಕ್ತಿಯ ಪರಿಸ್ಥಿತಿಯನ್ನ ಚೆನ್ನಾಗಿ ಅರ್ಥಮಾಡ್ಕೊಳ್ಳಿ.

  1.   ಎ. ‘ಅವರ ಮನಸ್ಸಲ್ಲಿ ಏನೆಲ್ಲಾ ಓಡ್ತಿದೆ? ನಾನು ಅವ್ರಿಗೆ ಏನ್‌ ಹೇಳಿದ್ರೆ ಸಹಾಯ ಆಗುತ್ತೆ, ಖುಷಿಯಾಗುತ್ತೆ?’ ಅಂತ ಯೋಚ್ನೆ ಮಾಡಿ. ಆಗ ನಾವು ಏನೋ ದಯೆ ತೋರಿಸಬೇಕಲ್ಲ ಅಂತಲ್ಲ ಮನಸಾರೆ ದಯೆ ತೋರಿಸ್ತೀವಿ.

  2.  ಬಿ. ಅವರು ಯಾವುದಾದ್ರೂ ಒಂದು ವಿಷ್ಯದ ಬಗ್ಗೆ ಅಭಿಪ್ರಾಯ ಹೇಳಿದಾಗ ಅಥವಾ ತಮ್ಮ ಕಷ್ಟನ ಹೇಳ್ಕೊಂಡಾಗ ಚೆನ್ನಾಗಿ ಕೇಳಿಸ್ಕೊಳ್ಳಿ, ವಿಷ್ಯ ಬದಲಾಯಿಸೋಕೆ ಹೋಗಬೇಡಿ. ಹೀಗೆ ಕಾಳಜಿ ತೋರಿಸಿ.

4. ಪ್ರೀತಿ ಮತ್ತು ಗೌರವದಿಂದ ಮಾತಾಡಿ. ನಮಗೆ ಜನರ ಮೇಲೆ ದಯೆ ಇದ್ರೆ, ಅವರಿಗೆ ಸಹಾಯ ಮಾಡಬೇಕು ಅಂತ ಮನಸ್ಸಿದ್ರೆ ಅದು ನಮ್ಮ ಮಾತಲ್ಲೇ ಗೊತ್ತಾಗುತ್ತೆ. ಹಾಗಾಗಿ ಏನು ಮಾತಾಡಬೇಕು, ಹೇಗೆ ಮಾತಾಡಬೇಕು ಅನ್ನೋದಕ್ಕೆ ಗಮನ ಕೊಡಿ. ಅವ್ರಿಗೆ ಬೇಜಾರ್‌ ಆಗೋ ತರ ಮಾತಾಡಬೇಡಿ.

5. ಸಹಾಯ ಮಾಡಿ. ನಿಮ್ಮ ಕೈಲಾದ ಸಹಾಯ ಮಾಡೋಕೆ ಅವಕಾಶಗಳನ್ನ ಹುಡುಕ್ತಾ ಇರಿ. ಈ ತರ ಚಿಕ್ಕಪುಟ್ಟ ಸಹಾಯ ಮಾಡಿದಾಗ ಜನರು ಸಿಹಿಸುದ್ದಿ ಕೇಳೋಕೆ ಮನಸ್ಸು ಮಾಡಬಹುದು.