ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜುವಿನ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಆನಂದಿಸಿದ್ದೀರೋ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

• ಚಿನ್ನದ ಬಸವನನ್ನು ಮಾಡಿದ್ದಕ್ಕಾಗಿ ಯೆಹೋವನು ಆರೋನನನ್ನೇಕೆ ಶಿಕ್ಷಿಸಲಿಲ್ಲ?

ಆರೋನನು ವಿಗ್ರಹಾರಾಧನೆಯ ಕುರಿತಾದ ದೇವರ ನಿಯಮವನ್ನು ಮುರಿದನು. (ವಿಮೋ. 20:3-5) ಆದರೆ ಮೋಶೆಯು ಆರೋನನ ಪರವಾಗಿ ಪ್ರಾರ್ಥಿಸಿದನು. ಮತ್ತು ಅವನ ಯಾಚನೆಗೆ ‘ಹೆಚ್ಚು ಬಲವಿತ್ತು.’ (ಯಾಕೋ. 5:16) ಮಾತ್ರವಲ್ಲ ಆರೋನನು ಅನೇಕ ವರ್ಷಗಳಿಂದ ಯೆಹೋವನಿಗೆ ನಂಬಿಗಸ್ತನಾಗಿದ್ದನು. ಜನರ ಒತ್ತಾಯದಿಂದಾಗಿ ಅವನು ವಿಗ್ರಹವನ್ನು ಮಾಡಿಕೊಟ್ಟನಾದರೂ, ನಂತರ ಅವನು ಲೇವಿಯರೊಂದಿಗೆ ಯೆಹೋವನ ಪಕ್ಷವನ್ನು ತೆಗೆದುಕೊಳ್ಳುವ ಮೂಲಕ ತಾನು ಆ ವಿಗ್ರಹಾರಾಧಕ ಜನರ ಪಕ್ಷದಲ್ಲಿಲ್ಲ ಎಂದು ತೋರಿಸಿಕೊಟ್ಟನು. (ವಿಮೋ. 32:25-29)—5/15, ಪುಟ 21.

• ಸಂಗಾತಿಯು ವ್ಯಭಿಚಾರಗೈದಾಗ ಅದನ್ನು ನಿಭಾಯಿಸಲು ಕ್ರೈಸ್ತನಿಗೆ ಯಾವುದು ಸಹಾಯಮಾಡಬಹುದು?

ನಿರ್ದೋಷಿ ಸಂಗಾತಿಯು ಬೈಬಲ್‌ ಮೂಲತತ್ತ್ವಗಳಿಗನುಸಾರ ಜೀವಿಸಲು ಪ್ರಯತ್ನಿಸಿದ್ದಲ್ಲಿ, ವ್ಯಭಿಚಾರಗೈದ ಸಂಗಾತಿಯು ಮಾಡಿದ ದಾಂಪತ್ಯ ದ್ರೋಹಕ್ಕಾಗಿ ತಾನು ದೋಷಿಯೆಂದು ನೆನಸುವ ಅಗತ್ಯವಿಲ್ಲ. ನಿಮಗೆ ಸಾಂತ್ವನ ಮತ್ತು ಉತ್ತೇಜನದ ಅಗತ್ಯವಿದೆ ಎಂಬುದು ದೇವರಿಗೆ ತಿಳಿದಿದೆ. ಆತನು ಜೊತೆಕ್ರೈಸ್ತರ ಮೂಲಕ ನಿಮಗೆ ಸಾಂತ್ವನವನ್ನು ಒದಗಿಸಬಲ್ಲನು.—6/15, ಪುಟ 30-31.

• ನಿಮ್ಮ ಮಕ್ಕಳನ್ನು ವಾಚನಪ್ರೇಮಿಗಳನ್ನಾಗಿ ಹೇಗೆ ಮಾಡಬಲ್ಲಿರಿ?

ಪ್ರೀತಿಭರಿತ ವಾತಾವರಣ ಹಾಗೂ ಹೆತ್ತವರ ಮಾದರಿಯು ಮಕ್ಕಳು ವಾಚನಪ್ರೇಮಿಗಳಾಗಲು ಸಹಾಯಮಾಡುತ್ತದೆ. ಮಾತ್ರವಲ್ಲ ಅವರಿಗೆ ಪುಸ್ತಕಗಳನ್ನು ಲಭ್ಯಗೊಳಿಸಿ. ಗಟ್ಟಿಯಾಗಿ ಓದಿರಿ. ಓದಿದ್ದನ್ನು ಚರ್ಚಿಸುತ್ತಾ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಿರಿ. ನಿಮ್ಮ ಮಕ್ಕಳು ನಿಮಗೆ ಓದಿಹೇಳಲಿ ಮತ್ತು ಪ್ರಶ್ನೆಗಳನ್ನು ಕೇಳುವಂತೆ ಅವರನ್ನು ಉತ್ತೇಜಿಸಿರಿ.—7/15, ಪುಟ 26.