ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರಿಂದ ಕಲಿಯಬೇಕು ಏಕೆ?

ದೇವರಿಂದ ಕಲಿಯಬೇಕು ಏಕೆ?

ದೇವರ ವಾಕ್ಯದಿಂದ ಕಲಿಯಿರಿ

ದೇವರಿಂದ ಕಲಿಯಬೇಕು ಏಕೆ?

ನೀವು ಯೋಚಿಸಿರಬಹುದಾದ ಕೆಲವು ಪ್ರಶ್ನೆಗಳನ್ನು ಈ ಲೇಖನದಲ್ಲಿ ಕೊಡಲಾಗಿದೆ ಮಾತ್ರವಲ್ಲ ಅವುಗಳ ಉತ್ತರಗಳನ್ನು ದೇವರ ವಾಕ್ಯವಾದ ಬೈಬಲಿನಲ್ಲಿ ನೀವೆಲ್ಲಿ ಓದಬಹುದೆಂದೂ ತೋರಿಸಲಾಗಿದೆ. ಈ ಉತ್ತರಗಳನ್ನು ನಿಮ್ಮ ಜೊತೆ ಚರ್ಚಿಸಲು ಯೆಹೋವನ ಸಾಕ್ಷಿಗಳು ಸಂತೋಷಪಡುವರು.

1. ದೇವರಿಂದ ಕಲಿಯಬೇಕು ಏಕೆ?

ಮಾನವಕುಲಕ್ಕಾಗಿ ಕಾದಿರುವ ಒಳ್ಳೇ ಸಂಗತಿಗಳ ಬಗ್ಗೆ ದೇವರ ಬಳಿ ಶುಭವಾರ್ತೆಯಿದೆ. ಅದರ ಬಗ್ಗೆ ಆತನು ನಮಗೆ ಬೈಬಲಿನಲ್ಲಿ ತಿಳಿಸುತ್ತಾನೆ. ಬೈಬಲು, ಸ್ವರ್ಗದಲ್ಲಿರುವ ನಮ್ಮ ಪ್ರೀತಿಯ ತಂದೆಯಾದ ದೇವರಿಂದ ನಮಗೆ ಬಂದ ಒಂದು ಪತ್ರದಂತಿದೆ.—ಯೆರೆಮೀಯ 29:11 ಓದಿ.

2. ಆ ಶುಭವಾರ್ತೆ ಏನು?

ಮಾನವಕುಲಕ್ಕೆ ಒಳ್ಳೇ ಸರ್ಕಾರದ ಅಗತ್ಯವಿದೆ. ಯಾವ ಮಾನವ ಅಧಿಪತಿಯೂ ಈ ವರೆಗೆ ಹಿಂಸಾಚಾರ, ಅನ್ಯಾಯ, ರೋಗ, ಮರಣದಿಂದ ಮಾನವಕುಲವನ್ನು ಮುಕ್ತಗೊಳಿಸಿಲ್ಲ. ಆದರೆ ಶುಭವಾರ್ತೆಯೇನೆಂದರೆ, ಎಲ್ಲ ರೀತಿಯ ಕಷ್ಟಗಳಿಂದ ಮಾನವರನ್ನು ಮುಕ್ತಗೊಳಿಸುವ ಒಂದು ಒಳ್ಳೇ ಸರ್ಕಾರವನ್ನು ದೇವರು ಮಾನವಕುಲಕ್ಕಾಗಿ ಒದಗಿಸಲಿರುವನು.—ದಾನಿಯೇಲ 2:44 ಓದಿ.

3. ದೇವರಿಂದ ಕಲಿಯುವುದು ಅತ್ಯಗತ್ಯ ಏಕೆ?

ಇತರರಿಗೆ ಕಷ್ಟನೋವುಗಳನ್ನು ಬರಿಸುವ ಜನರನ್ನು ದೇವರು ಬಲುಬೇಗನೆ ಈ ಭೂಮಿಯಿಂದ ತೆಗೆದುಹಾಕಲಿದ್ದಾನೆ. ಆ ಸಮಯ ಬರುವ ವರೆಗೂ, ಉತ್ತಮ ಜೀವನರೀತಿಯನ್ನು ಆನಂದಿಸಲು ಹಾಗೂ ದೇವರನ್ನೂ ನೆರೆಯವನನ್ನೂ ಪ್ರೀತಿಸಲು ಆತನು ಲಕ್ಷಾಂತರ ದೀನ ಜನರಿಗೆ ಬೋಧಿಸುತ್ತಿದ್ದಾನೆ. ಆತನ ವಾಕ್ಯದಿಂದ ಜನರು, ಬದುಕಿನ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ, ನಿಜ ಸಂತೋಷವನ್ನು ಕಂಡುಕೊಳ್ಳುವುದು ಹೇಗೆ, ದೇವರನ್ನು ಮೆಚ್ಚಿಸುವುದು ಹೇಗೆ ಎಂಬ ಸಂಗತಿಗಳನ್ನು ಕಲಿಯುತ್ತಿದ್ದಾರೆ.—ಚೆಫನ್ಯ 2:3 ಓದಿ.

4. ಬೈಬಲಿನ ಕರ್ತೃ ಯಾರು?

ಬೈಬಲಿನಲ್ಲಿ 66 ಚಿಕ್ಕಚಿಕ್ಕ ಪುಸ್ತಕಗಳಿವೆ. ಅವುಗಳನ್ನು 40 ಮಂದಿ ಪುರುಷರು ಬರೆದರು. ಮೊದಲ ಐದು ಪುಸ್ತಕಗಳನ್ನು ಮೋಶೆ ಎಂಬಾತನು ಸುಮಾರು 3,500 ವರ್ಷಗಳ ಪೂರ್ವದಲ್ಲಿ ಬರೆದನು. ಕೊನೆಯ ಪುಸ್ತಕವನ್ನು ಯೇಸುವಿನ ಶಿಷ್ಯ ಯೋಹಾನ ಎಂಬವನು 1,900ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ಬರೆದನು. ಆದರೆ ಬೈಬಲನ್ನು ಬರೆದವರೆಲ್ಲರೂ ದೇವರ ವಿಚಾರಗಳನ್ನು ಬರೆದರೇ ಹೊರತು ತಮ್ಮ ಸ್ವಂತ ವಿಚಾರಗಳನ್ನಲ್ಲ. ಹೀಗಿರುವುದರಿಂದ ಬೈಬಲಿನ ಕರ್ತೃ ದೇವರೇ.—2 ತಿಮೊಥೆಯ 3:16; 2 ಪೇತ್ರ 1:21 ಓದಿ.

ಭವಿಷ್ಯದಲ್ಲಿ ನಡೆಯುವ ಸಂಗತಿಗಳನ್ನು ಬೈಬಲು ವಿವರವಾಗಿ, ನಿಖರವಾಗಿ ಮುಂತಿಳಿಸುವುದರಿಂದ ಅದು ದೇವರಿಂದ ಬಂದ ಗ್ರಂಥವೆಂದು ನಮಗೆ ಗೊತ್ತಿದೆ. ಯಾವ ಮನುಷ್ಯನೂ ಭವಿಷ್ಯದ ಬಗ್ಗೆ ಹಾಗೆ ಮುಂತಿಳಿಸಲು ಸಾಧ್ಯವಿಲ್ಲ. (ಯೆಶಾಯ 46:9, 10) ಅಲ್ಲದೆ, ಬೈಬಲಿನಲ್ಲಿ ದೇವರ ಗುಣಗಳ ಕುರಿತಾಗಿಯೂ ತಿಳಿಸಲಾಗಿದೆ. ಜನರ ವ್ಯಕ್ತಿತ್ವವನ್ನು ಬದಲಾಯಿಸಿ, ಜೀವನವನ್ನು ಉತ್ತಮಗೊಳಿಸುವ ಶಕ್ತಿಯೂ ಅದಕ್ಕಿದೆ. ಈ ಎಲ್ಲ ನಿಜಾಂಶಗಳೇ ಲಕ್ಷಾಂತರ ಜನರಿಗೆ ಅದು ದೇವರ ವಾಕ್ಯವೆಂದು ಮನದಟ್ಟು ಮಾಡಿಸಿವೆ.—ಯೆಹೋಶುವ 23:14; 1 ಥೆಸಲೊನೀಕ 2:13 ಓದಿ.

5. ನೀವು ಬೈಬಲನ್ನು ಹೇಗೆ ಅರ್ಥಮಾಡಿಕೊಳ್ಳಬಲ್ಲಿರಿ?

ದೇವರ ವಾಕ್ಯದ ಬೋಧಕನೆಂಬ ಪ್ರಸಿದ್ಧಿಯನ್ನು ಯೇಸು ಪಡೆದನು. ಆತನು ಮಾತಾಡಿದ ಜನರಲ್ಲಿ ಹೆಚ್ಚಿನವರಿಗೆ ಶಾಸ್ತ್ರಗ್ರಂಥದ ಪರಿಚಯವಿತ್ತಾದರೂ ಅದನ್ನು ಅರ್ಥಮಾಡಿಕೊಳ್ಳಲು ಅವರಿಗೆ ನೆರವು ಬೇಕಾಗಿತ್ತು. ಅವರಿಗೆ ಸಹಾಯಮಾಡಲು ಯೇಸು ಶಾಸ್ತ್ರಗ್ರಂಥದ ವಚನಗಳನ್ನು ಒಂದೊಂದಾಗಿ ಸೂಚಿಸಿ ಅದರ ಅರ್ಥವನ್ನು ಅವರಿಗೆ ವಿವರಿಸುತ್ತಿದ್ದನು. “ದೇವರ ವಾಕ್ಯದಿಂದ ಕಲಿಯಿರಿ” ಎಂಬ ಈ ಲೇಖನವು ಆ ವಿಧಾನವನ್ನೇ ಬಳಸಿ ನಿಮಗೆ ನೆರವಾಗಲಿದೆ.—ಲೂಕ 24:27, 45 ಓದಿ.

ಜೀವನದ ಉದ್ದೇಶದ ಕುರಿತು ದೇವರಿಂದಲೇ ಕಲಿಯುವುದು ಚಿತ್ತಾಕರ್ಷಕ. ಆದರೆ ನೀವು ಬೈಬಲನ್ನು ಓದುತ್ತೀರೆಂದು ತಿಳಿದು ಕೆಲವು ಜನರಿಗೆ ಸಂತೋಷವಾಗಲಿಕ್ಕಿಲ್ಲ. ನಿರುತ್ಸಾಹಗೊಳ್ಳಬೇಡಿ. ಶಾಶ್ವತವಾದ ಜೀವನವನ್ನು ಆನಂದಿಸುವ ನಿಮ್ಮ ನಿರೀಕ್ಷೆಯು, ದೇವರನ್ನು ತಿಳಿದುಕೊಳ್ಳುವುದರ ಮೇಲೆ ಅವಲಂಬಿಸಿದೆ.—ಮತ್ತಾಯ 5:10-12; ಯೋಹಾನ 17:3 ಓದಿ. (w11-E 01/01)

ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 2ನೇ ಅಧ್ಯಾಯ ನೋಡಿ.