ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೇತ್ರನು ಯೇಸುವನ್ನು ಅಲ್ಲಗಳೆದದ್ದು

ಪೇತ್ರನು ಯೇಸುವನ್ನು ಅಲ್ಲಗಳೆದದ್ದು

ನಮ್ಮ ಯುವ ಜನರಿಗಾಗಿ

ಪೇತ್ರನು ಯೇಸುವನ್ನು ಅಲ್ಲಗಳೆದದ್ದು

ಸೂಚನೆಗಳು: ಈ ಬೈಬಲ್‌ ವಾಚನವನ್ನು ಪ್ರಶಾಂತ ಸ್ಥಳದಲ್ಲಿ ಮಾಡಿರಿ. ಶಾಸ್ತ್ರವಚನಗಳನ್ನು ಓದುತ್ತಿರುವಾಗ ನೀವು ಕೂಡ ಆ ಘಟನೆಯ ಭಾಗವಾಗಿದ್ದೀರೆಂದು ಕಲ್ಪಿಸಿಕೊಳ್ಳಿ. ದೃಶ್ಯವನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ಮಾತುಗಳನ್ನು ಕೇಳಿಸಿಕೊಳ್ಳಿ. ಮುಖ್ಯ ಪಾತ್ರಧಾರಿಗಳ ಭಾವನೆಗಳನ್ನು ಸ್ವತಃ ಅನುಭವಿಸಿ.

ದೃಶ್ಯವನ್ನು ಪರಿಶೀಲಿಸಿ.ಮತ್ತಾಯ 26:31-35, 69-75ನ್ನು ಓದಿ.

ದೃಶ್ಯದಲ್ಲಿ ಎಷ್ಟು ಮಂದಿ ಇದ್ದರೆಂದು ನೀವು ಕಲ್ಪಿಸಿಕೊಂಡಿರಿ?

_______

ಪೇತ್ರನೊಂದಿಗೆ ಮಾತಾಡಿದವರು ಸ್ನೇಹಪರರಾಗಿದ್ದರೋ? ಕುತೂಹಲಿಗಳಾಗಿದ್ದರೋ? ಕೋಪದಿಂದಿದ್ದರೋ? ಅಥವಾ ಇನ್ಯಾವ ಭಾವನೆಯನ್ನು ಹೊಂದಿದ್ದರೆಂದು ನೀವು ನೆನಸುತ್ತೀರಿ?

_______

_______

ದೂಷಿಸಲ್ಪಡುತ್ತಿದ್ದಾಗ ಪೇತ್ರನಿಗೆ ಹೇಗನಿಸಿರಬಹುದೆಂದು ನೀವು ನೆನಸುತ್ತೀರಿ?

_______

ಪೇತ್ರನು ಯೇಸುವನ್ನು ಅಲ್ಲಗಳೆದದ್ದೇಕೆ? ಪ್ರೀತಿಯ ಕೊರತೆಯಿಂದಲೋ ಅಥವಾ ಬೇರೆ ಕಾರಣದಿಂದಲೋ?

_______

_______

ಹೆಚ್ಚು ಸಂಶೋಧನೆ ಮಾಡಿ.—ಲೂಕ 22:31-34; ಮತ್ತಾಯ 26:55-58; ಯೋಹಾನ 21:9-17ನ್ನು ಓದಿ.

ಪೇತ್ರನ ತಪ್ಪಿನಲ್ಲಿ ಅತಿಯಾದ ಆತ್ಮವಿಶ್ವಾಸವು ಹೇಗೆ ಪಾತ್ರ ವಹಿಸಿರಬಹುದು?

_______

_______

ಪೇತ್ರನು ಕ್ಷಣಿಕವಾಗಿ ಎಡವಿಬೀಳಲಿರುವನೆಂದು ಗೊತ್ತಿದ್ದರೂ ಯೇಸು ಅವನಲ್ಲಿ ಹೇಗೆ ಭರವಸೆ ತೋರಿಸಿದನು?

_______

_______

ಪೇತ್ರನು ಯೇಸುವನ್ನು ಅಲ್ಲಗಳೆದರೂ ಯಾವ ವಿಧದಲ್ಲಿ ಬೇರೆ ಶಿಷ್ಯರಿಗಿಂತ ಇನ್ನೂ ಹೆಚ್ಚಿನ ಧೈರ್ಯ ತೋರಿಸಿದನು?

_______

_______

ಯೇಸು ಪೇತ್ರನನ್ನು ಕ್ಷಮಿಸಿದ್ದಾನೆಂದು ಹೇಗೆ ತೋರಿಸಿದನು?

_______

ಯೇಸು ಪೇತ್ರನಿಗೆ, “ನನ್ನ ಮೇಲೆ ಪ್ರೀತಿ ಇಟ್ಟಿದ್ದಿಯೋ?” ಎಂಬದಾಗಿ ಮೂರು ಬಾರಿ ಕೇಳಿದ್ದೇಕೆಂದು ನೀವು ನೆನಸುತ್ತೀರಿ?

_______

ಯೇಸುವಿನೊಂದಿಗಿನ ಈ ಸಂಭಾಷಣೆಯ ನಂತರ ಪೇತ್ರನಿಗೆ ಹೇಗನಿಸಿರಬಹುದು, ಮತ್ತು ಏಕೆ?

_______

_______

ನೀವೇನನ್ನು ಕಲಿತಿರೋ ಅದನ್ನು ಅನ್ವಯಿಸಿಕೊಳ್ಳಿ. ಈ ಕೆಳಕಂಡ ವಿಷಯಗಳ ಕುರಿತು ನೀವೇನು ಕಲಿತಿರೋ ಅದನ್ನು ಬರೆಯಿರಿ.

ಮನುಷ್ಯನ ಭಯ.

_______

ತನ್ನ ಶಿಷ್ಯರು ತಪ್ಪು ಮಾಡಿದ್ದಾಗಲೂ ಅವರ ಮೇಲೆ ಯೇಸುವಿಗಿದ್ದ ಕರುಣೆ.

_______

_______

ಈ ವೃತ್ತಾಂತದಲ್ಲಿ ಯಾವುದು ನಿಮಗೆ ಹೆಚ್ಚು ಅರ್ಥಪೂರ್ಣವಾಗಿದೆ, ಮತ್ತು ಏಕೆ?

_______

_______ (w08 1/1)