ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ರಾಜ್ಯದ ಕುರಿತು

ದೇವರ ರಾಜ್ಯದ ಕುರಿತು

ಯೇಸುವಿನಿಂದ ಕಲಿಯುವುದು . . .

ದೇವರ ರಾಜ್ಯದ ಕುರಿತು

ದೇವರ ರಾಜ್ಯ ಏನಾಗಿದೆ?

ದೇವರ ರಾಜ್ಯವೆಂದರೆ ದೇವರು ಸ್ಥಾಪಿಸಿರುವ ಒಂದು ಸರಕಾರ. ಅದು ಇಡೀ ಭೂಮಿಯನ್ನು ಆಳಲಿಕ್ಕಿದೆ. ಯೇಸು ಅಂದದ್ದು: “ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು— . . . ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.”—ಮತ್ತಾಯ 6:9, 10; ದಾನಿಯೇಲ 2:44.

ದೇವರ ರಾಜ್ಯದಲ್ಲಿ ಆಳುವವರು ಯಾರು?

ದೇವರ ರಾಜ್ಯದ ಅರಸನಾಗಲಿಕ್ಕಾಗಿ ಯೇಸು ಜನಿಸಿದನು. ಯೇಸುವಿನ ತಾಯಿಗೆ ಒಬ್ಬ ದೇವದೂತನು ಅಂದದ್ದು: “ದೇವರಾಗಿರುವ [ಯೆಹೋವನು] ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. . . . ಆತನು . . . [ರಾಜನಾಗಿ] ಆಳುವನು.” (ಲೂಕ 1:30-33) ಮಾತ್ರವಲ್ಲ, ತನ್ನೊಂದಿಗೆ ಆಳಲಿಕ್ಕಾಗಿ ಯೇಸು ತನ್ನ ಹಿಂಬಾಲಕರಲ್ಲಿ ಕೆಲವರನ್ನು ಆರಿಸಿಕೊಂಡನು. ಅವನು ತನ್ನ ಅಪೊಸ್ತಲರಿಗೆ ಅಂದದ್ದು: “ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು. ಆದದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇಮಿಸಿದ ಪ್ರಕಾರ ನಾನು ನಿಮಗೂ ನೇಮಿಸುತ್ತೇನೆ.” (ಲೂಕ 22:28, 29; ದಾನಿಯೇಲ 7:27) ಯೇಸುವಿನ ಹಿಂಬಾಲಕರಲ್ಲಿ ಒಟ್ಟು 1,44,000 ಮಂದಿ ಆತನೊಂದಿಗೆ ಆಳಲಿರುವರು.—ಪ್ರಕಟನೆ 5:9, 10; 14:1.

ಆ ಸರಕಾರವು ಎಲ್ಲಿ ನೆಲೆಸಿರುವುದು?

ದೇವರ ರಾಜ್ಯವು ಪರಲೋಕದಿಂದ ಆಳುವುದು. ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಾನು ಹೋಗಿ ನಿಮಗೆ [ಪರಲೋಕದಲ್ಲಿ] ಸ್ಥಳವನ್ನು ಸಿದ್ಧಮಾಡಿದ ಮೇಲೆ ತಿರಿಗಿ ಬಂದು ನಿಮ್ಮನ್ನು ಕರಕೊಂಡು ಹೋಗಿ ನನ್ನ ಬಳಿಗೆ ಸೇರಿಸಿಕೊಳ್ಳುವೆನು; ಯಾಕಂದರೆ ನಾನಿರುವ ಸ್ಥಳದಲ್ಲಿ ನೀವು ಸಹ ಇರಬೇಕು. . . . ನಾನು ತಂದೆಯ ಬಳಿಗೆ ಹೋಗುತ್ತೇನೆ.”—ಯೋಹಾನ 14:2, 3, 12; ದಾನಿಯೇಲ 7:13, 14.

ದೇವರ ರಾಜ್ಯದಲ್ಲಿ ದುಷ್ಟತನವಿರುವುದೋ?

ಯೇಸು ದುಷ್ಟ ಜನರನ್ನು ಭೂಮಿಯಿಂದ ತೆಗೆದುಹಾಕುವನು. ಯೇಸು ಹೇಳಿದ್ದು: ‘ಮನುಷ್ಯಕುಮಾರನು [ಯೇಸು] ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುವನು; ಮತ್ತು ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು. . . . ಆತನು ಅವರನ್ನು ಬೇರೆಬೇರೆಮಾಡುವನು . . . ಮತ್ತು ಇವರು [ಅನೀತಿವಂತರು] ನಿತ್ಯಶಿಕ್ಷೆಗೂ ನೀತಿವಂತರು ನಿತ್ಯಜೀವಕ್ಕೂ ಹೋಗುವರು.’—ಮತ್ತಾಯ 25:31-34, 46.

ಆ ರಾಜ್ಯದ ಪ್ರಜೆಗಳಾಗಿ ಭೂಮಿಯಲ್ಲಿ ಯಾರು ಜೀವಿಸುವರು?

ಯೇಸು ಹೇಳಿದ್ದು: “ಶಾಂತರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.” (ಮತ್ತಾಯ 5:5; ಕೀರ್ತನೆ 37:29; 72:8) ಒಬ್ಬರಿಗೊಬ್ಬರು ಪ್ರೀತಿ ತೋರಿಸಲು ಕಲಿಯುವ ಜನರು ಆಗ ಭೂಮಿಯಲ್ಲಿ ತುಂಬಿರುವರು. ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”—ಯೋಹಾನ 13:34, 35.

ದೇವರ ರಾಜ್ಯವು ಭೂಮಿಯಲ್ಲಿ ಮಾನವರಿಗಾಗಿ ಏನನ್ನು ಮಾಡಲಿದೆ?

ಮಾನವರನ್ನು ಪೀಡಿಸುತ್ತಿರುವ ಅಸ್ವಸ್ಥಗಳನ್ನು ಯೇಸು ವಾಸಿಮಾಡುವನು. ಅವನು ಭೂಮಿಯಲ್ಲಿರುವಾಗ ಜನಸಮೂಹದೊಂದಿಗೆ “ದೇವರ ರಾಜ್ಯದ ವಿಷಯವಾಗಿ . . . ಮಾತಾಡಿ ಕ್ಷೇಮ ಬೇಕಾದವರಿಗೆ ವಾಸಿಮಾಡಿದನು.” (ಲೂಕ 9:11) ಪುನರುತ್ಥಾನಗೊಂಡ ಯೇಸುವನ್ನು ಅಪೊಸ್ತಲ ಯೋಹಾನನು ದರ್ಶನದಲ್ಲಿ ಕಂಡ ಬಳಿಕ ಹೇಳಿದ್ದು: “ತರುವಾಯ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಕಂಡೆನು. . . . ಸಿಂಹಾಸನದೊಳಗಿಂದ ಬಂದ ಮಹಾ ಶಬ್ದವು ನನಗೆ ಕೇಳಿಸಿತು. ಅದು—ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು . . . ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ . . . ಎಂದು ಹೇಳಿತು.”—ಪ್ರಕಟನೆ 21:1-4.

ದೇವರ ರಾಜ್ಯವು ಈ ಭೂಮಿಯನ್ನು ಪರದೈಸ್‌ ಆಗಿ ಅಂದರೆ ಸುಂದರ ಉದ್ಯಾನವನದಂತೆ ಮಾಡುವುದು. ಯೇಸುವಿನೊಂದಿಗೆ ಕೊಲ್ಲಲ್ಪಟ್ಟ ದುಷ್ಕರ್ಮಿ ಆತನಿಗೆ ಹೇಳಿದ್ದು: “ಯೇಸುವೇ, ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಸಿಕೋ.” ಅದಕ್ಕೆ ಯೇಸು ಅವನಿಗೆ ಉತ್ತರಕೊಟ್ಟದ್ದು: “ಈಹೊತ್ತೇ ನನ್ನ ಸಂಗಡ ಪರದೈಸಿನಲ್ಲಿರುವಿ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ.”—ಲೂಕ 23:42, 43; ಯೆಶಾಯ 11:4-9. (w08 5/1)

ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? * ಪುಸ್ತಕದ ಅಧ್ಯಾಯ 8 ನೋಡಿರಿ.

[ಪಾದಟಿಪ್ಪಣಿ]

^ ಪ್ಯಾರ. 16 ಯೆಹೋವನ ಸಾಕ್ಷಿಗಳ ಪ್ರಕಾಶನ.