ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಷ್ಠಾವಂತ ಮಿತ್ರರನ್ನು ಮಾಡಿಕೊಳ್ಳುವುದು ಹೇಗೆ?

ನಿಷ್ಠಾವಂತ ಮಿತ್ರರನ್ನು ಮಾಡಿಕೊಳ್ಳುವುದು ಹೇಗೆ?

ಯುವಜನರಿಗಾಗಿ

ನಿಷ್ಠಾವಂತ ಮಿತ್ರರನ್ನು ಮಾಡಿಕೊಳ್ಳುವುದು ಹೇಗೆ?

ಸೂಚನೆಗಳು: ಶಾಂತ ಪರಿಸರದಲ್ಲಿ ಈ ಅಭ್ಯಾಸವನ್ನು ಮಾಡಿರಿ. ಶಾಸ್ತ್ರವಚನಗಳನ್ನು ಓದುತ್ತಿರುವಾಗ ನೀವು ಕೂಡ ಆ ಘಟನೆಯ ಭಾಗವಾಗಿದ್ದೀರೆಂದು ಕಲ್ಪಿಸಿಕೊಳ್ಳಿ. ದೃಶ್ಯವನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ಧ್ವನಿಗಳಿಗೆ ಕಿವಿಗೊಡಿರಿ. ಪಾತ್ರಧಾರಿಗಳ ಭಾವನೆಗಳನ್ನು ಊಹಿಸಿನೋಡಿ. ವೃತ್ತಾಂತಕ್ಕೆ ಜೀವತುಂಬಿಸಿ.

ಮುಖ್ಯ ಪಾತ್ರಧಾರಿಗಳು: ಯೋನಾತಾನ, ದಾವೀದ ಮತ್ತು ಸೌಲ

ಸಾರಾಂಶ: ದಾವೀದ ಗೊಲ್ಯಾತನನ್ನು ಕೊಂದ ಬಳಿಕ ಯೋನಾತಾನ ದಾವೀದನ ಆಪ್ತಮಿತ್ರನಾಗುತ್ತಾನೆ.

1 ಈ ದೃಶ್ಯವನ್ನು ಪರಿಶೀಲಿಸಿ.—1 ಸಮುವೇಲ 17:57–18:11; 19:1; 20:1-17, 41, 42 ಓದಿ.

ಸೌಲನು ಹೇಗೆ ಕಾಣುತ್ತಿದ್ದಿರಬಹುದೆಂದು ನೀವು ಮನಸ್ಸಿನಲ್ಲಿ ಚಿತ್ರಿಸಿಕೊಂಡದ್ದನ್ನು ವರ್ಣಿಸಿ. (ಸುಳಿವು: 1 ಸಮುವೇಲ 10:20-23 ನೋಡಿ.)

_______

ಯೋನಾತಾನನನ್ನು ದಾವೀದನು ಪ್ರಥಮ ಬಾರಿ ಸಂಧಿಸಿದಾಗ ಬಹುಶಃ ಹದಿವಯಸ್ಕನಾಗಿದ್ದನು. ದಾವೀದನು ಹೇಗೆ ಕಾಣುತ್ತಿದ್ದಿರಬಹುದೆಂದು ಎಣಿಸುತ್ತೀರಿ? (ಸುಳಿವು: 1 ಸಮುವೇಲ 16:12, 13 ನೋಡಿ.)

_______

1 ಸಮುವೇಲ 20ನೇ ಅಧ್ಯಾಯದ ಕೊನೆಯಲ್ಲಿ ದಾವೀದ ಯೋನಾತಾನರು ಅಗಲುತ್ತಿರುವ ಸನ್ನಿವೇಶವಿದೆ. ಅವರ ಧ್ವನಿಗಳಿಂದ ಯಾವ ಭಾವನೆಗಳನ್ನು ಪತ್ತೆಹಚ್ಚಬಲ್ಲಿರಿ?

_______

2 ಆಳವಾಗಿ ಪರಿಶೀಲಿಸಿರಿ.

ವೃತ್ತಾಂತವು ತಿಳಿಸುವಂತೆ “ಯೋನಾತಾನನ ಪ್ರಾಣವು ದಾವೀದನ ಪ್ರಾಣದೊಡನೆ ಒಂದಾಯಿತು” ಅಥವಾ ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌ ಹೇಳುವಂತೆ “ದಾವೀದ ಯೋನಾತಾನರು ಆಪ್ತಮಿತ್ರರಾದರು.” (1 ಸಮುವೇಲ 18:1) ದಾವೀದನಲ್ಲಿದ್ದ ಯಾವ ಗುಣಗಳು ಯೋನಾತಾನನನ್ನು ಆಕರ್ಷಿಸಿರಬೇಕು? (ಸುಳಿವು: 1 ಸಮುವೇಲ 17:45, 46 ನೋಡಿ.)

_______

ದಾವೀದ ಯೋನಾತಾನರ ಮಧ್ಯೆ ಹೆಚ್ಚುಕಡಿಮೆ 30 ವರ್ಷಗಳ ಅಂತರವಿತ್ತು. ಹೀಗಿದ್ದರೂ ಅವರಿಬ್ಬರು “ಆಪ್ತಮಿತ್ರ”ರಾಗಲು ಯಾವ ಅಂಶಗಳು ಸಹಾಯಕಾರಿಯಾಗಿದ್ದವು ಎಂದು ನೆನಸುತ್ತೀರಿ?

ಮನಸ್ಸನ್ನು ಸೆರೆಹಿಡಿಯುವ ಈ ವೃತ್ತಾಂತ ತೋರಿಸುವಂತೆ ನಿಜ ಮಿತ್ರರಲ್ಲಿ ಯಾವ ಗುಣಗಳಿರಬೇಕು? (ಸುಳಿವು: ಜ್ಞಾನೋಕ್ತಿ 17:17; 18:24 ನೋಡಿ.)

_______

ಯೋನಾತಾನನು ತನ್ನ ಹೆತ್ತ ತಂದೆಗೆ ಬದಲು ದಾವೀದನಿಗೆ ನಿಷ್ಠೆ ತೋರಿಸಿದ್ದೇಕೆ?

_______

3 ನೀವು ಕಲಿತದ್ದನ್ನು ಅನ್ವಯಿಸಿಕೊಳ್ಳಿರಿ. ಈ ಕೆಳಗಿನ ವಿಷಯಗಳ ಕುರಿತು ನೀವು ಕಲಿತದ್ದನ್ನು ಬರೆಯಿರಿ.

ಸ್ನೇಹ.

_______

ನಿಷ್ಠೆ.

_______

ನಮಗಿಂತ ದೊಡ್ಡವರ ಸ್ನೇಹ.

_______

ಒಳ್ಳೇ ಮಿತ್ರರನ್ನು ನೀವು ಹೇಗೆ ಆಕರ್ಷಿಸಬಲ್ಲಿರಿ?

_______

4 ಈ ಬೈಬಲ್‌ ವೃತ್ತಾಂತಗಳ ಯಾವ ಅಂಶಗಳು ನಿಮ್ಮ ಮನಸ್ಸನ್ನು ಸ್ಪರ್ಶಿಸಿದವು? ಏಕೆ?

_______

(w10-E 07/01)

ನಿಮ್ಮ ಬಳಿ ಬೈಬಲ್‌ ಇಲ್ಲದಿರುವಲ್ಲಿ ಯೆಹೋವನ ಸಾಕ್ಷಿಗಳನ್ನು ಕೇಳಿ ಅಥವಾ ಅದನ್ನು ನಿರ್ದಿಷ್ಟ ಭಾಷೆಗಳಲ್ಲಿ ಈ ವೆಬ್‌ಸೈಟ್‌ನಲ್ಲಿ ಓದಬಹುದು: www.watchtower.org