ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿಶಿಷ್ಟ ಸಿ

ಖುಷಿಯಾಗಿ ಬಾಳೋಣ ಪುಸ್ತಕ ಬಳಸಿ ಹೇಗೆ ಸ್ಟಡಿ ಮಾಡ್ಲಿ?

ಖುಷಿಯಾಗಿ ಬಾಳೋಣ ಪುಸ್ತಕ ಬಳಸಿ ಹೇಗೆ ಸ್ಟಡಿ ಮಾಡ್ಲಿ?

ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕವನ್ನ ಸಹೋದರರು ತುಂಬಾ ಯೋಚ್ನೆ ಮಾಡಿ, ಪ್ರಾರ್ಥನೆ ಮಾಡಿ, ಸಂಶೋಧನೆ ಮಾಡಿ ತಯಾರಿಸಿದ್ದಾರೆ. ಈ ಪುಸ್ತಕದಿಂದ ವಿದ್ಯಾರ್ಥಿಗೆ ಪೂರ್ತಿ ಪ್ರಯೋಜನ ಸಿಗಬೇಕಂದ್ರೆ ನಾವೇನು ಮಾಡಬೇಕು ಅಂತ ಮುಂದೆ ನೋಡೋಣ.

ಸ್ಟಡಿಗೆ ಹೋಗೋದಕ್ಕಿಂತ ಮುಂಚೆ

  1. 1. ಚೆನ್ನಾಗಿ ತಯಾರಿ ಮಾಡಿ. ನಿಮ್ಮ ವಿದ್ಯಾರ್ಥಿಗೆ ಏನು ಅಗತ್ಯ ಇದೆ, ಅವರ ಪರಿಸ್ಥಿತಿ ಏನು, ಅವರ ನಂಬಿಕೆ ಏನು ಅಂತ ಯೋಚ್ನೆ ಮಾಡಿ. ನಿಮ್ಮ ವಿದ್ಯಾರ್ಥಿಗೆ ಯಾವುದಾದ್ರೂ ವಿಷ್ಯ ಅರ್ಥ ಮಾಡ್ಕೊಳ್ಳೋಕೆ ಅಥವಾ ಪಾಲಿಸೋಕೆ ಕಷ್ಟ ಆಗುತ್ತೆ ಅಂತ ಅನಿಸಿದ್ರೆ ಅವರಿಗೆ ಹೇಗೆ ಸಹಾಯ ಮಾಡಬಹುದು ಅಂತ ಯೋಚಿಸಿ. “ಇದನ್ನೂ ನೋಡಿ” ಅನ್ನೋ ಭಾಗದಲ್ಲಿರೋ ವಿಷ್ಯ ನಿಮ್ಮ ವಿದ್ಯಾರ್ಥಿಗೆ ಸಹಾಯ ಮಾಡುತ್ತಾ ಅಂತ ಯೋಚ್ನೆ ಮಾಡಿ. ಸಾಧ್ಯ ಆದ್ರೆ ಸ್ಟಡಿ ಮಾಡೋವಾಗ ಅದನ್ನ ಬಳಸಿ.

ಸ್ಟಡಿ ಮಾಡುವಾಗ

  1. ನಿಮ್ಮ ವಿದ್ಯಾರ್ಥಿ ಒಪ್ಪೊದಾದ್ರೆ ಆರಂಭದಲ್ಲಿ ಮತ್ತು ಕೊನೆಯಲ್ಲಿ ಪ್ರಾರ್ಥನೆ ಮಾಡಿ.

  2. ನೀವೇ ತುಂಬ ಮಾತಾಡೋಕೆ ಹೋಗಬೇಡಿ. ಪುಸ್ತಕದಲ್ಲಿರೋ ಮಾಹಿತಿಯನ್ನ ಬಳಸೋದ್ರ ಕಡೆಗೆ ಗಮನ ಕೊಡಿ. ವಿದ್ಯಾರ್ಥಿ ಮನಸ್ಸು ಬಿಚ್ಚಿ ಮಾತಾಡೋಕೆ ಅವಕಾಶ ಮಾಡ್ಕೊಡಿ.

  3. ಒಂದು ಹೊಸ ಭಾಗವನ್ನ ಶುರುಮಾಡೋ ಮುಂಚೆ “ಈ ಭಾಗದಲ್ಲಿ ಏನಿದೆ” ಅನ್ನೋದನ್ನ ಓದಿ, ಆ ಭಾಗದಲ್ಲಿ ಬರೋ ಕೆಲವು ಪಾಠಗಳ ವಿಷ್ಯಗಳನ್ನ ಹೇಳಿ.

  4. ಒಂದೊಂದು ಭಾಗ ಮುಗಿದ ಮೇಲೆ ‘ಆ ಭಾಗದಲ್ಲಿ ನೀವೇನು ಕಲಿತ್ರಿ’ ಅನ್ನೋದ್ರ ಕೆಳಗಿರೋ ಪ್ರಶ್ನೆಗಳನ್ನ ಬಳಸಿ ಮುಖ್ಯ ವಿಷ್ಯಗಳನ್ನ ನೆನಪಿಸ್ಕೊಳ್ಳೋಕೆ ವಿದ್ಯಾರ್ಥಿಗೆ ಸಹಾಯ ಮಾಡಿ.

  5. ಸ್ಟಡಿ ಹೇಗೆ ಮಾಡೋದು:

    1. ಎ) ಪ್ಯಾರ ಓದಿ.

    2. ಬಿ) “ಓದಿ” ಅಂತ ಹೇಳಿರೋ ಎಲ್ಲಾ ವಚನಗಳನ್ನ ಓದಿ.

    3. ಸಿ) ಉಳಿದಿರೋ ವಚನಗಳನ್ನ ಬೇಕಿದ್ರೆ ಮಾತ್ರ ಓದಿ.

    4. ಡಿ) “ವಿಡಿಯೋ ನೋಡಿ” ಅಂತಿರೋ ಎಲ್ಲಾ ವಿಡಿಯೋಗಳನ್ನ ನೋಡಿ (ಅನುಕೂಲ ಇದ್ರೆ).

    5. ಈ) ಪ್ರತಿಯೊಂದು ಪ್ರಶ್ನೆನೂ ಕೇಳಿ.

    6. ಎಫ್‌) “ಹೆಚ್ಚನ್ನ ತಿಳಿಯೋಣ” ಭಾಗದಲ್ಲಿರೋ ಚಿತ್ರ ನೋಡಿ ಅದನ್ನ ವಿವರಿಸೋಕೆ ಹೇಳಿ.

    7. ಜಿ) “ಇದನ್ನ ಮಾಡಿ ನೋಡಿ” ಅನ್ನೋ ಬಾಕ್ಸನ್ನ ಬಳಸಿ ಯೆಹೋವನಿಗೆ ಹತ್ರ ಆಗೋಕೆ ವಿದ್ಯಾರ್ಥಿಗೆ ಸಹಾಯ ಮಾಡಿ. ಆಮೇಲೆ ಅಲ್ಲಿರೋ ಗುರಿ ಇಡೋಕೆ ಅಥವಾ ಬೇರೆ ಯಾವುದಾದ್ರೂ ಗುರಿ ಇಡೋಕೆ ಪ್ರೋತ್ಸಾಹ ಕೊಡಿ.

    8. ಹೆಚ್‌) “ಇದನ್ನೂ ನೋಡಿ” ಭಾಗದಲ್ಲಿರೋ ಯಾವುದಾದ್ರೂ ವಿಡಿಯೋ ಅಥವಾ ಲೇಖನ ವಿದ್ಯಾರ್ಥಿಗೆ ಇಷ್ಟ ಆಯ್ತಾ ಅಂತ ಕೇಳಿ.

    9. ಐ) ಒಂದು ಸಲಕ್ಕೆ ಒಂದು ಪಾಠವನ್ನ ಪೂರ್ತಿಯಾಗಿ ಮುಗಿಸೋಕೆ ಪ್ರಯತ್ನ ಮಾಡಿ.

ಸ್ಟಡಿ ಆದ್ಮೇಲೆ

  1. ವಿದ್ಯಾರ್ಥಿ ಬಗ್ಗೆ ಯೋಚ್ನೆ ಮಾಡ್ತಾ ಇರಿ. ಅವರು ಪ್ರಗತಿ ಮಾಡೋಕೆ ಮಾಡ್ತಿರೋ ಪ್ರಯತ್ನದ ಮೇಲೆ ಯೆಹೋವನ ಆಶೀರ್ವಾದ ಇರಲಿ ಅಂತ ಬೇಡ್ಕೊಳ್ಳಿ. ಅಷ್ಟೇ ಅಲ್ಲ ವಿವೇಕ ಕೊಡಪ್ಪಾ ಅಂತ ನಿಮಗೋಸ್ಕರನೂ ಬೇಡ್ಕೊಳ್ಳಿ. ಆಗ ಅವ್ರಿಗೆ ಹೇಗೆ ಸಹಾಯ ಮಾಡಬೇಕು ಅಂತ ನಿಮಗೆ ಗೊತ್ತಾಗುತ್ತೆ.