ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಿಷ್ಯರಾಗೋಕೆ ಕಲಿಸಿ

ಪಾಠ 10

ಛಲ

ಛಲ

ತತ್ವ: “ದೇವರ ಸಿಹಿಸುದ್ದಿಯನ್ನ ನಿಮಗೆ ಹೇಳೋಕೆ ಅಷ್ಟೇ ಅಲ್ಲ, ನಿಮಗಾಗಿ ಜೀವ ಕೊಡೋಕೂ ತಯಾರಾಗಿದ್ವಿ. ನಿಮ್ಮನ್ನ ನಾವು ಅಷ್ಟು ಪ್ರೀತಿಸಿದ್ವಿ.”—1 ಥೆಸ. 2:8.

ಯೇಸು ಏನು ಮಾಡಿದನು?

1. ವಿಡಿಯೋ ನೋಡಿ ಅಥವಾ ಯೋಹಾನ 3:1, 2 ಓದಿ. ಆಮೇಲೆ ಈ ಪ್ರಶ್ನೆಗಳ ಬಗ್ಗೆ ಯೋಚ್ನೆ ಮಾಡಿ:

  1.   ಎ. ನಿಕೊದೇಮ ಯೇಸು ಹತ್ರ ಯಾಕೆ ರಾತ್ರಿ ಹೊತ್ತಲ್ಲೇ ಬಂದಿರಬೇಕು?—ಯೋಹಾನ 12:42, 43 ನೋಡಿ.

  2.  ಬಿ. ನಿಕೊದೇಮನಿಗೆ ಕಲಿಸಲೇಬೇಕು ಅನ್ನೋ ಛಲ ಯೇಸುಗಿತ್ತು ಅಂತ ಹೇಗೆ ಹೇಳಬಹುದು?

ನಮಗೇನು ಪಾಠ?

2. ಜನರಿಗೆ ಶಿಷ್ಯರಾಗೋಕೆ ಕಲಿಸಬೇಕು ಅನ್ನೋ ಛಲ ನಮ್ಮಲ್ಲಿದ್ರೆ ಅವರ ಮೇಲೆ ನಮ್ಗೆ ಪ್ರೀತಿ ಇದೆ ಅಂತ ತೋರಿಸ್ಕೊಡ್ತೀವಿ.

ಯೇಸು ತರ ನೀವೂ ಮಾಡಿ

3. ವಿದ್ಯಾರ್ಥಿ ಇಷ್ಟಪಡೋ ಸಮಯ ಮತ್ತು ಸ್ಥಳದಲ್ಲಿ ಸ್ಟಡಿ ಮಾಡಿ. ಯಾವತ್ತು, ಎಷ್ಟು ಗಂಟೆಗೆ, ಎಲ್ಲಿ ಸ್ಟಡಿ ಮಾಡಬೇಕು ಅಂತ ವಿದ್ಯಾರ್ಥಿಯನ್ನ ಕೇಳಿ. ಅವರು ಮನೆಯಲ್ಲಿ, ಕೆಲ್ಸದ ಸ್ಥಳದಲ್ಲಿ ಅಥವಾ ಬೇರೆ ಎಲ್ಲಾದ್ರೂ ಸ್ಟಡಿ ಮಾಡೋಕೆ ಇಷ್ಟಪಡಬಹುದು. ಅದಕ್ಕೆ ತಕ್ಕ ಹಾಗೆ ನಿಮ್ಮ ಸಮಯನ ಹೊಂದಿಸ್ಕೊಳ್ಳೋಕೆ ಆದಷ್ಟು ಪ್ರಯತ್ನ ಮಾಡಿ.

4. ಪ್ರತಿವಾರ ತಪ್ಪದೇ ಸ್ಟಡಿ ಮಾಡಿ. ಯಾವುದಾದ್ರೂ ಒಂದು ವಾರ ನಿಮಗೆ ಸ್ಟಡಿಗೆ ಹೋಗೋಕೆ ಆಗ್ತಿಲ್ಲ ಅಂದ್ರೆ ಅದನ್ನ ತಪ್ಪಿಸೋ ಬದಲು ಹೀಗೆ ಮಾಡಬಹುದಾ ನೋಡಿ:

  1.   ಎ. ಅದೇ ವಾರದಲ್ಲಿ ಬೇರೆ ಯಾವುದಾದ್ರೂ ದಿನ ಸ್ಟಡಿ ಮಾಡಕ್ಕಾಗುತ್ತಾ?

  2.  ಬಿ. ಫೋನಲ್ಲಿ ಅಥವಾ ವಿಡಿಯೋ ಕಾಲ್‌ನಲ್ಲಿ ಸ್ಟಡಿ ಮಾಡಕ್ಕಾಗುತ್ತಾ?

  3.  ಸಿ. ಬೇರೆ ಬ್ರದರ್‌ ಅಥವಾ ಸಿಸ್ಟರ್‌ಗೆ ‘ನನ್ನ ಸ್ಟಡಿಗೆ ಹೋಗ್ತೀರಾ’ ಅಂತ ಕೇಳಿ ನೋಡ್ಲಾ?

5. ಸರಿಯಾಗಿ ಯೋಚ್ನೆ ಮಾಡೋಕೆ ಪ್ರಾರ್ಥನೆ ಮಾಡಿ. ಒಂದುವೇಳೆ ನಿಮ್ಮ ವಿದ್ಯಾರ್ಥಿ ಸ್ಟಡಿನಾ ತಪ್ಪಿಸ್ತಿದ್ರೆ, ಕಲ್ತಿರೋದನ್ನ ಪಾಲಿಸೋಕೆ ಕಷ್ಟಪಡ್ತಿದ್ರೆ ಅವ್ರಿಗೆ ಸಹಾಯ ಮಾಡಲೇಬೇಕು ಅನ್ನೋ ಛಲನಾ ಬಿಟ್ಕೊಡಬೇಡಿ. (ಫಿಲಿ. 2:13) ಯೆಹೋವ ದೇವರ ಹತ್ರ ಸಹಾಯಕ್ಕಾಗಿ ಬೇಡ್ಕೊಳ್ಳಿ. ನಿಮ್ಮ ವಿದ್ಯಾರ್ಥಿಯಲ್ಲೂ ಒಳ್ಳೇ ಗುಣಗಳು ಇರುತ್ತೆ, ‘ಅದಕ್ಕೆ ಗಮನ ಕೊಡೋಕೆ ಸಹಾಯ ಮಾಡಪ್ಪಾ’ ಅಂತ ಕೇಳ್ಕೊಳ್ಳಿ.