ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜ್ಞಾಪಿಸಿಕೊಳ್ಳಬೇಕಾದ ಆ ಗಮನಾರ್ಹ ದಿನ

ಜ್ಞಾಪಿಸಿಕೊಳ್ಳಬೇಕಾದ ಆ ಗಮನಾರ್ಹ ದಿನ

ಜ್ಞಾಪಿಸಿಕೊಳ್ಳಬೇಕಾದ ಆ ಗಮನಾರ್ಹ ದಿನ

ಮಾನವಕುಲವು ನಿತ್ಯವಾದ ಆಶೀರ್ವಾದಗಳನ್ನು ಪಡೆಯುವ ಪ್ರತೀಕ್ಷೆಯನ್ನು ಹೊಂದಸಾಧ್ಯವಾಗುವಂತೆ, ಅದರ ಭವಿಷ್ಯತ್ತನ್ನೇ ಪೂರ್ಣವಾಗಿ ಬದಲಾಯಿಸಿದ ದಿನ ಅದಾಗಿತ್ತು. ಇತಿಹಾಸದಾದ್ಯಂತ ಬೇರೆ ಯಾವ ದಿನವೂ ಮಾನವಕುಲದ ಭವಿಷ್ಯತ್ತಿನ ಮೇಲೆ ಇಷ್ಟು ಅಗಾಧವಾದ ಪರಿಣಾಮವನ್ನು ಬೀರಿರಲಿಲ್ಲ. ಯೇಸು ಏನನ್ನು ಮಾಡಲಿಕ್ಕಾಗಿ ಭೂಮಿಗೆ ಬಂದಿದ್ದನೋ ಅದನ್ನು ಪೂರ್ಣಗೊಳಿಸಿದ ದಿನವೇ ಅದಾಗಿತ್ತು. ಒಂದು ಯಾತನಾ ಕಂಭಕ್ಕೆ ಮೊಳೆಗಳಿಂದ ಜಡಿಯಲ್ಪಟ್ಟಿದ್ದವನಾಗಿದ್ದ ಅವನು ಕೊನೆಯುಸಿರೆಳೆಯುತ್ತಾ ಕೂಗಿ ಹೇಳಿದ್ದು: “ತೀರಿತು”! (ಯೋಹಾನ 19:30) ಯೇಸು ಯಾವ ಉದ್ದೇಶಕ್ಕಾಗಿ ಭೂಮಿಗೆ ಬಂದಿದ್ದನು?

ಬೈಬಲ್‌ ಹೇಳುವುದು: “ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆ ಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡು ಕೊಡುವದಕ್ಕೂ ಬಂದನು.” (ಮತ್ತಾಯ 20:28) ಬಾಧ್ಯತೆಯಾಗಿ ಪಡೆದಿದ್ದ ಪಾಪ ಮತ್ತು ಮರಣದಿಂದ ಮಾನವಕುಲವನ್ನು ವಿಮೋಚಿಸಲಿಕ್ಕಾಗಿ ಯೇಸು ತನ್ನ ಪ್ರಾಣ ಅಥವಾ ಜೀವವನ್ನೇ ಕೊಟ್ಟನು. ಹೌದು, “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಯೇಸುವಿನ ಯಜ್ಞವು ಎಷ್ಟು ಅಮೂಲ್ಯವಾದ ಒದಗಿಸುವಿಕೆಯಾಗಿದೆ!

ಇನ್ನೊಂದು ಕಾರಣಕ್ಕಾಗಿಯೂ ಯೇಸು ಮೃತಪಟ್ಟ ದಿನವು ಗಮನಾರ್ಹವಾದ ದಿನವಾಗಿದೆ. ಆ ದಿನವೇ ದೇವಕುಮಾರನು ತನ್ನ ಅಪೊಸ್ತಲರಿಗೆ ಅತ್ಯಮೂಲ್ಯವಾದ ಪಾಠಗಳನ್ನು ಕಲಿಸಿದನು ಮತ್ತು ಆ ಪಾಠಗಳೇ ಅವರು ನಂಬಿಗಸ್ತರಾಗಿ ಉಳಿಯುವಂತೆ ಅವರಿಗೆ ಸಹಾಯಮಾಡಲಿದ್ದವು. ಅವನ ಅಂತಿಮ ನುಡಿಗಳು ಆ ಶಿಷ್ಯರ ಹೃದಯಗಳನ್ನು ಎಷ್ಟರ ಮಟ್ಟಿಗೆ ಸ್ಪರ್ಶಿಸಿದ್ದಿರಬೇಕು! ಅವನ ಬೋಧನೆಗಳು ಯಾವುವು? ಯೇಸು ಅವರಿಗೆ ಏನನ್ನು ಕಲಿಸಿದನೋ ಅವುಗಳಿಂದ ನಾವು ಹೇಗೆ ಪ್ರಯೋಜನಗಳನ್ನು ಪಡೆಯಸಾಧ್ಯವಿದೆ? ಈ ಪ್ರಶ್ನೆಗಳು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವವು.