ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜುವಿನ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಆನಂದಿಸಿದ್ದೀರೊ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

• ಸಮುದ್ರದಲ್ಲಿ ಮುಳುಗುತ್ತಿದ್ದ ಪೇತ್ರನನ್ನು ಯೇಸು ರಕ್ಷಿಸಿದ ವಿಷಯದಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು? (ಮತ್ತಾ. 14:28-31)

ಒಬ್ಬ ಸಹೋದರನಲ್ಲಿ ನಂಬಿಕೆಯ ಕೊರತೆಯಿರುವಂತೆ ಕಾಣುವಾಗ ಅವನು ಹೆಚ್ಚಿನ ನಂಬಿಕೆಯನ್ನು ಪಡೆಯುವಂತೆ ನಾವು ಸಾಂಕೇತಿಕವಾಗಿ ನಮ್ಮ ಕೈಚಾಚಿ ಅವನಿಗೆ ಸಹಾಯ ಮಾಡಬಲ್ಲೆವು.—9/15, ಪುಟ 8.

• ನಮ್ಮ ಬಿಡುಗಡೆಗಾಗಿ ಯೆಹೋವನು ಯಾವ ತ್ಯಾಗ ಮಾಡಿದನು?

ತನ್ನ ಮಗನು ಚಿತ್ರಹಿಂಸೆ ಹಾಗೂ ಅಪಹಾಸ್ಯ ಅನುಭವಿಸಿದ್ದನ್ನು ಯೆಹೋವನು ತಾಳಿಕೊಂಡನು. ತನ್ನ ಮಗನನ್ನು ಅರ್ಪಿಸಲು ಅಬ್ರಹಾಮನು ತೋರಿಸಿದ ಸಿದ್ಧಮನಸ್ಸಿನಿಂದ ಮುನ್‌ಚಿತ್ರಿಸಲ್ಪಟ್ಟಂತೆ ಯೆಹೋವನು ತನ್ನ ಮಗನು ದುಷ್ಕರ್ಮಿಯೋಪಾದಿ ಕೊಲ್ಲಲ್ಪಡುವುದನ್ನು ಸಹಿಸಿಕೊಂಡನು.—9/15, ಪುಟ 28-29.

ಜ್ಞಾನೋಕ್ತಿ 24:27, ‘ಮನೆ[ವಾರ್ತೆ]ಯನ್ನು ಕಟ್ಟುವ’ ವಿಷಯದಲ್ಲಿ ಯಾವ ಪಾಠವನ್ನು ಕಲಿಸುತ್ತದೆ?

ಮದುವೆಯಾಗಲು ಇಚ್ಛಿಸುವ ಪುರುಷನು ಆ ಜವಾಬ್ದಾರಿಯನ್ನು ಹೊರಲು ಸರಿಯಾಗಿ ಸಿದ್ಧನಾಗಬೇಕು. ಕುಟುಂಬದ ಭೌತಿಕ ಅಗತ್ಯಗಳನ್ನು ಪೂರೈಸಲು ಮತ್ತು ಕುಟುಂಬದ ಆಧ್ಯಾತ್ಮಿಕ ಶಿರಸ್ಸಾಗಿರಲು ಸಿದ್ಧನಾಗುವುದು ಇದರಲ್ಲಿ ಸೇರಿದೆ.—10/15, ಪುಟ 12.

• ಸಭ್ಯವರ್ತನೆಯ ವಿಷಯದಲ್ಲಿ ಯೆಹೋವನು ಮತ್ತು ಯೇಸು ಯಾವ ಮಾದರಿಯನ್ನು ಇಟ್ಟಿದ್ದಾರೆ?

ಯೆಹೋವನ ಉನ್ನತ ಸ್ಥಾನದ ಹೊರತೂ ಆತನು ಮಾನವರನ್ನು ಮಹಾದಯೆಯಿಂದಲೂ ಗೌರವದಿಂದಲೂ ಉಪಚರಿಸುತ್ತಾನೆ. ಆತನು ಅಬ್ರಹಾಮ ಮೋಶೆಯರೊಂದಿಗೆ ಮಾತಾಡಿದಾಗ ಅನೇಕಸಲ “ದಯವಿಟ್ಟು” ಎಂದು ಭಾಷಾಂತರವಾದ ಹೀಬ್ರು ಮೂಲಪದವನ್ನು ಉಪಯೋಗಿಸಿದನು. ಇದನ್ನು ಇಂಗ್ಲಿಷ್‌ ಭಾಷೆಯ ನೂತನ ಲೋಕ ಭಾಷಾಂತರದಲ್ಲಿ ಕಂಡುಕೊಳ್ಳಸಾಧ್ಯವಿದೆ. (ಆದಿ. 13:14; ವಿಮೋ. 4:6) ದೇವರು ಮಾನವರಿಗೆ ಕಿವಿಗೊಡುತ್ತಾನೆ ಕೂಡ. (ಆದಿ. 18:23-32) ಯೇಸು ಸಹ ಇದನ್ನು ಮಾಡಿದನು ಮತ್ತು ತನ್ನ ಸುತ್ತಲೂ ಇದ್ದ ಜನರಿಗೆ ಸಹಾಯ ನೀಡಲು ಸಿದ್ಧನಾಗಿದ್ದನು, ಮನಸ್ಸುಳ್ಳವನೂ ಆಗಿದ್ದನು. ಅನೇಕವೇಳೆ ಅವನು ಅವರ ಹೆಸರುಹೇಳಿ ಕರೆದನು ಕೂಡ.—11/15, ಪುಟ 25.