ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜುವಿನ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಆನಂದಿಸಿದ್ದೀರೋ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

• ಗರ್ಭದಲ್ಲಿ ಸಾಯುವ ಶಿಶುವಿಗೆ ಪುನರುತ್ಥಾನವಾಗುವುದೋ?

ಗರ್ಭಧಾರಣೆಯಾದಾಗ ಒಂದು ಮಾನವ ಜೀವದ ಆರಂಭವಾಗುತ್ತದೆ. ಯಾವುದೇ ಪ್ರಾಯದ ವ್ಯಕ್ತಿಗಳನ್ನು ಯೆಹೋವನು ಪುನರುತ್ಥಾನ ಮಾಡಬಲ್ಲನು ಏಕೆಂದರೆ “ದೇವರಿಗೆ ಎಲ್ಲವೂ ಸಾಧ್ಯ.” (ಮಾರ್ಕ 10:27) ಆದರೆ ಗರ್ಭದಲ್ಲಿ ಸತ್ತಿರುವ ಶಿಶುಗಳನ್ನು ಆತನು ಪುನರುತ್ಥಾನ ಮಾಡುವನೋ ಇಲ್ಲವೋ ಎಂಬುದನ್ನು ಬೈಬಲ್‌ ನೇರವಾಗಿ ತಿಳಿಸುವುದಿಲ್ಲ.—4/15, ಪುಟ 12, 13.

• ಇರುವೆಗಳು, ಬೆಟ್ಟದ ಮೊಲಗಳು, ಮಿಡತೆಗಳು ಹಾಗೂ ಹಲ್ಲಿಗಳಿಂದ ನಾವೇನು ಕಲಿಯಬಲ್ಲೆವು?

ಈ ನಾಲ್ಕೂ ಜೀವಿಗಳು ಹುಟ್ಟರಿವಿನ ವಿವೇಕಕ್ಕೆ ಉದಾಹರಣೆಗಳಾಗಿವೆ. ಹೀಗೆ ಅವು ದೇವರ ವಿವೇಕವನ್ನು ಕೊಂಡಾಡುತ್ತವೆ. (ಜ್ಞಾನೋ. 30:24-28)—4/15, ಪುಟ 16-19.

• ಬೈಬಲ್‌ ಏಕೆ ಮೌನದ ಪರವಹಿಸಿ ಮಾತಾಡುತ್ತದೆ?

ಏಕೆಂದರೆ ಬೈಬಲ್‌ ತೋರಿಸುವಂತೆ ಮೌನವು ಗೌರವ ಸೂಚಕವಾಗಿದೆ, ಧ್ಯಾನಿಸುವಿಕೆಗೆ ಸಹಾಯಕಾರಿ ಆಗಿದೆ ಮತ್ತು ಬುದ್ಧಿವಂತಿಕೆ ಹಾಗೂ ವಿವೇಚನೆಯ ಪುರಾವೆಯಾಗಿದೆ. (ಕೀರ್ತ. 37:7; 63:6; ಜ್ಞಾನೋ. 11:12)—5/15, ಪುಟ 3-5.

• ಯೆಹೂದದ ಎಷ್ಟು ಮಂದಿ ಅರಸರು ದೇವರ ಆಲಯಕ್ಕಾಗಿ ಅಸಾಮಾನ್ಯ ಅಭಿಮಾನ ತೋರಿಸಿದರು?

ದಕ್ಷಿಣದ ಯೆಹೂದ ರಾಜ್ಯದಲ್ಲಿ ಹತ್ತೊಂಬತ್ತು ಅರಸರು ಆಳ್ವಿಕೆ ನಡೆಸಿದರು. ಅವರಲ್ಲಿ ಆಸ, ಯೆಹೋಷಾಫಾಟ, ಹಿಜ್ಕೀಯ ಮತ್ತು ಯೋಷೀಯ ಎಂಬ ನಾಲ್ಕು ಮಂದಿ ಅರಸರು ಅಸಾಮಾನ್ಯ ಅಭಿಮಾನವನ್ನು ತೋರಿಸಿದರು.—6/15, ಪುಟ 7-11.

• ಆಧ್ಯಾತ್ಮಿಕ ಆಹಾರವನ್ನು ಒದಗಿಸುವ ಕೆಲಸದಲ್ಲಿ ಭೂಮಿಯಲ್ಲಿರುವ ಎಲ್ಲ ಅಭಿಷಿಕ್ತ ಕ್ರೈಸ್ತರು ಪಾಲ್ಗೊಳ್ಳುತ್ತಾರೋ?

ಇಲ್ಲ. ದೇವರಾತ್ಮದಿಂದ ಅಭಿಷಿಕ್ತರಾದವರೆಲ್ಲರೂ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ವರ್ಗ ಆಗಿದ್ದಾರೆ. ಆದರೆ ಅವರಲ್ಲಿ ಯಾರು ಆಡಳಿತ ಮಂಡಲಿಯ ಸದಸ್ಯರಾಗಿದ್ದಾರೋ ಅವರು ಮಾತ್ರ ಆಧ್ಯಾತ್ಮಿಕ ಆಹಾರವನ್ನು ಒದಗಿಸುವ ಕೆಲಸದ ಮೇಲ್ವಿಚಾರಣೆ ನಡೆಸುತ್ತಾರೆ.—6/15, ಪುಟ 22-24.

• ಜನರನ್ನು ಉಪಚರಿಸುವ ರೀತಿಯಲ್ಲಿ ಯೇಸುವಿಗೂ ಧಾರ್ಮಿಕ ಮುಖಂಡರಿಗೂ ಇದ್ದ ಪ್ರಮುಖ ವ್ಯತ್ಯಾಸ ಪ್ರೀತಿ ಆಗಿತ್ತೆಂದು ಏಕೆ ಹೇಳಬಹುದು?

ಆ ಮುಖಂಡರು ಸಾಮಾನ್ಯ ಜನರನ್ನು ಪ್ರೀತಿಸುವ ಬದಲು ಅವರನ್ನು ಕೀಳಾಗಿ ಕಾಣುತ್ತಿದ್ದರು. ಅಷ್ಟುಮಾತ್ರವಲ್ಲದೆ ಅವರಿಗೆ ದೇವರ ಮೇಲೂ ಪ್ರೀತಿ ಇರಲಿಲ್ಲ. ಯೇಸುವಾದರೋ ತನ್ನ ತಂದೆಯನ್ನು ಪ್ರೀತಿಸುತ್ತಿದ್ದನು ಮತ್ತು ಜನರಿಗಾಗಿ ಕನಿಕರಪಟ್ಟನು. (ಮತ್ತಾ. 9:36) ಅವನು ಅವರೆಡೆಗೆ ಕೋಮಲಭಾವ, ಸಹಾನುಭೂತಿ ಹಾಗೂ ದಯೆ ತೋರಿಸಿದನು.—7/15, ಪುಟ 15.