ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ತಿಳಿದಿತ್ತೋ?

ನಿಮಗೆ ತಿಳಿದಿತ್ತೋ?

ನಿಮಗೆ ತಿಳಿದಿತ್ತೋ?

ಪ್ರಾರ್ಥನೆಯಲ್ಲಿ ಯೇಸು ಯೆಹೋವ ದೇವರನ್ನು “ಅಪ್ಪಾ, ತಂದೆಯೇ” ಎಂದು ಕರೆದದ್ದೇಕೆ?

ಆರಮೇಯಿಕ್‌ ಭಾಷೆಯಲ್ಲಿ “ಅಬ” (ಅಪ್ಪ) ಎಂಬ ಪದಕ್ಕೆ “ನನ್ನ ತಂದೆಯೇ” ಅಥವಾ “ಓ ತಂದೆಯೇ” ಎಂಬ ಅರ್ಥವಿದೆ. ಈ ಅಭಿವ್ಯಕ್ತಿಯು ಬೈಬಲಿನಲ್ಲಿ ಮೂರು ಬಾರಿ ಮಾತ್ರ ಕಂಡುಬರುತ್ತದೆ. ಆ ಪ್ರತಿಯೊಂದು ಸಂದರ್ಭಗಳಲ್ಲಿಯೂ ಅದು ಪ್ರಾರ್ಥನೆಯ ಭಾಗವಾಗಿದೆ ಮತ್ತು ಸ್ವರ್ಗೀಯ ತಂದೆಯಾದ ಯೆಹೋವ ದೇವರಿಗೆ ಸೂಚಿಸಿ ಹೇಳಲಾಗಿದೆ. ಈ ಪದಕ್ಕೆ ಯಾವ ಮಹತ್ವಾರ್ಥವಿದೆ?

ದಿ ಇಂಟರ್‌ನ್ಯಾಷನಲ್‌ ಸ್ಟ್ಯಾಂಡರ್ಡ್‌ ಬೈಬಲ್‌ ಎನ್‌ಸೈಕ್ಲಪೀಡಿಯ ಹೇಳುವುದು: “ಯೇಸುವಿನ ಕಾಲದ ಆಡುಮಾತಿನಲ್ಲಿ ‘ಅಬ’ ಎಂಬ ಪದವನ್ನು ಮಕ್ಕಳು ತಮ್ಮ ತಂದೆಯನ್ನು ಅಕ್ಕರೆಯಿಂದ ಹಾಗೂ ಗೌರವಾದರದಿಂದ ಕರೆಯುವಾಗ ಮುಖ್ಯವಾಗಿ ಬಳಸುತ್ತಿದ್ದರು.” ಮಗು ತನ್ನ ತೊದಲುಮಾತಿನಲ್ಲಿ ಮೊತ್ತಮೊದಲಾಗಿ ತಂದೆಯನ್ನು ಮಮತೆಯಿಂದ ಕರೆಯುವ ಪದ ಅದಾಗಿತ್ತು. ತನ್ನ ತಂದೆಗೆ ತೀವ್ರ ಕಟ್ಟಾಸಕ್ತಿಯಿಂದ ಮಾಡಿದ ಪ್ರಾರ್ಥನೆಯಲ್ಲಿ ಆ ಅಭಿವ್ಯಕ್ತಿಯನ್ನು ಯೇಸು ಉಪಯೋಗಿಸಿದನು. ಯೇಸು ತಾನು ಸಾಯುವುದಕ್ಕೆ ಕೆಲವೇ ತಾಸುಗಳ ಮುಂಚಿತವಾಗಿ ಗೆತ್ಸೇಮನೆ ತೋಟದಲ್ಲಿ ಮಾಡಿದ ಪ್ರಾರ್ಥನೆಯಲ್ಲಿ ಯೆಹೋವನನ್ನು “ಅಪ್ಪಾ, ತಂದೆಯೇ” ಎಂದು ಸಂಬೋಧಿಸಿದನು.—ಮಾರ್ಕ 14:36.

“ಗ್ರೀಕೋ-ರೋಮನ್‌ ಕಾಲದ ಯೆಹೂದಿ ಸಾಹಿತ್ಯದಲ್ಲಿ ದೇವರನ್ನು ‘ಅಪ್ಪಾ’ ಎಂದು ಸಂಬೋಧಿಸುವುದು ವಾಡಿಕೆಯಲ್ಲೇ ಇರಲಿಲ್ಲ. ಯಾಕೆಂದರೆ ದೇವರನ್ನು ಹಾಗೆ ಸಲಿಗೆಯಿಂದ ಸಂಬೋಧಿಸುವುದು ಅಗೌರವವಾದದ್ದಾಗಿ ಕಂಡುಬರುತ್ತಿತ್ತು ನಿಸ್ಸಂಶಯ” ಎಂದು ಮೇಲೆ ತಿಳಿಸಿದ ಪರಾಮರ್ಶೆ ಕೃತಿಯು ಹೇಳುತ್ತದೆ. ಆದರೂ “ಯೇಸು . . . ಈ ಶಬ್ದವನ್ನು ಪ್ರಾರ್ಥನೆಯಲ್ಲಿ ಉಪಯೋಗಿಸಿದ್ದು ತನಗೆ ದೇವರೊಂದಿಗೆ ಅತ್ಯಂತ ಆಪ್ತ ಸಂಬಂಧವಿತ್ತು ಎಂಬ ಅವನ ಅಸಾಮಾನ್ಯ ವಾದದ ಪರೋಕ್ಷ ರುಜುವಾತಾಗಿದೆ.” “ಅಪ್ಪಾ” ಎಂಬ ಬೇರೆ ಎರಡೂ ಶಾಸ್ತ್ರೀಯ ಉಲ್ಲೇಖಗಳು ಅಪೊಸ್ತಲ ಪೌಲನ ಬರಹಗಳಲ್ಲಿ ಕಂಡುಬರುತ್ತವೆ. ಇದು, ಒಂದನೇ ಶತಕದ ಕ್ರೈಸ್ತರು ಸಹ ಆ ಶಬ್ದವನ್ನು ಬಳಸಿದ್ದರು ಎಂದು ಸೂಚಿಸುತ್ತದೆ.—ರೋಮನ್ನರಿಗೆ 8:15; ಗಲಾತ್ಯ 4:6. (w09 4/1)