ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂಭಾಷಣೆ ಶುರುಮಾಡಿ

ಪಾಠ 6

ಹಿಂಜರಿಬೇಡಿ

ಹಿಂಜರಿಬೇಡಿ

ತತ್ವ: “ನಮ್ಮ ದೇವರು ಆತನ ಸಿಹಿಸುದ್ದಿಯನ್ನ ನಿಮಗೆ ಹೇಳೋಕೆ ನಮಗೆ ಧೈರ್ಯ ಕೊಟ್ಟನು.”—1 ಥೆಸ. 2:2.

ಯೇಸು ಏನು ಮಾಡಿದನು?

1. ವಿಡಿಯೋ ನೋಡಿ ಅಥವಾ ಲೂಕ 19:1-7 ಓದಿ. ಆಮೇಲೆ ಈ ಪ್ರಶ್ನೆಗಳ ಬಗ್ಗೆ ಯೋಚ್ನೆ ಮಾಡಿ:

  1.   ಎ. ಕೆಲವರು ಜಕ್ಕಾಯನ ಜೊತೆ ಯಾಕೆ ಸೇರ್ತಿರಲಿಲ್ಲ?

  2.  ಬಿ. ಆದ್ರೂ ಯೇಸು ಜಕ್ಕಾಯನಿಗೆ ಸಿಹಿಸುದ್ದಿ ಸಾರೋಕೆ ಯಾಕೆ ಹಿಂಜರಿಲಿಲ್ಲ?

ನಮಗೇನು ಪಾಠ?

2. ಹಿಂಜರಿದೆ ಇದ್ರೆ ನಾವು ಎಲ್ಲಾ ತರದ ಜನರಿಗೂ ಸಿಹಿಸುದ್ದಿ ಸಾರೋಕೆ ಆಗುತ್ತೆ.

ಯೇಸು ತರ ನೀವೂ ಮಾಡಿ

3. ಯೆಹೋವನ ಮೇಲೆ ಭರವಸೆ ಇಡಿ. ಸಿಹಿಸುದ್ದಿ ಸಾರೋಕೆ ಯೇಸುಗೆ ಪವಿತ್ರಶಕ್ತಿ ಸಹಾಯ ಮಾಡ್ತು. ನಿಮಗೂ ಸಹಾಯ ಮಾಡುತ್ತೆ. (ಮತ್ತಾ. 10:19, 20; ಲೂಕ 4:18) ಕೆಲವರನ್ನ ನೋಡಿದ್ರೆ ನಮಗೆ ಭಯ ಆಗುತ್ತೆ. ಆಗ ಯೆಹೋವನ ಹತ್ರ ಸಹಾಯ ಕೇಳಿ.—ಅ. ಕಾ. 4:29.

4. ಜನರನ್ನ ನೋಡಿ ತೀರ್ಪು ಮಾಡಬೇಡಿ. ಒಬ್ಬರು ನೋಡೋಕೆ ಹೇಗಿದ್ದಾರೆ, ಅವರ ಸ್ಥಾನಮಾನ ಏನು, ಜೀವನಶೈಲಿ ಹೇಗಿದೆ ಮತ್ತು ಆಚಾರ-ವಿಚಾರಗಳನ್ನ ನೋಡಿ ಅವರ ಹತ್ರ ಮಾತಾಡೋಕೆ ಹಿಂಜರಿತೀವಿ. ಆದ್ರೆ ನೆನಪಿಡಿ:

  1.   ಎ. ಜನರ ಮನಸ್ಸಲ್ಲಿ ಏನಿದೆ ಅಂತ ಅರ್ಥ ಮಾಡ್ಕೊಳ್ಳೋಕೆ ಆಗೋದು ಯೆಹೋವ ಮತ್ತು ಯೇಸುಗೆ ಮಾತ್ರ, ನಮಗಲ್ಲ.

  2.  ಬಿ. ಯೆಹೋವ ದೇವರಿಗೆ ಯಾರನ್ನ ಬೇಕಾದ್ರೂ ಬದಲಾಯಿಸೋ ಶಕ್ತಿ ಇದೆ.

5. ಅತಿಯಾದ ಧೈರ್ಯ ತೋರಿಸಬೇಡಿ, ಹುಷಾರಾಗಿರಿ. (ಮತ್ತಾ. 10:16) ವಾದ ಮಾಡಬೇಡಿ. ಒಬ್ಬ ವ್ಯಕ್ತಿಗೆ ಸಿಹಿಸುದ್ದಿ ಕೇಳೋಕೆ ಇಷ್ಟ ಇಲ್ಲ ಅಂತ ಗೊತ್ತಾದ್ರೆ ಅಥವಾ ನಿಮಗೇನಾದ್ರೂ ತೊಂದರೆ ಆಗುತ್ತೆ ಅಂತ ಅನಿಸಿದ್ರೆ ಜಾಣ್ಮೆಯಿಂದ ತಕ್ಷಣ ಸಂಭಾಷಣೆಯನ್ನ ಅಲ್ಲಿಗೆ ನಿಲ್ಲಿಸಿ.—ಜ್ಞಾನೋ. 17:14.