ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಿಷ್ಯರಾಗೋಕೆ ಕಲಿಸಿ

ಪಾಠ 11

ಸರಳತೆ

ಸರಳತೆ

ತತ್ವ: ‘ಸುಲಭವಾಗಿ ಅರ್ಥ ಆಗೋ ತರ ಮಾತಾಡಿ.’—1 ಕೊರಿಂ. 14:9.

ಯೇಸು ಏನು ಮಾಡಿದನು?

1. ವಿಡಿಯೋ ನೋಡಿ ಅಥವಾ ಮತ್ತಾಯ 6:25-27 ಓದಿ. ಆಮೇಲೆ ಈ ಪ್ರಶ್ನೆಗಳ ಬಗ್ಗೆ ಯೋಚ್ನೆ ಮಾಡಿ:

  1.   ಎ. ಯೆಹೋವ ದೇವರ ಕಾಳಜಿ ಬಗ್ಗೆ ವಿವರಿಸೋಕೆ ಯೇಸು ಯಾವ ಉದಾಹರಣೆ ಬಳಸಿದನು?

  2.  ಬಿ. ಯೇಸುಗೆ ಪಕ್ಷಿಗಳ ಬಗ್ಗೆ ತುಂಬಾ ಗೊತ್ತಿದ್ರೂ ಯಾವ ಸರಳವಾದ ವಿಷ್ಯನಾ ಹೇಳಿದನು? ಈ ತರ ಕಲಿಸೋದು ಯಾಕೆ ಒಳ್ಳೇದು?

ನಮಗೇನು ಪಾಠ?

2. ಸರಳವಾಗಿ ಕಲಿಸಿದ್ರೆ ಜನರ ಮನಸ್ಸನ್ನ ಮುಟ್ಟೋಕೆ ಆಗುತ್ತೆ, ಕಲ್ತಿದ್ದನ್ನ ಅವರು ಯಾವತ್ತೂ ಮರಿಯಲ್ಲ, ನೆನಪಲ್ಲಿ ಇಟ್ಕೊಳ್ತಾರೆ.

ಯೇಸು ತರ ನೀವೂ ಮಾಡಿ

3. ನೀವೇ ತುಂಬಾ ಮಾತಾಡಬೇಡಿ. ಒಂದು ವಿಷ್ಯದ ಬಗ್ಗೆ ನಿಮಗೆ ಗೊತ್ತಿರೋದನ್ನೆಲ್ಲಾ ಹೇಳೋಕೆ ಹೋಗಬೇಡಿ. ಸ್ಟಡಿ ಮಾಡ್ತಿರೋ ಪ್ರಕಾಶನದಲ್ಲಿರೋ ವಿಷ್ಯವನ್ನ ಚರ್ಚೆ ಮಾಡಿ. ಪ್ರಶ್ನೆ ಕೇಳಿದ ಮೇಲೆ ವಿದ್ಯಾರ್ಥಿ ಉತ್ರ ಕೊಡೋ ತನಕ ತಾಳ್ಮೆಯಿಂದ ಕಾಯಿರಿ. ಉತ್ರ ಗೊತ್ತಿಲ್ಲ ಅಂದ್ರೆ ಅಥವಾ ಅವರು ಹೇಳಿದ ಉತ್ರ ಬೈಬಲ್‌ಗೆ ವಿರುದ್ಧವಾಗಿದ್ರೆ ಚಿಕ್ಕಚಿಕ್ಕ ಪ್ರಶ್ನೆಗಳನ್ನ ಕೇಳಿ ಅವ್ರಿಗೆ ಅರ್ಥ ಮಾಡಿಸಿ. ನಿಮ್ಮ ವಿದ್ಯಾರ್ಥಿಗೆ ಮುಖ್ಯ ವಿಷ್ಯ ಅರ್ಥ ಆಗಿದ ತಕ್ಷಣ ಮುಂದೆ ಹೋಗಿ.

4. ವಿದ್ಯಾರ್ಥಿಗೆ ಈಗಾಗಲೇ ಏನು ಗೊತ್ತಿದೆ ಅಂತ ತಿಳ್ಕೊಳ್ಳಿ. ಈ ರೀತಿ ಮಾಡೋದು ನಿಮಗೆ ಹೊಸ ವಿಷ್ಯ ಕಲಿಸೋಕೆ ಸಹಾಯ ಮಾಡುತ್ತೆ. ಉದಾಹರಣೆಗೆ, ತೀರಿ ಹೋದವರು ಮತ್ತೆ ಎದ್ದು ಬರ್ತಾರೆ ಅನ್ನೋ ಪಾಠನಾ ನೀವು ಚರ್ಚೆ ಮಾಡಬೇಕು ಅಂತ ಇದ್ದೀರ. ಅದಕ್ಕೂ ಮುಂಚೆ, ಸತ್ತವರಿಗೆ ಏನಾಗುತ್ತೆ ಅಂತ ಈಗಾಗಲೇ ಸ್ಟಡಿಯಲ್ಲಿ ಅವರು ಏನು ಕಲ್ತಿದ್ದಾರೆ ಅಂತ ಕೇಳಿ.

5. ಚೆನ್ನಾಗಿ ಯೋಚ್ನೆ ಮಾಡಿ ಉದಾಹರಣೆಗಳನ್ನ ಬಳಸಿ. ಉದಾಹರಣೆ ಬಳಸೋದಕ್ಕಿಂತ ಮುಂಚೆ ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ:

  1.   ಎ. ‘ಈ ಉದಾಹರಣೆ ಸರಳವಾಗಿದ್ಯಾ?’

  2.  ಬಿ. ‘ಇದು ನನ್ನ ವಿದ್ಯಾರ್ಥಿಗೆ ಸುಲಭವಾಗಿ ಅರ್ಥ ಆಗುತ್ತಾ?’

  3.  ಸಿ. ‘ನಾನು ಈ ಉದಾಹರಣೆ ಬಳಸಿದ್ರೆ ಅವರು ಇದನ್ನ ಮಾತ್ರ ನೆನಪಲ್ಲಿ ಇಟ್ಕೊಳ್ತಾರಾ ಅಥವಾ ಮುಖ್ಯ ವಿಷ್ಯನೂ ನೆನಪಲ್ಲಿ ಇಟ್ಕೊಳ್ತಾರಾ?’