ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಅಮೂಲ್ಯವಾದ ರಕ್ತದ’ ಮೂಲಕ ಬಿಡುಗಡೆಗೊಳಿಸಲ್ಪಡುವುದು

‘ಅಮೂಲ್ಯವಾದ ರಕ್ತದ’ ಮೂಲಕ ಬಿಡುಗಡೆಗೊಳಿಸಲ್ಪಡುವುದು

‘ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕು’

‘ಅಮೂಲ್ಯವಾದ ರಕ್ತದ’ ಮೂಲಕ ಬಿಡುಗಡೆಗೊಳಿಸಲ್ಪಡುವುದು

ಯೆಹೋವನ ಪ್ರೀತಿಯ ಅತ್ಯಂತ ಮಹಾನ್‌ ಕೃತ್ಯವು, ಆತನು ತನ್ನ ಏಕಜಾತ ಪುತ್ರನನ್ನು ಕಳುಹಿಸಿದ್ದೇ ಆಗಿದೆ. ಈ ಮಗನು ತನ್ನ ಪರಿಪೂರ್ಣ ಮಾನವ ಜೀವವನ್ನು ವಿಮೋಚನಾ ಮೌಲ್ಯವಾಗಿ ಅರ್ಪಿಸಿದನು. ಯಾವ ಅಪರಿಪೂರ್ಣ ಮನುಷ್ಯನೂ, “ತನ್ನ ಸಹೋದರನು . . . ಶಾಶ್ವತವಾಗಿ ಬದುಕಿರುವದಕ್ಕಾಗಿ ದೇವರಿಗೆ ಈಡನ್ನು [ವಿಮೋಚನಾ ಮೌಲ್ಯವನ್ನು] ಕೊಟ್ಟು ಪ್ರಾಣವನ್ನು ಬಿಡಿಸಲಾರ”ನಾದುದರಿಂದ, ಪಾಪಪೂರ್ಣ ಮನುಷ್ಯರಾದ ನಮಗೆ ಬಿಡುಗಡೆಯ ಆವಶ್ಯಕತೆಯು ತೀರಾ ಪ್ರಬಲವಾಗಿದೆ. (ಕೀರ್ತನೆ 49:7-9) ದೇವರು “ತನ್ನ ಒಬ್ಬನೇ ಮಗನನ್ನು . . . ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟ”ದ್ದಕ್ಕೆ ನಾವು ಎಷ್ಟು ಕೃತಜ್ಞರಾಗಿದ್ದೇವೆ!​—⁠ಯೋಹಾನ 3:16.

ವಿಮೋಚನಾ ಮೌಲ್ಯವು ಹೇಗೆ ಬಿಡುಗಡೆಯನ್ನು ಒದಗಿಸುತ್ತದೆ? ಯೆಹೋವ ದೇವರ ಪ್ರೀತಿಯ ಈ ಅತಿ ಮಹಾನ್‌ ಕೃತ್ಯದ ಮೂಲಕ ನಾವು ವಿಮೋಚನೆಯನ್ನು ಗಳಿಸುವ ನಾಲ್ಕು ವಿಧಗಳನ್ನು ಪರಿಗಣಿಸೋಣ.

ವಿಮೋಚನಾ ಮೌಲ್ಯದ ಮೂಲಕ ಬಿಡುಗಡೆ

ಮೊದಲನೆಯದಾಗಿ, ಯೇಸುವಿನ ಯಜ್ಞವು ನಾವು ಬಾಧ್ಯತೆಯಾಗಿ ಪಡೆದಿರುವ ಪಾಪದಿಂದ ನಮ್ಮನ್ನು ಬಿಡುಗಡೆಗೊಳಿಸುತ್ತದೆ. ನಾವೆಲ್ಲರು ಪಾಪದಲ್ಲಿ ಹುಟ್ಟಿದ್ದೇವೆ. ಹೌದು, ಯೆಹೋವನ ನಿಯಮವನ್ನು ಉಲಂಘಿಸಶಕ್ತರಾಗುವ ಮೊದಲೇ ನಾವು ಪಾಪಿಗಳಾಗಿದ್ದೇವೆ. ಅದು ಹೇಗೆ ಸಾಧ್ಯ? ರೋಮಾಪುರ 5:12 ಹೇಳುವುದು: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು.” ಪಾಪಪೂರ್ಣ ಆದಾಮನ ಮಕ್ಕಳೋಪಾದಿ, ನಾವು ಅವನ ಅಪರಿಪೂರ್ಣ ಸ್ಥಿತಿಯನ್ನು ಬಾಧ್ಯತೆಯಾಗಿ ಹೊಂದಿದ್ದೇವೆ. ಆದರೂ ನಮಗಾಗಿ ವಿಮೋಚನಾ ಮೌಲ್ಯವು ಕೊಡಲ್ಪಟ್ಟಿರುವುದರಿಂದ, ಬಾಧ್ಯತೆಯಾಗಿ ಹೊಂದಿದ ಪಾಪದ ಹಿಡಿತದಿಂದ ನಾವು ಸ್ವತಂತ್ರಗೊಳ್ಳಲು ಸಾಧ್ಯವಾಗಿದೆ. (ರೋಮಾಪುರ 5:16) ಯೇಸು ‘ಎಲ್ಲರಿಗೋಸ್ಕರ ಮರಣವನ್ನು ಅನುಭವಿಸಿ’ ಆದಾಮನ ಸಂತತಿಯ ಪಾಪದ ಪರಿಣಾಮಗಳನ್ನು ಹೊತ್ತುಕೊಂಡನು.​—⁠ಇಬ್ರಿಯ 2:9; 2 ಕೊರಿಂಥ 5:21; 1 ಪೇತ್ರ 2:24.

ಎರಡನೆಯದಾಗಿ, ವಿಮೋಚನಾ ಮೌಲ್ಯವು ನಮ್ಮನ್ನು ಪಾಪದ ವಿನಾಶಕಾರಕ ಪರಿಣಾಮಗಳಿಂದ ವಿಮುಕ್ತಗೊಳಿಸುತ್ತದೆ. “ಯಾಕಂದರೆ ಪಾಪವು ಕೊಡುವ ಸಂಬಳ ಮರಣ.” (ರೋಮಾಪುರ 6:23) ಪಾಪಕ್ಕಾಗಿ ತೆರಬೇಕಾದ ದಂಡವು ಮರಣವಾಗಿದೆ. ತನ್ನ ಯಜ್ಞಾರ್ಪಿತ ಮರಣದ ಮೂಲಕ ದೇವಕುಮಾರನು ವಿಧೇಯ ಮಾನವಕುಲಕ್ಕೆ ನಿತ್ಯಜೀವವನ್ನು ಸಾಧ್ಯಮಾಡಿದನು. ಈ ಕಾರಣದಿಂದಲೇ, “ಮಗನನ್ನು ನಂಬುವವನಿಗೆ ನಿತ್ಯಜೀವ ಉಂಟು; ಮಗನಿಗೆ ಒಳಗಾಗದವನು ಜೀವವನ್ನು ಕಾಣುವದೇ ಇಲ್ಲ.”​—⁠ಯೋಹಾನ 3:36.

ನಾವು ದೇವರ ಮಗನಲ್ಲಿ ನಂಬಿಕೆಯನ್ನಿಡುವುದಾದರೆ ಮಾತ್ರ ಪಾಪದ ಪರಿಣಾಮಗಳಿಂದ ಬಿಡುಗಡೆಯನ್ನು ಹೊಂದಶಕ್ತರಾಗಿರುವೆವು ಎಂಬುದನ್ನು ಗಮನಿಸಿ. ಇದು ನಮ್ಮ ಜೀವನದಲ್ಲಿ ಬದಲಾವಣೆಗಳನ್ನು ಮಾಡಿ ಅದನ್ನು ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ತರುವುದನ್ನು ಒಳಗೂಡುತ್ತದೆ. ನಾವು ಬೆನ್ನಟ್ಟುತ್ತಿರಬಹುದಾದ ಯಾವುದೇ ತಪ್ಪಾದ ಮಾರ್ಗಕ್ರಮವನ್ನು ತ್ಯಜಿಸಬೇಕು ಮತ್ತು ಯಾವುದು ದೇವರನ್ನು ಮೆಚ್ಚಿಸುತ್ತದೊ ಅದನ್ನು ಕ್ರಿಯೆಗೈಯಲು ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು. ನಮ್ಮ ‘ಪಾಪಗಳನ್ನು [ದೇವರು] ಅಳಿಸಿಬಿಡಲು ನಾವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳುವ’ ಆವಶ್ಯಕತೆಯಿದೆ ಎಂದು ಅಪೊಸ್ತಲ ಪೇತ್ರನು ಹೇಳಿದನು.​—⁠ಅ. ಕೃತ್ಯಗಳು 3:19.

ಮೂರನೆಯದಾಗಿ, ಯೇಸು ಅರ್ಪಿಸಿದ ಯಜ್ಞವು ನಮ್ಮನ್ನು ಒಂದು ತಪ್ಪಿತಸ್ಥ ಮನಸ್ಸಾಕ್ಷಿಯಿಂದ ವಿಮುಕ್ತಗೊಳಿಸುತ್ತದೆ. ಯೆಹೋವನಿಗೆ ಸಮರ್ಪಣೆ ಮಾಡಿ, ಆತನ ಮಗನ ದೀಕ್ಷಾಸ್ನಾನಿತ ಶಿಷ್ಯರಾಗುವವರೆಲ್ಲರೂ ನೆಮ್ಮದಿಯನ್ನು ಅನುಭವಿಸುತ್ತಾರೆ. (ಮತ್ತಾಯ 11:28-30) ನಮ್ಮ ಅಪರಿಪೂರ್ಣತೆಯ ಹೊರತೂ ದೇವರನ್ನು ಶುದ್ಧ ಮನಸ್ಸಾಕ್ಷಿಯಿಂದ ಸೇವಿಸುವುದರಲ್ಲಿ ನಾವು ಬಹಳಷ್ಟು ಆನಂದವನ್ನು ಕಂಡುಕೊಳ್ಳುತ್ತೇವೆ. (1 ತಿಮೊಥೆಯ 3:9; 1 ಪೇತ್ರ 3:21) ನಾವು ನಮ್ಮ ಪಾಪಗಳನ್ನು ಅರಿಕೆಮಾಡಿ, ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಡುವಾಗ ನಮಗೆ ಕರುಣೆಯು ತೋರಿಸಲ್ಪಡುವುದು ಮತ್ತು ಹೀಗೆ ನಾವು ಬಾಧಿಸಲ್ಪಟ್ಟ ಮನಸ್ಸಾಕ್ಷಿಯಿಂದ ಉಪಶಮನವನ್ನು ಪಡೆಯಬಲ್ಲೆವು.​—⁠ಜ್ಞಾನೋಕ್ತಿ 28:13.

ಸಹಾಯ ಮತ್ತು ನಿರೀಕ್ಷೆಯನ್ನು ಒದಗಿಸುತ್ತದೆ

ಕೊನೆಯದಾಗಿ, ವಿಮೋಚನಾ ಮೌಲ್ಯದಲ್ಲಿ ನಂಬಿಕೆಯನ್ನಿಡುವುದರ ಮೂಲಕ, ದೇವರ ಮುಂದೆ ನಮ್ಮ ನಿಲುವಿನ ಸಂಬಂಧವಾದ ಆತಂಕದಿಂದ ನಾವು ಮುಕ್ತರಾಗುತ್ತೇವೆ. ಅಪೊಸ್ತಲ ಯೋಹಾನನು ಬರೆದುದು: “ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ.” (1 ಯೋಹಾನ 2:1) ಸಹಾಯಕನಾಗಿ ಯೇಸು ಕ್ರಿಸ್ತನ ಪಾತ್ರದ ಕುರಿತಾಗಿ ಅಪೊಸ್ತಲ ಪೌಲನು ಬರೆದುದು: “ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿಗೋಸ್ಕರ ವಿಜ್ಞಾಪನೆಮಾಡುವದಕ್ಕೆ ಯಾವಾಗಲೂ ಬದುಕುವವನಾಗಿದ್ದಾನೆ.” (ಇಬ್ರಿಯ 7:25) ಎಷ್ಟರ ವರೆಗೆ ನಮ್ಮಲ್ಲಿ ಪಾಪದ ಸುಳಿವಿರುತ್ತದೊ ಅಷ್ಟರ ವರೆಗೆ ನಾವು ದೇವರ ಮುಂದೆ ಸರಿಯಾದ ನಿಲುವನ್ನು ಹೊಂದಲು ಸಹಾಯಮಾಡುವಂತೆ ನಮಗೆ ಮಹಾ ಯಾಜಕನಾದ ಯೇಸು ಕ್ರಿಸ್ತನ ಸೇವೆಯ ಅಗತ್ಯವಿದೆ. ಯೇಸು ಹೇಗೆ ನಮ್ಮ ಪರವಾಗಿ ಮಹಾಯಾಜಕನಾಗಿ ನಡೆದುಕೊಂಡನು?

ಸಾ.ಶ. 33ರಲ್ಲಿ, ಯೇಸುವಿನ ಪುನರುತ್ಥಾವಾಗಿ ನಲವತ್ತು ದಿನಗಳ ಬಳಿಕ ಅವನು ಸ್ವರ್ಗಕ್ಕೇರಿ, ಅಲ್ಲಿ ತನ್ನ ‘ಅಮೂಲ್ಯವಾದ ರಕ್ತದ’ ಮೌಲ್ಯವನ್ನು ದೇವರಿಗೆ ಒಪ್ಪಿಸಿದನು. ಆದುದರಿಂದಲೇ, ಯೇಸು ವಿಧೇಯ ಮಾನವಕುಲವನ್ನು ಬೇಗನೇ ಪಾಪ ಮತ್ತು ಮರಣದಿಂದ ವಿಮುಕ್ತಗೊಳಿಸುವನು. * (1 ಪೇತ್ರ 1:18, 19) ಹೀಗಿರುವುದರಿಂದ, ಯೇಸು ಕ್ರಿಸ್ತನು ನಮ್ಮ ಪ್ರೀತಿ ಹಾಗೂ ವಿಧೇಯತೆಯನ್ನು ಹೊಂದಲು ಯೋಗ್ಯನೆಂದು ನೀವು ಒಪ್ಪುವುದಿಲ್ಲವೇ?

ಅದಕ್ಕೆ ಕೂಡಿಸಿ, ಯೆಹೋವ ದೇವರು ನಮ್ಮ ಪ್ರೀತಿ ಹಾಗೂ ವಿಧೇಯತೆಗೆ ಅರ್ಹನಾಗಿದ್ದಾನೆ. ಆತನು ಪ್ರೀತಿಪೂರ್ವಕವಾಗಿ ವಿಮೋಚನಾ ಮೌಲ್ಯದ ಮೂಲಕ ನಮ್ಮ ಬಿಡುಗಡೆಯನ್ನು ಸಾಧ್ಯಗೊಳಿಸಿದನು. (1 ಕೊರಿಂಥ 1:30) ನಾವು ಈಗ ಹೊಂದಿರುವ ಜೀವಕ್ಕೆ ಮಾತ್ರವಲ್ಲ ನಿತ್ಯಜೀವವನ್ನು ಆನಂದಿಸುವ ಪ್ರತೀಕ್ಷೆಗೂ ಯೆಹೋವನಿಗೆ ಚಿರಋಣಿಗಳಾಗಿದ್ದೇವೆ. ಹೀಗಿರುವುದರಿಂದ ‘ನಾವು ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಲು’ ಸಕಾರಣಗಳಿವೆ.​—⁠ಅ. ಕೃತ್ಯಗಳು 5:29.

[ಪಾದಟಿಪ್ಪಣಿ]

^ ಪ್ಯಾರ. 12 ಯೆಹೋವನ ಸಾಕ್ಷಿಗಳ 2006ರ ಕ್ಯಾಲೆಂಡರ್‌ನ (ಇಂಗ್ಲಿಷ್‌) ಮಾರ್ಚ್‌/ಏಪ್ರಿಲ್‌ ತಿಂಗಳುಗಳನ್ನು ನೋಡಿ.

[ಪುಟ 9ರಲ್ಲಿರುವ ಚೌಕ/ಚಿತ್ರಗಳು]

ನಿಮಗೆ ಗೊತ್ತಿದೆಯೊ?

• ಯೇಸು ಎಣ್ಣೇಮರಗಳ ಗುಡ್ಡದಿಂದ ಪರಲೋಕಕ್ಕೆ ಏರಿಹೋದನು.​—⁠ಅ. ಕೃತ್ಯಗಳು 1:​9, 12.

• ಯೇಸುವಿನ ನಂಬಿಗಸ್ತ ಅಪೊಸ್ತಲರು ಮಾತ್ರ ಆತನು ಏರಿಹೋಗುವುದನ್ನು ನೋಡಿದರು.​—⁠ಅ. ಕೃತ್ಯಗಳು 1:2, 11-13.