ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂಭಾಷಣೆ ಶುರುಮಾಡಿ

ಪಾಠ 4

ದೀನತೆ

ದೀನತೆ

ತತ್ವ: “ದೀನತೆ ತೋರಿಸಿ, ನಿಮಗಿಂತ ಬೇರೆಯವ್ರನ್ನ ಶ್ರೇಷ್ಠವಾಗಿ ನೋಡಿ.”—ಫಿಲಿ. 2:3.

ಪೌಲ ಏನು ಮಾಡಿದನು?

1. ವಿಡಿಯೋ ನೋಡಿ ಅಥವಾ ಅಪೊಸ್ತಲರ ಕಾರ್ಯ 26:2, 3 ಓದಿ. ಆಮೇಲೆ ಈ ಪ್ರಶ್ನೆಗಳ ಬಗ್ಗೆ ಯೋಚ್ನೆ ಮಾಡಿ:

  1.   ಎ. ಪೌಲ ಅಗ್ರಿಪ್ಪ ರಾಜನ ಹತ್ರ ಮಾತಾಡುವಾಗ ದೀನತೆಯನ್ನ ಹೇಗೆ ತೋರಿಸಿದ?

  2.  ಬಿ. ಪೌಲ ಅಗ್ರಿಪ್ಪ ರಾಜನ ಗಮನವನ್ನ ತನ್ನ ಕಡೆಗೆ ಅಲ್ಲ, ಯೆಹೋವನ ಕಡೆಗೆ ಮತ್ತು ವಚನಗಳ ಕಡೆಗೆ ಹೇಗೆ ಸೆಳೆದ?—ಅಪೊಸ್ತಲರ ಕಾರ್ಯ 26:22 ನೋಡಿ.

ನಮಗೇನು ಪಾಠ?

2. ನಾವು ದೀನತೆಯಿಂದ, ಗೌರವದಿಂದ ಮಾತಾಡಿದ್ರೆ ಜನರು ನಾವು ಹೇಳೋ ಸಂದೇಶವನ್ನ ಕೇಳಿಸ್ಕೊಳ್ತಾರೆ.

ಪೌಲನ ತರ ನೀವೂ ಮಾಡಿ

3. ಜಂಬದಿಂದ ಮಾತಾಡಬೇಡಿ. ‘ನಮಗೇ ಎಲ್ಲ ಗೊತ್ತು, ನಿಮಗೇನೂ ಗೊತ್ತಿಲ್ಲ’ ಅನ್ನೋ ತರ ಮಾತಾಡಬೇಡಿ. ಗೌರವದಿಂದ ಮಾತಾಡಿ.

4. ನೀವು ಹೇಳೋ ವಿಷ್ಯ ಬೈಬಲಿಂದ ಅಂತ ಅವ್ರಿಗೆ ಗೊತ್ತಾಗೋ ತರ ಮಾತಾಡಿ. ಬೈಬಲಲ್ಲಿರೋ ಮಾತುಗಳಿಗೆ ಜನರ ಜೀವನವನ್ನ ಬದಲಾಯಿಸೋ ಶಕ್ತಿಯಿದೆ. ಅದಕ್ಕೇ ನಾವು ಬೈಬಲನ್ನ ಬಳಸಿದಾಗ ಅವರು ನಮ್ಮ ಮೇಲೆ ಅಲ್ಲ, ಬೈಬಲ್‌ ಮೇಲೆ ನಂಬಿಕೆ ಇಡೋಕೆ ಆಗುತ್ತೆ.

5. ಸಮಾಧಾನವಾಗಿ ಇರಿ. ನೀವು ಹೇಳಿದ್ದೇ ಸರಿ ಅನ್ನೋ ತರ ಮಾತಾಡಬೇಡಿ, ವಾದ ಮಾಡಬೇಡಿ. ದೀನತೆ ಇರೋರು ಶಾಂತವಾಗಿ ಇರ್ತಾರೆ. ಯಾವಾಗ ಮಾತನ್ನ ನಿಲ್ಲಿಸಿ, ಅಲ್ಲಿಂದ ಹೋಗಬೇಕು ಅಂತ ಅವ್ರಿಗೆ ಗೊತ್ತಿರುತ್ತೆ. (ಜ್ಞಾನೋ. 17:14; ತೀತ 3:2) ನಾವು ಈಗ ಸಮಾಧಾನವಾಗಿ ಮಾತಾಡಿದ್ರೆ ಮುಂದೊಂದು ದಿನ ಅವರು ಸಿಹಿಸುದ್ದಿಯನ್ನ ಕೇಳಿಸ್ಕೊಬಹುದು.